ಮತ್ತದೇ ಬಿಸಿಲು, ನೆನಪಿನಂಗಳದಿ ಮೊಳೆವ ಹೋಳಿಯ ಟಿಸಿಲು!


ಈ ವರ್ಷ ಬಣ್ಣದ ಹಬ್ಬವನ್ನು ಮತ್ತಷ್ಟು ರಂಗು ಮಾಡೋದಕ್ಕೆ ವಾರಂತ್ಯದ ರಜೆಗಳು ಜೊತೆಯಲ್ಲಿದ್ದವು! ಬಣ್ಣದ ರಂಗಿನಾಟ ಕಂಡಾಗ, ನೆನಪುಗಳು ಹಿಂದಕ್ಕೆ ಓಡಿದವು... ಚಿತ್ರದುರ್ಗದಲ್ಲಿ ನಾವು ಮಾಡ್ತಾಯಿದ್ದ ಆರೋಗ್ಯಕರ ಕಿತಾಪತಿಗಳು ನೆನಪಾದವು...

Burn your Desire, Before something new catches up!ಹಬ್ಬ ಹರಿದಿನಗಳು ಬರುತ್ತವೆ ಹೋಗುತ್ತವೆ. ಆದರೆ ಭಾರತೀಯ ಹಬ್ಬದ ಆ ಸಂಕೇತ ಆ ನಲಿವು ಆ ಸಂಭ್ರಮ ಯಾವತ್ತೂ ನಮ್ಮ ಮನೋಮಂದಿರದಲ್ಲಿ ಮನೆ ಮಾಡಿರಲಿ ಎಂದು ಆಶಿಸುತ್ತಿರುವ ಹೊತ್ತಿಗೆ ಇನ್ನೊಂದು ಹಬ್ಬ ಬಂದು ಬಿಟ್ಟಿರುತ್ತದೆ. ಜಾಸ್ತಿ ಗ್ಯಾಪೇ ಇಲ್ಲ. ಶಿವರಾತ್ರಿಜಾಗರಣೆಯಲ್ಲಿ ಕಳೆದ ನಿದ್ದೆಯಿನ್ನೂ ಕಾಂಪೆ-ನ್‌-ಸೇಟ್‌ ಆಗಿಲ್ಲ ಆಗಲೇ ಬಂದು-ಹೋ-ಯಿತು ಹೋಳಿ.

ಸ್ವಲ್ಪ ದಿನ ತಡೆದರೆ ಇಗೋ ಬಂತು ಎದುರುಗೊಳ್ಳಿರಿ ರಾಮ ನವಮಿ ಮತ್ತೆ ಯುಗಾದಿ. ನೀವು ಹಿಂದುಗಳಾಗಿದ್ದರಂತೂ ಹಬ್ಬದ ಸಾಲು ತಪ್ಪಿ-ಸಿ-ಕೊ-ಳ್ಳ-ವುದು ಕಷ್ಟ.. ನಿತ್ಯ ಒಂದಿಲ್ಲೊಂದು ಆಚ-ರಣೆ. ಮಿಸ್‌ಆದರೆ ಇದ್ದೇ ಇದೆ ತಿಥಿ, ನಕ್ಷತ್ರ, ಪಕ್ಷ , ಅರ್ಘ್ಯ, ಸೂರ್ಯ ನಮಸ್ಕಾರ.

ನಾನು ಚಿತ್ರದುರ್ಗದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಪ್ರೀತಿಸುತ್ತಿದ್ದುದು ಕಾಮ-ಣ್ಣನ ಹಬ್ಬ ಮಾತ್ರ. ಉಳಿದೆಲ್ಲ ಹಬ್ಬಗಳಲ್ಲಿ ಹೆಣ್ಣುಮ-ಕ್ಕ-ಳದ್ದೇ ಜಾಸ್ತಿ ದರ್ಬಾರು ನಡೆದರೆ ಗಂಡಸರಿಗಾಗಿ ಮಾತ್ರ ಮೀಸಲಾದ ಹೋಳಿಯಲ್ಲಿ ನಾವು ಆಡಿದ್ದೇ ಆಟ ಎಂಬ ಅಹಂಕಾರ. ನಮ್ಮ ಓಣಿಯಲ್ಲಿ ವಾಮನ ಅಂತ ಇದ್ದ. ಅವನು ಒಳ್ಳೆ ಆರ್ಟಿಸ್ಟ್‌. ಆಮೇಲೆ ಪ್ರಜಾಮತ ಪತ್ರಿಕೆಯಲ್ಲಿ ಕೆಲ-ಸ-ಮಾ-ಡುತ್ತಿ-ದ್ದ. ದುರ್ಗದಲ್ಲಿ ಅವನ ಮನೆಯ ಮುಂದೆ ನಾವು ಹುಡುಗರೆಲ್ಲ ಒಂದು ವಾರ ಮುಂಚೆಯೇ ಸೇರಿ ಮೀಟಿಂಗ್‌ ಮಾಡುತ್ತಿದ್ದೆವು.

ಆಗ ಕಣಿಗೆ, ಕುಳ್ಳು, ಬಿದಿರು, ನಿಚ್ಚಳಿಕೆಯನ್ನು ಎಲ್ಲಿ, ಹೇಗೆ ಕದಿಯಬೇಕು ಎಂದು ಅವನು ಸ್ಕೆಚ್‌ ಹಾಕಿ ವಿವರಿಸುತ್ತಿದ್ದ . ಅದರಂತೆ ನಾವು ಕದ್ದದ್ದನ್ನು ಲೈಬ್ರೆರಿ ಪಾರ್ಕಿನ ಜಾರುಬಂಡೆಯ ಮೂಲೆಯಲ್ಲಿ ಗುಣಿ ತೋಡಿ ಮುಚ್ಚಿ ಇಡುತ್ತಿದ್ದೆವು. ಕದಿಯುವಾಗ ಸಿಕ್ಕಿಬಿದ್ದರೆ ಬಿಡಿಸಿಕೊಳ್ಳಲು ಅವನೇ ಬರುತ್ತಿದ್ದ. ಬರೀ ಕದಿಯುವುದೇ ಅಲ್ಲ, ಮರ್ಯಾದೆಯಿಂದ ಕಟ್ಟಿಗೆ, ಬೆರಣಿ ಭಿಕ್ಷೆ ಬೇಡುವುದೂ ಇತ್ತು. ಗೋಣಿಚೀಲ ಹೆಗಲ ಮೇಲೆ ಹಾಕಿಕೊಂಡು ಮನೆಮನೆ ಅಲೆಯುತ್ತಿದ್ದೆವು.

ಕಾಮಣ್ಣ ಮಕ್ಕಳು ಕಳ್ಳ ಸೂಳೆ ಮಕ್ಕಳು
ಭೀಮಣ್ಣ ಮಕ್ಕಳು ಬಿಟ್ಟಿ ಸೂಳೆ ಮಕ್ಕಳು
ಅಡಿಕೆ ಗೋಟು, ಎಕ್ಕಡದೇಟು..

ಮನೆಯವರು ನಮ್ಮ ವರಾತದಿಂದ ಬಚಾವ್‌ ಆಗಲು ಒಂದು ಕಟ್ಟಿಗೆ ಭಿಕ್ಷೆ ನೀಡುತ್ತಿದ್ದರು. ಹಬ್ಬದ ಹಿಂದಿನ ದಿನ ಕಾಮನ ಗುಣಿ ತೋಡಿ, ಒಳಗೆ ಗುಂಡುಕಲ್ಲು ನೆಡುತ್ತಿದ್ದೆವು. ಅವನೇ ಕಾಮರಾಜ. ಗುಣಿಯ ಬದಿಗೆ ಕಟ್ಟಿಗೆ ಪೇರಿಸುತ್ತಿದ್ದೆವು. ಇಷ್ಟಾದರೂ ಕಾಮನ ಗುಣಿಯ ಸುತ್ತ ಸಗಣಿ ಸಾರಿಸಿ ರಂಗೋಲಿ ಹಾಕುತ್ತಿದ್ದವರು ಹೆಣ್ಣು ಮಕ್ಕಳೇ. ಈ ಕೆಲಸಕ್ಕೆ ಅವರಲ್ಲೇ ಪೈಪೋಟಿ ಇದ್ದುದೂ ಉಂಟು.

ನಾವೆಲ್ಲ ಅಂಥ ಚಟುವಟಿಕೆಗಳಲ್ಲಿ ತುಂಬಾ ಇನ್‌ವಾಲ್ವ್‌ ಆಗುತ್ತಿದ್ದುದಕ್ಕೆ ಮುಖ್ಯ ಕಾರಣ ವೆಂದರೆ, ಬಿಡುವಿನ ಸಮಯ ನಲಿಯುವುದಕ್ಕೆ ನಮಗೆ ಜಾಸ್ತಿ ಡೈವರ್ಷನ್‌ ಇರುತ್ತಿರಲಿಲ್ಲ. ಹಾಗಾಗಿ ಏನೇ ಮಾಡಿದರೂ ಆಕ-ಡೆಗೇ 100 ಪರ್ಸೆಂಟ್‌ ಗಮನ. ರಾತ್ರಿ ಪೂರಾ ಕಾಮ ದಹನದಲ್ಲಿ ನಾವು ಹುಡುಗರೆಲ್ಲ ತಲ್ಲೀನ.

ಆರಿರಯ್ಯ ಹಾರಿಬಿದ್ದು, ಶಾನುಭೋಗ ಜಾರಿಬಿದ್ದು
ಮಡಕೆ ತೂತು ಕೊರೆದನೂ, ಕೊರೆದನೂ..

ಇಂಥ ಜನ-ಪದಗಳು ಅದೆಷ್ಟೋ. ಕಿರುಚಿ ಕಿರುಚಿ ಗಂಟಲು ಬಿದ್ದು ಹೋದ ಮೇಲೆ ಮುಂಜಾನೆ ಯಾರೋ ಪುಣ್ಯಾತ್ಮರು ಪಾನಕ, ಕೋಸಂಬರಿ ಸೇವೆ ಮಾಡುತ್ತಿದ್ದರು. ಅದು ಕಾಮನ ಉರಿಯುವ ಕೆನ್ನಾಲಗೆ ಕ್ರಮೇಣ ತಣ್ಣಗಾಗುತ್ತಾ ಬರುವ ಸಮಯ. ಬೆಳ್ಳಂಬೆಳಗ್ಗೆ ಬೂದಿ ಹಾರಿದ ಮೇಲೆ ಓಕುಳಿ ಆಡಲು ಶುರು. ನಾವು ಯಾರನ್ನೂ ಪೀಡಿಸಿದ, ಗೋಳು ಹುಯ್ದು ಕೊಂಡ ನೆನಪಿಲ್ಲ. ನಾವು ನಾವೇ

ಆಗಿದ್ದು, ಸಂತೋಷ ಪಡುತ್ತಿದ್ದ ಕಾಲ. ಚಿತ್ರ-ದು-ರ್ಗದ ಸೂರ್ಯ ನೆತ್ತಿಗೆ ಬರುವ ಹೊತ್ತಿಗೆ ಎರಡು ತೆಂಗಿನ ಮರಕ್ಕೆ ಅಡ್ಡಲಾಗಿ ಕಟ್ಟಿದ್ದ ದಾರದ ನಡೂ ಮಧ್ಯದಲ್ಲಿ ದೊಡ್ಡ ಮಡಕೆ ಒಡೆಯಲು ಹೆಗಲ ಏಣಿ. ನಮ್ಮ ನಾಯಕ ವಾಮನ ಮಡಕೆಯನ್ನು ಢಮಾರ್‌ ಮಾಡಿದ ತಕ್ಷಣ ಚೆಲ್ಲಾಪಿಲ್ಲಿ ಆಗುವ ಪುಡಿ ಕಾಸು ಬಿಲ್ಲೆ ಆರಿಸಿಕೊಂಡು ಐಸ್‌ ಕ್ಯಾಂಡಿ ಕೊಂಡು ಬೆಟ್ಟದ ಕಡೆ ಓಡಿದವೆಂದರೆ ..

ಗೋಪಾಲಸ್ವಾಮಿ ಹೊಂಡದಲ್ಲಿ ನೀರಾಟ. ತಣ್ಣೀರ ದೋಣಿಯಲ್ಲಿ ಸಿಗುವ ಸೊಂಪಾದ ನೀರೇ ತಿಂಡಿ, ಊಟ. ಮನೆಗೆ ಬರುತ್ತಲೇ ‘ಯಾಕೋ ಇಷ್ಟು ಹೊತ್ತು ? ಅಪ್ಪನಿಂದ ಬೇಜಾನ್‌ ಬೈಗುಳ, ಇನ್ನೇನು ಬಡಿಸಲಿ ? ಅಮ್ಮನ ಪ್ರಶ್ನೆ’

ಹೋಳಿ ಅಥವಾ ಕಾಮದಹನದ ಅರ್ಥ, ಸಂಕೇತ ನಿಮಗೆಲ್ಲ ಗೊತ್ತಿದ್ದದ್ದೇ. ನನಗನಿಸುತ್ತೆ. ಇಲ್ಲಿನ ಮುಖ್ಯ ಪ್ರಶ್ನೆ ಅಥವಾ ಉತ್ತರ:

Burn your Desire,

Before something new catches up!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+