ಎಸ್‌ಎಂಎಸ್‌ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 11 : ಕರ್ನಾಟಕದಲ್ಲಿ ವಿಧಾನಸಭೆ ಹತ್ತಿರವಾಗುತ್ತಿದೆ. ಮತದಾನ ಮಾಡಲು ಹೋಗುವ ಮುನ್ನ ಜನರು ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ?, ಇಲ್ಲವೋ? ಎಂದು ಪರಿಶೀಲಿಸಲು ಚುನಾವಣಾ ಆಯೋಗ ಎಸ್‌ಎಂಎಸ್ ಸೇವೆ ಜಾರಿಗೆ ತಂದಿದೆ.

ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ? ಎಂದು ತಿಳಿಯಲು ಜನರಿಗೆ ಅನುಕೂಲವಾಗಲು ವಿಶೇಷ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. 'ಟು ನೋ ಯುವರ್ ಅಸ್ಲೆಂಬ್ಲಿ' ಎಂಬ ಅಭಿಯಾನವನ್ನು ಇದಕ್ಕಾಗಿ ಆರಂಭಿಸಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಧಿ ವಿಸ್ತರಣೆ

ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಬುಧವಾರ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಎಸ್‌ಎಂಎಸ್ ಕಳಿಸುವ ಮೂಲಕ ಜನರು ತಮ್ಮ ಹೆಸರು, ವಿಧಾನಸಭಾ ಕ್ಷೇತ್ರದ ಬಗ್ಗೆ ಅಂಗೈಯಲ್ಲಿಯೇ ಮಾಹಿತಿ ಪಡೆಯಬಹುದಾಗಿದೆ.

How to check name in voter list through SMS

ಮಾಹಿತಿ ಪಡೆಯುವುದು ಹೇಗೆ? : ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು ಬಯಸುವ ಜನರು

9731979898 ನಂಬರ್‌ಗೆ ಎಸ್‌ಎಂಎಸ್ ಮಾಡಬೇಕು. ಎಸ್‌ಎಂಎಸ್ ಮೂಲಕವೇ ನಿಮ್ಮ ಹೆಸರು ಇದೆಯೇ?, ಇಲ್ಲವೇ? ಎಂಬ ಮಾಹಿತಿ ರವಾನೆ ಮಾಡಲಾಗುತ್ತದೆ.

ಎಸ್‌ಎಂಎಸ್ ಮಾಡುವ ವಿಧಾನ KAEPIC ಎಂದು ಟೈಪ್ ಮಾಡಿ, ಸ್ಪೇಸ್ ಬಿಟ್ಟು ನಿಮ್ಮ ಮತದಾರರ ಐಡಿ ಕಾರ್ಡ್ ನಂಬರ್ ಟೈಪ್ ಮಾಡಿ ಎಸ್‌ಎಂಎಸ್ ಕಳಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka election commission launched the SMS service to check name in voter list. How to check your name in the list.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ