ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ದೊಡ್ಡ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಜಯ ಯಾರಿಗೆ?

By Mahesh
|
Google Oneindia Kannada News

ಬೆಂಗಳೂರಿನಲ್ಲಿ ಹೆಚ್ಚು ಮತದಾರ (ಸುಮಾರು 4.4 ಲಕ್ಷ) ರನ್ನು ಹೊಂದಿರುವ ಕ್ಷೇತ್ರಗಳ ಪೈಕಿ ಇದು ಒಂದು. ರಾಜಕೀಯವಾಗಿ ಕ್ಷೇತ್ರದಲ್ಲಿ ಇನ್ನೂ ಸ್ವತಂತ್ರವಾಗಿ ಬೆಳೆದಿಲ್ಲ.

ಉತ್ತರಹಳ್ಳಿಗೆ ಹೊಂದಿಕೊಂಡಂತೆ ಇರುವ ಕ್ಷೇತ್ರ ಬಡಾವಣೆಗಳಲ್ಲಿ ಸಾರಿಗೆ ಸಂಪರ್ಕ, ವಸತಿ ಸೌಲಭ್ಯ ಅಭಿವೃದ್ಧಿ ಕಂಡಿದೆ. ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ ಸಂಪರ್ಕ ಕ್ಷೇತ್ರವಾಗಿದೆ. ಆದರೆ, ಒಟ್ಟಾರೆಯಾಗಿ ಕ್ಷೇತ್ರ ಇನ್ನೂ ಹಿಂದುಳಿದಿದೆ. ಬಿಜೆಪಿಯ ನಿಷ್ಠಾವಂತ ಎಂ ಶ್ರೀನಿವಾಸ ಅವರ ಸೋದರ ಎಂ ಕೃಷ್ಣಪ್ಪ ಅವರು ಹಾಲಿ ಶಾಸಕರು.

Karnataka Assembly Election 2018: Bengaluru- Bangalore South constituency profile

2013ರ ಫಲಿತಾಂಶ:

ಬೆಂಗಳೂರು ದಕ್ಷಿಣ Bangalore South (176)

* ಬೆಂಗಳೂರು ದಕ್ಷಿಣ ಗರಿಷ್ಠ ಮತದಾರರಿರುವ ಕ್ಷೇತ್ರ

ವಿಧಾನಸಭಾ ಕ್ಷೇತ್ರ ಸಂಖ್ಯೆ 176:

ಹಾಲಿ ಶಾಸಕ- ಎಂ ಕೃಷ್ಣಪ್ಪ - ಬಿಜೆಪಿ. ಸೋತ ಅಭ್ಯರ್ಥಿ ಜೆಡಿಎಸ್ ಆರ್ ಪ್ರಭಾಕರ್ ರೆಡ್ಡಿ.

* ವಾರ್ಡ್: ಗೊಟ್ಟಿಗೆರೆ, ಕೋಣನ ಕುಂಟೆ, ಅಂಜನಾಪುರ, ವಸಂತಪುರ, ಉತ್ತರಹಳ್ಳಿ, ಎಳಚೇನಹಳ್ಳಿ, ಬೇಗೂರು

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

* ಮತದಾರರ ಸಂಖ್ಯೆ: 447562. ಕಳೆದ ಬಾರಿ ವೋಟ್ ಮಾಡಿದವರು ಶೇ. 56.03ರಷ್ಟು ಮಂದಿ. ಬಿಜೆಪಿಯ ಎಂ ಕೃಷ್ಣಪ್ಪ ಅವರು 1,02,207 ಮತಗಳನ್ನು ಗಳಿಸಿದರೆ, ಜೆಡಿಎಸ್ ನ ಆರ್ ಪ್ರಭಾಕರ್ ರೆಡ್ಡಿ ಅವರು 7.20,45 ಮತಗಳನ್ನು ಗಳಿಸಿದ್ದರು. 30, 162 ಮತಗಳ (ಶೇ 12.03) ಅಂತರದಿಂದ ಎಂ ಕೃಷ್ಣಪ್ಪ ಗೆದ್ದಿದ್ದು ಸಾಧನೆ. ಮೂರನೇ ಸ್ಥಾನ ಗಳಿಸಿದ ತೇಜಸ್ವಿನಿ ಗೌಡ ಅವರು 63,849 ಮತಗಳನ್ನು ಗಳಿಸಿದ್ದು ಗಮನಾರ್ಹ.

ರಾಜರಾಜೇಶ್ವರಿ ನಗರ ಶಾಸಕರಾಗಿದ್ದ ಎಂ ಶ್ರೀನಿವಾಸ ಅವರ ಸೋದರರಾದ ಎಂ ಕೃಷ್ಣಪ್ಪ ಅವರು ಅಣ್ಣನ ಹೆಸರಿನ ಬಲದಿಂದ ಗೆದ್ದವರು.

ಉತ್ತರಹಳ್ಳಿಗೆ ಹೊಂದಿಕೊಂಡಂತೆ ಇರುವ ಕ್ಷೇತ್ರ ಬಡಾವಣೆಗಳಲ್ಲಿ ಸಾರಿಗೆ ಸಂಪರ್ಕ, ವಸತಿ ಸೌಲಭ್ಯ ಅಭಿವೃದ್ಧಿ ಕಂಡಿದೆ. ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ ಸಂಪರ್ಕ ಕ್ಷೇತ್ರವಾಗಿದೆ. ಆದರೆ, ಈಗ ಮೆಟ್ರೋ ಓಡಾಡುತ್ತಿರುವುದು ಬಿಟ್ಟರೆ, ಸ್ವತಂತ್ರವಾಗಿ ಗುರುತಿಸಿಕೊಳ್ಳುವಂಥ ಬದಲಾವಣೆ, ಅಭಿವೃದ್ಧಿಗಳು ಕಂಡು ಬಂದಿಲ್ಲ.

ಕನಕಪುರದ ರಸ್ತೆಯ ಕೋಣನಕುಂಟೆ ಕ್ರಾಸ್ ಟ್ರಾಫಿಕ್ ಜಾಮ್ ಬದಲಾಗಿಲ್ಲ. ಅಲ್ಲಿಂದ ಬೇಗೂರು, ಆ ಕಡೆ ಗೊಟ್ಟಿಗೆರೆ ಕಡೆಗೆ ಅನೇಕ ಅಪಾರ್ಟ್ಮೆಂಟ್ ಗಳು, ಬಡಾವಣೆಗಳು ರೂಪುಗೊಂಡಿದ್ದು ಬಿಟ್ಟರೆ, ಮೂಲ ಸೌಕರ್ಯ ಸಮಸ್ಯೆ ಇದ್ದೆ ಇದೆ. ಬೆಂಗಳೂರಿಗೆ ಪುರಾತನ ಊರು ಎನಿಸಿಕೊಂಡಿರುವ ಬೇಗೂರಿನ ದೇಗುಲಕ್ಕೆ ಅಲ್ಲಿನ ಶಾಸನಕ್ಕೆ ಸೂಕ್ತ ಬೆಲೆ ಸಿಕ್ಕಿಲ್ಲ. ವಸಂತಪುರದ ದೇಗುಲಕ್ಕೆ ಸೂಕ್ತ ಕಾಯಕಲ್ಪ ಒದಗಿಸಿಲ್ಲ. ಕೆರೆಗಳು, ನೀರನ ಆಸರೆಗಳು ಈಗ ಅಪಾರ್ಟ್ಮೆಂಟ್ ಗಳಾಗಿ ಬದಲಾಗಿರುವುದು ದುರಂತ.

English summary
Karnataka Assembly Election 2018: Read all about Bangalore South assembly constituency of Bengaluru. Get election news from Bengaluru district. Know about Bangalore South candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X