ಕ್ಷೇತ್ರ ಪರಿಚಯ: ಬಿಟಿಎಂ ಲೇಔಟ್ ನಲ್ಲಿ ಮತ್ತೆ ಗೆಲ್ಲುತ್ತಾರಾ ರೆಡ್ಡಿ?
Recommended Video

ಹಾಲಿ ಗೃಹಸಚಿವರೂ ಆದ ಶಾಸಕ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಮಹತ್ವದ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರದಲ್ಲಿ ರೆಡ್ಡಿ ಅವರು ಸಾಕಷ್ಟು ಜನವಿಶ್ವಾಸಗಳಿಸಿದ್ದು ಈ ಬಾರಿಯೂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
* ವಿಧಾನಸಭಾ ಕ್ಷೇತ್ರ ಸಂಖ್ಯೆ 172:
ಹಾಲಿ ಶಾಸಕ- ರಾಮಲಿಂಗಾ ರೆಡ್ಡಿ (61 ವರ್ಷ)- ಕಾಂಗ್ರೆಸ್.
ಸೋತ ಅಭ್ಯರ್ಥಿ ಎನ್ ಸುಧಾಕರ್ - ಬಿಜೆಪಿ
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
* ಸಾಧನೆಗಳು: ಹಿರಿಯ ಜನಪ್ರತಿನಿಧಿಯಾಗಿ ಎಲ್ಲರಿಂದಲೂ ಸಮಾನ ಗೌರವ ಸಂಪಾದಿಸಿದ್ದಾರೆ. 4 ಬಾರಿ ಜಯನಗರ ಕ್ಷೇತ್ರದಿಂದ ಜಯಶಾಲಿಯಾಗಿದ್ದ ಹೆಗ್ಗಳಿಕೆ. ಕ್ಷೇತ್ರ ಪುನ ರ್ವಿಂಗಡಣೆಯಿಂದ ಬಿಟಿಎಂ ಲೇಔಟ್ ಗೆ ಸ್ಥಳಾಂತರಗೊಂಡು ಅಲ್ಲೂ ಜಯ ಸಾಧಿಸಿದ್ದಾರೆ. ಸಚಿವರಾಗಿಯೂ ಜನಕ್ಕೆ ಹತ್ತಿರವಾಗಿದ್ದರು. ರಸ್ತೆ, ಫುಟ್ ಪಾತ್, ಪಾರ್ಕ್, ಒಳಚರಂಡಿ ಅಭಿವೃದ್ಧಿಯಾಗಿದೆ. ಕೋರಮಂಗಲದ ಸ್ಯಾನಿಟರಿ ಸರಿಪಡಿಸಲಾಗಿದೆ. ರಾಜೇಂದ್ರ ನಗರ, ಬೋವಿ ಕಾಲನಿಯಲ್ಲಿ ಮನೆ ಕಟ್ಟಿಸಿಕೊಡಲಾಗಿದೆ.

* ಸಮಸ್ಯೆಗಳು: ಈ ಕ್ಷೇತ್ರದಲ್ಲಿ ಸಮಸ್ಯೆಗಳು ಅಷ್ಟಾಗಿ ಕಾಣಿಸುವುದಿಲ್ಲ. ಕಾನೂನು ವ್ಯವಸ್ಥೆ, ಸಾರಿಗೆ, ಕುಡಿಯುವ ನೀರು ವ್ಯವಸ್ಥೆ ಜನರಿಗೆ ಸಮಾಧಾನ ತಂದಿದೆ.
* ವಾರ್ಡ್: ಕಲ್ಲಸಂದ್ರ, ಆಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆ ಪಾಳ್ಯ, ಮಡಿವಾಳ, ಜಕ್ಕಸಂದ್ರ, ಬಿಟಿಎಂ ಬಡಾವಣೆ
* ಮತದಾರರ ಸಂಖ್ಯೆ: 2,12,808.
2013ರ ಚುನಾವಣೆ ಫಲಿತಾಂಶ
ರಾಮಲಿಂಗಾ ರೆಡ್ಡಿ -ಕಾಂಗ್ರೆಸ್- 69712 ಮತಗಳು
ಎನ್ ಸುಧಾಕರ್ -ಬಿಜೆಪಿ-20664 ಮತಗಳು
ಜೆ.ರಮೇಶ್ ರೆಡ್ಡಿ-8346-ಮತಗಳು












Click it and Unblock the Notifications