ತಾಯಿ ಶವಪೆಟ್ಟಿಗೇಲಿ
| ತಾಯಿ ಶವಪೆಟ್ಟಿಗೇಲಿ |
![]() |
| ಮಕ್ಕಳ ಕನಸುಗಳು ! |
ಅವರೆಲ್ಲ ಗಲಿಬಿಲಿಗೊಂಡರು. ಗಲಿಬಿಲಿಗೆ ಕಾರಣವಾದದ್ದು ಆಗಷ್ಟೆ ಇಂಗ್ಲೆಂಡಿನಿಂದ ಬಂದಿಳಿದ ಅವರ ತಾಯಿಯ ಶವಪೆಟ್ಟಿಗೆ. ಆ ಶವಪೆಟ್ಟಿಗೆಯನ್ನು ಮಾರಿಷಸ್‌ನಲ್ಲಿ ನೆಲೆಸಿರುವ ಭಾರತೀಯ ಕುಟುಂಬಕ್ಕೆ ರವಾನಿಸಿದವಳು ಚಿರನಿದ್ರೆಯಲ್ಲಿ ಮಲಗಿದ್ದ ಆ ತಾಯಿಯ ಒಬ್ಬ ಮಗಳು.
ಪೆಟ್ಟಿಗೆಯಲ್ಲಿ ತಾಯಿಯ ಶವವನ್ನು ತುರುಕಲಾಗಿತ್ತು. ಮೂರಡಿ ಆರಡಿ ಜಾಗದ ಪೆಟ್ಟಿಗೆಯಲ್ಲಿ ಎಷ್ಟೊಂದು ಇತರ ಸಾಮಾನು ಸರಂಜಾಮುಗಳು ಇದ್ದವೆಂದರೆ ಸತ್ತನಂತರವೂ ನಿರಾಳವಾಗಿ ಮಲಗುವುದಕ್ಕೆ ಅವರಮ್ಮ ಅಲ್ಲಿ ಕಷ್ಟಪಡುತ್ತಿದ್ದಳು.
ಪೆಟ್ಟಿಗೆಯನ್ನು ಇಳಿಸಿಕೊಂಡ ಕುಟುಂಬದವರು ನಿಧಾನವಾಗಿ ಮುಚ್ಚಳ ತೆಗೆದು ನೋಡಿದರು. ಮೇಲಗಡೆಯೇ ಇಡಲಾಗಿದ್ದ ಒಂದು ಪತ್ರ ಅವರ ಕಣ್ಣಿಗೆ ಬಿತ್ತು. ಆ ಪತ್ರದಲ್ಲಿ ನ ಒಕ್ಕಣೆ ಹೀಗಿತ್ತು :
ಪ್ರಿಯ ಸಹೋದರ ಸಹೋದರಿಯರೇ,
ಮಾರಿಷಸ್‌ನಲ್ಲಿರುವ ನಮ್ಮ ಪೂರ್ವಜರ ಮನೆಯ ಕಾಂಪೌಂಡಿನಲ್ಲೇ ತನ್ನ ಅಂತ್ಯ ಸಂಸ್ಕಾರಗಳು ನಡೆಯಬೇಕೆನ್ನುವುದು ಅಮ್ಮನ ಇಚ್ಛೆ ಆಗಿತ್ತು . ಆದಕಾರಣ ಅಮ್ಮನ ಶವವನ್ನು ಈ ಮೂಲಕ ಕಳಿಸುತ್ತಿದ್ದೇನೆ. ಕ್ಷಮಿಸಿ, ನಾನು ಬರಲು ಸಾಧ್ಯವಾಗಲಿಲ್ಲ. ನನ್ನ ಸಂಬಳ-ಸಹಿತ ರಜೆಗಳೆಲ್ಲ ಖಾಲಿ ಆಗಿವೆ.
ಈಗ ನೀವು ಮಾಡಬೇಕಾದುದಿಷ್ಟು.
ಅಮ್ಮನ ಶವದ ಕೆಳಗೆ 12 ಡಬ್ಬ ಖೋವಾ, 10 ಪ್ಯಾಕೆಟ್ ಚಾಕೋಲೇಟ್ ಮತ್ತು ಸ್ವಲ್ಪ ಬಾದಾಮಿ ಇದೆ. ಇದನ್ನು ನೀವೆಲ್ಲರೂ ಸಮನಾಗಿ ಹಂಚಿಕೊಂಡುಬಿಡಿ. ಅಮ್ಮನ ಕಾಲಿನ ಹತ್ತಿರ ಹೊಸ ರಿಬಾಕ್ ಶೂ ಇದೆ. ( ಸೈಜು 10 ) ಅದು ಮೋಹನನಿಗೆ. ಅದರ ಜೊತೆಗೇ ಇಟ್ಟಿರುವ ಇನ್ನೆರಡು ಜೊತೆ ಶೂಗಳು ರಾಧಾ ಮತ್ತು ಲಕ್ಷ್ಮಿಯ ಮಕ್ಕಳಿಗೆ. ಅಳತೆ ಸರಿ ಹೋಗುತ್ತದೆ ಅಂದುಕೊಂಡಿರುವೆ. ಅಮ್ಮ ಆರು ಜೊತೆ ಅಮೆರಿಕನ್ ಟಿ-ಶರ್ಟುಗಳನ್ನು ಹಾಕಿಕೊಂಡಿದ್ದಾಳೆ. ಅದರಲ್ಲಿ xxl ಸೈಜಿನದ್ದು ಮೋಹನನಿಗೆ. ಉಳಿದದ್ದು ತಂಗಿಯ ಮಕ್ಕಳಿಗೆ. ಅದನ್ನೆಲ್ಲ ನೀವು ನೀವೆ ಸರಿಯಾಗಿ ಹಂಚಿಕೊಂಡು ಬಿಡಿ.
ಅಮ್ಮ ತೊಟ್ಟುಕೊಂಡಿರುವ ಎರಡು ಹೊಸ ಜೀನ್ಸ್ ಅನ್ನು ಗಂಡು ಹುಡುಗರಿಗೆ ಕೊಡಿ. ರೀಮ ಕೇಳುತ್ತಿದ್ದ ಸ್ವಿಸ್ ವಾಚು ಅಮ್ಮನ ಎಡದ ಕೈಯಲ್ಲಿದೆ. ಶಾಂತಾ ಆಂಟಿ.. ನೀವು ಯಾವಾಗಲೂ ಕೇಳುತ್ತಿದ್ದ ಓಲೆ, ಸರ, ಬಳೆಗಳನ್ನು ಅಮ್ಮ ತೊಟ್ಟುಕೊಂಡಿದ್ದಾಳೆ. ಅವನ್ನೆಲ್ಲ ನೀವು ತೊಗೋಳಿ. ಅಮ್ಮ ಧರಿಸಿರುವ ಆರು ಜೊತೆ ಬಿಳಿ ಕಾಲುಚೀಲಗಳು ಟೀನ್‌ಏಜ್ ಹುಡುಗರಿಗೇಂತ ಇಟ್ಟಿದೀನಿ.
ಈ ಪದಾರ್ಥಗಳನ್ನೆಲ್ಲ ಸರಿಯಾಗಿ ವಿತರಣೆ ಮಾಡಿಕೊಳ್ಳಿ. ಇನ್ನೇನಾದರೂ ಬೇಕಿದ್ದರೆ ನನಗೆ ಬರೆದು ತಿಳಿಸಿರಿ. ಅಪ್ಪನಿಗೂ ಈಚೆಗೆ ಆರೋಗ್ಯ ಅಷ್ಟು ಚೆನ್ನಾಗಿಲ್ಲ.
ಇಂತಿ ನಿಮ್ಮ ,
.. .. ..
(ಇಮೇಲ್ ಸರಪಳಿಯಲ್ಲಿ ಗಿರಕಿ ಹೊಡೆಯುತ್ತಾ ನನ್ನವರೆವಿಗೂ ಬಂದ ಒಂದು ಇಂಗ್ಲಿಷ್ ಬರಹದ ಅನುವಾದ)
ಪೂರಕ ಓದಿಗೆ
|













Click it and Unblock the Notifications