ಹಾಸ್ಯಮಯ ವೆಬಿಸೋಡ್: ಎಕ್ಸಾಂ ನಿಮಿತ್ತಂ ಬಹುಕೃತ ವೇಷಂ

Posted By:
Subscribe to Oneindia Kannada

ನಿಮ್ಮನ್ನ ನಗಿಸೋಕೆ ನಮ್ದುಕೆ ತಂಡ ಮತ್ತೊಂದು ಹಾಸ್ಯಮಯ ವಿಡಿಯೋ ಹೊರ ತಂದಿದೆ. ಶಾಲೆಯ ದಿನಗಳ ಹತ್ತಿರ ಕೊಂಡೊಯ್ಯಲು ಪ್ರಯತ್ನ ಇದಾಗಿದ್ದು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಪ್ರಿಪೇರ್ ಆಗುವುದು ಹೇಗೆ? ಏನೆಲ್ಲ ವೇಷ, ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನೋಡಿ ಸ್ವಾಮಿ ನಾವಿರೋದೇ ಹೀಗೆ-2ರಲ್ಲಿ ನೋಡಿ ಆನಂದಿಸಿ...

ಈಗೆಲ್ಲ ವೆಬಿಸೋಡ್ ಗಳ ಕಾಲ. ಮನೆಯಲ್ಲಿ ಕೂತು ಕಲರ್ಸ್ ವಾಹಿನಿ, ಸುವರ್ಣ, ಕಸ್ತೂರಿ, ಉದಯ, ಜೀ ಟಿವಿಯಲ್ಲಿ ಬರುವ ಸೀರಿಯಲ್ ಗಳನ್ನು ನೋಡುತ್ತಿದ್ದ ಪ್ರೇಕ್ಷಕ ವರ್ಗವನ್ನು ಸೆಳೆಯಲು ಆನ್ ಲೈನ್ ನಲ್ಲಿ ಸರಣಿ ಎಪಿಸೋಡುಗಳ ಧಾರಾವಾಹಿಗಳು ಶುರುವಾಗುತ್ತಿವೆ.

ವೆಬ್ ನಲ್ಲಿ ಪ್ರಸಾರವಾಗುವ ಎಪಿಸೋಡುಗಳನ್ನು ನಿರ್ಮಾಣ ಮಾಡಲು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮುಂದೆ ಬಂದಿದ್ದಾರೆ. ನಟ ಅನೀಶ್ ತೇಜೇಶ್ವರ್ ಅವರು ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಮಿಮಿಕ್ರಿ, ಚಹಾದಂಗಡಿ -ನೋಟ್ ಬ್ಯಾನ್ ಮೂಲಕ ಜನಪ್ರಿಯತೆ ಗಳಿಸಿರುವ ಜಯಂತ್ ಬೆಳ್ಳೂರು ಅವರು ಕೂಡಾ ವೆಬಿಸೋಡು ಆರಂಭಿಸಿದ್ದಾರೆ.

ಈಗ ನಮ್ದುಕೆ ತಂಡದ ಶ್ರವಣ್ ಅವರು ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಹೆಸರಿನಲ್ಲಿ ವೆಬ್ ಸರಣಿ ಆರಂಭಿಸಿದ್ದಾರೆ.


ಇಷ್ಟ ಆದಲ್ಲಿ ಲೈಕ್ ಮಾಡಿ ,ಶೇರ್ ಮಾಡಿ . ಹಾಗೆ ನೋಡಿ ಸ್ವಾಮಿ ಮುಂದಿನ ಎಪಿಸೋಡ್ ಗಳಿಗೆ ಚಂದಾದಾರರಾಗಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
NamduK team is back with second episode of Nodi Swami naavirode heege. Nodi swami is series of webisodes of different type of people perception over one matter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ