ಕ್ಷೇತ್ರ ಪರಿಚಯ: ಬೆಳಗಾವಿ ಗ್ರಾಮೀಣದಲ್ಲಿ ವಿಜಯಮಾಲೆ ಯಾರಿಗೆ?
ವೇಣುಗ್ರಾಮ ಎಂದು ಪುರಾತನ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಬೆಳಗಾವಿ ನಂತರ ಬೆಳಗಾಯಿಯಾಗಿ ಬದಲಾಗಿದ್ದಕ್ಕೆ ಕಾರಣ ಅಲ್ಲಿ ಬೆಳಗಿನ ಸಮಯದಲ್ಲಿ ಮಂಜು ಕವಿದಂತೆ ಕಾಣುತ್ತಿದ್ದ ವಾತಾವರಣ. ಈ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ ಬೆಳ್ಳನೆಯ ಮಂಜು(ಆವಿ) ಆವರಸಿರುತ್ತಿದ್ದರಿಂದ ಈ ಜಿಲ್ಲೆಗೆ ಬೆಳಗಾವಿ ಎಂಬ ಹೆಸರು ಬಂತು. ಇದು ಕೂಡಾ ಮರಾಠಿ ಪ್ರಭಾವ ಇರುವ ಪ್ರದೇಶ.
ಇಲ್ಲಿನ ಹಾಲಿ ಶಾಸಕ ಸಂಜಯ ಪಾಟೀಲ ಒಳ್ಳೆಯ ಮಾತುಗಾರ. ಕಾಂಗ್ರೆಸ್ಸಿನ ಲಕ್ಷ್ಮೀ ಹೆಬ್ಬಾಳ್ಕರ ಕಳೆದ ಬಾರಿ ಈ ಕ್ಷೇತ್ರದಿಂದಲೇ ಸಂಜಯ ಪಾಟೀಲ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈಗ ಕಾಂಗ್ರೆಸ್ ಆಡಳಿತದ ಸರಕಾರ ರಾಜ್ಯದಲ್ಲಿ ಇರುವದರಿಂದ ಅದರ ಪ್ರಭಾವ ಬಳಸಿಕೊಂಡು ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿದ್ದಾರೆ. ಮತ್ತು ಗೆಲವಿನ ನಿರೀಕ್ಷೆಯಲ್ಲಿದ್ದಾರೆ.
ಆದ್ರೆ ಪಕ್ಷದ ಒಳಗೆ ಇವರನ್ನ ಸೋಲಿಸಲು ಸಂಚು ನಡೆದಿದೆ ಎನ್ನುವ ಮಾತುಕೂಡ ಈಗ ಗುಪ್ತವಾಗಿ ಉಳಿದಿಲ್ಲಿ. ಯಾವದೇ ಕಾರಣಕ್ಕೂ ಸತೀಶ ಜಾರಕೀಹೋಳಿ ಲಕ್ಷ್ಮಿ ಹೆಬ್ಬಾಳ್ಕರರನ್ನ ಗೆಲ್ಲಲು ಬಿಡುವದಿಲ್ಲ ಅನ್ನುವದು ಈಗ ಬಹಿರಂಗ ಸತ್ಯ. ಹೀಗಾಗಿ ವಿಜಯಲಕ್ಷ್ಮಿ ಯಾರ ಕೊರಳಿಗೆ ಒಲಿತ್ತಾಳೋ ಕಾದು ನೋಡಬೇಕು.

2013 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು:
ಸಂಜಯ್ ಬಿ ಪಾಟೀಲ್-ಬಿಜೆಪಿ- 38322 ಮತಗಳು
ಕಿನೇಕರ್ ಮನೋಹರ್ ಕಲ್ಲಪ್ಪ-ಪಕ್ಷೇತರ-36987 ಮತಗಳು
ಲಕ್ಷ್ಮಿ ಹೆಬ್ಬಾಳ್ಕರ್-ಕಾಂಗ್ರೆಸ್-35811 ಮತಗಳು












Click it and Unblock the Notifications