ನ್ಯೂಸ್ಎಕ್ಸ್ ಸಮೀಕ್ಷೆ: ಸಿದ್ದರಾಮಯ್ಯ ಸರ್ಕಾರ ಪಾಸೋ? ಫೇಲೋ?

Recommended Video

      Karnataka Assembly Elections 2018 : ಸಿದ್ದು ಆಡಳಿತಕ್ಕೆ ನ್ಯೂಸ್ಎಕ್ಸ್ ಸಮೀಕ್ಷೆಯಲ್ಲಿ ಬಂದ ಅಂಕವೆಷ್ಟು?

      ಬೆಂಗಳೂರು, ಮೇ 03 : ಕರ್ನಾಟಕ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಸಿಫೋರ್, ಟೈಮ್ಸ್ ನೌ ಸಮೀಕ್ಷೆಗಳ ಬೆನ್ನಲ್ಲೇ ರಾಷ್ಟ್ರೀಯ ಸುದ್ದಿವಾಹಿನಿ ನ್ಯೂಸ್ಎಕ್ಸ್ ತನ್ನ ಅಭಿಪ್ರಾಯ ಸಂಗ್ರಹದ ಮುಂದುವರಿದ ವರದಿ ಇಲ್ಲಿದೆ.

      ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಬೀರಬಲ್ಲ ಅಂಶಗಳು ಯಾವುವು? ಎಂಬುದರ ಬಗ್ಗೆ ಫಲಿತಾಂಶ ಸಿಕ್ಕ ಬಳಿಕ ಯಾರು ಮುಂದಿನ ಸಿಎಂ ಆಗಲು ಸೂಕ್ತ ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಯಾವ ರೀತಿ ಆಡಳಿತ ನೀಡಿದೆ? ಪ್ರತ್ಯೇಕ ಲಿಂಗಾಯತ ಧರ್ಮ, ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಷಯಗಳ ಬಗ್ಗೆ ಸಿಕ್ಕಿರುವ ಅಭಿಪ್ರಾಯ, ಪ್ರತಿಕ್ರಿಯಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗುತ್ತಿದೆ.

      ಕಳೆದ 5 ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ಕಾರ್ಯವೈಖರಿಗೆ ಎಷ್ಟು ಅಂಕ ಕೊಡುತ್ತೀರಾ? ಎಂಬ ಪ್ರಶ್ನೆಗೆ ನಿರಾಸೆ ತಂದಿದೆ: 35.13% ಎಂದು ಪ್ರತಿಕ್ರಿಯೆ ಬಂದಿದೆ. ಆಯಾ ಕ್ಷೇತ್ರಗಳಲ್ಲಿ ರಾಜ್ಯದ ಅಭಿವೃದ್ಧಿ ಮಾಡಿದೆಯೇ? ಎಂಬ ಪ್ರಶ್ನೆ ಸಾಧಾರಣ ಎಂಬ ಫಲಿತಾಂಶ ಬಂದಿದೆ. ಮಿಕ್ಕಂತೆ ಯಾವೆಲ್ಲ ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗದೆ ಮುಂದೆ ಓದಿ...

      ಯಾವೆಲ್ಲ ಅಂಶಗಳು ಕಡಿಮೆಯಾಗಿವೆ

      ಯಾವೆಲ್ಲ ಅಂಶಗಳು ಕಡಿಮೆಯಾಗಿವೆ

      ಸಿದ್ದರಾಮಯ್ಯ ಅವರ ಕಳೆದ ಐದು ವರ್ಷದ ಅಧಿಕಾರ ಅವಧಿಯಲ್ಲಿ ಯಾವೆಲ್ಲ ಅಂಶಗಳು ಕಡಿಮೆಯಾಗಿವೆ?

      ಭ್ರಷ್ಟಾಚಾರ
      ಹೆಚ್ಚಾಗಿದೆ: 33%
      ಕಡಿಮೆಯಾಗಿದೆ : 10%
      ಹಾಗೆಯೇ ಇದೆ : 42%
      ಗೊತ್ತಿಲ್ಲ: 15%
      ****
      ಅಕ್ರಮ ಭೂ ಕಬಳಿಕೆ
      ಹೆಚ್ಚಾಗಿದೆ: 20%
      ಕಡಿಮೆಯಾಗಿದೆ : 10%
      ಹಾಗೆಯೇ ಇದೆ : 45%
      ಗೊತ್ತಿಲ್ಲ: 25%
      ***
      ದರ ಹೆಚ್ಚಳ
      ಹೆಚ್ಚಾಗಿದೆ: 42%
      ಕಡಿಮೆಯಾಗಿದೆ : 02%
      ಹಾಗೆಯೇ ಇದೆ : 51%
      ಗೊತ್ತಿಲ್ಲ: 05%
      ಪ್ರತ್ಯೇಕ ಲಿಂಗಾಯತ ಧರ್ಮ ರಚನೆ

      ಪ್ರತ್ಯೇಕ ಲಿಂಗಾಯತ ಧರ್ಮ ರಚನೆ

      ಪ್ರತ್ಯೇಕ ಲಿಂಗಾಯತ ಧರ್ಮ ರಚನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
      ಸಹಮತವಿದೆ: 37.40%
      ಸಹಮತವಿಲ್ಲ : 45.95%
      ಯಾವುದೇ ಅಭಿಪ್ರಾಯವಿಲ್ಲ : 16.65%

      ಈ ಹಿಂದೆ ಟೈಮ್ಸ್ ನೌ ಸಮೀಕ್ಷೆಯಲ್ಲೂ ಕೂಡಾ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಜನರ ಅಭಿಪ್ರಾಯ ವಿರುದ್ಧವಾಗಿ ಬಂದಿತ್ತು. ಆದರೆ, ಲಿಂಗಾಯತ ಸಮುದಾಯಕ್ಕೆ ಸೂಕ್ತ ಕ್ರಮ ಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.

      ಕಾವೇರಿ ನದಿ ನೀರು ಹಂಚಿಕೆ

      ಕಾವೇರಿ ನದಿ ನೀರು ಹಂಚಿಕೆ

      ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರುತ್ತಾ?
      ಹೌದು : 42%
      ಇಲ್ಲ : 30.95%
      ಗೊತ್ತಿಲ್ಲ : 27.05 %

      ಕರ್ನಾಟಕದ ಮುಂದಿನ ಮುಖ್ಯಮಂತ್ರಿ

      ಕರ್ನಾಟಕದ ಮುಂದಿನ ಮುಖ್ಯಮಂತ್ರಿ

      ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಆಗಬಹುದು?

      ಸಿದ್ದರಾಮಯ್ಯ : 31.11%
      ಬಿ.ಎಸ್ ಯಡಿಯೂರಪ್ಪ : 28.29%
      ಎಚ್. ಡಿ ಕುಮಾರಸ್ವಾಮಿ : 17.47%
      ಇತರೆ : 23.13%

      ****

      ಯಾರು ಉತ್ತಮ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು?
      ಸಿದ್ದರಾಮಯ್ಯ : 31.33%
      ಬಿ.ಎಸ್ ಯಡಿಯೂರಪ್ಪ : 26%
      ಇಬ್ಬರೂ ಒಳ್ಳೆಯವರು : 2.81%
      ಇಬ್ಬರೂ ಕೆಟ್ಟವರು : 24.35%
      ಯಾವುದೇ ಅಭಿಪ್ರಾಯವಿಲ್ಲ : 15.51%

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+