• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ಫಿಟ್ನೆಸ್ ಬಗ್ಗೆ ತಿಳಿಯಿರಿ; ಶಾರ್ಟ್ ಕಟ್ ಬೇಡ; ಲೈಫ್ ರಿಸ್ಕ್ ದೂರವಿಡಿ"

|

ಹೊಸ ಶತಮಾನದಲ್ಲಿ physical fitness, wellbeing, safe food ಇವೇ ಮುಂತಾದ ಆರೋಗ್ಯದಾಯಕ ಜೀವನ ಶೈಲಿಯ ಬಗ್ಗೆ ಬಹಳಷ್ಟು ಮಂದಿ (ಅದಕ್ಕೆ ಸಮಯ ಮತ್ತು ಅನುಕೂಲವಿದ್ದವರು) ಕಾಳಜಿವಹಿಸುವುದನ್ನು ಕಾಣುತ್ತೇವೆ. ಯಾವುದೇ ಮೈದಾನ ಪಾರ್ಕುಗಳು, ಜಿಮ್ ಗಳು, ಯೋಗ ಸೆಂಟರ್ ಗಳಿಗೆ ಹೋಗಿ ನೋಡಿದರೆ ಹರೆಯದ ಹುಡುಗ ಹುಡುಗಿಯರಿಂದ ಹಿಡಿದು, ದಿನಗಳನ್ನು ಎಣಿಸುವ ಮುದುಕರವರೆಗೆ ಎಲ್ಲ ವಯೋಮಾನದವರನ್ನು ಕಾಣಬಹುದು. ಅವರಲ್ಲಿ ಬಹುತೇಕರು ಥೆರಪಿ ಎಂದೋ, ವೈದ್ಯರ ಸಲಹೆಯ ಮೇರೆಗೋ ನಡಿಗೆ - ವ್ಯಾಯಾಮಗಳಲ್ಲಿ ತೊಡಗಿದವರಿರುತ್ತಾರೆ. ಇನ್ನು ಕೆಲವರು physical fitness ಗಾಗಿ ಇಂತಹ ಆರೋಗ್ಯದಾಯಕ ಚಟುವಟಿಕೆಗಳಲ್ಲಿ ತೊಡಗಿದವರಿರುತ್ತಾರೆ. ಅವರಲ್ಲಿ ಬಹುತೇಕರು ಯುವಕ ಯುವತಿಯರು.

   ಬೆಳ್ಳಂಬೆಳಿಗ್ಗೆ ಚಿರು ಸಮಾಧಿ ಬಳಿ ಬಂದ ಧ್ರುವ ಸರ್ಜಾ | Oneindia Kannada

   90 ರ ದಶಕದಿಂದೀಚೆಗೆ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಗಳು ಬೆಳೆಯತೊಡಗಿದವು. ಅದೊಂದು ಉದ್ಯಮವೆಂದೇ ಹೇಳಬೇಕು. ಯುವಕರು ದೇಹವನ್ನು ನಮಗೆ ಹೇಗೆ ಬೇಕೋ ಹಾಗೆ ಬೆಳೆಸಿಕೊಳ್ಳಲು, ಸದೃಢವಾಗಿ ಕಾಣಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಆತುರದಿಂದ short cut ಹಿಡಿಯುವವರ ಸಂಖ್ಯೆಯೇ ಹೆಚ್ಚು. ಅದು ಎಷ್ಟರ ಮಟ್ಟಿಗೆ ಸರಿ ಅಥವಾ ತಪ್ಪು ಎಂಬುದರ ಬಗ್ಗೆ ಕಲ್ಪನೆಯೇ ಈ ಹುಡುಗರಿಗೆ ಇರುವುದಿಲ್ಲ. ಆ ಬಗ್ಗೆ ಕರ್ನಾಟಕದ ಜಿಮ್ pioneer ಎ.ವಿ. ರವಿ ಅವರನ್ನು ಒನ್ ಇಂಡಿಯಾ ಮಾತನಾಡಿಸಿದಾಗ ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

   ಎ.ವಿ. ರವಿ ಮಾತುಗಳು...

   ಎ.ವಿ. ರವಿ ಮಾತುಗಳು...

   1988. ನಾನು ಫ್ರಾನ್ಸ್ ದೇಶಕ್ಕೆ ಹೋಗಿದ್ದೆ. ಅಲ್ಲಿ ‘ಮಲ್ಟಿ ಜಿಮ್'ವೊಂದಿತ್ತು. ಅಲ್ಲಿನ ಉಪಕರಣಗಳು ನನಗೆ ಹೊಸದಾಗಿ ಕಂಡವು. ನಾವು ವೆಲ್ಡಿಂಗ್ ಶಾಪ್ ನಲ್ಲಿ ತೂಕದ ರಿಂಗು, ರಾಡು ಮಾಡಿಸಿಕೊಳ್ಳುತ್ತಿದ್ದವರು. ನಮಗೆ ಅದೊಂದು ಹೊಸ ಲೋಕ ನೋಡಿದ ಅನುಭವ. ಮಲ್ಟಿ ಜಿಮ್ ಉಪಕರಣಗಳ ಸ್ಕೆಚ್ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಅದೇ ರೀತಿ ಮಾಡುವ ಆಸೆ ಹೊತ್ತು ಓಡಾಡಿದೆ. ಮನೆಯಲ್ಲಿ ಹೇಳಿದರೆ ಏನೋ ? ಎಂತೋ ಎಂದು ಯೋಚಿಸಿ ಯಾರಿಗೂ ತಿಳಿಯದ ಹಾಗೆ ನಮ್ಮ ಮನೆಯ ಪತ್ರಗಳನ್ನು ತೆಗೆದುಕೊಂಡೋಗಿ ಬ್ಯಾಂಕಿಗೆ ಅಡವಿಟ್ಟು ಐದು ಲಕ್ಷ ರೂಪಾಯಿ ಸಾಲ ಪಡೆದು ಜಿಮ್ ಆರಂಭಿಸಿದೆ. ಪ್ರಾಯಶಃ ಅದು ಕರ್ನಾಟಕದ ಮಟ್ಟಿಗೆ ಮೊದಲ ಜಿಮ್.

   ರಾಜ್ಯದಲ್ಲಿವೆ ಸುಮಾರು 10,000 ಜಿಮ್ ಗಳು

   ರಾಜ್ಯದಲ್ಲಿವೆ ಸುಮಾರು 10,000 ಜಿಮ್ ಗಳು

   1992-93ರ ಹೊತ್ತಿಗೆ ಜಿಮ್, ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್ ಬಗ್ಗೆ ಬಹಳ ದೊಡ್ಡ ಪ್ರಚಾರ ಶುರುವಾಯಿತು. ರಾಜ್ಯದ ಎಲ್ಲೆಡೆ ಜಿಮ್ ಗಳು ಪ್ರಾರಂಭವಾದವು. ಇದೀಗ ರಾಜ್ಯದಲ್ಲಿ ಸುಮಾರು 10,000 ಜಿಮ್ ಗಳಿವೆ. ಐವತ್ತು ಲಕ್ಷದಿಂದ ಐದಾರು ಕೋಟಿ ರುಪಾಯಿವರೆಗೆ ಬಂಡವಾಳ ಹೂಡಿದ್ದಾರೆ. ಇದೊಂದು ಬ್ಯುಸಿನೆಸ್ ಕೂಡ ಆಗಿದೆ. ವ್ಯಾಯಾಮದ ಜೊತೆಗೆ ವಿಟಮಿನ್ ಮಾತ್ರೆ, ಪೌಡರ್ ಗಳ ಮಾರಾಟ ಕೂಡ ಸಾಂಗವಾಗಿ ನಡೆಯುತ್ತಿದೆ. ಜಿಮ್ ಕೋಚ್ ಗಳು ಮಾತ್ರೆ ಮಾರುವ ಮಾರ್ಕೆಟಿಂಗ್ ಮ್ಯಾನೇಜರ್ ಗಳಾಗಿಯೂ, ಡಯೆಟೀಷಿಯನ್ ಗಳಾಗಿಯೂ ಕೆಲಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

   ಆಫರಿಂಗ್ ‘ಜಿಮ್ ಬಾಡಿ’...

   ಆಫರಿಂಗ್ ‘ಜಿಮ್ ಬಾಡಿ’...

   "ಆರು ತಿಂಗಳಲ್ಲಿ ಬಾಡಿ ಬರುತ್ತದೆ, ಮೂರು ತಿಂಗಳಲ್ಲಿ ಬಾಡಿ ಬರುತ್ತದೆ" ವ್ಯಾಯಾಮದ ಜೊತೆ ಪ್ರೋಟೀನ್, ಇಂಜೆಕ್ಷನ್, ಮಾತ್ರೆ ತಗೋಬೇಕು ಅಂತಾ ಪ್ರಚಾರ ಶುರು ಆಯ್ತು. ಅದನ್ನು ಜನ ನಂಬಿದರು. ವಾರ್ಷಿಕ ಒಂದು ಲಕ್ಷ ರೂ. ನಿಂದ 3 ಲಕ್ಷದವರೆಗೆ ಫೀಸು. ಜನ ಮರುಳಾದರು." ನನ್ನ ಬಳಿ ಬಂದವರು ಸಾರ್, 6 ತಿಂಗಳಿಗೆ ಬಾಡಿ ಬರಬೇಕು" ಅಂತಾರೆ. ಇಲ್ಲಿ ಸಾಧ್ಯವಿಲ್ಲ ಮುಂದೆ ಹೋಗಿ ಎಂದು ಹೇಳುತ್ತೇನೆ. ಆರು ತಿಂಗಳಲ್ಲಿ ಬರಿಸಿಕೊಳ್ಳೋ ಬಾಡಿ 6 ವರ್ಷದಲ್ಲಿ ಕರಗಿ ಹೋಗುತ್ತೆ. 6 ವರ್ಷದ ಕಸರತ್ತಿನಲ್ಲಿ ಬರೋ ಬಾಡಿ 60 ವರ್ಷ ಇರುತ್ತೆ, ನಿಮ್ಮಿಷ್ಟ ಎಂದು ಹೇಳುವುದನ್ನು ಮರೆಯುವುದಿಲ್ಲ.

   ಜಿಮ್ ಕಾರಣಕ್ಕೆ ಬೇರೆ ಆಹಾರಕ್ಕೆ ಮೊರೆ ಹೋದರೆ ಸಮಸ್ಯೆ ತಪ್ಪಿದ್ದಲ್ಲ

   ಜಿಮ್ ಕಾರಣಕ್ಕೆ ಬೇರೆ ಆಹಾರಕ್ಕೆ ಮೊರೆ ಹೋದರೆ ಸಮಸ್ಯೆ ತಪ್ಪಿದ್ದಲ್ಲ

   ಇನ್ನು ಕೆಲವರು ಬರ್ತಾರೆ. ಸಾರ್, ಸಿಕ್ಸ್ ಪ್ಯಾಕ್ ಬರ್ಬೇಕು. ಅದೇನೋ ಆತುರದಲ್ಲೇ ಬಂದಿರ್ತಾರೆ. ಅಂಥವರಿಗೆ ನಾನು ಹೇಳೋದಿಷ್ಟೆ. ಮೂರ್ನಾಲ್ಕು ವರ್ಷ ಕಷ್ಟ ಪಡಬೇಕು. ನಿಮ್ಮ ಆಹಾರವನ್ನೇ ತಿನ್ನಬೇಕು. ನಿಮ್ಮ ಅಜ್ಜಿ, ತಾತ, ಅಪ್ಪ, ಅಮ್ಮನಿಗಿಂತ ಡಯೆಟೀಷಿಯನ್ ಗಳ್ಯಾರು ಬೇಕು ನಿಮಗೆ?. ಅದು ಬಿಟ್ಟು ಜಿಮ್ ಕಾರಣಕ್ಕೆ ಬೇರೆ ಆಹಾರಕ್ಕೆ ಮೊರೆ ಹೋದರೆ ಸಮಸ್ಯೆ ತಪ್ಪಿದ್ದಲ್ಲ. ನಿತ್ಯ ನೀವು ಮನೆಯಲ್ಲೇ ಊಟ ಮಾಡ್ತಿರೋವ್ರು ಒಮ್ಮೆ ಕೆ.ಎಫ್ ಸಿ ಗೆ ಹೋಗಿ ಪಿಜ್ಜಾ, ಬರ್ಗರ್, ಚಿಕನ್ ತಿಂದು ಬನ್ನಿ, ಬೆಳಿಗ್ಗೆ ನಿಮ್ಮ ದೇಹದ ಬದಲಾವಣೆ ನಿಮಗೇ ಅರಿವಾಗುತ್ತೆ.

   ಹಾಗೆನೇ ಜಿಮ್ ಮಾಡುವಾಗ ಕೂಡಾ ನಿತ್ಯ ಸೇವಿಸುವ ಆಹಾರವನ್ನೇ ಸೇವಿಸಬೇಕು. ಅದೇ ನೈಸರ್ಗಿಕ ಪ್ರಕ್ರಿಯೆ. ಮಂಗಳೂರಿನವನು ಮಂಗಳೂರು ಫುಡ್, ಬಯಲು ಸೀಮೆಯವನು ಇಲ್ಲಿನ ಲೋಕಲ್ ಫುಡ್ (ಅವರವರ ಮನೆಯ ಆಹಾರ) ಉತ್ತರ ಕರ್ನಾಟಕದವನ್ನು ಅಲ್ಲಿನ ರೊಟ್ಟಿ ಇತ್ಯಾದಿ ಸೇವಿಸುವುದು ಸರಿಯಾದ ಕ್ರಮ.

   ನಾನೆಂದಿಗೂ ವಿಟಮಿನ್ ಇಂಜೆಕ್ಷನ್ ಗಳನ್ನು ಸೂಚಿಸಿಲ್ಲ

   ನಾನೆಂದಿಗೂ ವಿಟಮಿನ್ ಇಂಜೆಕ್ಷನ್ ಗಳನ್ನು ಸೂಚಿಸಿಲ್ಲ

   ಕಳೆದ 30 ವರ್ಷಗಳಲ್ಲಿ ಸುಮಾರು 60,000 ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಅದರಲ್ಲಿ ಸೆಲೆಬ್ರಿಟಿಗಳ ಪಟ್ಟಿಯೂ ದೊಡ್ಡದಿದೆ. ರಾಕ್ ಲೈನ್ ವೆಂಕಟೇಶ್, ಜಗ್ಗೇಶ್, ರವಿಚಂದ್ರನ್, ಬಾಲಾಜಿ, ಪವನ್ ಕಲ್ಯಾಣ್, ನಾಗೇಂದ್ರ ಬಾಬು, ವರುಣ್ ತೇಜ್, ಕೋಮಲ್ ಹೀಗೆ ಅನೇಕರು ನಮ್ಮಲ್ಲಿ ತರಬೇತಿ ಪಡೆದವರಿದ್ದಾರೆ. ನನ್ನ ಜಿಮ್ ಗೆ ಬರುವವರಿಗೆ ನಾನು ಕೋಚ್ ಅಷ್ಟೇ. ವೈದ್ಯನಲ್ಲ, ವಿಟಮಿನ್ ಮಾತ್ರೆ, ಪೌಡರ್ ಸೇವಿಸಿ ಎಂದು ಹೇಳುವ ಡಯೆಟೀಷಿಯನ್ ಖಂಡಿತಾ ಅಲ್ಲ.

   ಸಾಮಾನ್ಯ ವ್ಯಕ್ತಿ ಬರಲಿ, ಸೆಲೆಬ್ರಿಟಿಗಳು ಬರಲಿ ನ್ಯಾಚುರಲ್ ಆಗಿ ಬಾಡಿ ಬೆಳೆಸುವ ಕ್ರಮ ಮತ್ತು ಅವರವರ ಮನೆಯ ಆಹಾರವನ್ನೇ ನಾನು ಸೂಚಿಸುವುದು. ನಾನೆಂದಿಗೂ ಪ್ರೋಟೀನ್ ಪೌಡರ್, ವಿಟಮಿನ್ ಇಂಜೆಕ್ಷನ್ ಗಳನ್ನು ಸೂಚಿಸಿಲ್ಲ. ಸೂಚಿಸುವುದೂ ಇಲ್ಲ. ಹಾಗೇನಾದ್ರೂ ಅವರ ದೇಹಕ್ಕೆ ಸಪ್ಲಿಮೆಂಟ್ ಗಳ ಮೂಲಕ ಪ್ರೋಟೀನ್ ವಿಟಮಿನ್ ಬೇಕು ಅಂದ್ರೆ ಅವ್ರು ವೈದ್ಯರನ್ನು ಸಂಪರ್ಕಿಸಬೇಕೆ ಹೊರತು ಜಿಮ್ ಕೋಚ್ ಗಳನ್ನಲ್ಲ.

   ಹೊಟ್ಟೆ ತುಂಬುವಷ್ಟು ತಿನ್ನಬೇಕು

   ಹೊಟ್ಟೆ ತುಂಬುವಷ್ಟು ತಿನ್ನಬೇಕು

   ಇನ್ನು ಕೆಲವರು ಬರ್ತಾರೆ. ಜಿಮ್ ಸೇರಿದ ಕೂಡಲೇ ಸಾರ್ ನಾಳೆಯಿಂದ ನಮ್ಮ ಡಯೆಟ್ ಹೇಗಿರಬೇಕು. ಏನು ತಿನ್ನಬೇಕು ? ಎಂದೆಲ್ಲಾ ಕೇಳ್ತಾರೆ. ಏನು ಹೇಳೋದು ಅವ್ರಿಗೆ? ಸಿಟ್ಟು ಬಂದು ಹಲವು ಸಾರಿ "ಮಣ್ ತಿನ್ನು" ಅಂದಿದ್ದೇನೆ. ಜಿಮ್ ಗೆ ಸೇರಿದ ತಕ್ಷಣ ನಾನು ‘ಅದು' ತಿನ್ನಬೇಕು. ‘ಇದು' ಬೇಕು ಎಂಬೆಲ್ಲಾ ಭ್ರಮೇಲಿರ್ತಾರೆ. ಹೊಟ್ಟೆ ತುಂಬುವಷ್ಟು ತಿನ್ನಬೇಕು. ಅವರವರ ಮನೆಗಳ ಆಹಾರ ಏನಿದೆ ಅದನ್ನೇ ತಿಂದ್ರೆ ಸಾಕು.

   ನಾವು ಬಯಲು ಸೀಮೆಯವರು ಮುದ್ದೆ, ರೊಟ್ಟಿ, ಚಪಾತಿ, ಕಾಳು, ಸೊಪ್ಪು, ತಿಂತೇವೆ. ಉತ್ತರ ಕರ್ನಾಟಕದವನು ಅವರ ಆಹಾರವಾದ ರೊಟ್ಟಿ, ಪಲ್ಯ. ಮಂಗಳೂರಿನಿನವನು ಅವನ ಆಹಾರ ತಿಂದ್ರೆ ಆಯ್ತು. ನಮ್ಮ ಆಹಾರ ಅಲ್ದೆ ಬೇರೆಯ ವರೈಟಿಗಳ ಆಸಕ್ತಿ ಓಕೆ. ಮೂಲವನ್ನೇ ಮರೆತು ನಿತ್ಯ ಮತ್ತೇನೋ ತಿನ್ನೋದ್ರಿಂದ ದೇಹಕ್ಕೆ ಒಳ್ಳೇದೇನೂ ಆಗೋಲ್ಲ

   ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳೋದು ಬೇಡ

   ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳೋದು ಬೇಡ

   ನಮ್ಮ ಜನಕ್ಕೆ ಇನ್ನೊಂದು ದೊಡ್ಡ ಸಮಸ್ಯೆ ಇದೆ. ಹೋಲಿಸಿಕೊಳ್ಳುವುದು. ನಾನು ಯಶ್ ತರ ಆಗ್ಬೇಕು ಅಂತಾ ಒಬ್ಬ. ಅದೆಂಗ್ರಿ ಸಾಧ್ಯ. ಯಶ್ ಗಿಂತ ಭಿನ್ನವಾಗಿ, ಇನ್ನೂ ಚೆನ್ನಾಗಿ ಆಗ್ಬೇಕು ಅಂತಾನಾದ್ರೂ ಅಂದ್ಕೊಂಡ್ರೆ, ಆಗುತ್ತೋ, ಬಿಡುತ್ತೋ. ಆಸೆಯನ್ನಾದರೂ ಒಪ್ಪಿಕೊಳ್ಳಬಹುದು. ಬದಲಿಗೆ ಹಾಗೇ ಆಗಬೇಕು ಅಂದ್ರೆ ಭ್ರಮೆ ಅನ್ನಬೇಕಷ್ಟೇ !.

   ಈಗ ನಾನು ದರ್ಶನ್ ಹೈಟ್ ನೋಡಿ ‘ನಾನೂ ಉದ್ದ ಆಗ್ಬೇಕು ಅಂದ್ಕೊಂಡ್ರೆ ಆಗ್ತದಾ? ನನ್ನ ದೇಹ, ರಕ್ತ, ಜೀನ್ ಬೇರೆ. ಅವರದ್ದೇ ಬೇರೆ. ಅದನ್ನು ಮೊದಲು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು.

   ಜಿಮ್ ಮತ್ತು ಫಿಟ್ನೆಸ್ -ಒಂದು ಕಿವಿ ಮಾತು

   ಜಿಮ್ ಮತ್ತು ಫಿಟ್ನೆಸ್ -ಒಂದು ಕಿವಿ ಮಾತು

   "ನೀವು film star ಇರಲಿ, ಮುಂದೆ ಸ್ಟಾರ್ ಆಗಬೇಕು ಅಂದುಕೊಂಡವರು ಇರಲಿ, ನಿಮ್ಮ ದೇಹ ಚೆನ್ನಾಗಿರಬೇಕು ಅಂದ್ರೆ ಮೊದಲು ನಿಮ್ಮತನ ಉಳಿಸಿಕೊಳ್ಳಿ. ನಿಮ್ಮೂರಿನ ಆಹಾರವನ್ನೇ ಸೇವಿಸಿ. ಲೋಕಲ್ ಫುಡ್, ನಿಮ್ಮ ದೇಸಿ ಫುಡ್ ತಿನ್ನಬೇಕು. ಶಾರ್ಟ್ ಕಟ್ ಬೇಡ. ಕೊಂಚ ತಡವಾದರೂ ನೀವಂದುಕೊಂಡಿದ್ದನ್ನು ಸಾಧಿಸಬಹುದು. ನೈಸರ್ಗಿಕವಾಗಿ ನಿಮ್ಮ ಬಾಡಿ ಟ್ರೈನ್ ಮಾಡ್ಕೋಬೇಕು"

   ಊಟ ಜಾಸ್ತಿ ಮಾಡಿ ಮತ್ತೊಂದು ಸಮಸ್ಯೆ ಸೃಷ್ಟಿ ಬೇಡ

   ಊಟ ಜಾಸ್ತಿ ಮಾಡಿ ಮತ್ತೊಂದು ಸಮಸ್ಯೆ ಸೃಷ್ಟಿ ಬೇಡ

   "ಇನ್ನು ಜಿಮ್ ಸೇರಿದ ತಕ್ಷಣ, ನಾನು ಜಿಮ್ ಗೆ ಹೋಗ್ತಿದ್ದೀನಿ ಅಂತ ಅನೇಕರು ಊಟ ಜಾಸ್ತಿ ಮಾಡೋಕೆ ಶುರು ಮಾಡ್ತಾರೆ. Extraordinary ಫುಡ್ ಬೇಕಿಲ್ಲ. exercise ಕಡಿಮೆ ಮಾಡಿ ಊಟ ಜಾಸ್ತಿ ಮಾಡಿ ಮತ್ತೊಂದು ಸಮಸ್ಯೆ ಸೃಷ್ಟಿ ಮಾಡಿಕೊಳ್ಳೋ ಹಾಗಾಗುತ್ತೆ". ಇದೆಲ್ಲಾ ನನ್ನ ಅನುಭವದಿಂದ ಹೇಳ್ತಿದ್ದೇನೆ. -108 ಚಿನ್ನದ ಪದಕ ಪಡೆದಿದ್ದೇನೆ. 18 ದೇಶಗಳನ್ನು ಸುತ್ತಿ ಬಂದಿದ್ದೇನೆ. ಭಾರತದ ತಂಡದ ಕೋಚ್ ಆಗಿದ್ದೇನೆ. ನ್ಯಾಚುರಲ್ ಆಗಿ ದೇಹ ರೂಪಿಸಿಕೊಳ್ಳಬೇಕೆ ಹೊರತು ಅಡ್ಡ ದಾರಿಗಳಿಂದಲ್ಲ. ಶಾರ್ಟ್ ಕಟ್ ಗಳ ಹಿಂದೆ ಹೋಗಲೇಬಾರದು. ಹಾಗೆ ಹೋದರೆ ಅಪಾಯ ತಪ್ಪಿದ್ದಲ್ಲ.

   English summary
   After 90's, gyms and fitness centres have grown drastically. The desire of looking fit may lead our young generation to go for short cuts. Here is an interview of Actor and Karnataka gym pioneer AV Ravi about fitness, body building and health...
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X