ಕಾಪು ಕ್ಷೇತ್ರದಿಂದ ಅನುಪಮಾ ಶೆಣೈ ಸ್ಪರ್ಧೆ

Posted By:
Subscribe to Oneindia Kannada

ಉಡುಪಿ, ಏಪ್ರಿಲ್ 09: ಕನ್ನಡ ರಾಜ್ಯೋತ್ಸವ ದಿನದಂದು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಕಾಪು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.

ಕಷ್ಟದ ಬದುಕನ್ನು ಗೆದ್ದ ಸ್ವಾವಲಂಬಿಯೇ ಅನುಪಮಾ ಶೆಣೈ

ಅನುಪಮಾ ಶೆಣೈ ಅವರ 'ಭಾರತೀಯ ಜನಶಕ್ತಿ ಕಾಂಗ್ರೆಸ್' ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ(ಏಪ್ರಿಲ್ 09)ದಂದು ಪ್ರಕಟಿಸಲಾಯಿತು. ಮೊದಲ ಪಟ್ಟಿಯಲ್ಲಿ ಅನುಪಮಾ ಶೆಣೈ ಸೇರಿದಂತೆ 15 ಮಂದಿ ಹೆಸರಿದೆ. ಇತ್ತೀಚೆಗೆ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಚಿಹ್ನೆಯಾಗಿ 'ಬೆಂಡೆಕಾಯಿ' ಯನ್ನು ಚುನಾವಣಾ ಆಯೋಗ ನೀಡಿತ್ತು.

Elections 2018 : Anupama Shenoy Bharatiya Janashakti Congress announces 15 candidates list

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

'ಉಡುಪಿಯ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ನಾವು ಜಿದ್ದಿಗಾಗಿ ಪಾರ್ಟಿ ಮಾಡಿದ್ದಲ್ಲ. ಪಿ.ಟಿ.ಪರಮೇಶ್ವರ ನಾಯ್ಕ ಸ್ಪರ್ಧಿಸುವ ಕ್ಷೇತ್ರ ಎಸ್ ಟಿ ಮೀಸಲು ಕ್ಷೇತ್ರವಾಗಿದ್ದು, ಆ ಹಿನ್ನೆಲೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಲು ಆಗುತ್ತಿಲ್ಲ. ನನ್ನ ಊರಿನಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅನುಪಮಾ ಶೆಣೈ ಅವರು ಪ್ರತಿಕ್ರಿಯಿಸಿದ್ದಾರೆ.

ಅನುಪಮಾ ಶೆಣೈ ಅವರ ಹೊಸ ಪಕ್ಷ 'ಭಾರತೀಯ ಜನಶಕ್ತಿ ಕಾಂಗ್ರೆಸ್'

ಅಭ್ಯರ್ಥಿಗಳ ಹೆಸರು ಹಾಗೂ ಕ್ಷೇತ್ರ ಹೀಗಿದೆ:
* ಅಭಿಷೇಕ್ - ಕನಕಪುರ
* ಅಶ್ವಿನಿ ದೇಸಾಯಿ - ಬೀಳಗಿ

* ಲಕ್ಷ್ಮಿ ರಾಮಯ್ಯ - ಕೆ ಆರ್ ಪುರ

* ರಾಕೇಶ್ ತೇಲಿ - ಬಿಜಾಪುರ

* ವಸೀಮ್ ಅಹಮದ್-- ಬ್ಯಾಟರಾಯನಪುರ

* ಶ್ಯಾಮಸುಂದರ್ ಕುಲಕರ್ಣಿ- ಚಿತ್ರದುರ್ಗ
* ಬಸವರಾಜ್ ನಾಲವಾಡ- ಹುನಗುಂದ

* ವೆಂಕಟೇಶ್ವರ ಉಪ್ಪಾರ್ - ರಾಯಚೂರು

* ಹರೀಶ್ ನಾರಾಯಣ್ - ಚಾಮರಾಜಪೇಟೆ

* ದುರ್ಗೇಶ್ - ಹಾವೇರಿ

* ಶರಣಪ್ಪ ಬೀಮಶಾ- ಝಳಕಿ

* ಪ್ರವೀಣ ಕುಮಾರ್ - ಚಾಮುಂಡೇಶ್ವರಿ
* ಸೈಫುಲ್ಲ - ವಿಜಯನಗರ
* ಮಲ್ಲಿಕಾರ್ಜುನ -ಬಾದಾಮಿ

* ರಾಘವೇಂದ್ರ - ಸಿವಿ ರಾಮನ್ ನಗರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018 : Anupama Shenoy Bharatiya Janashakti Congress announces 15 candidates list. Anupama is contesting from Kaup Assembly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ