ವಿಡಿಯೋ: ಸರ್ವಜನಾಂಗದ ಶಾಂತಿಯ ತೋಟವಾಗಲಿ ಕರ್ನಾಟಕ: ರಿಯಾಜ್ ಭಾಷಾ

Recommended Video

      ನನ್ನ ಕನಸಿನ ಕರ್ನಾಟಕ : ರಿಯಾಜ್ ಭಾಷಾ, ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ | Oneindia Kananda

      ಬಿಗ್ ಬಾಸ್ ಮಾಜಿ ಸ್ಪರ್ಧಿ ರಿಯಾಜ್ ಭಾಷಾ ಅವರ ಕನಸಿನಂತೆ ಕರ್ನಾಟಕ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಂತೆ.

      ನ್ಯಾಯದ ಪರ ನಿಲ್ಲುವ, ಧನಿ ಎತ್ತುವ ಯಾವುದೇ ಪೂರ್ವಾಗ್ರಹಗಳಿಲ್ಲದೆ ಒಬ್ಬರಿಗೊಬ್ಬರು ಸಹಾಯ ಮಾಡುವ ಕೆಚ್ಚೆದೆಯ, ವಿಶಾಲ ಹೃದಯಿಗಳು ಇರುವ ರಾಜ್ಯ ಕರ್ನಾಟಕವಾಗಬೇಕು ಎಂದು ರಿಯಾಜ್ ಭಾಷಾ ಅವರು 'ಒನ್ ಇಂಡಿಯಾ ಕನ್ನಡ' ಜೊತೆ ತಮ್ಮ ಕನಸಿನ ಕರ್ನಾಟಕದ ಬಗ್ಗೆ ಹೇಳಿದ್ದಾರೆ.

      ಚುನಾವಣೆ ಸಮೀಪದಲ್ಲಿರುವ ಕಾರಣ ಮೊದಲಿಗೆ ಎಲ್ಲರೂ ಜವಾಬ್ದಾರಿಯುತವಾಗಿ ಮತ ಹಾಕಿ ಎಂದು ಕರೆ ನೀಡಿರುವ ಬಿಗ್ ಬಾಸ್ ಸ್ಪರ್ಧಿ. ತನ್ನ ಕನಸಿನ ಕರ್ನಾಟಕ ಪ್ರಜ್ಞಾವಂತ ಪ್ರಜೆಗಳಿಂದ ಕೂಡಿರಬೇಕು ಎಂದಿದ್ದಾರೆ.

      Bigboss contestent Riyaz Basha shares his dream about Karnataka

      ರಾಜ್ಯದ ಎಲ್ಲ ಯುವಕರಿಗೆ ಅವರ ಪ್ರತಿಭೆ, ಓದಿಗೆ ತಕ್ಕಂತೆ ಉದ್ಯೋಗಗಳು ದೊರಕಿ ಅವರ ಬಾಳು ಬಂಗಾರವಾಗಬೇಕು ಎಂಬುದು ಅವರ ಕನಸು. ರೈತರ ಬಗ್ಗೆ ವೀಶೇಷ ಕಾಳಜಿ ವ್ಯಕ್ತಪಡಿಸುವ ಅವರು, ಜನರ ಹೊಟ್ಟೆ ತಣ್ಣಗಿರಿಸುವ ಅವರ ಬದುಕು ಹಸನಾಗಬೇಕು ಎಂಬುದು ಅವರ ಆಸೆ.

      ಒಟ್ಟಾರೆಯಾಗಿ ರಿಯಾಜ್ ಭಾಷಾ ಅವರ ಪ್ರಕಾರ ಎಲ್ಲ ಜಾತಿ, ಧರ್ಮದ ಜನರು ಒಟ್ಟುಗೂಡಿ, ಪ್ರಜ್ಞಾವಂತರಾಗಿ ವರ್ತಿಸುವ, ಯುವಕರು, ರೈತರು ನೆಮ್ಮದಿಯಿಂದ ಬಾಳ್ವೆ ಮಾಡಬಹುದಾದ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಕರ್ನಾಟಕದ ಬಗ್ಗೆ ಅವರ ಕನಸು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+