ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!

By: ಚಿತ್ರಾ ಬಡಿಗೇರ
Subscribe to Oneindia Kannada

ಟೊಮೆಟೊ ‌ಅಂತಾ ಕೇಳಿದ್ರೆ ಮೊದ್ಲು ಬಾಯಲ್ಲಿ ನೀರ್ ಇಳಿತಿತ್ತು, ಈಗ ಮುಖದ್ ಮೇಲೆ ಬೆವರು ಇಳಿತಾ ಇದೆ. ಹೆಸರಿಗೆ ಮಾತ್ರ ಹಣ್ಣು ಅಂತ ಕರ್ಸಕೊಳ್ತಿದ್ದ ನಮ್ ಟೊಮೆಟೊ ಗೆ ಈಗ ತರಕಾರಿಯಿಂದ ಹಣ್ಣಿಗೆ ಪ್ರಮೊಶನ್ ಆಗಿದೆ. ರೋಡ್ ನಿಂದ ರಾಯಲ್ ಆದ ನಮ್ಮ ಟೊಮೆಟೊ ರಿಚ್ ನೆಸ್ ಈಗ ಜನಕ್ಕೆ ತಿಳ್ದಿದೆ.

ಹುಡ್ಗೀರ್ ಅಂದ್ರೆ ಕಾಶ್ಮೀರಿ ಆಪಲ್ ತರ ಇರ್ಬೇಕ್ ಅನ್ನೋರು ಈಗ... ಹುಡ್ಗೀರ್ ಅಂದ್ರೆ ಟೊಮೆಟೊ ತರ ಗುಂಡಗುಂಡಗೆ ಇರಬೆಕ್ರೀ ಅನ್ನುವಂತಾಗಿದೆ. ಆ್ಯಪಲ್ ಗೂ ಒಂದು ಕಾಲ ಟೊಮ್ಯಾಟೋಗೂ ಒಂದು ಕಾಲ! ಕಾಲಾಯತಸ್ಮೈನಮಃ!

ಟೊಮ್ಯಾಟೋ ಕಾಯಲು ಭದ್ರತಾ ಸಿಬ್ಬಂದಿ

ನೂರು ರುಪಾಯಿ ರೇಟ್ ಆಗಿ ರೆಡ್ ರೆಡ್ ಇರೊ ನಮ್ ಟೊಮೆಟೊ ಈಗ ಡೇಂಜರ್ ಆಗ್ಬಿಟ್ಟಿದೆ. ನಮ್ಮ ಮಳೆರಾಯಪ್ಪನೂ ಯಾವಾಗ್ ಬೇಕಾದಾಗ ಮಳೆ ಹುಯ್ದು ನಮ್ ಟೊಮೆಟೊ ನಾ ತಲೆ ಮೇಲೆ ಏರ್ಸಿ ಕೂರ್ಸಿದಾನೆ, ಜೊತೆಗೆ ಈ ಜಿಎಸ್ಟಿಯಿಂದ ಟೊಮೆಟೋಗೆ ಮತ್ತಷ್ಟು ಧಿಮಾಕು ಬಂದಿದೆ...

ನೋಡಿದ್ರಾ, ಸಾವಿತ್ರಮ್ನೋರ್ ಮನೇಲಿ ಟೊಮೆಟೋ ಭಾತ್ ಅಂತೆ!

ಹೋಗ್ಲಿ ಬಿಡಿ ಮೇಲೆ ಹೋಗಿದ್ದು ಕೆಳಗೆ ಇಳಿಲೇಬೇಕು.. ಇಳ್ದು ಅಡ್ಗೆ ಮನೆಗೆ ಬರ್ಲೆ ಬೇಕು, ನಮ್ ಕೈಯಲ್ಲಿ ಚಟ್ನಿ ಆಗ್ಲೇ ಬೇಕು... ಅಲ್ಲಿವರ್ಗೂ... ಟೊಮೆಟೊ ರೇಟ್ ಆಗಿದೆ ಜಾಸ್ತಿ, ಮನೇಲಿ ಮಾಡದೆ ಗಂಡ ಹೆಂಡತಿ ಕುಸ್ತಿ, ಟೊಮೆಟೊ ಸೂಪ್ ಕುಡಿಯುತ್ತ ಓದಿ ಈ ಡೈಲಾಗ್ ಮಾಡಿ ಮಸ್ತಿ...

ದಮ್ ಇದ್ರೆ ಟೊಮೆಟೊದಲ್ಲಿ ಹೊಡ್ದು ತೊರ್ಸರೊ

ದಮ್ ಇದ್ರೆ ಟೊಮೆಟೊದಲ್ಲಿ ಹೊಡ್ದು ತೊರ್ಸರೊ

ಮೇಷ್ಟರು ಕೋಲಲ್ಲಿ ಹೊಡಿತಾರೆ
ಜನ ಕಲ್ಲಲ್ಲಿ ಹೊಡಿತಾರೆ
ದಮ್ ಇದ್ರೆ ಟೊಮೆಟೊದಲ್ಲಿ ಹೊಡ್ದು ತೊರ್ಸರೊ

ಕೆಂಪಗಿರೋದೆಲ್ಲಾ ಟೊಮೆಟೊ ಅಲ್ಲಾ...

ಕೆಂಪಗಿರೋದೆಲ್ಲಾ ಟೊಮೆಟೊ ಅಲ್ಲಾ...

ಕೆಂಪಗಿರೋದೆಲ್ಲಾ ಟೊಮೆಟೊ ಅಲ್ಲಾ...
ಸೇಬೂನು ಇರತ್ತೆ

ನೀನು ಒಬ್ಬ ಗಂಡ್ಸಾ?

ನೀನು ಒಬ್ಬ ಗಂಡ್ಸಾ?

ಒಂದು ಕೆಜಿ ಟೊಮೆಟೊ ತರೊ ಯೋಗ್ಯತೆ ಇಲ್ಲಾ ನೀನು ಒಬ್ಬ ಗಂಡ್ಸಾ?

ಟೊಮೆಟೊ ಚಟ್ನಿ ತಿನ್ನೇಬಕಂತ ಆಸೆ

ಟೊಮೆಟೊ ಚಟ್ನಿ ತಿನ್ನೇಬಕಂತ ಆಸೆ

ರೀ ..ರೀ.. ಮತ್ತೆ ಮತ್ತೆ ನಂಗೆ ಮೂರು ತಿಂಗಳು... ಟೊಮೆಟೊ ಚಟ್ನಿ ತಿನ್ಬೇಕಂತಾ ಅನ್ಸತಾ ಇದೆ..

  Tomatoes Price Raised Upto 70/ Per KG In Hubli
  ದೇವರು ಯಾವ ಮೂಡಲ್ಲಿ ಟೊಮೆಟೊ ಸೃಷ್ಟಿಸಿದ?

  ದೇವರು ಯಾವ ಮೂಡಲ್ಲಿ ಟೊಮೆಟೊ ಸೃಷ್ಟಿಸಿದ?

  ದೇವ್ರು ಖುಷಿಯಾಗಿದ್ದಾಗ ಕಾಂಜಿ ಪಿಂಜಿ ತರಕಾರಿ ಸೃಷ್ಟಿ ಮಾಡ್ತಾನೆ... ಕೋಪ್ದಲ್ಲಿದ್ದಾಗ ಮಾತ್ರ ನನ್ನಂತ ಟೊಮೆಟೊ ಸೃಷ್ಟಿ ಮಾಡ್ತಾನೆ!

  ಅಂತ ಅಂಬಿ ಸ್ಟೈಲಲ್ಲಿ

  ಅಂತ ಅಂಬಿ ಸ್ಟೈಲಲ್ಲಿ

  ಕುತ್ತೆ ಟೊಮೆಟೊ ನಹೀ ಲಾಲ್ ಟೊಮೆಟೊ ಬೊಲೋ

  ಮನುಷ್ಯಂಗೆ ಬ್ಯಾಡ್ ಟೈಮ್ ಶುರು ಆದ್ರೆ

  ಮನುಷ್ಯಂಗೆ ಬ್ಯಾಡ್ ಟೈಮ್ ಶುರು ಆದ್ರೆ

  ಮನುಷ್ಯಂಗೆ ಬ್ಯಾಡ್ ಟೈಮ್ ಶುರು ಆದ್ರೆ ಟೊಮೆಟೊ ರೇಟ್ ಜಾಸ್ತಿ ಆಗಿ, ಆ ಟೊಮೆಟೊ ನಾವ್ ಜೇಬಲ್ಲಿ ಇಟ್ಕೊಂಡು, ಆ ಟೊಮೆಟೊ ಜ್ಯಾಮ್ ಆಗಿ, ಅದನ್ನ ಪೋಲಿಸ್ ನೋಡಿ, ಅವ್ರು ಕೊಲೆ ರಕ್ತ ಅಂತ ತಿಳ್ಕೊಂಡು, ಕೊನೆಗೆ ನಮ್ಮನ್ನ ಸೆಲ್ ನಲ್ಲಿ ಹಾಕಿ ಗಲ್ಲಿಗೇರ್ಸೊ ಪರಿಸ್ಥಿತಿ ಬಂದಬಿಡತ್ತೆ ರೀ... ಹುಷಾರು!

  ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

  English summary
  Do you love tomatoes? Read these funny quotes. Tomato rate has sky rocketed due to lack of supply. Tomato bath, soup in hotels have become costly. So what if they are costly, they generate lot of humor. Read on.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ