ಕ್ಷೇತ್ರ ಪರಿಚಯ: ಪದ್ಮನಾಭನಗರಕ್ಕೆ ಮತ್ತೆ ಅಶೋಕ್ ಸಾಮ್ರಾಟ್ ಆಗುತ್ತಾರಾ?
Recommended Video

ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್ .ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲೊಂದು. ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂದಿದ್ದಲ್ಲದೆ, ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಕಾರಣಕ್ಕೆ ಆರ್. ಅಶೋಕ್ ಈ ಬಾರಿಯೂ ಜಯಗಳಿಸಿದರೆ ಅಚ್ಚರಿಯೇನಿಲ್ಲ.
* ವಿಧಾನಸಭಾ ಕ್ಷೇತ್ರ ಸಂಖ್ಯೆ 171:
ಹಾಲಿ ಶಾಸಕ- ಆರ್ ಅಶೋಕ್ (55 ವರ್ಷ)- ಬಿಜೆಪಿ.
ಸೋತ ಅಭ್ಯರ್ಥಿ ಎಲ್ ಎಸ್ ಚೇತನ್ ಗೌಡ-ಕಾಂಗ್ರೆಸ್
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
* ಸಾಧನೆಗಳು: ಮಾಜಿ ಗೃಹ, ಸಾರಿಗೆ, ಉಪಮುಖ್ಯಮಂತ್ರಿ ಗೌರವಗಳು ಅಶೋಕ್ ಬತ್ತಳಿಕೆಯಲ್ಲಿದ್ದವು. 2008ಕ್ಕೆ ಮುನ್ನ ರಾಜ್ಯದಲ್ಲೇ ಅತಿ ದೊಡ್ಡ ಕ್ಷೇತ್ರವೆನಿಸಿದ್ದ ಉತ್ತರಹಳ್ಳಿಯಿಂದ ಹ್ಯಾಟ್ರಿಕ್ ಗೆಲುವು ಕಂಡವರು. ಕ್ಷೇತ್ರ ಪುನರ್ವಿಂಗಡಣೆಯಿಂದ ಪದ್ಮನಾಭನಗರದಲ್ಲಿ ತಳವೂರಿದರು.

ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ 3 ಬಸ್ ನಿಲ್ದಾಣಗಳ ಸ್ಥಾಪನೆ. ವಿಶೇಷವಾಗಿ ಆಟದ ಮೈದಾನ ಅಭಿವೃದ್ಧಿಯಾಗಿದೆ. ಬಹುತೇಕ ಎಲ್ಲ ಪಾರ್ಕುಗಳಿಗೂ ಮರುಜೀವ ತುಂಬಿದ್ದಾರೆ. ಸಾರಿಗೆ ಸಚಿವರಾಗಿದ್ದ ಸಮಯದಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಗೆ ಸಾಕಷ್ಟು ಬಹುಮಾನ ತಂದುಕೊಟ್ಟ ಹೆಗ್ಗಳಿಕೆಯೂ ಇವರ ಮೇಲಿದೆ.
* ಸಮಸ್ಯೆಗಳು: ಏಕೈಕ ಹೆರಿಗೆ ಆಸ್ಪತ್ರೆ ಹೊರತುಪಡಿಸಿದರೆ ಬೇರೆ ಸರಕಾರಿ ಆಸ್ಪತ್ರೆಗಳೇ ಇಲ್ಲ. ಆಟದ ಮೈದಾನಗಳನ್ನು ಭೂಗಳ್ಳರು ಕದ್ದಿದ್ದಾರೆ ಎಂದು ಎಂವಿ ಪ್ರಸಾದ್ ಬಾಬು ಕಿಡಿಕಾರುತ್ತಾರೆ. ಸಾರ್ವಜನಿಕ ಸಾರಿಗೆಯಲ್ಲಿ ಮತ್ತಷ್ಟು ಸುಧಾರಣೆ ತರುವುದಕ್ಕೆ ಅವಕಾಶ ಇದೆ. ಕಾನೂನು ಸುವ್ಯವಸ್ಥೆ ಪರವಾಗಿಲ್ಲ. ಟ್ರಾಫಿಕ್ ಸಮಸ್ಯೆಯೂ ಸಾಕಷ್ಟಿದೆ.
* ವಾರ್ಡ್: ಹೊಸಕೆರೆ ಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭ ನಗರ, ಚಿಕ್ಕಲಸಂದ್ರ
* ಮತದಾರರ ಸಂಖ್ಯೆ: 1,05,939 .
2013ರ ಚುನಾವಣೆಯ ಫಲಿತಾಂಶ
ಆರ್ ಅಶೋಕ್-ಬಿಜೆಪಿ-53680 ಮತಗಳು
ಎಲ್ ಎಸ್ ಚೇತನ್ ಗೌಡ-ಕಾಂಗ್ರೆಸ್-33557 ಮತಗಳು
ಡಾ.ಎಂ ಆರ್ ವಿ ಪ್ರಸಾದ್-ಜೆಡಿಎಸ್-26183-ಮತಗಳು












Click it and Unblock the Notifications