ಕಾಂಗ್ರೆಸ್ ಟಿಕೆಟ್ ಬೇಕೆ? ಈ ಪ್ರಶ್ನೆಗಳಿಗೆಲ್ಲ ಉತ್ತರಿಸಲೇಬೇಕು!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯುವುದು ಅಷ್ಟು ಸಲೀಸಲ್ಲ. ಕಾಂಗ್ರೆಸ್ ನ ದೊಡ್ಡ ತಲೆಗಳು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಸರಿಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿ ಆಕಾಂಕ್ಷಿಗೂ ಕನಿಷ್ಠ ಇಪ್ಪತ್ತು ಪ್ರಶ್ನೆಗಳನ್ನು ಕೇಳುತ್ತದೆ ಮಧುಸೂದನ್ ಮಿಸ್ತ್ರಿ ನೇತೃತ್ವದ ತಂಡ.

ಕಾಂಗ್ರೆಸ್ಸಿನ ಸಂಭವನೀಯ 80 ಅಭ್ಯರ್ಥಿಗಳ ಪಟ್ಟಿ!

ಈ ಪ್ರಕ್ರಿಯೆ ಕಠಿಣವಾಗಿಯೇ ಇರಲಿ ಎಂದು ಮಿಸ್ತ್ರಿ ಅವರಿಗೆ ಸೂಚನೆ ಸಿಕ್ಕಿದೆ. ಇವೇ ಪ್ರಶ್ನೆಗಳನ್ನು ಚುನಾವಣೆಗೆ ಸ್ಪರ್ಧೆ ಮಾಡಲಿರುವ ಹಾಲಿ ಸಚಿವರಿಗೂ ಕೇಳಲಾಗುವುದು. ಈ ಪ್ರಕ್ರಿಯೆ ಅಷ್ಟು ಸುಲಭವಾಗಿಯೂ ಇಲ್ಲ. ಜತೆಗೆ ನಿರೀಕ್ಷಿತವಲ್ಲ. ಎಲ್ಲರಿಗೂ ಎಲ್ಲ ಪ್ರಶ್ನೆಗೆ ಉತ್ತರಿಸುವುದು ಆಗುತ್ತಿಲ್ಲ. ಹಲವು ಪ್ರಶ್ನೆಗಳಿಗೆ ಅಭ್ಯರ್ಥಿಗಳು ಮೌನಕ್ಕೆ ಶರಣಾಗಿದ್ದಾರೆ.

As Congress aspirants make a beeline for tickets, Mistry surprises them with this questionnaire

ಕಾಂಗ್ರೆಸ್ ಟಿಕೆಟ್ ಬೇಕಾ? ಸಂದರ್ಶನದಲ್ಲಿ ಪಾಲ್ಗೊಳ್ಳಿ!

ಟಿಕೆಟ್ ಆಕಾಂಕ್ಷಿಗಳಿಗೆ ಕೇಳಿರುವ ಪ್ರಶ್ನೆಗಳು ಇಲ್ಲಿವೆ.

* ನನಗೆ ಒಂದು ಒಳ್ಳೆ ಕಾರಣ ನೀಡಿ, ನಿಮಗೆ ಯಾಕೆ ಟಿಕೆಟ್ ನೀಡಬೇಕು?
* ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾತಿ ಲೆಕ್ಕಾಚಾರ ತಿಳಿಸಿ
* ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ವಾರ್ಡ್ ಗಳಿವೆ?
* ನಿಮ್ಮ ಶಾಸಕರ ಕೆಲಸ-ಕಾರ್ಯಕ್ಕೆ ಎಷ್ಟು ಅಂಕ ಕೊಡ್ತೀರಿ (ಎರಡನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾದವರಿಗೆ ಈ ಪ್ರಶ್ನೆ ಇಲ್ಲ)
* ನೀವು ಗೆಲ್ಲುವ ಅವಕಾಶ ಏನಿದೆ?
* ನಿಮ್ಮ ಎದುರು ನಿಲ್ಲುವ ಅಭ್ಯರ್ಥಿ ವಿರುದ್ಧ ರಣತಂತ್ರ ಏನು?
* ನೀವು ಚುನಾವಣೆ ಗೆದ್ದರೆ ಮುಂದಿನ ಯೋಜನೆಗಳು ಏನಿವೆ?
* ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಹಳ್ಳಿಗಳಿವೆ?
* ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಮತದಾರರಿದ್ದಾರೆ?
* ಜನರಿಗೆ ನಿಮ್ಮ ಬಗ್ಗೆ ಹಾಗೂ ಹಾಲಿ ಶಾಸಕರ ಬಗ್ಗೆ ಏನು ಅಭಿಪ್ರಾಯ ಇದೆ?
* ನಿಮ್ಮ ವಿರುದ್ಧ ಬಾಕಿಯಿರುವ ಕೇಸುಗಳಿವೆಯಾ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Getting a ticket to contest the Karnataka Assembly Elections 2018 in the Congress would not exactly be an easy task. The top brass of the Congress has been spending a considerable amount of time at the Karnataka Pradesh Committee Office in Bengaluru grilling aspirants.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ