ಗೂಗಲ್ ಕನ್ನಡ ನ್ಯೂಸ್ : ಸಹಿ ಚಳವಳಿ

ಆದರೆ, ನಮ್ಮದೇ ಕನ್ನಡ ಭಾಷೆಯಲ್ಲಿ ದೊರಕುವ ಮಾಹಿತಿಗಳನ್ನು ಇಂಟರ್ ಭಗವಂತನೆನೆಸಿಕೊಂಡ ಗೂಗಲ್ ತನ್ನ ನ್ಯೂಸ್ ತೆಕ್ಕೆಗೆ ತೆಗೆದುಕೊಳ್ಳದೆ ತಿರಸ್ಕಾರ ಮಾಡಿದೆ. ಎಷ್ಟು ದಿನ ಈ ತಿರಸ್ಕಾರ? ನಮಗೆ ದೇವರ ಮೇಲೆ ಸಿಟ್ಟು ಬಂದಿದೆ.
ಗೂಗಲ್ ನ್ಯೂಸ್ ಭಂಡಾರದಲ್ಲಿ ಕಸ್ತೂರಿ ಕನ್ನಡವನ್ನೂ ಸೇರಿಸಿ ಎಂದು ಆಗ್ರಹಿಸುವ ಚಳವಳಿಯನ್ನು ಒನ್ ಇಂಡಿಯಾ ಕನ್ನಡ ವೆಬ್ ಸೈಟ್ ಇವತ್ತಿನಿಂದ ಆರಂಭಿಸುತ್ತಿದೆ. ನೀವೂ ಹಕ್ಕೊತ್ತಾಯ ಸಲ್ಲಿಸಬೇಕು. ಈ ಕನ್ನಡ ರಾಜ್ಯೋತ್ಸವದ ಹೊತ್ತಿಗಾದರೂ ಗೂಗಲ್ ಗಾಡ್ ಗಾಢ ನಿದ್ದೆಯಿಂದ ಎದ್ದೇಳಲಿ.
ಇಂಟರ್ ನೆಟ್ಟಿನಲ್ಲಿ ಕನ್ನಡ ಬಳಸುವ ಕನ್ನಡ ಕುಲಕೋಟಿ ಈ ಆಂದೋಳನದಲ್ಲಿ ಭಾಗವಹಿಸಿ ಕನ್ನಡಕ್ಕೆ ಜಯ ತಂದುಕೊಡಬೇಕೆಂದು ಮನವಿ ಮಾಡುತ್ತಿದ್ದೇವೆ. ನೀವು ಮಾಡಬೇಕಾದುದಿಷ್ಟೆ. ಈ ಲಿಂಕ್ ಕ್ಲಿಕ್ ಮಾಡಿ ಕನ್ನಡಕ್ಕಾಗಿ ಮತ ಚಲಾಯಿಸಿ. ಜೈ ಕನ್ನಡಾಂಬೆ.











Click it and Unblock the Notifications