ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನಿಗಳ ಪಾಲಿನ ಅಣ್ಣ ಎಚ್ ಡಿ ಕುಮಾರಸ್ವಾಮಿ ವ್ಯಕ್ತಿಚಿತ್ರ

By Mahesh
|
Google Oneindia Kannada News

Recommended Video

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗು ನೂತನ ಸಿ ಎಂ ಎಚ್ ಡಿ ಕುಮಾರಸ್ವಾಮಿ ವ್ಯಕ್ತಿಚಿತ್ರ ಇಲ್ಲಿದೆ | Oneindia Kannada

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮೂರನೇ ಪುತ್ರ, ಎಚ್ ಡಿ ಕುಮಾರಸ್ವಾಮಿ (58) ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಮೇ 23ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಿನಿಮಾ ರಂಗದಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡಿದ್ದ ಕುಮಾರಸ್ವಾಮಿ ಅವರು ಅನುಭವವಿಲ್ಲದ ಕಾಲದಲ್ಲೇ ರಾಜಕೀಯ ಪ್ರವೇಶಿಸಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದವರು.. ಈಗ ತಂತ್ರಗಾರಿಕೆಯಲ್ಲಿ ನಿಷ್ಣಾತರಾಗಿರುವ ಕುಮಾರಸ್ವಾಮಿ ಅವರ ರಾಜಕೀಯ ಪಯಣ ಪರಿಚಯ ಇಲ್ಲಿದೆ...

ವ್ಯಕ್ತಿಚಿತ್ರ: ಸಂಸದೀಯ ಪಟು, ಜೆಡಿಎಸ್ ಕಟ್ಚಾಳು ! ವೈಎಸ್ವಿ ದತ್ತ ವ್ಯಕ್ತಿಚಿತ್ರ: ಸಂಸದೀಯ ಪಟು, ಜೆಡಿಎಸ್ ಕಟ್ಚಾಳು ! ವೈಎಸ್ವಿ ದತ್ತ

ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗಗಳನ್ನು ಮೀರಿ ಈ ಬಾರಿ ಹೆಚ್ಚಿನ ಪ್ರಭಾವ ಬೀರುತ್ತಿದ್ದಾರೆ. ಮನೆ ಮನೆಗೆ ಕುಮಾರಣ್ಣ ಎಂಬ ಅಭಿಯಾನದ ಮೂಲಕ ತಮ್ಮ ಟ್ವೆಂಟಿ 20 ಆಡಳಿತ ಅವಧಿಯ ಗ್ರಾಮ ವಾಸ್ತವ್ಯವನ್ನು ಮುಂದುವರೆಸಿದ್ದಾರೆ.

ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ

ಒಂದು ಕಡೆ ಬಂಡಾಯ ಶಾಸಕರನ್ನು ಸಂಭಾಳಿಸುವುದು, ಮತ್ತೊಂದೆಡೆ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವುದರ ಬಗ್ಗೆ ಗೊಂದಲ, ಆಗಾಗ ಕೈ ಕೊಡುವ ದೇಹಾರೋಗ್ಯ, ಕಾರ್ಯಕರ್ತರನ್ನು ಸಂಘಟಿಸುವ ಚತುರತೆ ಎಲ್ಲದರ ನಡುವೆ ಅಪ್ಪಟ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಸಿಎಂ ಆಗಿ ನೋಡುವ ಕನಸು ಜೆಡಿಎಸ್ ಕಾರ್ಯಕರ್ತರಲ್ಲಿದೆ.

ರಾಜಕೀಯ ಜರ್ನಿ

ರಾಜಕೀಯ ಜರ್ನಿ

* 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
* 1998ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು
* 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
* ಫೆಬ್ರವರಿ 2006 ರಿಂದ ಅಕ್ಟೋಬರ್ 2007ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ. ಬಿಜೆಪಿ ಜತೆ 20-20 ಸರ್ಕಾರ ಸ್ಥಾಪನೆ
* 2013 ರಲ್ಲಿ ರಾಮನಗರ ಕ್ಷೇತ್ರದಿಂದ ಅಸೆಂಬ್ಲಿಗೆ ಮರು ಆಯ್ಕೆ.
* 2014 ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಗೆ ಸ್ಪರ್ಧಿಸಿ, ವೀರಪ್ಪ ಮೊಯ್ಲಿ ವಿರುದ್ಧ ಸೋಲು ಕಂಡರು.
* ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆ. ಹಾಲಿ ರಾಮನಗರ ಶಾಸಕ.

ಕುಟುಂಬ ವರ್ಗ ಪರಿಚಯ ಕ್ವಿಕ್ ಲುಕ್

ಕುಟುಂಬ ವರ್ಗ ಪರಿಚಯ ಕ್ವಿಕ್ ಲುಕ್

* 16 ಡಿಸೆಂಬರ್ 1959ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನನ
* ರಾಮನಗರ ಇವರ ರಾಜಕೀಯ ಕಾರ್ಯಕ್ಷೇತ್ರ
* ಬಿಎಸ್ಸಿ ಪದವೀಧರ
* ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರ್.
* ಎಚ್ ಡಿ ಬಾಲಕೃಷ್ಣ, ಎಚ್ ಡಿ ರೇವಣ್ಣ ಇಬ್ಬರು ಅಣ್ಣಂದಿರು. ಎಚ್ ಡಿ ರಮೇಶ್ ತಮ್ಮ, ಇಬ್ಬರು ಸೋದರಿಯರು.

ಎಚ್ಡಿಕೆ ಸಾಧನೆಗಳು ಯೋಜನೆಗಳು-1

ಎಚ್ಡಿಕೆ ಸಾಧನೆಗಳು ಯೋಜನೆಗಳು-1

* ಸಾರಾಯಿ ನಿಷೇಧ, ಲಾಟರಿ ನಿಷೇಧ,6 ಜಿಲ್ಲೆಗಳಿಗೆ 2689.64 ಕೋಟಿ ಪ್ಯಾಕೇಜ್ ನೀಡಿಕೆ
* ಉದ್ಯಾನಗಳ ನಿರ್ವಹಣೆಗಾಗಿ ವಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನ ಸ್ಥಾಪನೆ.
* ಮೀನುಗಾರಿಕೆ ವೃತ್ತಿ ಮಾಡುವ ಮಹಿಳೆಯರಿಗೆ ಶೇ 4 ರಷ್ಟು ಬಡ್ಡಿದರದಲ್ಲಿ ಸಾಲ ನೀಡಿಕೆ
* ಸುವರ್ಣ ಕಾಯಕ ಉದ್ಯೋಗ ಶಿಕ್ಷಣ ಯೋಜನೆಯಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ
* ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ.
* ರೈತರಿಗೆ ಒಟ್ಟಾರೆ 7000 ಕೋಟಿ ರು ಪ್ಯಾಕೇಜ್ ದೊರೆಯುವಂತೆ ಮಾಡಿದ್ದು ದೊಡ್ದ ಸಾಧನೆ

ಎಚ್ಡಿಕೆ ಸಾಧನೆಗಳು ಯೋಜನೆಗಳು-2

ಎಚ್ಡಿಕೆ ಸಾಧನೆಗಳು ಯೋಜನೆಗಳು-2

* ಸುವರ್ಣ ಗ್ರಾಮೋದಯ ಯೋಜನೆ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ
* ಕೋಲಾರ, ಬಿಜಾಪುರಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಘೋಷಣೆ.
*ಲ್ಯಾಂಡ್ ಮಾಫಿಯಾ ತಡೆಗೆ ಸೂಕ್ತ ಕ್ರಮ 40 ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
* ಕೈಗಾರಿಕೆ ಇತ್ತು ನೀಡಲು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಾಗಿದ್ದು ಎಚ್ಡಿಕೆ ಕಾಲದಲ್ಲೇ.
* ಉತ್ತರ ಕರ್ನಾಟಕದಲ್ಲಿ ವಿಶೇಷ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ.

* ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ ಯೋಜನೆ, ಆಸರೆ, ಅಮೃತ ಯೋಜನೆ ಅನುಷ್ಠಾನ.
* ಬೆಂಗಳೂರಿನ 190 ಕಿ.ಮೀ ರಸ್ತೆ ದುರಸ್ತಿ, ವಿಸ್ತರಣೆ ಕೈಗೊಳ್ಳಲಾಗಿದೆ.

ಸಿಎಂ ಆಗುವ ಕನಸು ಹೊತ್ತಿರುವ ಎಚ್ಡಿಕೆ

ಸಿಎಂ ಆಗುವ ಕನಸು ಹೊತ್ತಿರುವ ಎಚ್ಡಿಕೆ

ಆನಂದ್ ಆಸ್ನೋಟಿಕರ್ ಅವರನ್ನು ಜೆಡಿಎಸ್ ಗೆ ಸೇರಿಸಿಕೊಳ್ಳುವ ಮೂಲಕ ಕರಾವಳಿ ಭಾಗದಲ್ಲಿ ತನ್ನ ಛಾಪು ಮೂಡಿಸಲು ಯತ್ನಿಸುತ್ತಿದೆ. ಕೋನರೆಡ್ಡಿ ಅವರು ಮಹದಾಯಿ ಹೋರಾಟದಲ್ಲಿ ಸಕ್ರಿಯರಾಗಿದ್ದು, ಕುಮಾರಸ್ವಾಮಿ ಅವರ ಪ್ರಭಾವ ಈ ಬಾರಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿದೆ ಎಂಬ ವರದಿಗಳಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಒಂದಷ್ಟು ಸ್ಥಾನಗಳನ್ನು ಕಸಿದು, ಕಿಂಗ್ ಮೇಕರ್ ಆಗುವ ಗುರಿಯೂ ಇದ್ದೇ ಇದೆ. 151 ಕ್ಷೇತ್ರಗಳ ಮೇಲೆ ಮಾತ್ರ ಹೆಚ್ಚಿನ ಗಮನವನ್ನು ಹರಿಸಿರುವ ಎಚ್ಡಿಕೆ, ಜೆಡಿಎಸ್ ನ ಕಿಂಗ್, ಅಭಿಮಾನಿಗಳ ಪಾಲಿನ ಅಣ್ಣ.

English summary
In the perspective of Karnataka Assembly Elections 2018, we present the short biography and political journey of Vokkaliga leader HD Kumaraswamy. HD Kumaraswamy is trying his luck again from Ramanagara constituency. JDS is likely to play king maker role in the next elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X