ನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿ

Posted By:
Subscribe to Oneindia Kannada

ನಿಮಗೆ ರಾಜಕೀಯದಲ್ಲಿ ಆಸಕ್ತಿಯಿರಲಿ, ಇಲ್ಲದಿರಲಿ, ಎಲೆಕ್ಷನ್ ಹೇಗೆ ನಡೆಯುತ್ತೆ? ಎಂಬ ತಲೆಬಿಸಿ ನಮಗ್ಯಾಕೆ ಎಂಬ ಧೊರಣೆಯೇ ನಿಮ್ಮದಾಗಿರಲಿ. ಆದರೆ, ಈ ಕ್ಷಣಕ್ಕೆ ನೀವೇನಾದರೂ ಕರ್ನಾಟಕ ಮುಖ್ಯಮಂತ್ರಿಯಾದರೆ, ನಿಮ್ಮ ಸಚಿವ ಸಂಪುಟವನ್ನು ರಚಿಸಿ ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ? ಯಾರಿಗೆ ಯಾವ ಖಾತೆ ಹಂಚುತ್ತೀರಿ? ಎಂಬ ಪ್ರಶ್ನೆಗೆ ಉತ್ತರ ನೀಡಲು ನಿಮಗಾಗಿ ಒನ್ಇಂಡಿಯಾ ಕನ್ನಡ ಒಂದು ಉತ್ತಮ ಸಂವಾದಿ ವೇದಿಕೆಯನ್ನು ಒದಗಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2018ರ ವಿಶೇಷ ಪುಟದಲ್ಲಿ ಓದುಗರಿಗೆ ಚಟುವಟಿಕೆಯೊಂದನ್ನು ನೀಡಲಾಗಿದೆ. ಇದನ್ನು ಬಳಸಿ ನಿಮ್ಮ ಕನಸಿನ ಸಂಪುಟ ರಚಿಸಬಹುದು.

ನಿಮ್ಮ ನೆಚ್ಚಿನ ಕ್ಯಾಬಿನೆಟ್ ರಚಿಸುವ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಹೇಗೆ? ಇಲ್ಲಿದೆ ಹಂತ ಹಂತದ ವಿಧಾನ:
* ಮೊದಲಿಗೆ ಈ ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ವಿಶೇಷ ಪುಟಕ್ಕೆ ಬನ್ನಿ
* ಮೇಲಿರುವ ಟ್ಯಾಬ್ ನಲ್ಲಿ ಮೂರನೇ ಆಯ್ಕೆಯಾಗಿರುವ 'ನಿಮ್ಮ ಕನಸಿನ ಸಂಪುಟ' ಕ್ಲಿಕ್ ಮಾಡಿ
* 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಲು ಬಲ ಬದಿಯಲ್ಲಿರುವ ಈ ಪಟ್ಟಿಯನ್ನು ನೋಡಿರಿ.

ನಿಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ

* ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪ್ರತ್ಯೇಕ ಪಟ್ಟಿ ನೀಡಲಾಗಿದೆ. ಈ ಪಟ್ಟಿಯಿಂದ ನಿಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ.
* ಮುಖ್ಯಪುಟದಲ್ಲಿ ನಿಮ್ಮ ಆಯ್ಕೆಯ ನಾಯಕರನ್ನು ಡ್ರಾಗ್ ಮಾಡಿ ಖಾಲಿ ಇರುವ ಭಾವಚಿತ್ರಗಳಲ್ಲಿ ತುಂಬಿ.
* ಉದಾಹರಣೆಗೆ: ಮುಖ್ಯಮಂತ್ರಿ ಆಯ್ಕೆಗೆ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿದರೆ, ಬಲಗಡೆ ಪಟ್ಟಿಯಿಂದ ಎಳೆದು ತಂದು ಮುಖ್ಯಮಂತ್ರಿ ಸ್ಥಾನಕ್ಕೆ ತುಂಬಿ.

ಇಲ್ಲಿ ಮಾಡಿರುವ ಆಯ್ಕೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ

  • ಮುಖ್ಯಮಂತ್ರಿ: ಸಿದ್ದರಾಮಯ್ಯ
  • ಗೃಹ ಸಚಿವ: ರಮೇಶ್ ಕುಮಾರ್
  • ಕಂದಾಯ ಸಚಿವ : ಆರ್ ವಿ ದೇಶಪಾಂಡೆ
  • ಇಂಧನ ಸಚಿವ: ರಾಮಲಿಂಗಾರೆಡ್ಡಿ
  • ಸಾರಿಗೆ ಸಚಿವ : ಡಿಕೆ ಶಿವಕುಮಾರ್
  • ಶಿಕ್ಷಣ ಸಚಿವ: ಪ್ರಿಯಾಂಕ್ ಖರ್ಗೆ
  • ಐಟಿ ಸಚಿವ: ಕೃಷ್ಣ ಬೈರೇಗೌಡ
  • ಕೈಗಾರಿಕಾ ಸಚಿವ: ಜಿ ಪರಮೇಶ್ವರ
  • ಅರೋಗ್ಯ ಸಚಿವ : ಯುಟಿ ಖಾದರ್
ಜೆಡಿಎಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ

ಜೆಡಿಎಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ

* ಇದೇ ಕ್ರಮದಲ್ಲಿ ಗೃಹ ಸಚಿವ, ಕಂದಾಯ, ಕೈಗಾರಿಕೆ, ಸಾರಿಗೆ, ಶಿಕ್ಷಣ, ಆರೋಗ್ಯ, ಕೃಷಿ, ಇಂಧನ, ಐಟಿ ಸಚಿವರನ್ನು ಆಯ್ಕೆ ಮಾಡಿ
* ಎಲ್ಲಾ ಖಾಲಿ ಸ್ಥಳಗಳನ್ನು ತುಂಬಿದ ಬಳಿಕ 'ನಿಮ್ಮ ಕನಸಿನ ಸಂಪುಟ ಸೃಷ್ಟಿಸಿ' ಬಟನ್ ಒತ್ತಿ
* ನಿಮ್ಮ ಕನಸಿನ ಸಂಪುಟ ನಿಮ್ಮ ಮುಂದೆ ಕಾಣುತ್ತದೆ. ಇದನ್ನು ಫೇಸ್ಬುಕ್, ಟ್ವಿಟ್ಟರ್, ಜಿಪ್ಲಸ್ ನಲ್ಲಿ ಹಂಚಿಕೊಳ್ಳಬಹುದು.

ಮೈತ್ರಿಕೂಟದ ಸರ್ಕಾರ

ಮೈತ್ರಿಕೂಟದ ಸರ್ಕಾರ

ಸೂಚನೆ: ಒಮ್ಮೆ ನಿಮ್ಮ ಕನಸಿನ ಸಂಪುಟ ರಚಿಸಿದರೆ 24 ಗಂಟೆಗಳ ನಂತರ ಮಾತ್ರ ಮತ್ತೊಂದು ಸಂಪುಟ ರಚಿಸುವ ಅವಕಾಶ ಸಿಗಲಿದೆ.
* ಮೈತ್ರಿ ಸರ್ಕಾರ ರಚನೆಯಾಗಬಹುದು ಎಂದೆನಿಸಿದರೆ, ನಿಮ್ಮ ಇಷ್ಟ ಮೈತ್ರಿಕೂಟ ರಚಿಸಿ ಸಂಪುಟ ಆಯ್ಕೆ ಮಾಡಬಹುದು.
* ಉದಾ: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸಾಧಿಸಿದರೆ, ಮುಖ್ಯಮಂತ್ರಿಯಾಗಿ ಎಚ್. ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವರಾಗಿ ಸಿದ್ದರಾಮಯ್ಯರನ್ನು ಕೂರಿಸಬಹುದು.

ಕನಸಿನ ಸಂಪುಟವನ್ನು ಹಂಚಿಕೊಳ್ಳಿ

ಕನಸಿನ ಸಂಪುಟವನ್ನು ಹಂಚಿಕೊಳ್ಳಿ

ಇನ್ನೇಕೆ ತಡ, ಕರ್ನಾಟಕದ ನಿಮ್ಮ ಕನಸಿನ ಸಂಪುಟವನ್ನು ನೀವೇ ಸೃಷ್ಟಿಸಿ, ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಳ್ಳಿ!
ನೆಚ್ಚಿನ ನಾಯಕರನ್ನುಳ್ಳ ಸಚಿವ ಸಂಪುಟ ರಚಿಸಿ, ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ, ಆನಂದಿಸಿ, ನಿಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ತಪ್ಪದೇ ನಮಗೆ ಇಮೇಲ್ ಮಾಡಿ [kannnada@oneindia.co.in] ಅಥವಾ ಫೇಸ್ಬುಕ್ ಪುಟಕ್ಕೆ ಮೆಸೇಜ್ ಕಳಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Oneindia invites one and all to create your own Dream Cabinet from the top three parties Congress, BJP and JDS. Ahead of Assembly Elections 2018 one can present their own cabinet with CM and other ministers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ