ಫೇಸ್ ಬುಕ್ ಇನ್ ಸ್ಟಾ ಗ್ರಾಂ ಖಾತೆ ಇರುವರು ಓದಲೇಬೇಕಾದ ಕೇಸು !

ಸೈಬರಾಬಾದ್ , ಫೆಬ್ರವರಿ 08, ಪ್ರತಿಯೊಬ್ಬರೂ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಖಾತೆ ಹೊಂದಿರುವುದು ಸಾಮಾನ್ಯ.‌ಅಪರಿಚಿತರಿಂದ ಫ್ರೆಂಡ್ ರಿಕ್ವೆಸ್ಟ್ ಕೂಡ ಬರ್ತವೆ. ಸೀರಿಯಲ್ ನಟಿಗೆ ಅಪರಿಚಿತನೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಎರಡು ಲಕ್ಷ ರೂಪಾಯಿ ಗಳಿಸಿದ್ದ. ಆಕೆಯ ನ್ಯೂಡ್ ಫೋಟೋ ಸಾಮಾಜಿಕ ಜಸಲ ತಾಣದಲ್ಲಿ ಬಿಡುವುದಾಗಿ ಹೆದರಿಸಿ ಹಣ ಪೀಕಿದ್ದ. ಅವನು ಅಮೇಲೆ ಏನಾದ ಅಂತ ಗೊತ್ತಾದ್ರೆ ಎಲ್ಲರೂ ಶಾಕ್ ಆಗ್ತಾರೆ.

ಸೀರಿಯಲ್ ನಟಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಜೈಲಿಗೆ ಹೋದ !

ಸೀರಿಯಲ್ ನಟಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಜೈಲಿಗೆ ಹೋದ !

ಸಾಮಾನ್ಯವಾಗಿ ಶಮಾಜಿಕ ಜಾಲ ತಾಣದಲ್ಲಿ ಅಪರಿಚಿತರಿಂದ ಫ್ರೆಂಡ್ ರಿಕ್ವೆಸ್ಟ್ ಬರ್ತಾನೆ ಇರ್ತವೆ. ಅವನ್ನು ಸ್ವೀಕರಿಸಬಾರದು. ಸ್ವೀಕರಿಸಿದರೆ ಅಪಾಯ ಕಟ್ಡಿಟ್ಟ ಬುತ್ತಿ. ಆದ್ರೆ ಸೋಷಿಯಲ್ ಮಿಡಿಯಾದಲ್ಲಿ ಅಕ್ರಮ ಎಸಗುವರನ್ನು ಪತ್ತೆ ಮಾಡುವುದು ಕಷ್ಡ.

ಸೀರಿಯಲ್ ನಟಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಜೈಲಿಗೆ ಹೋದ !

ಸೀರಿಯಲ್ ನಟಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಜೈಲಿಗೆ ಹೋದ !

ಇಲ್ಲೊಂದು ಪ್ರಕರಣದಲ್ಲಿ ಸೈಬರಾಬಾದ್ ಪೊಲೀಸರು ಕಿರಾತಕನನ್ನು ಬಂಧಿಸಿದ್ದಲ್ಲದೇ ಆತನಿಗೆ ಎರಡು ವರ್ಷ ಜೈಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇಶದಲ್ಲೇ ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಅಪರೂಪ. ಆದರೇ ಕನ್ನಡಿಗ ಪೊಲೀಸ್ ಕಮೀಷನರ್ ಸಜ್ಜನರ್ ಅವರ ಕಮೀಷನರೇಟ್ ವ್ಯಾಪ್ತಿಯಲ್ಲಿ ಫೇಸ್ ಬುಕ್ ಕ್ರಿಮಿನಲ್ ಗೆ ಶಿಕ್ಷೆ ಕೊಡಿಸಿ ದೊಡ್ಡ ಸಂದೇಶ ರವಾನಿಸಿದ್ದಾರೆ.

ಏನಿದು ಘಟನೆ ? :

ಏನಿದು ಘಟನೆ ? :

ಮಾ ಟಿವಿ ಸೀರಿಯಲ್ ನಟಿಯೊಬ್ಬಳಿಗೆ ಅಪರಿಚಿತನೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಅದನ್ನು ಅಕ್ಸೆಪ್ಟ್ ಮಾಡಿದ ನಟಿಗೆ ಒಂದು ಸೆಲ್ಫಿ ಕಳಿಸುವಂತೆ ಮೆಸೇಂಜರ್ ನಲ್ಲಿ ಸಂದೇಶ ಕಳಿಸಿದ್ದ. ಹೀಗೆ ಚಾಟ್ ಮಾಡುತ್ತಾ ಮುಖ ಕಾಣದ ಬೆತ್ತಲೆ ಪೋಟೊ ತರಿಸಿಕೊಂಡಿದ್ದ. ಆನಂತರ ನನಗೆ ಕಷ್ಡ ಇದೆ ಎಂದು ಎರಡು ಸಾವಿರ ಪಡೆದುಕೊಂಡಿದ್ದ. ದಿನೇ ದಿನೇ ಉಪಟಳ ಕೊಟ್ಟು ಎರಡು ಲಕ್ಷ ರೂಪಾಯಿ ಪೀಕಿದ್ದ. ಬೆತ್ತಲೆ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದ ಆತನಿಗೆ ಹೆದರಿ ಈಕೆ ಹಣ ಕೂಡ ಕೊಟ್ಟಿದ್ದಳು. ಕೊನೆಗೆ ಬೇಸತ್ತು ಸೈಬರಾಬಾದ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಳು.
ಈಕೆ ನೀಡಿದ ದೂರಿನ ಮೇರೆಗೆ ಸೈಬರಾಬಾದ್ ಪೊಲೀಸರು ಆರೋಪಿ ಜಂಬದ ಲಕ್ಷ್ಮೀ ವರ ಪ್ರಸಾದ್ ಎಂಬಾತನನ್ನು ಬಂಧಿಸಿದ್ದರು‌. ಪ್ರಕರಣ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಡಿ ಸಲ್ಲಿಸಿದ್ದರು. ಕುಕ್ಕುಟಪಲ್ಲಿಯಲ್ಲಿರುವ ಸೈಬರ್ ವಿಶೇಷ ನ್ಯಾಯಾಲಯ ವರಪ್ರಸಾದ್ ಗೆ ಎರಡು ವರ್ಷ ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣವನ್ನು ಪೊಲೀಸ್ ಇನ್ಸ್ ಪೆಕ್ಡರ್ ಗಂಗಾಧರ್ ತನಿಖೆ ನಡೆಸಿದ್ದರು.

ಸೀರಿಯಲ್ ನಟಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಜೈಲಿಗೆ ಹೋದ !

ಸೀರಿಯಲ್ ನಟಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಜೈಲಿಗೆ ಹೋದ !

ಸೈಬರ್ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸುವ ರೀತಿ ತನಿಖೆ ನಡೆಸಿದ್ದ ಪೊಲೀಸರ ಕಾರ್ಯವನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ಸಜ್ಜನ್ನರ್ ಶ್ಲಾಘಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲ ತಾಣದಲ್ಲಿ ಅಪರಿಚಿತ ಸ್ನೇಹಿತರ ಮನವಿ ಕುರಿತು ಜಾಗರೂಕರಾಗಿರಬೇಕೆಂದು ಕಿವಿಮಾತು ಹೇಳಿದ್ದಾರೆ. ಅಪರಿಚಿತರ ಜತೆ ಚಾಟ್ ಮಾಡಿದಂತೆ, ಚಿತ್ರ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+