• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಂದಕರಿರಬೇಕು ಅಂದಿಯತರಅ ನಿಂದಕರಿರಬೇಕು

By ಹಂಸಾನದಿ
|

ಕನ್ನಡ ನುಡಿ ಸುಧಾರಣೆ ಮಾಡುವ ಆದಿಯಲ್ಲಿ ಮೊಟ್ಟಮೊದಲ ಕೆಲಸವೆಂದರೆ ನಾವೆಲ್ಲ ಕೂಡಿ 'ಹ'ಕಾರಕ್ಕೆ ಎಳ್ಳು ನೀರು ಬಿಡುವುದು. ಯಾಕಪ್ಪಾ ಅಂದ್ರೆ, ಶಾಸ್ತ್ರೀಯ ಭಾಷೆ ಎನಿಸಿಕೊಂಡ ತಮಿಳಿಗೇ ಬೇಡದ 'ಹ'ಕಾರಕ್ಕೆ ನಮ್ಮ ಮೃದುಮಾತು ಸವಿಬರವಣಿಗೆಯಲ್ಲಿ ಯಾಕೆ ಸ್ಥಾನ ಎನ್ನುವುದು ಲೇಖಕರ ಅಖಂಡ ವಿತಂಡವಾದ. "ನಿಂದಕರಿರಬೇಕು ಅಂದಿಯತರಹ ನಿಂದಕರಿರಬೇಕು", ಅಥವಾ "ಇಂದಿನ ಯೋಗ ಸುಬಯೋಗ ಇಂದಿನಕರಣ ಸುಬಕರಣ" ಆಡುಗಳ ಶೃತಿಯಲ್ಲಿ ಈ ಹಾಸ್ಯ ಗದ್ಯರಸಾಯನವನ್ನು ಮಾನ್ಯ ಓದುಗರು ಪರಾಂಬರಿಸಬೇಕು!

***

ಅವರವರ ಭಾವಕ್ಕೆ ಅವರವರ ಭಕ್ತಿಗೆ ಎನ್ನುವುದು ಹಳೆಯ ಮಾತಾಯಿತು. ಈಗ ಏನಿದ್ದರೂ, ಹಳೆಯದನ್ನು ಮರೆತು ನಮ್ಮ ನುಡಿ ಕನ್ನಡಕ್ಕೆ ಏನು ಬೇಕು ಎನ್ನುವುದನ್ನು ನೋಡುವ ಸಮಯ. ಕ್ಷಮಿಸಿ. ಸಮಯ ಎಂಬುದು ಸಂಸ್ಕೃತ ಪದ! ಇದಂತೂ ಉಪಯೋಗಿಸಲೇಬಾರದಲ್ಲ! ಸರಿ. ಹಾಗಾದರೆ ಹೀಗೆ ಹೇಳಲೇ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಕಾಲ. ಅಯ್ಯೋ! ಇದೂ ಉಪಯೋಗಿಸಬಾರದ ಪದ. ಮತ್ತಿನ್ನೇನು ಹೇಳಲಿ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಟೈಮು. ಈಗ ಸರಿಯಾಯಿತು.

ಎಷ್ಟೇ ಎಂದರೂ ಕನ್ನಡಕ್ಕೆ ಪ್ರಪಂಚದಲ್ಲೆಲ್ಲ ಸುತ್ತಾಡುವ ಇಂಗ್ಲಿಷ್ ಭಾಷೆಯನ್ನು ಬೆರೆಸಿದರೆ ಸರಿಹೋಗಬಲ್ಲುದೇ ಹೊರತು, ನಮ್ಮ ಜೊತೆಗೇ ನಡೆದು ಬಂದಿರುವ, ನಮ್ಮ ಬರವಣಿಗೆಗೆ ತನ್ನ ಸ್ವಲ್ಪ ಕಾಣಿಕೆಯನ್ನು ಕೊಟ್ಟಿರುವ (ಹೆಸರು ಹೇಳಬಾರದ) ಸತ್ತ ಭಾಷೆ ಸರಿಯಾದೀತೇ ? ಅಪರಾಧ ಅಪರಾಧ - ಮನ್ನಿಸಿ ಮನ್ನಿಸಿ - ಶಾಂತಂ ಪಾಪಂ. ನನ್ನ ಹಳೆ ಒಡನಾಡಿತನದಿಂದ ಬರಬಾರದ ಮಾತು ಹೊರಬರುತ್ತಿದೆ. ಇನ್ನುಮೇಲಾದರೂ ಈ ಹಳೇ ಸಂಗ ಬಿಟ್ಟು ಹೊಸಮಾತಾಡುವುದನ್ನು ಕಲಿಯಬೇಕು. [ಇದು ಕತ್ತಿಯಲುಗಿನ ಮೇಲಿನ ನಡಿಗೆ- ಹಂಸಾನಂದಿ]

ಈಗ ಮೊದಲು ಬೇಕಾದ್ದು ನಮ್ಮ ಕನ್ನಡ ನುಡಿಯ ಸುಧಾರಣೆ. ಅದಕ್ಕಾಗಿ ನಾವು ಮೊದಲಿಗೆ ಹಕಾರವನ್ನು ಹೊರಗೆಸೆಯೋಣ. ಎಲ್ಲಾ ವ್ಯಾಕರಣಕಾರರೂ ಇದು ಮೊದದೊದಲು ಕನ್ನಡದಲ್ಲಿರಲಿಲ್ಲ ಅಂತ ಖಡಾಖಂಡಿತವಾಗಿ ಘೋಷಿಸಿದಾರೆ. ಅಲ್ವಾ? ಅಷ್ಟಕ್ಕೂ ನಮ್ಮ ನೆರೆಯ ದ್ರಾವಿಡರಿಗೆ ಬೇಕಾಗದ ಈ ಹಕಾರ ನಮಗೇಕೆ? ನೀವೇ ಯೋಚಿಸಿ ಮತ್ತೆ!

ಮೊದಲ ಎಜ್ಜೆ ಎಲ್ಲಿಡಬೇಕು ಅಂತ ಗೊತ್ತಾದರೆ, ಮುಂದಿನ ಎಜ್ಜೆಗಳೆಲ್ಲ ಸಲೀಸೋ ಸಲೀಸು. ನಾನು ಏನು ಏಳಲು ಬಯಸಿದ್ದೇನೆ ಎಂದು ತಿಳಿಯಿತು ಎಂದು ಭಾವಿಸಿರುವೆ. ಗೊತ್ತಾಗದಿದ್ದರೂ ಪರವಾಗಿಲ್ಲ. ಆಡು ಅಳೆಯದಾದರೇನು? ಭಾವ ನವನವೀನ. ಇಷ್ಟವಾಗಲಿಲ್ಲವಾದರೆ, ಪಾಡು ಪಳೆಯದಾದರೇನು? ಭಾವನವನವೀನ ಎನ್ನೋಣ ಅಲ್ವೇ? ಆಡ್ತಾ ಆಡ್ತಾ ರಾಗ ನರಳ್ತಾ ನರಳ್ತಾ ರೋಗ ಅಂತ ಗಾದೇನೇ ಇಲ್ಲವಾ? ಅಂಗೇ ಅಭ್ಯಾಸ ಮಾಡ್ಕೋತಾ ಓದ್ರಾಯ್ತು. ಅಂದ್ ಆಗೆ ಗಾದೆ ಅಂದಾಗ ನೆನಪಿಗೆ ಬಂದಾಗ ಒಳೀತು ನೋಡಿ ಇನ್ನೊಂದು ಗಾದೆ. ಅನುಮಂತನೇ ಅಗ್ಗ ತಿನ್ನೋವಾಗ ಪೂಜಾರಿ ಶಾವಿಗೆ ಬೇಡಿದನಂತೆ. ಇಂತ ಯಾರೋ ಕೆಲಸಕ್ಕೆ ಬಾರದ ಪೂಜಾರಿಗಳು ಮಂತ್ರ ಏಳಕ್ಕೆ ಬೆಳೆಸಿರೋ ಬೇರೆ ಭಾಷೆಯ ಮಆ ಪ್ರಾಣಗಳು, ಶಕಾರಗಳು ನಮಗ್ಯಾಕೆ ಅಂತೀರಾ? ನಾವೇನು ಬಣ್ಣ ಬಳ್ಕೊಂಡು, ಶಕಾರನ ವೇಷ ಆಕ್ಕೊಂಡು ವಸಂತಸೇನೆ ನಾಟಕ ಮಾಡಬೇಕಾ? [ತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ]

ಸರಿ ಮತ್ತೆ. ಮನಸ್ಸು ಅಗುರ ಆಗಬೇಕಾದ್ರೆ, ಮೊದಲು ಬೇಡದೇ ಇರೋ ಬಾರನ ಕೈ ಬಿಡಬೇಕು. ಇಲ್ಲಾಂದ್ರೆ ಎಲ್ಲಾಗತ್ತೆ ಮನಸ್ಸು ಅಗುರ? ಏನು ಬಾರ್ ಸೋಪಾ ಅಂದ್ರಾ? ಬಾರ್ ಸೋಪ್ ಅಲ್ಲ ಸ್ವಾಮೀ, ಬಾರ ಬಾರ. ನಾನು ಏಳ್ತಾ ಇರೋದು ಗೊತ್ತಾಗಿದೆ ಅಂದ್ಕೋತೀನಿ. ಕರೆ ಏಳ್ಬೇಕು ಅಂದರೆ, ಈಗ ಈ ವಿಷಯ ಮಾತಾಡ್ತಿರೋ ಆಗೆ, ನನ್ನ ಅಳೆ ರೂಂ ಮೇಟ್ ಒಬ್ಬ ನೆನೆಪಿಗೆ ಬಂದ. ಅರ್ಸಕುಮಾರ ಅಂತ ಅವನ ಎಸರು. ನಮ್ಮೂರು ಆಸನ. ಬೇರೆ ಬೆಂಗಳೂರು ಮೈಸೂರು ತರ ಅದೇನು ದೊಡ್ಡ ಪೇಟೆ ಅಲ್ಲ. ಆಗಾಗಿ ನಮ್ಮಲ್ಲಿ ಎಚ್ಚು ಕನ್ನಡನೇ ನಡೀತಿತ್ತು.ನನಗೋ ಮರಾಟಿ, ಇಂದಿ,ತಮಿಳು ಈ ಬಾಸೆಗಳೆಲ್ಲ ಬಾರವು. ಈ ನನ್ನ ರೂಮ್ ಮೇಟೋ, ಕಾಸ್ಮೋಪಾಲಿಟನ್ ಸಿಟಿ ಬೆಂಗಳೂರಿನವನು. ಅವನಿಗೂ ನನಗೂ ಈ ವಿಸಯಕ್ಕೇ ಸಾವಿರಸಲ ಗರ್ಸಣೆ ಆಗಿತ್ತು. ಸುದ್ದ ಕನ್ನಡ ಮಾತಾಡು ಅಂತ ನಾನು. ಬರಿಮಾತಿಗೇನು, ಅರ್ತ ತಿಳಿದರಾಯಿತು ಅಂತ ಅವನು. ಅದಕ್ಕೇ ಅವನು ತಮಿಳರು ಸಿಕ್ಕರೆ ತಮಿಳಲ್ಲಿ, ತೆಲುಗರು ಸಿಕ್ಕರೆ ತೆಲುಗಲ್ಲಿ ಮಾತಾಡ್ತಿದ್ದ. ಅವರಿಗೂ ಕನ್ನಡ ಬರುತ್ತಲ್ಲೋ ಅಂದರೆ, ನಾವು ಪರಬಾಸೆಯವರ ಜೊತೆ ಕನ್ನಡದಲ್ಲಿ ಮಾತಾಡಿದರೆ, ನಾವು ಕನ್ನಡದವರಾಗಕ್ಕೇ ನಾಲಾಯಕ್ಕು, ಅಸ್ಟಕ್ಕೂ ಅವರಿಗೇನು ಸುದ್ದವಾಗಿ ಕನ್ನಡ ಬರಲ್ಲ ಅಂತ ವಿಪರೀತ ವಾದ ಮಾಡ್ತಿದ್ದ. ನಾನು ಸುದ್ದವೋ ಗಿದ್ದವೋ, ಅರ್ದಂಬರ್ದ ಮಾತಾಡ್ತಾರಲ್ಲ, ಅಸ್ಟು ಸಾಕಲ್ಲ ಎಂದ್ರೆ ಅವನು ಕೇಳ್ತಾನಾ? ಈಗೆ ಅವನ ಜೊತೆ ಮಾತಾಡಿದ್ರೇ ಒಂದು ಪಜೀತಿಗೆ ತಂದು ಇಟ್ಟುಬಿಡ್ತಾನಲ್ಲ ಅಂತ, ನಾನೂ ವಾದ ಮಾಡೋದು ಬಿಟ್ಟೆ ಅನ್ನಿ.ಸುಮ್ಸುಮ್ನೆ ಕಂಟಸೋಸನೆ ಯಾಕೆ ಅಲ್ವಾ?

ಇಂಗೇ ಬಾಸೆನ ಸುಲಬ ಮಾಡಕ್ಕೆ ಎಸ್ಟೋ ಲೇಕಕರು ಪುಸ್ತಕಗಳನ್ನೇ ಬರೆದಿದಾರಂತೆ. ನಾನು ಓದಿಲ್ಲ. ಒಂದು ದಿನ ಲೈಬ್ರರಿಗೆ ಓಗಿ ನೋಡಬೇಕು. ಯಾವುದಾದರೂ ಸಿಕ್ಕತ್ತೋ ಅಂತ. ಈಗ ನೋಡಿ, ಐ ಔ ಅನ್ನೋದೇ ನಮ್ಮ ಬಾಸೆಯಲ್ಲಿಲ್ಲದ ಸಬ್ದ. ಅದನ್ನ ಅಯ್ ಅವ್ ಅಂತ ಬರೆದರೇ ಚಂದ ಅಂತ ನನ್ನ ಗೆಳೆಯರು ಒಬ್ಬರು ಸ್ವಲುಪ ದಿನದ ಇಂದೆ ಏಳಿಕೊಟ್ಟರು. ಅದೂ ದಿಟ ಅಂತ ನನಗನ್ನಿಸ್ತು. ಈಗ ಇಂದಿ ಬಾಸೆ ಮಾತಾಡೋವ್ರ ಹತ್ರ ಮೈಸೂರು, ಗೌರಿ ಅನ್ನಿಸಿ ನೋಡಣ. ಅವ್ರೊಂತರಾ ವಿಚಿತ್ರ ವಾಗೇ ಅಂತಾರಲ್ವಾ? ನಾವಾದ್ರೆ ಸರಿಯಾಗಿ ಮಯ್ಸೂರು, ಗವ್ರಿ ಅಂತಲೇ ಅಂತೀವಿ.

ಅದು ಇರಲಿ, ಇಂತ ಒಳ್ಳೇ ಪುಸ್ತಕ ಯಾವ್ದಾದ್ರೂ ಸಿಕ್ಕತ್ತೇನೋ ಅಂತ ಒಂದು ಅಯ್ದು ಆರು ಸಲ ನಮ್ಮೂರಿನ್ಸ್ ಲಯ್‍ಬ್ರರಿಗೆ ಪೋನ್ ಮಾಡಿ ಕೇಳ್ದೆ. ಅವ್ರೋ ಎದ್ರಿಗೆ ಬಂದರೆ ನೋಡಿ ಏಳಬ‍ಉದು. ಪೋನಲ್ಲಿ ಅದೆಲ್ಲ ಡಿಟ‍ಯ್ಲ್ಸ್ ಎಲ್ಲ ಏಳಕ್ಕಾಗಲ್ಲ ಅಂದರು. ಅವ್‍ದು ಮತ್ತೆ ನೋಡಿ. ಅವರಾದ್ರೂ ನನ್ನ ತರದವರು ಅಯ್ದು ಅಯ್ದು ಮಿನಿಟಿಗೆಲ್ಲಾ ಪೋನ್ ಮಾಡ್ತಾ ಇದ್ದರೆ ಎಸ್ಟು ಜನಕ್ಕೆ ಅಂತ ಏಳಕ್ಕಾಗತ್ತೇ? ಬೆಳಗ್ಗೆ ಕೆಲಸ ಅಚ್ಕೊಂಡು ಕೂತರೆ ಸಂಜೆ ಏಳೋ ತನಕ ಅವರಿಗೆ ಇಂತ ಎಸ್ಟು ಜನ ಪೋನ್ ಮಾಡ್ತಾರೋ? ಅದೆಲ್ಲ ನೋಡಿ ಏಳತಾ ಓದರೆ, ಸಂಜೆ ಕೆಲಸ್ ಮುಗಿಸಿ ಏಳೋ ಒತ್ತಿಗೆ ಅವರು ಬಾಯಿ ನೋವು ಬಂದು ಏನಾದ್ರೂ ಅವ್‍ಸದ ಕುಡೀಬೇಕಾಗುತ್ತೆ ಅಸ್ಟೇ. ಪಾಪ!

ನನ್ನ ಕೆಲವು ತಮಿಳು ಗೆಳೆಯರು ಎಸ್ಟೋ ಸಲ ಏಳಿದಾರೆ. ಅವರ ಬಾಸೆಲಿ ಒತ್ತಕ್ಸರನೇ ಇಲ್ಲ. ಅದಕ್ಕೆ ಅದು ಓದೋದು ಬ‍ಅಳ ಸುಲಬ ಅಂತ. ಅರವತ್ತು ಎಪ್ಪತ್ತು ವರ್ಶ ಇಂದೇ ಎಸ್ಟೋ ದೊಡ್ಡವರೆಲ್ಲ ಇದೇ ಮಾತನ್ನ ಏಳಿದಾರೆ. ನಾವು ಕೇಳಿಲ್ಲ ಅಸ್‍ಟೇ. ಇನ್‍ನು ಮೇಲಾದರೂ ಕೇಳಿದರೆ ಒಳ್‍ಳೇದಲ್‍ಲವೇ? ಯಾವುದಕ್‍ಕೂ ಒಂದು ದಿನ ಸುರು ಅಚ್‍ಕೊಳ್‍ಳಲೇ ಬೇಕಲ್‍ಲ? ಎಜ್‍ಜೆ ಇಡದೇ ನಡೆದೋರುಂಟೇ? ಇಂದಿನ ದಿನವೇ ಸುಬದಿನವು ಇಂದಿನ ವಾರ ಸುಬವಾರ ಇಂದಿನ ಯೋಗ ಸುಬ ಯೋಗ ಇಂದಿನ ಕರಣ ಸುಬಕರಣ ಅಂತ ಪುರಂದರ ದಾಸರಂತಆ ದಾಸರೇ ಏಳಿರೋವಾಗ ಪ್‍ರಯತ್‍ನ ಮಾಡದೇ ಇರೋದು ನ್ನ್‍ನ ತಪ್‍ಪ್ಪೇ ಒರತು ಮತ್‍ತೇನೂ ಅಲ್‍ಲ ಅನ್ನ್‍ನೋದು ಇವತ್‍ತು ಮನವರಿಕೆ ಆಗಿ, ಆ ದಾರಿಯಲ್‍ಲಿ ಮೊದಲ ಎಜ್‍ಜೆ ಆಕ್‍ತಾ ಇದೀನಿ. ಎಸ್‍ಟು ದೂರ ಓಗ್‍ತೀನೋ ಅರಿಯೆ. ನಾ ಏಳಿದ್‍ರಲ್‍‍ಲಿ ತಪ್‍ಪಿದ್‍ರೆ ಒಟ್‍ಟೆಗೆ ಆಕಿಕೊಂಡು ನಿಮ್‍ಮ ಮನೆಯಂಗಳದ ಕೂಸು ನಾನು ಅಂದುಕೊಳ್‍ತೀರಾ ಅಂತ ನನ್‍ನ ಬಾವನೆ.

ಸ್ನೇಅದಲಿ,

ನಿಮ್ಮ, ಅಂಸಾನಂದಿ, ಉತ್ತರ ಕ್ಯಾಲಿಫೋರ್ನಿಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Grammer and spoken language: Humor essay by Hamsanandi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more