ಚಿಕ್ಕಬಳ್ಳಾಪುರ ಜಿಲ್ಲೆ: ಶಿವಶಂಕರ್ ರೆಡ್ಡಿ ಖರ್ಚಾಗದ ಅನುದಾನ ಹೆಚ್ಚು

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ಏಪ್ರಿಲ್ 16 : 2013ರಿಂದ 2017ರ ಡಿಸೆಂಬರ್ ಅವಧಿಯೊಳಗೆ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸರಕಾರದಿಂದ ಬಿಡುಗಡೆಯಾದ ಅನುದಾನ ಎಷ್ಟು, ಆ ಪೈಕಿ ಬಾಕಿ ಉಳಿದದ್ದು ಎಷ್ಟು ಎಂಬುದರ ವಿವರ ತೆರೆದಿಡುವಂಥ ವರದಿ ಇದು.

ಚಿಕ್ಕಬಳ್ಳಾಪುರ- ಡಾ.ಸುಧಾಕರ್ (ಕಾಂಗ್ರೆಸ್), ಚಿಂತಾಮಣಿ - ಜೆ.ಕೆ.ಕೃಷ್ಣಾರೆಡ್ಡಿ (ಜೆಡಿಎಸ್), ಗೌರಿಬಿದನೂರು- ಶಿವಶಂಕರ್ ರೆಡ್ಡಿ (ಕಾಂಗ್ರೆಸ್), ಬಾಗೇಪಲ್ಲಿ- ಸುಬ್ಬಾ ರೆಡ್ಡಿ (ಪಕ್ಷೇತರ) ಹಾಗೂ ಶಿಡ್ಲಘಟ್ಟ- ಎಂ.ರಾಜಣ್ಣ (ಜೆಡಿಎಸ್) ಶಾಸಕರಾಗಿದ್ದಾರೆ. ಯಾವ ವರ್ಷ, ಎಷ್ಟು ಅನುದಾನ ಬಿಡುಗಡೆ ಆಗಿತ್ತು? ಖರ್ಚಾಗಿದ್ದು ಎಷ್ಟು ಎಂಬುದರ ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರ: ಜೆಡಿಎಸ್- 'ಕೈ' ಕದನ, ಗೆದ್ದವರಿಗೆ ಕೈ ತುಂಬ ಕೆಲಸ

2013-14ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 1.96 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ

Chikkaballapur: Who utilised MLA fund effectively?

ಚಿಕ್ಕಬಳ್ಳಾಪುರ 1.90 ಲಕ್ಷ

ಚಿಂತಾಮಣಿ 0.00

ಗೌರಿಬಿದನೂರು 5.40 ಲಕ್ಷ

ಬಾಗೇಪಲ್ಲಿ 0.00

ಶಿಡ್ಲಘಟ್ಟ 0.00

ಚಾಮರಾಜ ನಗರ ಜಿಲ್ಲೆಗೆ ಸರ್ಕಾರ ಕೊಟ್ಟ ಅನುದಾನ ಎಷ್ಟು?

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹೊರತುಪಡಿಸಿ ಉಳಿದೆಲ್ಲರೂ ಪೂರ್ಣ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಿದ್ದಾರೆ.

2014-15ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 2 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ

ಚಿಕ್ಕಬಳ್ಳಾಪುರ 3 ಲಕ್ಷ

ಚಿಂತಾಮಣಿ 4.65 ಲಕ್ಷ

ಗೌರಿಬಿದನೂರು 0.35 ಲಕ್ಷ

ಬಾಗೇಪಲ್ಲಿ 0.00

ಶಿಡ್ಲಘಟ್ಟ 0.00

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹೊರತುಪಡಿಸಿ ಉಳಿದೆಲ್ಲರೂ ಪೂರ್ಣ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಿದ್ದಾರೆ.

2015-16ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 2 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ.

ಚಿಕ್ಕಬಳ್ಳಾಪುರ 0.00

ಚಿಂತಾಮಣಿ 0.00

ಗೌರಿಬಿದನೂರು 0.77 ಲಕ್ಷ

ಬಾಗೇಪಲ್ಲಿ 0.00

ಶಿಡ್ಲಘಟ್ಟ 0.00

ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹೊರತುಪಡಿಸಿ ಉಳಿದೆಲ್ಲರೂ ಪೂರ್ಣ ಪ್ರಮಾಣದಲ್ಲಿ ಅನುದಾನ ಖರ್ಚು ಮಾಡಿದ್ದಾರೆ.

2016-17ರಲ್ಲಿ ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 2 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ.

ಚಿಕ್ಕಬಳ್ಳಾಪುರ 4 ಲಕ್ಷ

ಚಿಂತಾಮಣಿ 22.90 ಲಕ್ಷ

ಗೌರಿಬಿದನೂರು 1.50 ಲಕ್ಷ

ಬಾಗೇಪಲ್ಲಿ 0.00

ಶಿಡ್ಲಘಟ್ಟ 0.52 ಲಕ್ಷ

ಬಾಗೇಪಲ್ಲಿ ಶಾಸಕ ಸುಬ್ಬಾ ರೆಡ್ಡಿ ಹೊರತುಪಡಿಸಿ ಉಳಿದ ಶಾಸಕರೆಲ್ಲರೂ ಬಾಕಿ ಉಳಿಸಿಕೊಂಡಿದ್ದಾರೆ.

2017-18ರಲ್ಲಿ (2017 ಡಿಸೆಂಬರ್ ತನಕ) ಕ್ಷೇತ್ರಗಳಿಗೆ ಬಿಡುಗಡೆಯಾದ ಮೊತ್ತ ತಲಾ 1.50 ಕೋಟಿ, ಬಾಕಿ ಉಳಿದ ಮೊತ್ತದ ವಿವರ ಹೀಗಿದೆ.

ಚಿಕ್ಕಬಳ್ಳಾಪುರ 8 ಲಕ್ಷ

ಚಿಂತಾಮಣಿ 81.52 ಲಕ್ಷ

ಗೌರಿಬಿದನೂರು 128.86 ಲಕ್ಷ

ಬಾಗೇಪಲ್ಲಿ 89.60 ಲಕ್ಷ

ಶಿಡ್ಲಘಟ್ಟ 49.19 ಲಕ್ಷ

ಈ ಅವಧಿಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಹೊರತುಪಡಿಸಿ ಉಳಿದವರು ಭಾರೀ ಮೊತ್ತವನ್ನೇ ಬಾಕಿ ಉಳಿಸಿಕೊಂಡಿದ್ದಾರೆ. ಆದರೆ ಗೌರಿಬಿದನೂರಿನ ಶಾಸಕ ಶಿವಶಂಕರ್ ರೆಡ್ಡಿ ಅವರು ಎಲ್ಲ ಅವಧಿಗೂ ಅನುದಾನದ ಮೊತ್ತ ಬಾಕಿ ಉಳಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the details of MLA fund utilisation between 2013 to 2017 December in Chikkaballapur district. Shivashankar reddy, Gowribidanur MLS fund remained every year, released by Karnataka government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ