ಬಿಎನ್ನೆಸ್ಸೆಲ್ ಬ್ರಾಂಡ್ ರಾಯಭಾರಿಯಾಗಿ ಬಂಗಾರ್!

Subscribe to Oneindia Kannada
Mobile politician S. Bangarappa
ಬೆಂಗಳೂರು, ಮಾ.20: ಬಿಜೆಪಿ, ಸಮಾಜವಾದಿ ಪಕ್ಷ ಹೀಗೆ ಹಲವಾರು ಪಕ್ಷಗಳನ್ನು ಸುತ್ತಿ ಕಾಂಗ್ರೆಸ್‌ಗೆ ಮರಳಿ ಬಂದಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅದೃಷ್ಟ ಖುಲಾಯಿಸಿದೆ. ರಾಷ್ಟ್ರದ ಅತಿದೊಡ್ಡ ಮೊಬೈಲ್ ಫೋನ್ ಸಂಪರ್ಕ ಸಂಸ್ಥೆಯಾದ ಬಿ.ಎನ್.ಎಸ್.ಎಲ್. ಬಂಗಾರಪ್ಪನವರನ್ನು ತನ್ನ ಬ್ರಾಂಡ್ ರಾಯಭಾರಿಯನ್ನಾಗಿ ನೇಮಕ ಮಾಡಿದೆ.

ಈ ಕುರಿತು ನಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಬಿ.ಎನ್.ಎಸ್.ಎಲ್. ಮುಖ್ಯಸ್ತ ತಿರುತ್ತಣಿ ಅಗರ್‌ವಾಲ್, "ಪ್ರಸಕ್ತ ರಾಜಕೀಯ ರಂಗದಲ್ಲಿ ಬಂಗಾರಪ್ಪನವರು ತಿರುಗಾಡುವಷ್ಟು ಇನ್ನಾವ ರಾಜಕಾರಣಿಗಳೂ ತಿರುಗಾಡುತ್ತಿಲ್ಲ. ಅವರು ಇಂದು ಇದ್ದಲ್ಲಿ ನಾಳೆ ಇರುವುದಿಲ್ಲ. ಹೇಳೀಕೇಳಿ ನಮ್ಮದು ಮೊಬೈಲ್ ಸಂಪರ್ಕ ಸಂಸ್ಥೆ. ಹೀಗಾಗಿ ನಮ್ಮ ಹೊಸ "ಪೀಪಲ್ ಆನ್ ದಿ ಮೂವ್" ಅಡ್ವರ್ಟೈಸಿಂಗ್ ಕ್ಯಾಂಪೇನ್‌ಗೆ ಬಂಗಾರಪ್ಪನವರಿಗಿಂತ ಸೂಕ್ತ ವ್ಯಕ್ತಿ ಇನ್ನಿಲ್ಲ ಎನ್ನಿಸಿತು" ಎಂದರು.

ಸಮಾರಂಭದಲ್ಲಿ ಹಾಜರಿದ್ದ ಬಂಗಾರಪ್ಪ, "ಇದು ವೈಯುಕ್ತಿಕವಾಗಿ ನನಗೆ ಮಾತ್ರ ಸಂದ ಗೌರವವಲ್ಲ. ನನ್ನಂತೆಯೇ ಇನ್ನೂ ಹಲವಾರು ರಾಜಕಾರಣಿಗಳು ಸಹ ನಿಂತ ನೀರಾಗದೆ ಸದಾ ಸುತ್ತುತ್ತಲೇ ಇರುತ್ತಾರೆ. ನಾನು ಅಂತಹವರೆಲ್ಲರ ಸಂಕೇತ ಮಾತ್ರ" ಎಂದರು.

(ಮಜಾವಾಣಿ ಬ್ಯುಸಿನೆಸ್ ಡೆಸ್ಕ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...