• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೂನ್ಯದಿಂದ ಸೃಷ್ಟಿ - ವಿವಾಹ ವೃಷ್ಟಿ!

By Staff
|

‘ವಿಚಿತ್ರಾನ್ನದ 220ನೇ ಸಂಚಿಕೆ ತುಂಬಿಸುವ ಜವಾಬ್ದಾರಿ ನಿಮ್ಮದು’ ಎಂದ ತಕ್ಷಣ, ಓದುಗರು ಎದ್ದು ಕುಳಿತರು. ಅಂಕಣದ ರುಚಿಕೆಡದಂತೆ, ಅಕ್ಷರಗಳ ಪೋಣಿಸಿದರು. ಅಂದ ಹಾಗೆ; ‘ಏನಿಲ್ಲ’ ಬಗ್ಗೆ ಓದುಗರು ಏನೆಲ್ಲ ಬರೆದಿದ್ದಾರೆ, ಏನೆಲ್ಲ ಬರೆದಿಲ್ಲ ಅನ್ನೋದನ್ನು ನೀವೇ ಓದಿ.

  • ಶ್ರೀವತ್ಸ ಜೋಶಿ

Vichitranna Readers contributions to Nothingಏನಿಲ್ಲ, ಏನೇನೂ ಇಲ್ಲ, ನಥಿಂಗ್‌... ಎಂದೆನ್ನುತ್ತ ಎಲ್ಲಬಿಟ್ಟು ಇದೆಲ್ಲಿಂದ ಬಂತಪ್ಪಾ ವಿವಾಹದಂಥ ಮಹದ್ವಿಚಾರ ಎಂದು ಇವತ್ತಿನ ಶೀರ್ಷಿಕೆಯನ್ನು ನೋಡಿ ಬೆಚ್ಚಿಬಿದ್ದಿರಾ? ಏನಿಲ್ಲ... (ಒಹ್‌ ಮತ್ತೆ ಅದೇ ಹಳೇರಾಗ?) ಕಳೆದವಾರ ನಥಿಂಗ್‌ ಬಗ್ಗೆ ಸಮ್‌ಥಿಂಗ್‌ ಬರೆದು ನಿಮ್ಮನ್ನೂ ಸಮ್‌ಥಿಂಗ್‌ ಬರೆದುಕಳಿಸುವಂತೆ ಕೇಳಿದ್ದೆನಷ್ಟೆ? ಏನಿಲ್ಲವೆಂದರೂ ಇಪ್ಪತ್ತು-ಇಪ್ಪತ್ತೈದರಷ್ಟು ಪತ್ರಗಳು ಬಂದಿವೆ, ಒಂದೊಂದೂ ಸ್ವಾರಸ್ಯಕರವಾಗಿರುವ ಅವುಗಳಲ್ಲಿ ಏನಿದೆ ಏನಿಲ್ಲ! ಅವನ್ನೆಲ್ಲ ಹುರಿದು ಹದಗೊಳಿಸಿ ತಯಾರಿಸಿದ್ದು ಇವತ್ತಿನ ವಿಚಿತ್ರಾನ್ನ. ಶೂನ್ಯದಿಂದ ಸೃಷ್ಟಿ ಮಾಡಿದ ವಿಚಿತ್ರಾನ್ನ ವಾಚಕರು ಹನಿಸಿದ ವೃಷ್ಟಿಯಿದು, ಈ ವಾರದ ಸಂಚಿಕೆ. ಒಂದುರೀತಿಯಲ್ಲಿ ವಿಚಿತ್ರ ಭಕ್ಷ್ಯಗಳ ವಿವಾಹ ಭೋಜನವಿದು ಎಂದೂ ಹೇಳಬಹುದು!

ಅಂದಹಾಗೆ ಶೂನ್ಯದಿಂದ ಸೃಷ್ಟಿ ಮಾಡುವವರು ಪವಾಡಪುರುಷರೆಂದೆನಿಸಿಕೊಳ್ಳುತ್ತಾರಲ್ಲ? ಆದರೆ ಇಲ್ಲಿ ಪವಾಡ ಮಾಡಿದವರಲ್ಲಿ ಮಹಿಳೆಯರೂ ಇದ್ದಾರೆ! ‘ಪವಾಡಪುರುಷ’ಕ್ಕೆ ಸ್ತ್ರೀಲಿಂಗಪದ ಯಾವುದು ಎಂದು ನನಗೆ ಗೊತ್ತಿಲ್ಲವಾದ್ದರಿಂದ ಮತ್ತು ನೀವ್ಯಾರೂ ತಿಳಿಸಿಲ್ಲವಾದ್ದರಿಂದ ಸದ್ಯಕ್ಕೆ ಈ ಎಂಟ್ರಿಗಳನ್ನು ‘ಮಲ್ಲಮ್ಮನ ಪವಾಡ’ ಎಂದು ಕೆಟಗರೈಸ್‌ ಮಾಡುವುದಕ್ಕೆ ಶರಣೆಂಬೆ ನಾ...

*

ಮೊಟ್ಟಮೊದಲಾಗಿ ಕಳೆದವಾರದ ಸಂಚಿಕೆಯಲ್ಲಿ ‘ವಿಚಿತ್ರಾನ್ನದಲ್ಲಿ ಬರೆಯಲು ವಿಷಯ ಏನಿಲ್ಲ...’ ಎಂದಿದ್ದನ್ನು ಓದಿ ದಿಗಿಲಾದವರಿದ್ದಾರೆ. ಬೆಂಗಳೂರಿನಿಂದ ಹರೀಶ್‌ ಹೆಬ್ಬಾರ್‌ Are you really running out of topics? ಎಂದೂ, ನಮ್ಮ ಅಗಸನಕಟ್ಟೆ(ವಾಷಿಂಗ್‌ಟನ್‌)ಯವರೇ ಆದ ಹಿರಿಯಹಿತೈಷಿ ಡಾ.ಮೈಶ್ರೀನ ಅವರು What is this blank page? Too much work or a real mental block? ಎಂದೂ ಕಾಳಜಿ ವ್ಯಕ್ತಪಡಿಸಿದ್ದಾರೆ! ಪ್ರತಿ ಸಂಚಿಕೆಗೂ ತಪ್ಪದೆ ಪ್ರತಿಕ್ರಿಯೆ ಬರೆಯುವ ಎಸ್‌.ಎಂ.ಪೆಜತ್ತಾಯರೂ ‘‘ಈ ವಾರ ನನ್ನಿಂದ ಪ್ರತಿಕ್ರಿಯೇ ಏನೂ ಇಲ್ಲ!’’ ಎಂದು ಬರೆದುತಿಳಿಸಿದ್ದಾರೆ.

ಇಂಗ್ಲೆಂಡ್‌ನ ಶೆಫಿ‚ೕಲ್ಡ್‌ವಾಸಿ ದೀಪಕ್‌ ಎನ್‌ ಭಾರತಿ ‘‘ಇಲ್ಲಿ ಇಂಗ್ಲೆಂಡ್‌ನಲ್ಲಿ ಕ್ರಿಸ್ಮಸ್‌ನ ಮರುದಿನವನ್ನು (ಡಿಸೆಂಬರ್‌ 26) ‘ಬಾಕ್ಸಿಂಗ್‌ ಡೇ’ ಎಂದು ಆಚರಿಸುತ್ತಾರೆ. ಈ ವರ್ಷ ಡಿಸೆಂಬರ್‌ 26 ಮಂಗಳವಾರ ಬಂದಿದೆ, ಇನ್ನೇಕೆ ತಡ? ಮುಂದಿನ ವಾರಕ್ಕೆ ಬೇರೆ ವಿಷಯ ಇಲ್ಲ ಎಂದ್ರಲ್ಲ ‘ಬಾಕ್ಸಿಂಗ್‌ ಡೇ’ ಬಗ್ಗೆ ಕೊಂಚ ಹೊಡೆದಾಟ ಬಡಿದಾಟ ಕುಸ್ತಿಪಂದ್ಯ ಮಾಡಬಹುದಲ್ಲ?’’ ಎಂದು ಬರೆದು ವಿಕಿಪಿಡಿಯಾದಲ್ಲಿ ಅದರ ಬಗ್ಗೆ ಮಾಹಿತಿ ಇರುವ ಪುಟವನ್ನೂ ತೆರೆದುಕೊಟ್ಟಿದ್ದಾರೆ. ಬಾಕ್ಸಿಂಗ್‌ ಡೇ ಎಂದೊಡನೆ ಎದುರಾಳಿಯ ಕಿವಿಕಚ್ಚಿ ಸುದ್ದಿಯಾದ ಬಾಕ್ಸಿಂಗ್‌ ಚಾಂಪಿಯನ್‌ ಮೈಕ್‌ ಟೈಸನ್‌ ನೆನಪಾಗಬಹುದು, ಆದರೆ ಈ ಬಾಕ್ಸಿಂಗ್‌ ಬೇರೆ. ಇದು ‘ಉಳ್ಳ’ವರು ‘ಇಲ್ಲ’ದವರಿಗೆ ಉಡುಗೊರೆಗಳ ಪೆಟ್ಟಿಗೆಗಳನ್ನು (ಬರೀ ಪೆಟ್ಟಿಗೆಗಳು ಅಥವಾ ಅದರಲ್ಲಿ ವಸ್ತುಗಳನ್ನೂ?) ಕೊಡುವ ಸಂಪ್ರದಾಯದಿಂದ ‘ಬಾಕ್ಸಿಂಗ್‌ ಡೇ’ ಎಂದು ಪ್ರಚಲಿತವಾದದ್ದು.

ಇವನ್ನು ಬಿಟ್ಟರೆ ಮಿಕ್ಕೆಲ್ಲ ಪತ್ರಗಳೂ ‘ಏನಿಲ್ಲ’ದ ವ್ಯಾಖ್ಯಾನವನ್ನು ಲೈಟಾಗಿಯೇ ರೈಟ್‌ ಸ್ಪಿರಿಟ್‌ನಲ್ಲೇ ಸ್ವೀಕರಿಸಿ ಏನಿಲ್ಲದರ ಬಗ್ಗೆ ಏನೇನೆಲ್ಲ ಸೊಗಸಾಗಿ ಬರೆದುಕಳಿಸಿದವರವೇ.

ಬೆಂಗಳೂರಿನಿಂದ ಎಸ್‌. ಮಾಲತಿ ಒಂದು ಆಶುಕವಿತೆಯನ್ನು ಬರೆದಿದ್ದಾರೆ :

U tried a new thing
So did Malatea
You turned Enilla unto Enella
I drank tea with Vanilla!ಕ್ಯಾಲಿಫೋರ್ನಿಯಾದಿಂದ ಜ್ಯೋತಿ ಮಹಾದೇವ್‌ ಎರಡುವರ್ಷಗಳ ಹಿಂದೆ ಬರೆದಿಟ್ಟಿದ್ದ ಒಂದು ಕವಿತೆಯ ಸಾಲುಗಳನ್ನು ಕಳಿಸಿದ್ದಾರೆ :

ಶೂನ್ಯದಿಂದ ತೇಜೋದಯ
ಶೂನ್ಯದಿಂದ ಜೀವೋದಯ
ಶೂನ್ಯದಲ್ಲಿ ಜೀವ-ತೇಜ
ಶೂನ್ಯದಲ್ಲಿ ಶೂನ್ಯ ಲಯಈ ಕವಿತೆಯನ್ನು ಅವರು ಮತ್ತೂ ಮುಂದುವರಿಸಿದ್ದಾರಂತೆ, ಆದರೆ ‘ಏನಿಲ್ಲ’ಕ್ಕೆ ಹೊಂದುವಂಥದು ಈ ಸಾಲುಗಳು ಮಾತ್ರ ಎಂದು ಬರೆದು ಮತ್ತೆ ‘ಏನೂ ಇಲ್ಲ’ ಎಂದುಬಿಟ್ಟಿದ್ದಾರೆ!

ಜ್ಯೋತಿಯವರ ಕವಿತೆ ಈಶಾವಾಸ್ಯ ಉಪನಿಷತ್ತಿನ ‘ಪೂರ್ಣಾತ್ಪೂರ್ಣಮುದಚ್ಯತೆ... ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೆ...’ಯನ್ನು ನೆನಪಿಸುವಂತಿದೆಯಲ್ಲವೆ? ‘ಏನಿಲ್ಲ’ ವಿಚಿತ್ರಾನ್ನವನ್ನು ಓದಿದಾಗಲೂ ಉಪನಿಷತ್ತಿನ ಈ ಸೂಕ್ತವೇ ನೆನೆಪಾಯ್ತು ಎಂದವರು ರಿಚ್ಮಂಡ್‌ (ವರ್ಜೀನಿಯಾ)ದ ಶಣ್ಮುಗಂ ವೆಂಕಟರಂಗನ್‌. ಹಾಗೆಯೇ ಆನ್‌ಲೈನ್‌ ಕಮೆಂಟ್‌ ಬರೆದಿಟ್ಟಿರುವ ಬೆಂಗಳೂರಿನ ಸಂಧ್ಯಾ ಎಂಬುವವರು.

ನಥಿಂಗ್‌ ಬಗ್ಗೆ ಸಮ್‌ಥಿಂಗ್‌ ಹರಟೆಯನ್ನೋದಿ ಈ ಕೊರೆಯುವ ಚಳಿಯಲ್ಲಿ ಒಂದು ಕೋಟ್‌ಅನ್ನು ನೆನಪಿಸಿಕೊಂಡವರು ಬೆಂಗಳೂರಿನಿಂದ ಅಂಜಲಿ ರಾಮಣ್ಣ. ಅವರು ನೆನಪಿಸಿದ, ರೊಜರ್‌ ಹೌಸ್ಡನ್‌ (ಇಂಗ್ಲಂಡ್‌ ಸಂಜಾತ, ಅಮೆರಿಕವಾಸಿಯಾಗಿರುವ ಆಂಗ್ಲಕವಿ) ವಿರಚಿತ ಕೋಟ್‌ ಸ್ವಾರಸ್ಯಕರವಾಗಿದೆ: The Pleasure of doing Nothing useful - Its not what you dont do, its the way you dont do it!" ಆಫೀಸುಗಳಲ್ಲಿ ಏನೂ ಮಾಡದೆ ‘ಬಿಜಿ’ಯಾಗಿದ್ದು ಮಂಡೆಬಿಸಿಮಾಡಿಕೊಳ್ಳುವವರಿಗೆ ಈ ಕೋಟ್‌ ತುಂಬಾ ಚೆನ್ನಾಗಿ ಅನ್ವಯವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more