ಎನ್ನಡಾ-ಎಕ್ಕಡಾ ಹೋಗಲಿ, ಕನ್ನಡವೇ ಕುಣಿದಾಡಲಿ: ದುಬೈ ಕನ್ನಡಿಗನ ಕನಸು
Recommended Video

ದುಬೈನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರೂ ಕನ್ನಡತನವನ್ನು ಇನಿತೂ ಕಳೆದುಕೊಳ್ಳದ, ಸದಾ ಕನ್ನಡಕ್ಕಾಗಿ ಮಿಡಿಯುವ ಮನ ಹೊಂದಿರುವ ಅಶ್ರಿತ್ ಅವರು 'ಒನ್ ಇಂಡಿಯಾ ಕನ್ನಡ'ದ ಜೊತೆಗೆ ತಮ್ಮ 'ಕನಸಿನ ಕರ್ನಾಟಕ' ಹೇಗಿರಬೇಕು ಎಂಬುದರ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ದುಬೈನ ಇತಿಹಾಸ ತಿಳಿದಿರುವ ಅವರು ಕೆಲವು ದಶಕಗಳ ಹಿಂದೆ ಮರಳು ಬೀಡಾಗಿದ್ದ ದುಬೈ ಇಂದು ವಿಶ್ವದ ಅತಿ ಶ್ರೀಮಂತ ನಗರಗಳಲ್ಲಿ ಒಂದಾಗಿರುವ ಬಗ್ಗೆ ವಿಸ್ಮಯಗೊಂಡಿದ್ದಾರೆ, ಯಾವುದೇ ಸಂಪನ್ಮೂಲ ಇಲ್ಲದಿದ್ದರೂ ದುಬೈ ಇಷ್ಟು ಬೃಹತ್ ಆಗಿ ಬೆಳೆದಿದೆ, ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲ ಹೊಂದಿರುವ ಕರ್ನಾಟಕ ಏಕೆ ಗಮನಾರ್ಹ ಪ್ರಗತಿ ಸಾಧಿಸುತ್ತಿಲ್ಲ ಎಂಬುದು ಅವರನ್ನು ಕಾಡುತ್ತಿದೆ.
ಅವರ ಕನಸಿನ ಕರ್ನಾಟಕದಲ್ಲಿ ದಕ್ಷ ಮತ್ತು ಭ್ರಷ್ಟಾಚಾರ ರಹಿತ ಆಡಳಿತವೇ ಅವರ ಮೊದಲ ಆದ್ಯತೆ. ಭ್ರಷ್ಟಾಚಾರ ರಹಿತ ಆಡಳಿತ ಕರ್ನಾಟಕದಲ್ಲಿ ಸಾಧ್ಯವಾದರೆ ರಾಜ್ಯ ತನ್ನಂತಾನೇ ಅಭಿವೃದ್ಧಿ ಸಾಧಿಸುತ್ತದೆ ಎಂಬುದು ಅಶ್ರಿತ್ ಅಭಿಪ್ರಾಯ.

ರಾಜ್ಯವು ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿ ಆಗಬೇಕಿದೆ ಎಂಬುದು ಅವರ ಆಗ್ರಹ, ವಿಶೇಷವಾಗಿ ಇಂಧನ ಕ್ಷೇತ್ರದಲ್ಲಿ ರಾಜ್ಯವು ಆದಷ್ಟು ಬೇಗ ಸ್ವಾವಲಂಬಿತ್ವ ಸಾಧಿಸಬೇಕಿದೆ, ಸೌರ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಬಳಸಿ ವಿದ್ಯುತ್ ಕೊರತೆ ನೀಗಿಸಿಕೊಳ್ಳಬೇಕಿದೆ ಎನ್ನುತ್ತಾರೆ ಅವರು. ವಿದ್ಯುತ್, ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಅವರಿಗೆ ಅರಿವಿದೆ ಹಾಗಾಗಿಯೇ ವಿದ್ಯುತ್ ಕ್ಷೇತ್ರದಲ್ಲಿ ಸ್ವಾಲಂಬಿಯಾಗಬೇಕಿರುವುದು ರಾಜ್ಯದ ತುರ್ತು ಎನ್ನುತ್ತಾರೆ ಅಶ್ರಿತ್.
ನಮ್ಮ ರಾಜ್ಯ ಭೌಗೋಳಿಕವಾಗಿ ಹಲವು ವಿಶೇಷತೆಗಳನ್ನು ಹೊಂದಿದೆ. ಒಂದೆಡೆ ಬೆಟ್ಟ ಗುಡ್ಡಗಳಾದರೆ ಮತ್ತೊಂದೆಡೆ ಸಮುದ್ರ ಕಿನಾರೆ. ಮತ್ತೊಂದೆಡೆ ಜಲಪಾತಗಳಾದರೆ ಇನ್ನೊಂದೆಡೆ ಕೋಟೆ ಕೊತ್ತಲುಗಳು. ರಾಜ್ಯದ ಉತ್ತರ, ದಕ್ಷಿಣ, ಪೂರ್ವ , ಪಶ್ಚಿಮ ಎಲ್ಲಾ ಭಾಗಗಳಲ್ಲಿಯೂ ಪ್ರವಾಸಕ್ಕೆ ಅನುಕೂಲಕರವಾದ ಸ್ಥಳಗಳಿವೆ. ಅವುಗಳನ್ನು ಶೀಘ್ರವೇ ಅಭಿವೃದ್ಧಿಪಡಿಸಬೇಕಿದೆ. ಇದು ರಾಜ್ಯದ ಯುವಕರಿಗೆ ಉದ್ಯೋಗ ಸೃಷ್ಠಿಸಲಿದೆ ಎಂಬುದು ಅಶ್ರಿತ್ ಅವರ ದೂರ ದೃಷ್ಠಿ.
ಅವರ ಅಂತಿಮ ಆದರೆ ಅತಿ ಮುಖ್ಯ ಆದ್ಯತೆ ರೈತರಿಗೆ. ರೈತರನ್ನು ಸುಖವಾಗಿಟ್ಟರೆ ಕರ್ನಾಟಕ ಸುಖವಾಗಿರುತ್ತದೆ ಎನ್ನುತ್ತಾರೆ ಅಶ್ರಿತ್, ರೈತರು ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿರ್ಧರಿಸುವಂತಾಗಬೇಕು. ಅವರ ಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುವಂತಾಗಬೇಕು ಎಂಬುದು ಅಶ್ರಿತ್ ಅವರ ಒತ್ತಾಯ.
ಒಟ್ಟಾರೆಯಾಗಿ ಅಶ್ರಿತ್ ಅವರ ಕನಸಿನ ಕರ್ನಾಟಕ, ದಕ್ಷ, ಭ್ರಷ್ಟಾಚಾರ ರಹಿತ, ರೈತರ ಸ್ವರ್ಗ, ಸ್ವಾವಲಂಬಿ ಆಗಿರಬೇಕು ರಾಜ್ಯದಲ್ಲಿ 'ಎನ್ನಡಾ ಎಕ್ಕಡಾ ಸಂಸ್ಕೃತಿ ಅಳಿದು, ಎಲ್ಲೆಡೆ ಕನ್ನಡವೇ ಕುಣಿದಾಡಬೇಕು' ಎಂಬುದು ಕರ್ನಾಟಕದ ಬಗ್ಗೆ ಅಶ್ರಿತ್ ಕನಸು.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications