‘ಅಮ್ಮ’ ಅರ್ಥ ಆಗೋದಿಲ್ಲ ಬಿಡಿ!


ಹೋಗಲಿ ಹೇಳಮ್ಮ ನೀನು ಅತ್ತಿದ್ದು ಯಾವಾಗ? ಎಲ್ಲಿ? ನಿನ್ನ ರೂಮಿಗೆ ಚಿಲಕವಿದ್ದಿದ್ದೇ ನನಗೆ ನೆನಪು ಬರುತ್ತಿಲ್ಲ! ನಿನಗೆ ಸಂಪಿಗೆ ಇಷ್ಟ. ನಿನ್ನ ಬಗ್ಗೆ ಇದೊಂದೇ ನನಗೆ ಗೊತ್ತಿರುವುದು! ಆದರೆ ನಿನಗೆ...

An open letter to Mother!ನನ್ನ ಪ್ರೀತಿಯ ಅಮ್ಮ,

ಇದು ನಾನು ನಿನಗೆ ಬರೆಯುತ್ತಿರುವ ಮೊದಲನೆ ಪತ್ರ. ಬಹುಶಃ ನಿನಗಾಗೇ ಬರುತ್ತಿರುವ ಮೊದಲನೇ ಪತ್ರವೂ ಹೌದು.

ಮೊನ್ನೆ ಡಯಟೀಷಿಯನ್‌ ಕಾಣಲು ಕಾಯುತ್ತಾ ಕುಳಿತಿದ್ದೆ. ಪಕ್ಕದಲ್ಲಿದ್ದ ನಡು ವಯಸ್ಸಿನ ಅಪರಿಚಿತ ಹೆಂಗಸೊಬ್ಬರು ಇದ್ದಕ್ಕಿದ್ದಂತೆ ನನ್ನೊಡನೆ ಮಾತಿಗಿಳಿದು ಬಿಟ್ಟರು. ಹೆಂಗಸರಿಗೆ ಇದೇನು ಹೊಸತಲ್ಲ ಬಿಡು. ಆದರೆ ನನಗೆ ತುಂಬಾ ಮುಜುಗರ ಆಗಿದ್ದು ಏನು ಗೊತ್ತ? ಎರಡೇ ನಿಮಿಷದಲ್ಲಿ ಆಕೆ ನನ್ನ ವಯಸ್ಸೆಷ್ಟು ಅಂತ ಕೇಳಿಬಿಟ್ಟರು!

ಕಡೇ ಪಕ್ಷ ಇನ್ನಿಪ್ಪತ್ತೈದು ವರ್ಷ ಈ ವಯಸ್ಸನ್ನು ದಾಟಲೇ ಬಾರದು ಅಂತ ಜಿಮ್‌-ಡಯಟೀಷಿಯನ್‌ಗಳ ನಡುವೆ ದಿನವಿಡೀ ಕಳೆಯುವ ನನಗೆ ಆ ಹೆಂಗಸು ತುಂಬಾ ವಟಗುಟ್ಟುತ್ತಿದೆ ಅನ್ನಿಸಿತು. ‘‘ನೀನಿನ್ನು ಚಿಕ್ಕವಳು. ಈಗಲೇ care ತೆಗೆದುಕೊಳ್ಳುತ್ತಿದ್ದೀಯ ಒಳ್ಳೆಯದು. ನಾನು ಮಾಡಿದ ಹಾಗೆ ಮಾಡ್ಕೋಬೇಡ. ತಪ್ಪದೆ calcium ಮಾತ್ರೆ ತೊಗೊ. ಉಳಿಕೆ ಪಳಿಕೆ ತಿನ್ನದೆ ನೀನೂ ಒಳ್ಳೆ ಊಟ ಮಾಡು ಮಕ್ಕಳ ಎಲ್ಲ ಕೆಲಸ ನೀನೇ ಮಾಡ್ಬೇಡ, ಅವರನ್ನು independent ಆಗಿ ಬೆಳೆಸು. ಇಲ್ಲದಿದ್ದರೆ ಆಮೇಲೆ ನಿನಗೇ ಕಷ್ಟ. ನಿನಗೆ ಅಂತ ಸ್ವಲ್ಪ ಟೈಂ ಮಾಡ್ಕೊಂಡು ನಿನ್ನ ಹವ್ಯಾಸ ಎಲ್ಲಾ ಮುಂದುವರೆಸು. . .’ ಹೀಗೇ ಏನೇನೋ ಆಕೆ ಏರು ಧ್ವನಿಯಲ್ಲಿ ಮಾತಾಡ್ತಾನೆ ಇದ್ದರು.

ನನಗಂತೂ ಎದ್ದು ಆಕೆಯನ್ನು ಬಾಗಿಲಿಂದಾಚೆ ದಬ್ಬಿ ಬಿಡೋಣ ಅನ್ನಿಸುತ್ತಿತ್ತು. ಆದರೂ, ತುಟಿಯಮೇಲೊಂದು ಪ್ಲಾಸ್ಟಿಕ್‌ ನಗೆ ಫಿಕ್ಸ್‌ ಮಾಡಿಕೊಂಡು ‘ಫೆಮೀನಾ’ ಓದುತ್ತಿದ್ದೆ. . . .ಓದುತ್ತಿರುವ ಹಾಗಿದ್ದೆ! ಆದರೂ ಆಕೆ ಭಂಡತನದಲ್ಲಿ ಮಾತಾಡ್ತಾನೆ ಇದ್ದರು. ‘‘ ಯಾರಿಗೂ ನಮ್ಮ ಅವಶ್ಯಕತೆನೇ ಇಲ್ಲ ಅನ್ನಿಸಿಬಿಡತ್ತೆ. ಸುಮ್ಮನೆ ಅಳು ಬರತ್ತೆ. ಮನಸ್ಸು ತುಂಬಾ ಸೂಕ್ಷ್ಮವಾಗಿಬಿಟ್ಟಿರುತ್ತೆ. ಎಷ್ಟೇ ನಮ್ಮನ್ನು ನಾವು ನೋಡಿಕೊಂಡರೂ ದೇಹದ ಅಂದಾನೇ ಕೆಟ್ಟುಹೋಗುತ್ತೆ...’’ಆಕೆ ಇನ್ನೇನೇ ಮಾತನಾಡುವ ಮೊದಲು ನನ್ನ ದೃಷ್ಟಿ ಎದುರು ಕೂತಿದ್ದ ಜೀನ್ಸ್‌ಧಾರಿ ಮೇಲೆ... ಈಗತಾನೆ ಬರಲು ಶುರುವಾಗಿದ್ದ ಹೊಟ್ಟೆ ಬೊಜ್ಜನ್ನು ಉಸಿರು ಬಿಗಿ ಹಿಡಿದು ಒಳಗೆ ಎಳೆದುಕೊಂಡೆ!

‘‘ಆ ಸಮಯದಲ್ಲಿ ಫ‚ಾ್ಯಮಿಲಿ support ಇರ್ಬೇಕು. ಹಾರ್ಮೋನು ಏರುಪೇರಾಗುತ್ತೆ ನೋಡು. . . .ಈಗ ಅದಕ್ಕೂ ಟ್ರೀಟ್‌ಮೆಂಟ್‌ ಇದೆ. ವೆಲ್‌ ವುಮೆನ್‌ ಕ್ಲೀನಿಕ್‌ಗೆ ಹೋಗೋದನ್ನು ರೂಢಿ ಮಾಡ್ಕೊಂಡ್ಬಿಡ್ಬೇಕು. menopause ಟೈಂ ಒಂತರಹ ವಿಚಿತ್ರ ಸಂಕಟ...’’ ಸದ್ಯ, ನನ್ನನ್ನು ಒಳಕ್ಕೆ ಕರೆದರು. ಇಲ್ಲದಿದ್ದರೆ ಆಕೆ ಕಪ್ಪೆ ತರಹ ಟವಟವ ಅಂತ ನನ್ನನ್ನು ಕೂತ್ಕಡೇನೇ ಮುದುಕಿ ಮಾಡ್ಬಿಡ್ತಿದ್ದಳು ಅನ್ನಿಸುತ್ತೆ!

ಈ ದಿನ ಮನೆ ಸಫಾಯಿ. ಹಳೆ ಫೋಟೋಗಳನ್ನು ನೋಡುತ್ತಿದ್ದೆ. ಅಮ್ಮ, ನೀನು ಎಷ್ಟು ಚೆನ್ನಾಗಿದ್ದೆ! ಇದ್ದಕ್ಕಿದ್ದಂತೆ ಮೊನ್ನೆ ಸಿಕ್ಕಿದ್ದ ಆ ವಾಚಾಳಿ ಹೆಂಗಸು ನೆನಪಿಗೆ ಬಂದಳು. ಹೇಳಮ್ಮ, ಆಕೆ ಹೇಳಿದ್ದೆಲ್ಲಾ ನಿಜವಾ? ನಾನು ಬೆಳೆಯುತ್ತಿದ್ದೆ ನನ್ನದೇ ಲೋಕದಲ್ಲಿ. ನೀನಾಗ ಎಲ್ಲರೊಳಗೊಂದಾಗಿ ಸಂಸಾರ ಸರಿದೂಗಿಸುತ್ತಿದ್ದೆ! ನಿನ್ನ ಅನಿಸಿಕೆ, demands, ಹಾರ್ಮೋನಿನ ಕಾಟ ಏನೂ ಗೊತ್ತೇ ಆಗಲಿಲ್ಲ. ನೀನು ತೋರಿಸಿಕೊಳ್ಳಲೂ ಇಲ್ಲ. Calcium ಇರಲಿ ನೀನು ತಲೆನೋವಿಗಾದ್ರೂ ಮಾತ್ರೆ ತೊಗೊಂಡಿದ್ಯಾ?

ಆಕೆ ಹೇಳಿದ ಫ್ಯಾಮಿಲಿ support ನಿನಗಿತ್ತಾ? ಅಪ್ಪ, ಅಣ್ಣ, ಅಜ್ಜಿ, ತಾತ ಎಲ್ಲರು ನಿನ್ನೊಡನೆ ಯಾವಾಗ ಮಾತನಾಡುತ್ತಿದ್ದರು? ದೊಡ್ಡಮ್ಮ, ಜಯಶ್ರೀ ಆಂಟಿ ಜೊತೆ ಈ ವಿಷ್ಯಯೆಲ್ಲಾ ನೀನು ಮಾತಾಡ್ತಿದ್ದ್ಯಾ? ಹೋಗಲಿ ಹೇಳಮ್ಮ ನೀನು ಅತ್ತಿದ್ದು ಯಾವಾಗ? ಎಲ್ಲಿ? ನಿನ್ನ ರೂಮಿಗೆ ಚಿಲಕವಿದ್ದಿದ್ದೇ ನನಗೆ ನೆನಪು ಬರುತ್ತಿಲ್ಲ! ನಿನಗೆ ಸಂಪಿಗೆ ಇಷ್ಟ. ನಿನ್ನ ಬಗ್ಗೆ ಇದೊಂದೇ ನನಗೆ ಗೊತ್ತಿರುವುದು. ಅದೂ ನೀನೇ ಬಾಯಿಬಿಟ್ಟು ಹೇಳಿದ್ದು. ನಾನು ಏನೂ ಹೇಳುವ ಮುಂಚೆಯೇ ನನ್ನ ಬಗ್ಗೆ ಎಲ್ಲವನ್ನೂ ತಿಳಿಯುತ್ತಿದ್ದ ನಿನ್ನ ಬಗ್ಗೆ ನಾನ್ಯಾಕೆ ಏನೂ ಯೋಚಿಸಲೇ ಇಲ್ಲ!

ಆ ವಾಚಾಳಿ ಸಿಕ್ಕುವವರೆಗೂ ನಿನ್ನನ್ನು ನಾನು ಅಮ್ಮನಾಗಿ ಮಾತ್ರ ತಿಳಿದಿದ್ದೆ. ಒಂದು ಹೆಣ್ಣಾಗಿ ನೋಡಲು ಯಾವಾಗಲೂ ಸೋತಿದ್ದೇನೆ. ನಿನ್ನ ಆ ದಿನದ ಅವ್ಯಕ್ತ ನೋವಿಗೆ ಈ ದಿನ ನನ್ನ ಒಂದು ಹನಿ ಕಣ್ಣೀರು. ನಿನ್ನ ಆಗಿನ ಸ್ಥಿತಿಯಲ್ಲಿ ಈಗಿರುವ ಅಮ್ಮಂದಿರಿಗೆ ಮಗಳಾಗು ಎಂದು ಹರಸು. ನನ್ನನ್ನು ಕ್ಷಮಿಸು ಅಮ್ಮ.

ನಿನ್ನ ಪ್ರೀತಿಯ ಮಗಳು.

*

ಪ್ರಕೃತಿಯ ಸಾರಾಂಶವನ್ನೇ ಉದರದಲ್ಲಿ ಬೆಚ್ಚಗೆ ಬಚ್ಚಿಟ್ಟು ಕಾಪಾಡುವ ನಾವೇ ಅದೇ ಪ್ರಕೃತಿಯ pause ಅನ್ನು ಅನುಭವಿಸುತ್ತೇವೆ. ಒಳಗೇನಿದ್ದರೂ ಹೊರಗಿನದನ್ನು ಬದುಕಾಗಿಸಿಕೊಂಡುಬಿಡುತ್ತೇವೆ. ಹೌದು, ನಾವು ಹೆಂಗಸರೇ ಹೀಗೆ!

ನಾನು ಹೇಳಿರ್ಲಿಲ್ಲವಾ ಕೆಲವರು ಕಪ್ಪೆ ತರಹ ಎಲ್ಲರ ಬಳಿ ಮಾತಾಡೋದ್ರಿಂದ ಕೆಲವರ ಕಣ್ಣಾದರೂ ತೆರೆಯುತ್ತೆ ಅಂತಾ?! ನನಗೀಗ ನಿಮ್ಮ ಜೊತೆ ಒಂದು ಸಿನೆಮಾಗೆ ಹೋಗೋಣಾ ಅನ್ನಿಸುತ್ತಿದೆ. ಹೇಳಿ ಯಾವುದಕ್ಕೆ ಹೋಗೋಣ? ಯಾವ ಭಾಷೆದಾದ್ರೂ ಪರವಾಗಿಲ್ಲ. ಒಂದಿಷ್ಟು ಘಳಿಗೆ ಒಟ್ಟಿಗಿದ್ದು ಹಗುರಾಗೋಣ. ಬರೆದು ತಿಳಿಸಿ, ನಾನೇ ಟಿಕೆಟ್ಸ್‌ ಬುಕ್‌ ಮಾಡಿಸ್ತೀನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+