ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ : 'ನೈಸ್' ಮುಖ್ಯಸ್ಥರನ್ನು ಗೆಲ್ಲಿಸಿದ ಕ್ಷೇತ್ರವಿದು!

|
Google Oneindia Kannada News

2008ರಲ್ಲಿ ರಚನೆಯಾದ ಕ್ಷೇತ್ರ ಬೀದರ್ ದಕ್ಷಿಣ. ಬೀದರ್ ಕ್ಷೇತ್ರದ ಕೆಲವು ಭಾಗ, ಹುಮ್ನಾಬಾದ್ ತಾಲೂಕಿನ ಎರಡು ವೃತ್ತಗಳನ್ನು ಸೇರಿಸಿದ ಬೀದರ್ ದಕ್ಷಿಣ ಕ್ಷೇತ್ರ ರಚನೆ ಮಾಡಲಾಗಿದೆ. ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಕ್ಷೇತ್ರವಿದು.

ಬೀದರ್ ಮೂಲಕ ಪುಣೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 9 ಕ್ಷೇತ್ರದ ಮೂಲಕ ಹಾದು ಹೋಗುತ್ತದೆ. ಪಶುವೈದ್ಯಕೀಯ ಮೀನುಗಾರಿಗೆ ವಿಶ್ವವಿದ್ಯಾಲಯ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಕ್ಷೇತ್ರ ಪರಿಚಯ : 'ಜಯಸಿಂಹ' ನಗರದಲ್ಲಿ ಯಾರಿಗೆ ಜಯ?ಕ್ಷೇತ್ರ ಪರಿಚಯ : 'ಜಯಸಿಂಹ' ನಗರದಲ್ಲಿ ಯಾರಿಗೆ ಜಯ?

ಕುಡಿಯುವ ನೀರಿನ ಪೂರೈಕೆ ಮತ್ತು ಜನರ ವಲಸೆ ಕ್ಷೇತ್ರದ ಬಹುಮುಖ್ಯ ಸಮಸ್ಯೆಯಾಗಿದೆ. 2013ರ ಚುನಾವಣೆಯಲ್ಲಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರು ಕರ್ನಾಟಕ ಮಕ್ಕಳ ಪಕ್ಷದಿಂದ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

Karnataka Assembly Election 2018 : Bidar South constituency profile

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾದ ಬಂಡೆಪ್ಪ ಕಾಶೇಂಪುರ್ ಅವರ ತವರು ಕ್ಷೇತ್ರವಿದು. ಕಳೆದ ಚುನಾವಣೆಯಲ್ಲಿ ಅಶೋಕ್ ಖೇಣಿ ಅವರ ವಿರುದ್ಧ ಕಾಶೇಂಪುರ ಅವರು ಸೋಲು ಕಂಡಿದ್ದರು.

ಕ್ಷೇತ್ರ ಪರಿಚಯ : ಬಸವ ಕಲ್ಯಾಣದಲ್ಲಿ ಗೆಲ್ಲುವವರು ಯಾರು?ಕ್ಷೇತ್ರ ಪರಿಚಯ : ಬಸವ ಕಲ್ಯಾಣದಲ್ಲಿ ಗೆಲ್ಲುವವರು ಯಾರು?

ಕಳೆದ ಚುನಾವಣೆಯಲ್ಲಿ 47,763 ಮತಗಳನ್ನು ಪಡೆದ ಅಶೋಕ್ ಖೇಣಿ ಅವರು 15,758 ಮತಗಳ ಅಂತರದಿಂದ ಬಂಡೆಪ್ಪ ಕಾಶೇಂಪುರ ಅವರನ್ನು ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಪತ್ಯ ಸಾಧಿಸುತ್ತಿವೆ. ಆದರೆ, ಕಳೆದ ಚುನಾವಣೆಯಲ್ಲಿ ಮಾತ್ರ ಖೇಣಿ ಗೆದ್ದಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತರಲ್ಲಿ ಒಬ್ಬರಾದ ಬಂಡೆಪ್ಪ ಕಾಶೇಂಪುರ ಅವರಿಗೆ ಈ ಬಾರಿಯ ಚುನಾವಣೆಯಲ್ಲಿಯೂ ಟಿಕೆಟ್ ಖಚಿತ. ಅದರಲ್ಲೂ ಈ ಬಾರಿ ಉತ್ತರ ಕರ್ನಾಟಕದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಆಪ್ತನನ್ನು ಗೆಲ್ಲಿಸಿಕೊಂಡು ಬರಲು ವಿಶೇಷ ಕಾಳಜಿ ತೋರಲಿದ್ದಾರೆ.

ಕ್ಷೇತ್ರ ಪರಿಚಯ : ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?ಕ್ಷೇತ್ರ ಪರಿಚಯ : ಬೀದರ್‌ ಕ್ಷೇತ್ರದಲ್ಲಿ ಗೆಲುವಿನ ಕಿರೀಟ ಯಾರಿಗೆ?

2013ರ ಚುನಾವಣೆಯಲ್ಲಿ ಅಶೋಕ್ ಖೇಣಿ 47,763 ಮತಗಳನ್ನು ಪಡೆದಿದ್ದರು. ಬಂಡೆಪ್ಪ ಕಾಶೇಂಪುರ 31,975 ಮತ, ಬಿಜೆಪಿಯ ಡಾ.ಬಸವರಾಜ್ ಪಾಟೀಲ್ 1,301 ಮತ, ಕಾಂಗ್ರೆಸ್‌ನ ಮೀನಾಕ್ಷಿ ಸಂಗ್ರಾಮ್ 5,105 ಮತಗಳನ್ನು ಪಡೆದಿದ್ದರು.

English summary
Karnataka Assembly Election 2018 : Read all about Bidar South constituency of Bidar district. Get election news from Bidar South. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X