ಸೋನಿಯ ಭೇಟಿ; ಕಾಂಗ್ರೆಸ್ ಗೆ ಬಂ ಸೇರ್ಪಡೆ

Subscribe to Oneindia Kannada

ನವದೆಹಲಿ, ಮಾ.14: ಸಮಾಜವಾದಿ ಪಕ್ಷವನ್ನು ತೊರೆದಿರುವ ಎಸ್ ಬಂಗಾರಪ್ಪ ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಶನಿವಾರ ಬೆಳಗ್ಗೆಯಿಂದಲೇ ನವದೆಹಲಿಯ ಸೋನಿಯಾಗಾಂಧಿ ಅವರ ನಿವಾಸದ ಮುಂದೆ ಅವರನ್ನು ಭೇಟಿ ಮಾಡಲು ಸುದೀರ್ಘ ಸಮಯ ಕಾದದ್ದು ಸಾರ್ಥವಾಯಿತು. ಸೋನಿಯಾಗಾಂಧಿ ಅವರೊಂದಿಗಿನ ಮಾತುಕತೆ ಯಶಸ್ವಿಯಾಗಿದ್ದು ಕಾಂಗ್ರೆಸ್ ಬಾಗಿಲನ್ನು ತೆರೆದು ಬಂಗಾರಪ್ಪ ಅವರನ್ನು ಆಹ್ವಾನಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಂಗಾರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ನನಗೆ ಜನ ಬೆಂಬಲವಿದೆ. ಬಿಜೆಪಿಗೆ ಹಣಬಲವಿದೆ ಎಂದು ಹೇಳಿ ತಾವು ಗೆದ್ದೇ ಗೆಲ್ಲುತ್ತೇವೆ ಎಂಬವಿಶ್ವಾಸದಲ್ಲಿ ಬಂಗಾರಪ್ಪ ಇದ್ದಾರೆ. ಶನಿವಾರ ಸಂಜೆ 4 ಗಂಟೆಗೆ ಸಮಾರಂಭವನ್ನು ಬಂಗಾರಪ್ಪ ಏರ್ಪಡಿಸಿದ್ದಾರೆ.

ಒಟ್ಟಿನಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಮತ್ತು ಬಂಗಾರಪ್ಪ ನಡುವಿನ ಸ್ಪರ್ಧೆಗೆ ವೇದಿಕೆಯಾಗಲಿದೆ. ಒಂದೆಡೆ ರಾಜಕೀಯದ ಏಳು ಬೀಳುಗಳನ್ನು ಕಣ್ಣಾರೆ ಕಂಡ ಮುತ್ಸದ್ಧಿ ಮತ್ತೊಂದೆಡೆ ಯುವಕ ನಡುವೆ ಸ್ಪರ್ಧೆ ನಡೆಯಲಿದ್ದು ತೀವ್ರ ಕುತೂಹಲಕ್ಕ್ಕೆ ಕಾರಣವಾಗಿದೆ. ಬಹುಶಃ ಬಂಗಾರಪ್ಪನವರ ಕೊನೆಯ ಇನ್ನಿಂಗ್ಸ್ ಇದಾಗಲಿದೆ.

(ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...