'ಸ್ಮಾರ್ಟ್' ಶಾಸಕರಿಗೆ ಬೇಸಿಕ್ ಮಾಡೆಲ್ ಮೊಬೈಲ್!

ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರು ಮೊಬೈಲ್ ಫೋನ್‌ ಬಳಸಿರುವ ಕುರಿತು ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಸರ್ಕಾರ ಎಲ್ಲಾ 224 ಶಾಸಕರಿಗೆ ಸರ್ಕಾರಿ ವೆಚ್ಚದಲ್ಲಿ ಮೊಬೈಲ್ ಫೋನ್‌ ನೀಡಲು ನಿರ್ಧರಿಸಿದೆ. ಈ ಕುರಿತ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಮುಖ್ಯಮಂತ್ರಿಗಳ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ.

ಶಾಸಕರು ಕಲಾಪ ನಡೆಯುವಾಗ ಸ್ಮಾಟ್‌ಪೋನ್‌ನಲ್ಲಿ ನೋಡಬಾರದ್ದು ನೋಡಿ ಸಿಕ್ಕಿಬಿಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರದಿಂದಲೇ ಫೋನ್ ನೀಡಲು ಯೋಜನೆ ರೂಪಿಸಲಾಗಿದೆ. ಇದರಂತೆ ಎಲ್ಲಾ ಶಾಸಕರಿಗೆ ವಿವಿಧ ಕಂಪನಿಗಳ ಬೇಸಿಕ್ ಮಾಡೆಲ್ ಫೋನ್‌ಗಳನ್ನು ವಿತರಣೆ ಮಾಡಲಾಗುತ್ತದೆ.

mobile phones

'ಮೊಬೈಲ್ ಭಾಗ್ಯ' ಎಂದು ಈ ಯೋಜನೆಗೆ ನಾಮಕರಣ ಮಾಡಲಾಗಿದ್ದು, ಕರೆ ಮಾಡಲು, ಸಂದೇಶ ಕಳಿಸಲು ಮಾತ್ರ ಸಾಧ್ಯವಿರುವ ಬೇಸಿಕ್ ಮಾಡೆಲ್ ಫೋನ್‌ಗಳನ್ನು ಯೋಜನೆಯಡಿ ವಿತರಣೆ ಮಾಡಲಾಗುತ್ತದೆ. ಈ ಯೋಜನೆಗೆ ಸಿಎಂ ಒಪ್ಪಿಗೆ ನೀಡಿದರೆ ಹಳೆ ಪೋನ್‌ಗಳನ್ನು ಹುಡುಕಿ ಖರೀದಿ ಮಾಡಲು ಆರಂಭಿಸಲಾಗುತ್ತದೆ. [ಮೊಬೈಲ್ ಬಳಸಿದ ಶಾಸಕರಿಗೆ ನೋಟಿಸ್]

ಬೇಸಿಕ್ ಮಾಡೆಲ್‌ ಫೋನ್‌ಗಳನ್ನು ನೀಡಿದರೆ ಶಾಸಕರು ಕಲಾಪದ ಸಮಯದಲ್ಲಿ ಫೋಟೋ, ವಿಡಿಯೋ ನೋಡುವುದು, ಎಂಎಂಎಎಸ್ ವೀಕ್ಷಣೆಗೆ ಮತ್ತು ಗೇಮ್ ಆಡುವುದಕ್ಕೆ ಬ್ರೇಕ್ ಹಾಕಬಹುದು ಎಂದು ಚಿಂತನೆ ನಡೆಸಿರುವ ಸರ್ಕಾರ, ಎಷ್ಟು ಖರ್ಚಾದರೂ ಮೊಬೈಲ್ ಭಾಗ್ಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.[ಸದನಲ್ಲಿ ಚೌವಾಣ್ ಮಾಡಿದ್ದೇನು?]

ಇಂಟರ್ ನೆಟ್ ಕನೆಕ್ಷನ್ ಇಲ್ಲದ, ಮೊಮೋರಿ ಕಾರ್ಡ್ ಹಾಕಲು ಸಾಧ್ಯವಿಲ್ಲದ ಈ ಫೋನ್‌ಗಳನ್ನು ನೀಡುವುದರಿಂದ ಶಾಸಕರು ಆಟ-ನೋಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಸರ್ಕಾರದ ಆಲೋಚನೆ. ಈ ಫೋನ್‌ಗಳಲ್ಲಿರುವ ಸ್ನೇಕ್, ಕೇರಂ ಮುಂತಾದ ಗೇಮ್‌ಗಳನ್ನು ತೆಗೆದುಹಾಕಲು ಸರ್ಕಾರ ತಜ್ಞರ ಮೊರೆ ಹೋಗಲಿದೆ.

ಬೇಸಿಕ್‌ ಮಾಡೆಲ್‌ನ ಸೆಟ್‌ಗಳನ್ನು ಅಂಗಡಿಗಳಲ್ಲಿ ಕರೆನ್ಸಿ ಹಾಕಲು ಮತ್ತು ಮನೆಗಳಲ್ಲಿ ಉಪಯೋಗಿಸಲಾಗುತ್ತಿದ್ದು, ಇದನ್ನು ಹುಡುಕಿ ಬೆಂಬಲ ಬೆಲೆ ನೀಡಿ ಖರೀದಿಸಲು ಸಮಿತಿಯೊಂದನ್ನು ರಚಿಸಲಾಗುತ್ತದೆ. ಮುಂದಿನ ವಿಧಾನಸಭೆ ಕಲಾಪ ಆರಂಭವಾಗುವ ಮೊದಲು ಶಾಸಕರ ಕೈಗೆ ಹಳೇ ಮೊಬೈಲ್‌ಗಳು ಸೇರಲಿವೆ.

ಸ್ಮಾಟ್‌ಪೋನ್‌ ಮತ್ತು ಟ್ಯಾಬ್ಲೆಟ್ ಯುಗದಲ್ಲಿರುವ ಶಾಸಕರಿಗೆ ಬೇಸಿಕ್‌ ಫೋನ್ ನೀಡುವ ಯೋಜನೆಗೆ ಅವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದ್ದು, ಶಾಸಕರಮನವೊಲಿಸುವ ಕಾರ್ಯವನ್ನು ಆಯಾ ಪಕ್ಷಗಳ ಅಧ್ಯಕ್ಷರಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಮಹತ್ವಾಕಾಂಕ್ಷೆಯ ಮೊಬೈಲ್ ಭಾಗ್ಯ ಯೋಜನೆ ಜಾರಿಗೆ ಬಂದರೆ ಹಳೇ ಮೊಬೈಲ್ ಶಾಸಕರ ಜೇಬು ಸೇರಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ನಿಮ್ಮ ಮೊಬೈಲೂ ಬೇಡ, ನಿಮ್ಮ ಸಚಿವಗಿರಿಯೂ ಬೇಡ, ವಿಧಾನಸೌಧವೂ ಬೇಡ, ಮಣ್ಣಂಗಟ್ಟಿಯೂ ಬೇಡ ಅಂತ ಶಾಸಕರೊಬ್ಬರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. [ಕಾಲ್ಪನಿಕ ಲೇಖನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+