ಪ್ರೇಮದ ಕಾಣಿಕೆ

ಪ್ರೇಮದ ಕಾಣಿಕೆ Sampige marada hasirele naduve...

ಪ್ರೀತಿಯ ಶಾಮಸುಂದರ್‌ ಅವರಿಗೆ,

ನಿಮ್ಮ ಕನ್ನಡ ವೆಬ್‌ಸೈಟನ್ನು ಕಳೆದ ಎರಡು ವರುಷಗಳಿಂದ ನೋಡುತ್ತಾ ಬಂದಿದ್ದೇನೆ. ಮುಂಬಯಿಯಂಥ ಜನಾರಣ್ಯದಲ್ಲಿ ಕುಳಿತ ನನಗೆ ಕನ್ನಡದ ಸಂದರ್ಭವನ್ನು ಒದಗಿಸಿಕೊಟ್ಟದ್ದು ನಿಮ್ಮ ನೆಟ್‌ಪತ್ರಿಕೆಯ ಹೆಗ್ಗಳಿಕೆ.

ನನ್ನ ಹೆಸರು, ಸತ್ಯಶಂಕರ ಗುಂಡೂಮನೆ. ವೃತ್ತಿಯಿಂದ ಖಾಸಗಿ ಸಂಸ್ಥೆಯಾಂದರಲ್ಲಿ ಮ್ಯಾನೇಜರ್‌. ನಿಮ್ಮ ಪತ್ರಿಕೆಗೆ ದೆವ್ವದ ಕತೆಗಳನ್ನು ಬರೆದ ಚಂದಿರ್‌ ನನ್ನ ಸಂಬಂಧಿಕರು. ನಿಮ್ಮ ಸೈಟಿನ ಪರಿಚಯ ಮಾಡಿಕೊಟ್ಟದ್ದೇ ಅವರು.

ವೆಬ್‌ಸೈಟುಗಳು , ಅದರಲ್ಲೂ ಕನ್ನಡ ನೆಟ್‌ಪತ್ರಿಕೆಗಳು ಕಷ್ಟದಲ್ಲಿವೆ ಅಂತ ಅವರೇ ಹೇಳಿದರು. ಕನ್ನಡದ ಯಾವ ಪತ್ರಿಕೆಯೂ ಕೊಡದಂಥ ದೊಡ್ಡ ಮೊತ್ತದ ಸಂಭಾವನೆಯನ್ನು ನೀವು ಅವರಿಗೆ ಕೊಟ್ಟಿದ್ದೀರಿ ಅಂತಲೂ ತಿಳಿಸಿದರು. ಅದನ್ನು ಕೇಳಿ ಸಂತೋಷವಾದರೂ, ನೆಟ್‌ ಪತ್ರಿಕೆಗಳು ಜಾಸ್ತಿ ದಿನ ನಡೆಯುವುದು ಶಕ್ಯವಿಲ್ಲ ಎಂಬ ಅವರ ವಾದದಿಂದ ನನಗೆ ಹಿಂಸೆಯಾಯಿತು. ಬೇಸರವೂ ಆಯಿತು.

ನೀವೇಕೆ ನಿಮ್ಮ ಪತ್ರಿಕೆಯನ್ನು ಪೇ ಸೈಟು ಮಾಡಬಾರದು ಎಂದು ಕೇಳುವ ಧಾರ್ಷ್ಟ್ಯ ತೋರಲಾರೆ. ಅದು ನಿಮಗೆ ಬಿಟ್ಟದ್ದು. ಆದರೆ ನನಗೆ ನಿಮ್ಮ ಸೈಟು ಸಂತೋಷಕೊಟ್ಟಿದೆ. ಬೆಂಗಳೂರಿನಲ್ಲಿ ಪ್ರಕಟವಾಗುವ ಯಾವ ಪತ್ರಿಕೆಯೂ ಮುಂಬೈ ನಗರವನ್ನು ಸಕಾಲಕ್ಕೆ ತಲುಪದೇ ಇದ್ದರೂ ನನಗೆ ಸುದ್ದಿ ಮತ್ತು ಮನರಂಜನೆಯನ್ನು ನೀವು ಸತತವಾಗಿ ಕೊಟ್ಟಿದ್ದೀರಿ. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ವತ್ಸಜೋಷಿಯವರ ಅಂಕಣದಿಂದ ಹಿಡಿದು ನದಿಯ ನೆನಪಿನ ಹಂಗಿನ ತನಕ , ರಾಜಕೀಯದಿಂದ ಹಿಡಿದು ಸಿನಿಮಾದ ತನಕ ಪ್ರತಿಯಾಂದನ್ನು ಓದುತ್ತೇನೆ. ನಿಮ್ಮ ಪತ್ರಿಕೆ ನನಗೆ ‘ ಶಿವನ ತಲೆಯ ಮೇಲಿನ ಕಣಿಗಲೆ ಇದ್ದಹಾಗೆ’.

ನನ್ನನ್ನೊಂದು ಪಾಪಪ್ರಜ್ಞೆ ಕಾಡುತ್ತಿದೆ. ನಾನು ನಿಮ್ಮ ಪತ್ರಿಕೆಯಿಂದ ಪಡೆದ ಸಂತೋಷಕ್ಕೆ ಪ್ರತಿಯಾಗಿ ಏನನ್ನಾದರೂ ಮಾಡಬೇಕು ಅನ್ನಿಸುತ್ತಿದೆ. ನಾನು ನಿಮಗೆ ಹೇಗೆ ಸಹಾಯ ಮಾಡಬಹುದು ಎಂದು ಒಣಸಂಭಾವಿತರಂತೆ ಕೇಳಲಾರೆ.

ಪತ್ರಿಕೆ ಇನ್ನಷ್ಟು ಹೆಚ್ಚಿನದನ್ನು ನನಗೆ ಕೊಡಬೇಕು ಅನ್ನುವ ಸ್ವಾರ್ಥದಿಂದ, ಕೊಡಲಿ ಎಂಬ ನಿರೀಕ್ಷೆಯಿಂದ, ಕೊಡದೇ ಹೋದರೆ ನಿಮ್ಮನ್ನು ಕಾಡಿ ಬೇಡಿ ಕೇಳುವ ಅಧಿಕಾರ ನನಗೂ ಪ್ರಾಪ್ತಿಯಾಗಲಿ ಎಂಬ ಆಸೆಯಿಂದ ನಾನು ಐದು ಸಾವಿರ ರುಪಾಯಿಗಳನ್ನು ತಮಗೆ ಕಳುಹಿಸುತ್ತಿದ್ದೇನೆ. ಇದನ್ನು ನನ್ನ ಆಜೀವ ಚಂದಾ ಎಂದಾದರೂ ಭಾವಿಸಿರಿ, ಓದಿದ್ದಕ್ಕೆ ನಾನಾಗಿ ನಾನೇ ಕೊಡುವ ಮೊತ್ತ ಎಂದಾದರೂ ತಿಳಿಯಿರಿ.

ಕೃತಜ್ಞತೆಯ ಭಾರದಿಂದ ಮುಕ್ತನಾಗುತ್ತಿದ್ದೇನೆ.

ಇಲ್ಲಿನ ನನ್ನ ಅನೇಕ ಗೆಳೆಯರೂ ಕೂಡ ನನ್ನಿಂದ ಪ್ರೇರಣೆ ಪಡೆದಿದ್ದಾರೆ. ತಮ್ಮ ಕೈಲಾದ ಮೊತ್ತ ಕಳುಹಿಸುವುದಾಗಿ ಹೇಳಿದ್ದಾರೆ. ಅವರು ಅದನ್ನು ಹೇಗೆ ಕಳುಹಿಸಬೇಕು ಅನ್ನುವುದನ್ನು ನೀವು ತಿಳಿಸಿ.

ದಯವಿಟ್ಟು ಮುಜುಗರ ಪಟ್ಟುಕೊಳ್ಳಬೇಡಿ. ನಾವು ನಮ್ಮ ಪತ್ರಿಕೆಯನ್ನು ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದೇವೆ. ಅನ್ಯಥಾ ಭಾವಿಸುವುದಿಲ್ಲ ಎಂಬ ನಂಬಿಕೆಯಾಂದಿಗೆ..

ನಿಮ್ಮ ಓದುಗ ಮಿತ್ರ
- ಸತ್ಯಶಂಕರ ಗುಂಡೂಮನೆ

Email : [email protected]

p.s: I am sending a crossed cheque, leaving the drawees name blank. Fill it suitably.

SG.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+