ಗಜ ಬದುಕಿನ ರೋಚಕ ಸಂಗತಿಗಳ ಇಷ್ಟಿಷ್ಟೇ ವಿವರಗಳು...

By: ಗಗನ್ ಪ್ರೀತ್
Subscribe to Oneindia Kannada

ಈ ಲೇಖನ ನೀವು ಓದುವ ಹೊತ್ತಿಗೆ ಕಾಡಾನೆ ಸಿದ್ದನ ಸಾವಿನ ಸುದ್ದಿ ಕೇಳಿರುತ್ತೀರಿ. ಸಿದ್ದನ ಸಾವಿನ ಸುದ್ದಿಯನ್ನು ಶುಕ್ರವಾರ ಬೆಳಗ್ಗೆ ಕೇಳಿದಾಗಿನಿಂದ ಮನಸ್ಸಿನಲ್ಲಿ ಅದೇ ಅವ್ವೇರಹಳ್ಳಿಯ ಚಿತ್ರಗಳು ಸುಳಿಯತೊಡಗಿವೆ. ನಾನೇ ಆ ಜಾಗಕ್ಕೆ ಹೋಗಿ, ಚಿಕಿತ್ಸೆ ನೀಡುತ್ತಿದ್ದವರನ್ನು ಮಾತನಾಡಿಸಿ, ಒನ್ಇಂಡಿಯಾ ಕನ್ನಡಕ್ಕೆ ಒಂದು ವರದಿ ಕೂಡ ಮಾಡಿದ್ದೆ.

ಕಾಲು ಮುರಿದ ಯಾವುದೇ ಪ್ರಾಣಿಗೆ ಸಾವು ಸನಿಹವಾದಂತೆ ಎಂಬುದು ಬಹಳ ಸತ್ಯವಾದ ಮಾತು. ಆದರೆ ಸಿದ್ದನನ್ನು ಉಳಿಸಿಕೊಳ್ಳಲು ನಡೆದ ಪ್ರಯತ್ನ ಪ್ರಾಮಾಣಿಕವಾಗಿತ್ತು. ಚೇತರಿಕೆ ಕಾಣುತ್ತಿದೆ ಎಂಬ ಸುದ್ದಿ ಬಂದ ಹಾಗೆ ಒಮ್ಮೆ ನೋಡಿ ಬರಬೇಕು ಅಂದುಕೊಂಡವನಿಗೆ ಮತ್ತೆ ಅಲ್ಲಿಗೆ ಹೋಗೋದಿಕ್ಕೆ ಆಗಲಿಲ್ಲ. ಈಗ ಸಾವಿನ ಸುದ್ದಿ ಬಂದಿದೆ; ನನ್ನ ಬಗ್ಗೆ ನನಗೇ ಈಗ ಬೇಸರವಾಗುತ್ತಿದೆ.

ನಿಮಗೆ ಆನೆಯ ಬಗ್ಗೆ ವಿವರಗಳನ್ನು ಹೇಳ್ತೀನಿ ಅಂದಿದ್ದೆ. ಅದನ್ನೇ ಇಂದು ನಿಮ್ಮೆದುರು ಇಡ್ತಿದೀನಿ; ಆ ಕರಿಮುಖನನ್ನು ಸ್ಮರಿಸುತ್ತಾ. ಹೌದಲ್ವಾ, ಆನೆ ಅಂದರೆ ನಮಗೆ ಗಣಪ. ಎಲ್ಲ ನಿರ್ವಿಘ್ನವನ್ನು ತೊಡೆದು ಹಾಕುವ ಆದಿ ಪೂಜಿತ. ಆನೆ ಕೂಡ ತುಮ್ಬ ಬುದ್ಧಿವಂತ ಪ್ರಾಣಿ. ಮನುಷ್ಯ ತನ್ನ ಜೀವನವನ್ನು ಆನೆ ಜೊತೆಗೆ, ಅದಕ್ಕೆ ತೊಂದರೆ ಅಗದ ರೀತಿ ಬದುಕೋದು ಹೇಗೆ ಎಂದು ತಿಳಿದುಕೊಂಡಿದ್ದಾನೆ. ಅವುಗಳನ್ನು ಪಳಗಿಸಿ ತನ್ನಿಂದ ಸಾಧ್ಯವಾಗದ ಅಗಾಧ ಕೆಲಸಗಳನ್ನು ಮಾಡಿಸುವುದೇ ಆನೆಗಳಿಂದ.

ಗಜ ಗರ್ಭ

ಗಜ ಗರ್ಭ

ನಾಲ್ಕರಿಂದ ಐದು ವರ್ಷಗಳಿಗೆ ಒಮ್ಮೆ ಆನೆ ಮರಿ ಹಾಕುತ್ತದೆ. ಗಜ ಗರ್ಭ ಎಂದು ಕೇಳಿರ್ತೀರಿ. ಆನೆಯ ಗರ್ಭಾವಸ್ಥೆ ಅವಧಿ 22 ತಿಂಗಳು. ಅವುಗಳ ಬೆಳವಣಿಗೆ ಪೂರ್ಣ ಪ್ರಮಾಣದಲ್ಲಿ ಅಗಲು 17 ವರ್ಷವಾಗುತ್ತದೆ. ಅಂದಹಾಗೆ ಗಂಡಾನೆಗಳಿಗೆ ಮಾತ್ರ ದಂತವಿರುತ್ತದೆ.

ಹೆಣ್ಣಾನೆಯೇ ಚೀಫ್

ಹೆಣ್ಣಾನೆಯೇ ಚೀಫ್

ಹೆಣ್ಣಾನೆಗಳು ಗುಂಪಿನಲ್ಲಿದ್ದರೆ, ಗಂಡಾನೆಗಳು ಒಂಟಿಯಾಗಿರುತ್ತವೆ. ಹಿರಿಯ ಹೆಣ್ಣಾನೆಯೊಂದು ಗುಂಪಿನ ಮುಖಂಡತ್ವ ವಹಿಸಿರುತ್ತದೆ. ಆ ಗುಂಪಿನ ಹಿರಿಯ ಆನೆಗಳು ಹಿಂದೆ ತೋರಿಸಿದ ದಾರಿಯಲ್ಲೇ ಅವು ಮೇವು-ನೀರಿಗಾಗಿ ಹುಡುಕುತ್ತಾ ಸಾಗುತ್ತವೆ. ಅಂತಹ ದಾರಿಯನ್ನೇ ಆನೆ ಪಥ ಅಥವಾ ಎಲಿಫೆಂಟ್ ಕಾರಿಡಾರ್ ಅನ್ನೋದು.

ಸೊಂಡಿಲ ವಿಶೇಷ

ಸೊಂಡಿಲ ವಿಶೇಷ

ಆನೆಯ ವಿಶೇಷವೇ ಅದರ ಸೊಂಡಿಲು. ಹೆಚ್ಚಿನ ಚಟುವಟಿಕೆಗಳು ಸೊಂಡಿಲ ಮೂಲಕವೇ ಮಾಡುತ್ತವೆ. ಚಿಕ್ಕದೊಂದು ಗರಿಯನ್ನು ನಾಜೂಕಾಗಿ ಕೀಳುವುದಿರಲಿ, ದೊಡ್ಡದೊಂದು ಮರವನ್ನು ನೆಲಕ್ಕೆ ಉರುಳಿಸುವುದಿರಲಿ ಅದನ್ನು ಸೊಂಡಿಲ ಮೂಲಕವೇ ಮಾಡುತ್ತವೆ.

ನೆನಪು, ವಾಸನಾ ಗ್ರಹಣ ಶಕ್ತಿ ಅದ್ಭುತ

ನೆನಪು, ವಾಸನಾ ಗ್ರಹಣ ಶಕ್ತಿ ಅದ್ಭುತ

ಇನ್ನು ಆನೆಗಳ ವಾಸನಾ ಗ್ರಹಣ ಶಕ್ತಿ ಅದ್ಭುತ. ಹನ್ನೆರಡು ಮೈಲು ದೂರವಿರುವ ನೀರಿನ ಪ್ರದೇಶವಾದರೂ ವಾಸನೆ ಮೂಲಕವೇ ಗ್ರಹಿಸುತ್ತವೆ. ಅದೇ ರೀತಿ ಅವುಗಳ ಸ್ಮರಣ ಶಕ್ತಿಯೂ ಅಮೋಘ. ಆ ಕಾರಣಕ್ಕೆ ಇಂಗ್ಲಿಷ್ ನಲ್ಲಿ ಎಲೆಫೆಂಟ್ ಮೆಮೊರಿ ಎಂಬ ಮಾತೇ ರೂಢಿಯಲ್ಲಿದೆ.

ಶಬ್ದ ಹೊರಡಿಸುವುದರಲ್ಲೂ ಸೂಕ್ಷ್ಮ

ಶಬ್ದ ಹೊರಡಿಸುವುದರಲ್ಲೂ ಸೂಕ್ಷ್ಮ

ಗಾಳಿಯ ಮೂಲಕ ಶಬ್ದ ಹೊರಡಿಸುವುದರಲ್ಲೂ ಅಂಥ ಶಬ್ದವನ್ನು ಗ್ರಹಿಸುವುದರಲ್ಲೂ ಆನೆ ಬಹಳ ವಿಶಿಷ್ಟ ಪ್ರಾಣಿ. ಎಷ್ಟೋ ದೂರದಲ್ಲಿನ ಶಬ್ದವನ್ನೂ ಚೆನ್ನಾಗಿ ಗ್ರಹಿಸಿ, ಉತ್ತರ ಕೂಡ ನೀಡುತ್ತದೆ.

ದಿನಕ್ಕೆ 150 ಕೆ.ಜಿ. ಆಹಾರ

ದಿನಕ್ಕೆ 150 ಕೆ.ಜಿ. ಆಹಾರ

ಪಳಗಿದ ಆನೆ ಎಷ್ಟು ಸೌಮ್ಯವೋ ಕಾಡಾನೆ ಅಷ್ಟೇ ಅಪಾಯಕಾರಿ. ದೊಡ್ಡ ಆನೆಯೊಂದು ದಿನಕ್ಕೆ 150 ಕೆ.ಜಿ. ಆಹಾರ ಸೇವಿಸುತ್ತದೆ. ದಿನದಲ್ಲಿ ಒಮ್ಮೆಯಾದರೂ ನೀರು ಕುಡಿಯುತ್ತದೆ. ಹಾಗಾಗಿ ನೀರಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತವೆ.

ಆನೆಗಳಲ್ಲಿ ಮೂರು ವಿಧ

ಆನೆಗಳಲ್ಲಿ ಮೂರು ವಿಧ

ಏಷ್ಯಾಟಿಕ್ ಆನೆಗಳಲ್ಲಿ 3 ವಿಧ. ಇಂಡಿಯನ್, ಸುಮಾತ್ರನ್ ಹಾಗೂ ಶ್ರೀಲಂಕನ್ ಜಾತಿಯವು. ಸುಮಾತ್ರನ್ ಆನೆಯ ಗಾತ್ರ ಚಿಕ್ಕದು. ಆದರೆ ಇಂಡಿಯನ್ ಆನೆಗಳ ಸಂತತಿ ಹೆಚ್ಚು. ಇನ್ನು ಶ್ರೀಲಂಕನ್ ಆನೆಗಳು ಗಾತ್ರದಲ್ಲಿ ಈ ಎರಡಕ್ಕಿಂತ ದೊಡ್ಡವು ಹಾಗೂ ಅತಿ ಕಪ್ಪು.

ಆನೆಗೆ ಮದ ಏಕೆ ಬರುತ್ತದೆ?

ಆನೆಗೆ ಮದ ಏಕೆ ಬರುತ್ತದೆ?

ಆನೆಗಳು ಮನುಷ್ಯರ ರೀತಿ ಬೆವರುವುದಿಲ್ಲ. ಅವುಗಳ ಕಾಲುಗಳ ಉಗುರಿನ ಬಳಿ ಮಾತ್ರ ಕೊಂಚ ಬೆವರುತ್ತವೆ. ಅವುಗಳ ಹಣೆಯ ಬಳಿ ವಿಶೇಷವಾದ ಗ್ರಂಥಿಗಳಿರುತ್ತವೆ. ಅವುಗಳನ್ನು ಟೆಂಪರಲ್ ಗ್ಲಾಂಡ್ಸ್ ಎಂದು ಕರೆಯುತ್ತಾರೆ. ಈ ಗ್ರಂಥಿಯ ಮೂಲಕ ದ್ರವ ಹೊರಬರುತ್ತದೆ. ಗಂಡಾನೆಗೆ ಹಾರ್ಮೋನಲ್ ಪ್ರಮಾಣ ಜಾಸ್ತಿಯಾದಾಗ ಈ ಗ್ರಂಥಿಯಿಂದ ಹೆಚ್ಚು ದ್ರವ ಹೊರಬರುತ್ತದೆ.

ಮಾವುತರೂ ಸುಳಿಯುವುದಿಲ್ಲ

ಮಾವುತರೂ ಸುಳಿಯುವುದಿಲ್ಲ

ಆ ದ್ರವದಿಂದ ತುಂಬಾ ಕೆಟ್ಟದಾದ ವಾಸನೆ ಬರುತ್ತದೆ. ಇದನ್ನು ಮದ ಅಥವಾ ಮಸ್ತ್ ಎಂದು ಕರೆಯುತ್ತಾರೆ. ಈ ದ್ರವವನ್ನು ಅವು ಮರಕ್ಕೆ ಉಜ್ಜಿ ಗುರುತು ಮಾಡುತ್ತವೆ. ಅಂಥ ವೇಲೆ ಅವು ತುಂಬಾ ಅಪಾಯಕಾರಿ. ಆಗ ರಂಪಾಟ ಮಾಡುತ್ತವೆ. ಅಂಥ ಸನ್ನಿವೇಶದಲ್ಲಿ ಸಾಕಿರುವ ಆನೆಯೇ ಆದರೂ ಅವುಗಳ ಬಳಿ ಮಾವುತರು ಸುಳಿಯುವುದಿಲ್ಲ.

ಮಾನವ ಹಸ್ತಕ್ಷೇಪ

ಮಾನವ ಹಸ್ತಕ್ಷೇಪ

ಆನೆ ಪಥದಲ್ಲಿ ಮನುಷ್ಯನ ಪ್ರವೇಶ ಜಾಸ್ತಿಯಾಗುತ್ತಿದೆ. ಕಾಡು ನಾಶವಾಗುತ್ತಿದೆ. ಆನೆಗಳು ತಮ್ಮ ಜಾಗವನ್ನು ಕಳೆದುಕೊಂಡು, ಜನವಸತಿ ಪ್ರದೇಶಗಳೆಡೆಗೆ ಮೇವು ಅರಸಿ ಬರುತ್ತಿವೆ. ಅವುಗಳ ಸಂರಕ್ಷಣೆಗಾಗಿಯೇ 'ಪ್ರಾಜೆಕ್ಟ್ ಎಲಿಫೆಂಟ್' ಪ್ರಾರಂಭವಾಗಿದ್ದರೂ ದಂತಕ್ಕೋಸ್ಕರ ಆನೆಗಳನ್ನು ಕೊಲ್ಲಲಾಗುತ್ತಿದೆ. ಆನೆಗಳನ್ನು ಉಳಿಸಿಕೊಳ್ಳುವ ಅಗತ್ಯ, ಅವುಗಳ ಪಥದಲ್ಲಿ ಮನುಷ್ಯ ಹಸ್ತಕ್ಷೇಪ ಇರಬಾರದು ಎಂಬ ಅರಿವು ಮೂಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gagan Preeth is our new columnist. This week he writes about Elephant memory, life style and other interesting facts.
Please Wait while comments are loading...