ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿಂದಂ ಭಜೆ ... ಗೋಳಿಬಜೆ!

By Super
|
Google Oneindia Kannada News

Golibaje article
(ಬಜಗೋಳಿ ಮತ್ತು ಗೋಳಿಬಜೆ ಎರಡನ್ನೂ ಅಕ್ಷರಗಳಲ್ಲಿ ವರ್ಣಿಸಿದ ಸಂಚಿಕೆಗೆ ಪತ್ರಗಳ ಮಹಾಪೂರ ಬಂದಿದೆ. ಒಂದೊಂದೂ, ಗೋಳಿಬಜೆಯ ಸವಿಯನ್ನು ಮೀರುವಂಥ ಪತ್ರಗಳು! ಭೂಗೋಲವಿಡೀ ಗೋಳಿಬಜೆ ಘಮ ಹರಡಿಸಿದವರಿಗೆ, ಪತ್ರ ಬರೆದು ಪ್ರತಿಕ್ರಿಯಿಸಿದವರಿಗೆಲ್ಲ ಧನ್ಯವಾದಗಳು. - ಶ್ರೀವತ್ಸ ಜೋಶಿ.

ಈ ಲೇಖನ ನನ್ನ ಬಾಯಲ್ಲಿ ನೀರೂರಿಸಿತು! ನನ್ನ ಉಡುಪಿ ಸ್ನೇಹಿತರಿಂದಾಗಿ ಈ ರುಚಿಕರ ತಿಂಡಿಯ ಪರಿಚಯ ಇತ್ತು ನನಗೆ. ಹಾಗೆಯೇ ಅವ್ರ ಅಮ್ಮನಿಂದ ಹೇಗೆ ಮಾಡೋದು ಅಂತನೂ ತಿಳಿದುಕೊಂಡಿದ್ದೆ. ಬಹಳ ಸುಲಭ, ಅಷ್ಟೇ ಸ್ವಾದಿಷ್ಟ... ಹೂಂ, ಈ ವೀಕೆಂಡಲ್ಲೇ ಇನ್ನೊಮ್ಮೆ ಗೋಳಿಬಜೆ ಮಾಡ್ತೀನಿ, ಇಲ್ಲೀಗ ರಾತ್ರೆ ಎಂಟು-ಎಂಟೂವರೆತನಕವೂ ಬೆಳಕಿರುವ ಸೀಸನ್‌ನಲ್ಲಿ ಸಂಜೆ ಬಾಲ್ಕನಿಯಲ್ಲಿ ಕುಳಿತು, ಸೂರ್ಯಾಸ್ತವನ್ನು ನೋಡುತ್ತ, ಟೀ ಕುಡೀತಾ ಗೋಳಿಬಜೆ ಮೆಲ್ಲುತ್ತ... ಆಹಾ ಸೊಗಸಾದ ವೀಕೆಂಡ್‌!

ನನ್ನವರಿಗೂ ಗೋಳಿಬಜೆ ಪರಿಚಯ ಹಿಂದೊಮ್ಮೆ ಮಡಿಕೇರಿಗೆ ಹೋದಾಗ ಮಾಡಿಕೊಟ್ಟಿದ್ದೆ. ಅಲ್ಲಿ 'ಆರತಿ' ಅಂತ ಒಂದು ಉಡುಪಿ ಹೊಟೆಲ್‌ನಲ್ಲಿ ಗೋಳಿಬಜೆ ತಿಂದಿದ್ವಿ, ತುಂಬಾ ಡೆಲೀಶಿಯಸ್‌ ಆಗಿತ್ತು. ನನ್ನವ್ರಿಗೂ ಇದು ತುಂಬ ಇಷ್ಟ ಆಗಿತ್ತು. ಅಂದಹಾಗೆ, ಇದಕ್ಕೆ ತೆಂಗಿನಕಾಯಿ ಹಾಕೊದಿಲ್ವಾ ನೀವು? ಅಥವಾ ಅದು ಮಲೆನಾಡಿನವರ ಎಡಿಷನ್ನೋ?

ಒಂದು ಸಣ್ಣ ಪದ್ಯ, ನಿಮ್ಮ ಲೇಖನ ಓದಿದ ಕೂಡ್ಲೆ ಮನಸ್ಸಿಗೆ ಬಂತು! ಇಲ್ಲಿ ಬರೆದಿದ್ದೀನೆ. ಇದನ್ನು 'ಭಜ ಗೋವಿಂದಮ್‌' ರಾಗದಲ್ಲಿ ಹೇಳಿಕೊಳ್ಳುವುದು.

ಬಜಗೋಳಿಂದ...
ಬಜಗೋಳಿಂದ...
ಬಜಗೋಳಿಂದಾ ... ಗೋಳಿಬಜೆ
ಬಂದಾಗ ಇದ ತಿನ್ನುವಕಾಲ... ಹುಡ್ಕೊಂಡ್ಹೋಗಿರಿ ಹೋಟೆಲ...

- ಅನುರಾಧಾ ಆರ್‌.ಕೆ; ಸೈಪ್ರಸ್‌

(ಆಶ್ಚರ್ಯವಾದರೂ ಸತ್ಯವೆಂಬಂತೆ, ಹೆಚ್ಚುಕಡಿಮೆ ಇದೇ ರೀತಿಯ ಪದ್ಯದ ಸಾಲುಗಳನ್ನು ನ್ಯೂಜೆರ್ಸಿಯಲ್ಲಿರುವ ಸ್ನೇಹಿತ ದಿನೇಶ್‌ ನೆಟ್ಟರ್‌ ಅವರೂ ಬರೆದುಕಳಿಸಿದ್ದಾರೆ!

ಹಾಗಾದರೆ, ಶ್ರೀ ಶಂಕರಾಚಾರ್ಯರು ಕಾಲಡಿಯಿಂದ ಕಾಲ್ನಡಿಗೆಯಲ್ಲಿ ಬಹುಶಃ ಬಜಗೋಳಿಯ ದಾರಿಯಾಗಿಯೇ ಶೃಂಗೇರಿಗೆ ಹೋಗಿದ್ದಿರಬಹುದು. ಬಜಗೋಳಿಯ ಹೊಟೆಲುಗಳಲ್ಲಿ ಗೋಳಿಬಜೆ ಘಮ ಅವರ ಮೂಗಿಗೆ ಬಡಿದರೂ, ಅವರು ನಮ್ಮಂತೆ ತಿಂಡಿಪೋತರಾಗಿರದೆ ವೇದಾಂತಜ್ಞಾನಪಿಪಾಸು ಆದ್ದರಿಂದ ಹೊಟೇಲಿಗೆ ನುಗ್ಗಲಿಲ್ಲ. ಮಾತ್ರವಲ್ಲ, ಬಜಗೋಳಿ-ಗೋಳಿಬಜೆ ಇತ್ಯಾದಿ ಜಗದ ಜಂಜಡಗಳಿಗೆ ಇಂಬುಗೊಡದೆ ಪಾರಮಾರ್ಥಿಕವಾದ 'ಭಜಗೋವಿಂದಂ...' ಗೀತವನ್ನೇ ಬರೆದರು. ಗೋಳಿಬಜೆ ಚಪ್ಪರಿಸುತ್ತ ಕಾಲಕಳೆವ ಮೂಢಮತಿಗಳಾದ ನಮಗೆ ಹಾಗಾದರೂ ಭಜಗೋವಿಂದಂ ನೆನಪಾಗಲೆಂದು ಉಪದೇಶವಿತ್ತರು - ಎಂಬ ತೀರ್ಮಾನಕ್ಕೆ ಬರೋಣವಲ್ಲವೇ? - ಎಸ್‌.ಜೆ)

*

ನಿಮಗೆ ಸ್ಪೆಷಲ್‌ ನಮಸ್ಕಾರ(ಗೋಳಿಬಜೆ ಲೇಖನದಲ್ಲಿ ನನ್ನ ಪ್ರವರ ಪಠಿಸಿದ್ದಕ್ಕೆ). ಆದರೆ ಸದ್ಯಕ್ಕೆ ನನ್ನ ಪ್ರಾರ್ಥನೆ ಅಂದ್ರೆ ನನಗೆ ಹೆಣ್ಣು ಕೊಡಬೇಕೆಂದಿರುವ (ಯಾರು ಅಂತ ಇನ್ನೂ ಗೊತ್ತಿಲ್ಲ:) ಮಾವ, ಅಥವಾ ಸ್ವತಃ ವಧು ಎಲ್ಲಾದ್ರೂ ಈ ಲೇಖನದ ಮೇಲೆ ಕಣ್ಣು ಕುಕ್ಕಿದರೆ ಆಮೇಲೆ ನನಗೆ ಕುಕ್ಕಾಗಿಯೇ ಕೆಲ್ಸ ಖಾಯಂ ಆಗುವ ಅಪಾಯ ಇದೆ! ದೇವರೇ, ಹಾಗಾಗದಿರಲಿ :-)

- ಪುರುಶೋತ್ತಮ್‌ ರಾವ್‌ (ಪುರು); ಬೆಂಗಳೂರು

*

ಗೋಳಿಬಜೆಯ ಸವಿನೆನಪು ತಂದುಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು. ತುಂಬ ಚೆನ್ನಾಗಿ ಮತ್ತು ಸ್ವಾರಸ್ಯಕರವಾಗಿತ್ತು ಲೇಖನ. ನೀವು ನನ್ನನ್ನು ಬಾಲ್ಯಕ್ಕೆ ನಮ್ಮೂರಿಗೆ ಕೊಂಡ್ಹೋದ್ರಿ! ಧನ್ಯವಾದಗಳು.

- ಹರಿಪ್ರಕಾಶ್‌ ಹುಂಚ; ಮೇರಿಲ್ಯಾಂಡ್‌

*

ನಮಗೆ ಗೋಳಿಬಜೆ (ಮಂಗಳೂರು ಬಜ್ಜಿ) ತುಂಬ ಇಷ್ಟ, ಆದರೆ ರೆಸಿಪಿ ಗೊತ್ತಿರಲಿಲ್ಲ. ಇವತ್ತಿನ ವಿಚಿತ್ರಾನ್ನ ಓದಿದ್ದೇ ತಡ, ನಮ್ಮನೆಯಲ್ಲಿ ಗೋಳಿಬಜೆ ಮಾಡೇ ಬಿಟ್ಟೆವು! ತುಂಬಾ ಚೆನ್ನಾಗಿ ಬಂತು. ಇಲ್ಲಿ ನಮ್ಮ ಮನೆಗೆ ಹತ್ತಿರವಿರುವ, ಇನ್ನೊಬ್ಬ ಭಾರತೀಯರ ಮನೆಗೂ ಒಂದಿಷ್ಟು ಒಯ್ದಿದ್ದೆವು, ಅವರೂ ಆನಂದಿಸಿದರು!

- ಪ್ರಶಾಂತ್‌ ಬೀಚಿ ಮತ್ತು ನಾಗರತ್ನಾ; ತಾಂಜಾನಿಯಾ, ದ.ಆಫ್ರಿಕಾ

*

ಬಜಗೋಳಿ ಊರಿನ ಚಿತ್ರಣವನ್ನು ಓದುತ್ತಿದ್ದಂತೆ ನನಗೆ ಎಂಟನೇ ಕ್ಲಾಸಿನ ಕನ್ನಡಪಠ್ಯಪುಸ್ತಕದಲ್ಲಿದ್ದ 'ಈಗಿನ ನನ್ನೂರು' ಪಾಠ (ಎಚ್‌.ಎಲ್‌.ನಾಗೇಗೌಡ ಬರೆದ ಪ್ರಬಂಧ) ನೆನಪಾಯಿತು! ಗೋಳಿಬಜೆ ರುಚಿ ಊಹಿಸಿಯೇ ಮುದವಾಯಿತು...

- ಭೀಮಪ್ರಕಾಶ್‌; ಕೊಲರಾಡೊ

*

ಗೋಳಿಬಜೆ ಲೇಖನ ಓದಿ ತುಂಬ ಖುಶಿಯಾಯಿತು. ಗೋಳಿಬಜೆ ತಿನ್ನದೆ ತುಂಬ ದಿನಗಳಾಗಿದ್ದುವು. ನಿನ್ನೆ ಸಂಜೆಯೇ ಮನೆಯಲ್ಲಿ ಮಾಡಿ ತಿಂದೆ, ಪರಮಾನಂದವಾಯ್ತು! ಸಾಧ್ಯವಿರುತ್ತಿದ್ದರೆ ನಿಮಗೂ ಒಂದಿಷ್ಟು ಕೊರಿಯರ್‌ನಲ್ಲಿ ಕಳಿಸಬೇಕೆಂದಿದ್ದೆ :-)

- ರವಿ ಮರಾಠೆ; ಬೆಂಗಳೂರು

*

ಲೇಖನ ಓದಿದೆ. ನಾವೂ ಬಜಗೋಳಿಯ ನೋಡಬೇಕು, ಗೋಳಿಬಜೆಯ ಸವಿಯಬೇಕು ಎಂದುಕೊಂಡಿದ್ದೇವೆ.

- ಚಂದ್ರಗೌಡ ಕುಲಕರ್ಣಿ; ತಾಳಿಕೋಟೆ

*

ಬಿಸ್ಕೂಟ್‌ಅಂಬಡೆ ಮತ್ತು ಗೋಳಿಬಜೆ - ಇವು ನನ್ನ ಪ್ರಾಯದವರು ಮರೆಯಲಾರದ ತಿಂಡಿಗಳು. ನನ್ನ ಎಳವೆಯಲ್ಲಿ ಚಾಟ್‌ ಗೀಟ್‌ ಎಲ್ಲ ಇರಲಿಲ್ಲ. ಗೋಳಿಬಜೆಯೇ ನಮ್ಮ ಲಕ್ಷುರಿ ತಿಂಡಿ!

- ಎಸ್‌.ಎಂ. ಪೆಜತ್ತಾಯ; ಬಾಳೆಹೊಳೆ ಎಸ್ಟೇಟ್‌, ಚಿಕ್ಕಮಗಳೂರು

*

ಬಜಗೋಳಿ ಬಗ್ಗೆ ನನಗೆ ಗೊತ್ತಿಲ್ಲ, ಆದ್ರೆ ಓದ್ತಾ ಓದ್ತಾ ನನ್ನ ಶಾಲಾ ದಿನಗಳು ನೆನಪಾದವು. ಇನ್ನು, ಗೊಳಿಬಜೆ ಯಾರಿಗೆ ತಾನೆ ಗೊತ್ತಿಲ್ಲ! ನನ್ನ ಕಸಿನ್‌ ಮಾಡ್ತಾಳೆ, ಅವಳು ಸಣ್ಣರವೆ(ಚಿರೋಟಿ ರವೆ) ಉಪಯೋಗಿಸಿ ಮಾಡ್ತಾಳೆ ಅಂದ್ಕೊಂಡಿದ್ದೆ, ಕೇಳ್ಬೇಕು.

- ಸ್ಮಿತಾ; ಬೆಂಗಳೂರು

*

ಸುಮಾರು ದಿನಗಳ ನಂತರ ನಿಮ್ಮ ಲೇಖನದ ಬಗ್ಗೆ ಬರೆಯುತ್ತಿದ್ದೇನೆ. ಅನಿವಾರ್ಯ ಕಾರಣಗಳಿಂದ ಪತ್ರ ಬರೆಯುತ್ತಿರಲು ಸಾದ್ಯವಾಗಿರಲಿಲ್ಲ. ಇವತ್ತಿನ 'ಬಜಗೋಳಿ - ಗೋಳಿಬಜೆ' ಲೇಖನ ಓದಿ ಮತ್ತೆ ನನಗೆ ಗೋಳಿಬಜೆಯ ಹಳೆಯ ಸಿಹಿನೆನಪು ಮರುಕಳಿಸಿದೆ. ನನ್ನ ಕಾಲೇಜ್‌ ದಿನಗಳಲ್ಲಿ ನನ್ನ ಇಷ್ಟದ ತಿನಿಸುಗಳಲ್ಲಿ ಗೋಳಿಬಜೆ ಅರ್ಥಾತ್‌ ಮಂಗಳೂರು ಬಜ್ಜಿ ಕೂಡ ಒಂದು. ಆದರೆ ಇತ್ತೀಚೆಗೆ ಅದರ ನಿಜವಾದ ಸವಿಯನ್ನು ಕೊಡುವುದರಲ್ಲಿ ಬೆಂಗಳೂರಿನಲ್ಲಿರುವ ಹೊಟೇಲಿಗರಿಗೆ ಸಾಧ್ಯವಾಗುತಿಲ್ಲ (ನನ್ನ ಅನಿಸಿಕೆ). ನಮ್ಮ ಆಫೀಸ್‌ ಕ್ಯಾಂಟೀನ್‌ನಲ್ಲಿ ಸಹ ಶನಿವಾರದ ತಿಂಡಿಯಾಗಿ ಗೋಳಿಬಜೆಯೇನೊ ಇರುತ್ತದೆ ಆದರೆ ಒಮ್ಮೆ ತಿಂದರೆ ಮತ್ತೊಮ್ಮೆ ಮುಟ್ಟುವಂತೆಯೂ ಇರುವುದಿಲ್ಲ. ಈ ಎಲ್ಲ ಸವಿಯ ಕೊರತೆಯನ್ನು ನಿಮ್ಮ ಲೇಖನ ಓದಿ ತುಂಬಿಸಿಕೊಂಡು ಖುಶಿಪಟ್ಟೆ. ಸವಿರುಚಿಗೆ ಧನ್ಯವಾದಗಳು. ಸವಿಯೂಟ ಹೀಗೆಯೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.

- ರಘುನಾಥ್‌ ಪಿ ಜಿ; ಬೆಂಗಳೂರು

*

ಬಜಗೋಳಿ-ಗೋಳಿಬಜೆ ಲೇಖನವು ನಿಜವಾಗಿಯೂ ಬಾಯಲ್ಲಿ ನೀರೂರಿಸುವಂತೆಯೇ ಇದೆ. ಗೋಳಿಬಜೆ ಎಂದ ಕೂಡಲೇ ನನ್ನ ನೆನಪಿಗೆ ಬಂದಿದ್ದು ಉಡುಪಿಯ ರಥಬೀದಿಯಲ್ಲಿರುವ ಮಿತ್ರಸಮಾಜ ಹೊಟೇಲ್‌. ಉಡುಪಿಗೆ ಹೋದಾಗಲೊಮ್ಮೆ ಕೃಷ್ಣನ ದರ್ಶನದ ಜೊತೆಗೆ ಮಿತ್ರಸಮಾಜಕ್ಕೆ ಭೇಟಿ ಕೊಡುವುದು (ಲಗ್ಗೆ ಹಾಕುವುದು) ನಮ್ಮ ಪರಿಪಾಠ. ಇನ್ನು ಯಾವತ್ತು ಕೃಷ್ಣನ ದರ್ಶನದ ಭಾಗ್ಯ (ಮಿತ್ರಸಮಾಜದ ಗೋಳಿಬಜೆಯ ರುಚಿ) ಸಿಗುತ್ತದೆಯೋ ನೋಡಬೇಕು :)

- ವಿನಯಾ ಜನಾರ್ಧನ; ಆನ್‌ಆರ್ಬರ್‌, ಮಿಶಿಗನ್‌

*

ಬಜಗೋಳಿ ಮತ್ತು ಗೋಳಿಬಜೆ ಲೇಖನ ಓದಿದೆ. ತುಂಬ ಚೆನ್ನಾಗಿದೆ. ನಾನು ಬಜಗೋಳಿ ಮೂಲಕ ಮೂಡಬಿದ್ರೆಗೆ ಬಹಳ ಸಲ ಹೋಗಿದ್ದೇನೆ. ಆಗೆಲ್ಲ ನಾನು ಬಜಗೋಳಿ ಮತ್ತು ಗೋಳಿಬಜೆಗಿರುವ ಲಿಂಕ್‌ ಬಗ್ಗೆ ಬಹಳ ಯೋಚನೆ ಮಾಡುತ್ತಿದ್ದೆ. ನಮ್ಮ ಸಂಬಂಧಿಕರಲ್ಲೂ ನಾನು ಈ ವಿಷಯವನ್ನು ಹೀಗೇ ತಮಾಷೆಗೆ ಪ್ರಸ್ತಾಪ ಮಾಡಿದ್ದಿದೆ - ಅದು ಹೇಗೆ ಈ ಎರಡು ಹೆಸರು ಮ್ಯಾಚ್‌ (ಮಿಸ್‌-ಮ್ಯಾಚ್‌?) ಆಗುತ್ತವೆ ಎಂದು. ಇವತ್ತು ಲೇಖನ ಓದಿ ಬಹಳ ಖುಶಿ ಆಯ್ತು. ನನ್ನ ತಂಗಿ ಗೋಳಿಬಜೆ ಮಾಡುವುದರಲ್ಲಿ ಎಕ್ಸ್‌ಪರ್ಟ್‌! ಅವಳು ಈಗ ಮದುವೆಯಾಗಿ ಗಂಡನೊಡನೆ ಮಂಗಳೂರಿನಲ್ಲಿದ್ದಾಳೆ.

ಕೊನೆಗೊಂದು ಪ್ರಶ್ನೆ, ನೀವು ಏನೂ ಭಾವಿಸದಿದ್ದರೆ ಉತ್ತರಿಸಿ. ನೀವು ಜೋಶಿ ಸರ್‌ನೇಮ್‌ನವರಾಗಿದ್ದು, ಹುಬ್ಬಳ್ಳಿ ಆಸುಪಾಸು ಬಿಟ್ಟು, ಗೋಳಿಬಜೆಗೆ... ಕ್ಷಮಿಸಿ, ಬಜಗೋಳಿಗೆ ಹೇಗೆ ಬಂದಿದ್ದು? :)

- ಗಿರೀಶ್‌ ರಾವ್‌; ಬೆಂಗಳೂರು

*

ನಿಮ್ಮೂರಿನ ಗೋಳಿಬಜೆ ತುಂಬ ಚೆನ್ನಾಗಿದೆ. ನಮ್ಮ ಕುಟುಂಬವರ್ಗದವರಿಗೆ 'ಮಂಗಳೂರು ಬಜ್ಜಿ' ಅಂದರೆ ತುಂಬ ಇಷ್ಟ. ನನಗೆ ನಿಮ್ಮಿಂದ ಸಹಾಯಬೇಕು. ನನಗೆ ಕರಾವಳಿ ಸಾಂಬಾರ್‌ (ಕುಂಬಳಕಾಯಿಯಿಂದ ಮಾಡಿದ್ದು) ತುಂಬ ಇಷ್ಟ, ಇದನ್ನು ತಯಾರಿಸುವ ವಿಧಾನ ಎಲ್ಲಾದರೂ ಸಿಕ್ಕಿದರೆ, ದಯವಿಟ್ಟು ನನಗೆ ತಿಳಿಸುತ್ತೀರಾ?

- ಮಹೇಶ್‌; ಬೆಂಗಳೂರು

*

ರೀ ಸ್ವಾಮಿ, ಹಾಗೆಲ್ಲ ನಮ್ಮಂತಹ ಪರದೇಸಿಗಳಿಗೆ ಅಲಭ್ಯ ತಿಂಡಿಗಳ ಬಗ್ಗೆ ಬರೆದು ಹೊಟ್ಟೆ ಉರಿಸೋದು ಸರಿಯಲ್ಲ. ನಮ್ಮೂರ್‌ ಕಡೆ ಬನ್ನಿ ನೋಡ್ಕೋತೀನಿ ;-)

2 ವರ್ಷ ಹಿಂದಿನ ಮಾತು. ಇಲ್ಲಿನ ಥಾಂಕ್ಸ್‌ಗಿವಿಂಗ್‌ ವೀಕೆಂಡಿನ ದಿನ. ಮಿತ್ರ ಪೃಥ್ವಿ 'ಸೇಲ್‌' ಗೆ ಹೋಗೋಣ ಅಂತ ಎಲ್ಲರನ್ನು ಒಪ್ಪಿಸಿದ. ಬೆಳಿಗ್ಗೆ 6 ಗಂಟೆಗೆ! ಬೆಳಿಗ್ಗೆ 9ಕ್ಕೆ ಮುಂಚೆ ಸೂರ್ಯ ಉದಯಿಸ್ತಾನೆ ಅನ್ನೋದನ್ನ ಎಂದಿಗು ಅರಿಯದ ನಾನು ಕೂಡ ತಯ್ಯಾರಾಗಿ ಹೊರಟೆ. ನಮ್ಮೂರಿಂದ ಒಂದು ಗಂಟೆ ಡ್ರೈವ್‌, ಸನ್ನೀವೇಲಿಗೆ. ಅಲ್ಲಿ ಒಂದೆರಡು 'ಮಾಲ್‌'ಗಳಿಗೆ ಹೋದಾಗಲೆ ತಿಳಿದಿದ್ದು ಇದೆಲ್ಲ ಏನು ವಿಶೇಷ ಇಲ್ಲ ಅಂತ. 8ಗಂಟೆ ವೇಳೆಗೆ ಹೊಟ್ಟೆ ಚುರುಚುರು ಅಂತಾಯಿದೆ. 'ಬಿಸಿಬಿಸಿ ಇಡ್ಲಿ ಸಾಂಬಾರ್‌ ಸಿಕ್ಕಿದ್ರೆ ಹೇಗಿರತ್ತೆ ಈಗ' ಅಂದೆ. ರೇಣುಕ ತಿರುಗಿ ಕೆಟ್ಟ ಲುಕ್‌ ಕೊಟ್ಟ. 'ಲೇ, ನಮ್ಮೂರಲ್ಲಿ ಇದ್ದಿದ್ರೆ ಇಷ್ಟೊತ್ತಿಗೆ ದರ್ಶಿನಿಲಿ ಬಿಸಿಬಿಸಿ ಇಡ್ಲಿ ಸಾಂಬಾರ್‌, ಕಾಫಿ ಸಿಕ್ತಾ ಇತ್ತೋ' ಅಂದೆ. 'ನನಗೂ ಹೊಟ್ಟೆ ಹಸೀತ ಇದೆ ಗುರು, ಈಗ. ಬಾಯಿ ಮುಚ್ಕೋಂಡಿರಕ್ಕೆ ಏನು ತೊಗೊತಿಯ' ಅಂದ. 10 ನಿಮಿಷ ಬಿಟ್ಟು ನನ್ನ ಗೊಣಗಾಟ ಮತ್ತೆ ಶುರು ಆಗಿತ್ತು. ' ಸನ್ನೀವೇಲಿನಲ್ಲಿ ಇಡ್ಲಿ ಸಾಂಬಾರ್‌ ಸಿಗಲ್ಲ ಅಂದ್ರೆ ಎನೋ ಅರ್ಥ' ಅಂದೆ. ಎಲ್ಲರಿಗು ಸ್ವಲ್ಪ ಇದು ನಿಜ ಅಂತ ಅನ್ನಿಸ್ತು. ಸರಿ, ಶಾಪಿಂಗ್‌ ಎಲ್ಲ ನಿಲ್ಲಿಸಿ ಇಡ್ಲಿ ವಡೆ ಹುಡುಕೊಕ್ಕೆ ಶುರು. ಯಾವ ಹೋಟೆಲು ತೆಗೆದಿಲ್ಲ ನಮ್ಮ ಗ್ರಹಚಾರಕ್ಕೆ. 10 ಗಂಟೆಗೆ ಎಲ್ಲರೂ ನನ್ನನ್ನು ಮಹಾಪಾಪಿ ಅನ್ನೊ ಹಾಗೆ ನೋಡ್ತ ಇದ್ರು. 'ಮೌಂಟನ್‌ ವ್ಯೂ ಸರವಣ ಭವನ ತೆಗೆದಿರುತ್ತೆ' ಅಂದೆ. ಸರಿ, ಅಲ್ಲಿಗೆ ಗಾಡಿ ಒಡಿಸಿ ಅಯ್ತು. ಅದು ಕೂಡ 11ಕ್ಕೆ ತೆಗೆಯೋದು ಅಂತ ತಿಳೀತು. ಇಷ್ಟು ಹೊತ್ತಿಗೆ ಎಲ್ಲರಿಗೂ, ಇವತ್ತು ಇಡ್ಲಿ ವಡೆ ತಿಂದೇ ಹೋಗಬೇಕು ಅಂತ ಹಟ ಬಂದಿತ್ತು. ಅಲ್ಲೇ ಕಾದಿದ್ದು ಹೋಟೆಲ್‌ ಬಾಗಿಲು ತೆರೆದ ಕೂಡಲೆ ಒಳಗೆ ಧಾಳಿ ಇಟ್ಟು ಇಡ್ಲಿ ವಡೆ ತಿಂದು ಕಾಫಿ ಕುಡಿದ ಮೇಲೆ ಜೀವ ಬಂತು.

ಇದರ ಬಗ್ಗೆ ಬರೀತ ಇದ್ದಾಗಲೆ ನೆನಪು ಬಂದಿದ್ದು ನಮ್ಮ ಮಡಿಕೇರಿ ಟ್ರಿಪ್‌. ಕಾಲೇಜಿನಲ್ಲಿ ಇದ್ದಾಗ. ಸುಮಾರು ಸುತ್ತಿ ತಲಕಾವೇರಿಗೆ ಬಂದಾಗ ಸಂಜೆ, ಚುಮುಚುಮು ಚಳಿ. ಅಲ್ಲೆ ಇದ್ದ ಪೆಟ್ಟಿಗೆಅಂಗಡಿಯಲ್ಲಿ ಕಾಫಿ ಸಮಾರಾಧನೆಗೆ ನಿಂತೆವು. ಒಂದು ಲೋಟ ಕಾಫಿಗೆ 4 ರೂಪಾಯಿ! ಯಾಕಯ್ಯ ಅಂದ್ರೆ 'ಏನು ಸಾರ್‌ ಹೀಗೆ ಕೇಳ್ತೀರ? ಇದು ನೆಸ್ಕಫೆ' ಅಂದ ಪುಣ್ಯಾತ್ಮ. ನಮ್ಮ ಲೆಕ್ಚರರ್‌ ಶಾಂತಾರಾಮರ ಶಾಂತಿ ಕದಡಿತ್ತು. 'ಹೋ, ಏನಯ್ಯ, ಕೊಡಗಿಗೆ ಬಂದು ನೆಸ್ಕಫೆ ಕುಡಿಯಾ ಕರ್ಮ ಏನು ನಮಗೆ?' ಅಂತ. ಏನು ಮಾಡ್ತೀರ, ಆ ಅಂಗಡಿ ಬಿಟ್ರೆ ಬೇರೆ ಗತಿ ಇರಲಿಲ್ಲ ಆ ಜಾಗದಲ್ಲಿ. ಕೊನೆಗೆ ಅದನ್ನೇ ಕುಡಿದು ಬಂದಿದ್ದು ಆಗಿತ್ತು.

ಇಷ್ಟೆಲ್ಲ ನಿಮಗೆ ಬರೆಯೋ ಹೊತ್ತಿಗೆ ನನಗೂ ಹೊಟ್ಟೆ ಹಸೀತಾ ಇದೆ. ಮನೆಗೆ ಊಟಕ್ಕೆ ಹೊರಟೆ. ಮತ್ತೆ ಸಿಗೋಣ. ವಂದನೆಗಳು.

- ಗೌತಮ್‌ ಸುದತ್ತ; ಕ್ಯಾಲಿಫೋರ್ನಿಯಾ

*

Last month while travelling from Samse(Kalasa) to Madikeri we had two stops. Bajagoli for breakfast and Puttur for lunch. In the Bajagoli main road, we had nice neerdosas in some hotel. The hotel opposite to the hotel we were eating, the owner was playing cassette very loudly to attract (or repel) customers. All of us in the Toyota Quails van were commenting on towns name Bajagoli, close to Golibaji. In fact I asked the hotel owner to serve Golibaji. He said saayankaala sikkatte, saar....

Neer dosa and golibaji + coconut chatni is a perfect trio:)

- Sham; Bangalore

*

Just now read gOLibaje, nice!

- Dr. M S Nataraj; Maryland

*

I am following your writings on the web and also in Vijaya Karnataka. Its astonishing enthusiasm and interest. I wonder how you find time for all these along with your busy profession. All the best,

- Dr.M Prabhakar Joshi; (Near Bajagoli!)
www.yakshagana.com

*

I had made golibaji yesterday only, for a dinner party in my house, and today I got to read about Golibaje! One more thing, Instead of maida flour, I use Pillsburry brand self rising flour, comes out equally good! Thanks for the nice article.

- Usha Bhat; Florida

*

Just read your article, as always, it was good. We used to sing like "Bajagoli-Golibaje" (repeat in chorus) during our school days. As we grew, eating habit shifted to Charumuri and boiled eggs instead of golibaje. Also another interesting note, just like your teacher sent you to Bank, our teacher also sent us to Bank and one central cafe to get Shira, puri, Ambade, Golibaje etc. Hotel owner used to give us one Ambade or Two golibaje (our choice) free because he saved on catering and we carried the food to teachers. If there was a cricket match that day, we would (me and my friend) order some snacks in that hotel and then sit extra 20 minutes listening to radio commentary!

- Roshan Shetty; New Jersey

*

I finally got to read the article about golibaje on the website. Very well written (it took me sometime to read through the kannada though!) It has been so long. It is good read, an article something we can connect to. Keep them coming!

- Suraj Bhide; San Diego, California

*

Golibaji is normally called as Mysore bajji by hoteliers in North Karnataka. I came to know the swarasya by you. Thanks.

- Sandeep Hublikar; Bangalore

*

Nice article on childhood nostalgias like golibaje. Write more on such topics.

- Dr. Hrishikesh Damle; Bangalore

*

Great article on Golibaje. Not sure how many of your readers will end up cursing you for the Golibaje temptation.

- Ganesha Prasad Katte; California

*

Bajagoli charitre came out nice. And gOLibaje is really a great speciality!

- Dinesh Nettar; New Jersey

*

Mouth watering Golibaje recipe!. Mangalooru bajji is my favourite tindi so Golibaje should be on the menu at my home this weekend.

- Prasad Naik; Bangalore

*

I read your article about Bajagoli and golibaje. I very much went back to my memory after reading it. Everytime I go to my native at least once I taste golibaje. thats true! I am basically from Karkala (Bailur) and did my engg in Nitte college. Now I am working as a software engineer in Bangalore (earlier was in Detroit for sometime). I keep reading this website often.

- Roshan Krishna Kumar; Bangalore

*

I got cleanbowled again to your article about goLibaje. I loved every sentence in the article. The picturization of BajagoLi and its 180 degree counterpart both were superb. I forwarded the link to many people and requested them to read it fully. I had liked your article like this when you had written about neerudose.

- Vasanth K; Bangalore

*

I read the article you wrote in thatskannada, about golibaje. This is the first time I accessed this website and your article was very good.

It is raining very badly here and to read this during rain reminded me of my childhood days when amma used to make this golibaje. I am from South Canara (from Mangalore proper) residing now in Bangalore. I am working as a Sr. Software Engineer. I am married and have a daughter.

I had this urge to write after seeing this golibaje article. That was too good an article. I don’t have the script and I cannot write in kannada. Allinda neevu kannadadalli bareyodu andre, tumba santosha ayithu article odi.

- Bhavana B Rao; Bangalore

*

What a coincidence, Yesterday I was reading your Bajagoli-golibaje story, sitting in the basement, then went upstairs to find the "gama gama" smell of golibaje being cooked by my wife. While munching on them opened the IndiaAbroad newspaper, which had the recipe for golibaje in name of Mangalore Bonda, from Hindu temple of NY.

You made the day for my love for Bajagoli, I mean Golibaje! Thank you,

- Sridhara Kedilaya; Maryland

*

Bajagoli-golibaje article I read it yesterday itself, Not only that article, I even went to pathrode article tracing the link and through other karavali food articles. It’s really mouth watering stuff! Actually this time myself and my brother are planning for a surprise trip anywhere with my family members, after my retrun to India. Now the place is choosen. I have been to Karkala, Udupi, Mangalore almost every year from past 7 years. I havent experienced tasting golibaje though.

But I remember one of my Mangalore friends had told me about this eatable before. Sure I will prepare this and make my friends and family members taste this. Till these days I enjoyed eating pathrodas but didnt know the relation between pathrode and Krishna janmashtami. Thanks for the information. You know what, the same sort of phone conversation (as you narrated in pathroda article) happens with me and my mom some times, while discussing about dishes and recipes. Now I have a question in my mind. Do all girls do the same? What do guys discuss when they call from far off places and speak to their mom?

- Sudha Narayana; Tokyo, Japan

*

Also, the following enjoyed (and happily wrote so) the golibaje write-up.

- Hamsaveni; Mysore
- Jayanthi H V; Bangalore
- Meena Rao; Virginia
- Padmavathi BN; Chicago
- Padmavathi Niralkatti; Bangalore
- Rashmi Kulkarni; Pittsburg
- Shanthi Tanthry; Maryland
- Srilatha P; Bangalore
- Veena Shivanna; Pheonix, AZ

English summary
Golibaje article by Srivathsa Joshi not only made readers mouth water, also prompted them to prepare it instantly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X