ಜನಾನುರಾಗಿ ಉಚಿತ ಸಂಕ್ಷಿಪ್ತ ಜಾಹೀರಾತು ತಾಣ

ಅಂತರ್ಜಾಲದಲ್ಲಿ ಸಂಕ್ಷಿಪ್ತ ವರ್ಗೀಕೃತ ಜಾಹೀರಾತು ಸೇವೆಗಳನ್ನು ಉಚಿತವಾಗಿ ಕೊಡುವ ದಟ್ಸ್ ಕನ್ನಡದ www.click.in ವಿಭಾಗಕ್ಕೆ ತಮಗೆಲ್ಲ ಮತ್ತೊಮ್ಮೆ ಸ್ವಾಗತ. ಕಳೆದ ನಾಲಕ್ಕು ವರ್ಷಗಳಲ್ಲಿ ಜನಬಳಕೆಯ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿರುವ ನಮ್ಮ ಈ ಸಂಕ್ಷಿಪ್ತ ಜಾಹೀರಾತು ಪುಟಗಳನ್ನು ಜನಾನುರಾಗಿ ತಾಣವಾಗಿ ಮಾಡಿದ ಸಮಸ್ತ ಕನ್ನಡಿಗರಿಗೆ ಹಾರ್ದಿಕ ವಂದನೆಗಳು.

ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವ ಅಂತರ್ಜಾಲ ತಾಣಗಳಲ್ಲಿ ಸುದ್ದಿ, ಮನರಂಜನೆ ಮತ್ತು ಪುರವಣಿಗುಣಗಳನ್ನು ಮೈಗೂಡಿಸಿಕೊಂಡ ಬರಹಗಳಿಗೇ ಆದ್ಯತೆ ಹೆಚ್ಚು. ಆದರೆ ಕನ್ನಡ ವೆಬ್ ಸೈಟುಗಳು ದೈನಂದಿನ ಬಳಕೆಗೆ ಯೋಗ್ಯವೂ, ಮುಕ್ತವೂ ಮತ್ತು ಸುಸೂತ್ರವಾಗಿಯೂ ಇರಬೇಕೇಂಬುದು ದಟ್ಸ್ ಕನ್ನಡದ ಧ್ಯೇಯಗಳಲ್ಲಿ ಪ್ರಮುಖವಾಗಿದೆ. ಆನ್ ಲೈನ್ ಅಂದರೆ ಹುಡುಕಾಟಕ್ಕೆ ಇನ್ನೊಂದು ಹೆಸರು. ಪ್ರತಿಯೊಬ್ಬರಿಗೂ ಯಾವುದೋ ಒಂದು ಗಳಿಗೆಯಲ್ಲಿ ಏನಾದರೊಂದು ವಸ್ತು ಅಥವಾ ಸೇವೆಯ ಅಗತ್ಯ ತಲೆದೋರುತ್ತದೆ. ಆ ಗಳಿಗೆಯಲ್ಲಿ ಹುಡುಕುವ ಬಳ್ಳಿ ಕಾಲಿಗೆ ಸುತ್ತಿಕೊಳ್ಳಬೇಕು!

ಬ್ರಹ್ಮಚಾರಿಗೆ ಇದ್ದಕ್ಕಿದ್ದಂತೆ ಮದುವೆಯಾಗುವ ಆಸೆ, ಮಾಲಿಕರಿಗೆ ಈ ಮನೆ ಮಾರಿ ಇನ್ನೊಂದು ಮನೆ ಕೊಳ್ಳುವ ಅಗತ್ಯ, ವಿದ್ಯಾವಂತ ಯುವತಿ ನೌಕರಿ ಬದಲಾಯಿಸಬೇಕಾದ ಸನ್ನಿವೇಶ, ಕಡಿಮೆ ಬೆಲೆಯಲ್ಲಿ ಬಳಸಿದ ಕಾರನ್ನೋ, ಬೈಕನ್ನೋ ಕೊಳ್ಳಬೇಕೆಂಬ ಅಪೇಕ್ಷೆ, ಬಾಡಿಗೆಗೊಂದು ಮನೆ, ಮಕ್ಕಳಿಗೆ ಪಾಠ ಹೇಳುವುದಕ್ಕೆ ಒಬ್ಬ ಶಿಕ್ಷಕ, ತುರ್ತಾಗಿ ಬೇಕಾಗಿರುವ ಒಂದು ಔಷಧಿ.. ಬೇಕುಗಳ ಪಟ್ಟಿಗೆ ಮಿತಿಯಿಲ್ಲ, ಹುಡುಕಾಟಕ್ಕೆ ಕೊನೆಯಿಲ್ಲ.

ಹೀಗೆ ಹಲವು ಹತ್ತು ಸೇವೆಗಳನ್ನು ಉಚಿತ, ಸಂಕ್ಷಿಪ್ತ ಜಾಹಿರಾತುಗಳ ಮೂಲಕ ಓದುಗರಿಗೆ ತಲುಪಿಸುವ ನಮ್ಮ ತಾಣವನ್ನು ಇನ್ನಷ್ಟು ಸುಲಭ ಮತ್ತು ಸುಸೂತ್ರ ಬಳಕೆಗೆ ಸಿದ್ಧಪಡಿಸಲಾಗಿದೆ. ಹೊಸ ವಿನ್ಯಾಸವನ್ನು ಹೊತ್ತ ದಟ್ಸ್ ಕನ್ನಡದ ಕ್ಲಾಸಿಫೈಡ್ಸ್ ವಿಭಾಗ ಇವತ್ತು ಬಿಡುಗಡೆಯಾಗಿದೆ. ಭಾರತದ ಸುಮಾರು 200 ನಗರ ವಾಸಿಗಳಿಗೆ ಉಪಯುಕ್ತವಾಗುವ ಪಟ್ಟಣ ಪ್ರದೇಶಗಳ ಪಟ್ಟಿಯಲ್ಲಿ ಕನ್ನಡನಾಡಿನ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮುಂತಾದ ನಗರವಾಸಿಗಳಿಗೆ ಪ್ರಯೋಜನವಾಗುವ ಜಾಹೀರಾತು ಪ್ರಕಟಣೆ ಸೌಲಭ್ಯವನ್ನು ಒದಗಿಸಲಾಗಿದೆ. ಈ ಎಲ್ಲ ಜಾಹೀರಾತು ಒಡನಾಟಗಳು ತಮಗೆ ಕನ್ನಡ ಭಾಷೆಯಲ್ಲೇ ದೊರೆಯುವಂತಾಗಿರುವುದು ಕಂಪ್ಯೂಟರ್ ನಂಬಿದ ಕನ್ನಡ ಜನಾಂಗದ ಹೆಮ್ಮೆಯೆಂದೇ ನನ್ನ ಭಾವನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+