ಕ್ಷೇತ್ರ ಪರಿಚಯ: ಬೆಳಗಾವಿ ಉತ್ತರದ ಗದ್ದುಗೆ ಯಾರ ಪಾಲಿಗೆ?

Posted By:
Subscribe to Oneindia Kannada

ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾದ ಬೆಳಗಾವಿಗೆ ರಾಜ್ಯದ ಎರಡನೇ ರಾಜಧಾನಿ ಎಂಬ ಅನೌಪಚಾರಿಕ ಬಿರುದೂ ಇದೆ.

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರೂ, ಶೌರ್ಯದ ಪ್ರತೀಕವೂ ಆದ ರಾಣಿ ಚೆನ್ನಮ್ಮ - ಸಂಗೊಳ್ಳಿ ರಾಯಣ್ಣರಿಂದ ಖ್ಯಾತಿ ಪಡೆದ ಕಿತ್ತೂರು ಸಹ ಬೆಳಗಾವಿಯಲ್ಲಿಯೇ ಇದೆ ಎಂಬುದು ಜಿಲ್ಲೆಗೆ ಮತ್ತೊಂದು ಗರಿ.

ಕ್ಷೇತ್ರ ಪರಿಚಯ : ಗೋಕಾಕ್‌ನಲ್ಲಿ ಯಾರಿಗೆ ಗೆಲುವಿನ ಕರದಂಟು?

ಇಲ್ಲಿನ ರಾಜಕೀಯ ಇತಿಹಾಸದ ಬಗ್ಗೆ ಮಾತನಾಡುವುದಾದರೆ, ಸದ್ಯ ಚರ್ಚೆಯಲ್ಲಿರು ಕ್ಷೇತ್ರಗಳಲ್ಲಿ ಇದೂ ಒಂದು. ಪ್ರಸ್ತುತ ಇಲ್ಲಿ ಕಾಂಗ್ರೆಸ್ಸಿನ ಫಿರೋಜ ಸೇಠ್ ಶಾಸಕರಾಗಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಕಗಳಾಗಿದ್ದರೂ, ಸಮಸ್ಯೆಗಳೂ ಅಷ್ಟೇ ಇವೆ. ಮಹಾನಗರ ಪಾಲಿಕೆ ಎಮ್ ಇ ಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ) ಹಿಡಿತದಲ್ಲಿದೆ. ಅವರಿಗೂ ಇವರಿಗೂ ಹೊಂದಾಣಿಕೆ ಕೊರತೆ ಇರುವುದರಿಂದ ಈ ಕ್ಷೇತ್ರದಲ್ಲಿ ಆಗಾಗ ಕೋಮು ಗಲಭೆಗಳು ನಡೆಯುತ್ತಲೇ ಇವೆ. ಇಲ್ಲಿನ ಶಾಸಕರ ತಾರತಮ್ಯ ಧೋರಣೆ ಬಗ್ಗೆ ಹಲವರಲ್ಲಿ ಅಸಮಾಧಾನವಿದೆ.

Karnataka Assembly Election 2018: Belagavi Uttar Constituency Profile

ಹೀಗಾಗಿ ಈ ಚುನಾವಣೆಯಲ್ಲಿ ಇವರಿಗೆ ಗೆಲುವಿನ ಅವಕಾಶವಿದ್ದರೂ ಇವರನ್ನ ಸೋಲಿಸುವುದಕ್ಕೆ ಯಾವ್ಯಾವ ರೀತಿಯ ಪಿತೂರಿಗಳು ನಡೆಯುತ್ತವೆಯೋ ಹೇಳುವುದು ಕಷ್ಟ. ಬಿಜೆಪಿಯಲ್ಲಿ ಕೂಡ ಟಿಕೇಟ್ ಗೊಂದಲವಿದ್ದು, ಅದು ಕೂಡ ನಿವಾರಣೆ ಆಗಬೇಕಿದೆ. ಎಮ್ ಇ ಎಸ್ ಕಾದು ನೋಡುವ ತಂತ್ರದಲ್ಲಿದೆ. ಮರಾಠಿ ಪ್ರಭಾವ ಹೆಚ್ಚಿರುವುದು ಸಹ ಇಲ್ಲಿ ಗಮನೀಯ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

2013 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು:
ಫಿರೋಜ ಸೇಠ್ -ಕಾಂಗ್ರೆಸ್-45125 ಮತಗಳು
ರೇಣು ಸುಹಾಸ್ ಕಿಲ್ಕರ್-ಪಕ್ಷೇತರ-26915 ಮತಗಳು
ಕಿರಣ್ ಮಾರುತಿ ಜಾಧವ್-ಬಿಜೆಪಿ-17456 ಮತಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Belagavi(Belgaum) Uttar (north) assembly constituency of Belagavi district. Get election news from Belagavi. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ