Get Updates
Get notified of breaking news, exclusive insights, and must-see stories!

ಕ್ಷೇತ್ರ ಪರಿಚಯ : ಬಹು ಭಾಷೆ, ಸಂಸ್ಕೃತಿಗಳ ಕ್ಷೇತ್ರ ಔರಾದ್

ಬೀದರ್ ಜಿಲ್ಲೆಯ ಕ್ಷೇತ್ರ ಔರಾದ್ ಬಹು ಭಾಷೆ, ಸಂಸ್ಕೃತಿಗಳ ಸಂಗಮ. ಇಲ್ಲಿನ ಜನರು ಕನ್ನಡ, ಮರಾಠಿ, ತೆಲುಗು, ಉರ್ದು ಭಾಷೆಗಳನ್ನು ಮಾತನಾಡುತ್ತಾರೆ. ಭಾಷೆ ಜೊತೆಗೆ ವಿಶಿಷ್ಟ ಭೌಗೋಳಿಕ ಲಕ್ಷಣವನ್ನು ಕ್ಷೇತ್ರ ಹೊಂದಿದೆ.

ಔರಾದ್‌ನ ವ್ಯಾಪಾರಿಗಳು ದೀಪಾವಳಿ ದಿನದಿಂದ ಹೊಸ ಲೆಕ್ಕದ ಪುಸ್ತಕ ಬರೆಯಲು ಆರಂಭಿಸುತ್ತಾರೆ. ಇದು ಮಹಾರಾಷ್ಟ್ರದಿಂದ ಬಂದ ಬಳುವಳಿ. ಭಾಷೆ, ಸಂಸ್ಕೃತಿಯಿಂದ ಕ್ಷೇತ್ರ ಶ್ರೀಮಂತವಾಗಿದ್ದರೂ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇನ್ನೂ ಅಭಿವೃದ್ಧಿ ಕಾಣಬೇಕು.

ಔರಾದ್ ವಿಶಿಷ್ಟ ಭೌಗೋಳಿಕ ಲಕ್ಷಣವನ್ನು ಹೊಂದಿದೆ. ಇದು ಉತ್ತರ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ತೆಲಂಗಾಣ ರಾಜ್ಯದಿಂದ ಸುತ್ತುವರೆದಿದೆ. ಎರಡೂ ರಾಜ್ಯಗಳ ಭಾಷೆ, ಸಂಸ್ಕೃತಿಗಳ ಪ್ರಭಾವ ಇಲ್ಲಿನ ಜನರ ಮೇಲಿದೆ.

Karnataka Assembly Election 2018 : Aurad constituency profile

ಔರಾದ್ ಕ್ಷೇತ್ರ ಕಮಲಪಾಳಯದ ಕೈವಶವಾಗುವುದು ಬಹುತೇಖ ಖಚಿತ. 2008ರಿಂದ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಪಾರುಪತ್ಯ. ಕಳೆದ ಬಾರಿ ಬಿಜೆಪಿ-ಕೆಜೆಪಿ ವಿಭಜನೆ ಕಾರಣ ಮತಗಳು ಹಂಚಿ ಹೋಗಿದ್ದವು. ಈಗ ಪಕ್ಷಗಳು ವಿಲೀನವಾಗಿರುವುದರಿಂದ ಬಿಜೆಪಿ ಶಕ್ತಿ ಹೆಚ್ಚಿದೆ.

ಕ್ಷೇತ್ರದ ಶಾಸಕರು ಪ್ರಭು ಚೌಹಾಣ್ 2008, 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. 2013ರ ಚುನಾವಣೆಯಲ್ಲಿ 56,964 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ ಬಿಜೆಪಿ 20 ಸಾವಿರ ಮತಗಳ ಮುನ್ನಡೆ ಪಡೆದಿದೆ. ಆದ್ದರಿಂದ, ಈ ಬಾರಿ ಚುನಾವಣೆಯಲ್ಲಿಯೂ ಕ್ಷೇತ್ರ ಬಿಜೆಪಿ ವಶವಾಗುವುದು ಬಹುತೇಕ ಖಚಿತವಾಗಿದೆ.

2013ರ ಚುನಾವಣೆಯಲ್ಲಿ ಪ್ರಭು ಬಿ.ಚೌವ್ಹಾಣ್ ಅವರು 61,826 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಗಾಯಕ್‌ವಾಡ್ ವಿಜಯಕುಮಾರ್ 15,456, ಜೆಡಿಎಸ್‌ನ ಜಿ.ಎಂ.ಯತ್ನೂರ್ 4,892 ಮತಗಳನ್ನು ಪಡೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+