ವಿಕ್ಷನರಿಯಲ್ಲಿ ಕನ್ನಡ ಪದಗಳ ಭರ್ಜರಿ ಬೆಳೆ

ವಿಕ್ಷನರಿಯ ಮಹತ್ವ : ಇದು ಅಂತರ್ಜಾಲ ನಿಘಂಟು ಎನ್ನುವಂತೆ ಮೇಲುನೋಟಕ್ಕೆ ತೋರಿದರೂ ಬುಡಮಟ್ಟದಲ್ಲೇ ನಿಘಂಟಿಗೂ ಕೆಲವು ವ್ಯತ್ಯಾಸಗಳಿವೆ. ಇಲ್ಲಿನ ನುಡಿಕಡಲಿಗೆ ಯಾರು ಬೇಕಾದರೂ ಪದ ಸೇರಿಸಬಹುದು. ಪ್ರತಿಯೊಂದು ಪದಕ್ಕೂ ಒಂದೊಂದು ಪುಟ ಹುಟ್ಟುಹಾಕಿ ಪದದ ಬಗ್ಗೆ ಅನೇಕ ಮಾಹಿತಿ ನೀಡಬಹುದು. ಪ್ರತಿ ಪದಕ್ಕೂ ಯಾವ ಭಾಷೆಯಲ್ಲಿ ಬೇಕಾದರೂ ಅರ್ಥ ನೀಡಬಹುದು. ಅಂದರೆ ಒಂದು ಕನ್ನಡ ಪದಕ್ಕೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ ಅಂತ ಬರೀಬಹುದು.
ಮುಂದಿನ ದಿನಗಳಲ್ಲಿ ನಮ್ಮ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳೇ ಇದ್ದು ಇಂತಹ ಅಂತರ್ಜಾಲ ನಿಘಂಟಿನ/ ನುಡಿಕಡಲಿನ ಪಾತ್ರ ಮಹತ್ವದ್ದೂ ಹೆಚ್ಚಿನದ್ದೂ ಆಗಲಿದೆ. ಆ ದೃಷ್ಟಿಯಿಂದ ನೋಡಿದಾಗ ವಿಕ್ಷನರಿಯಲ್ಲಿ ಕನ್ನಡ ಪದಗಳು ಹೆಚ್ಚು ಹೆಚ್ಚು ಇರಬೇಕಾದ ಅಗತ್ಯ ಮತ್ತು ಇದ್ದರೆ ಆಗುವ ಉಪಯೋಗಗಳು ಮನದಟ್ಟಾಗುತ್ತವೆ.
ಕನ್ನಡ ವಿಕ್ಷನರಿ ಅಂದು -ಇಂದು: ಸುಮಾರು ಒಂದು ವರ್ಷದ ಹಿಂದೆ (ಜೂನ್ 2009) ಕನ್ನಡ ವಿಕ್ಷನರಿಯಲ್ಲಿ ಇದ್ದ ಪದಗಳ ಮೊತ್ತ ಮುನ್ನೂರಕ್ಕಿಂತ ಕಮ್ಮಿ. ಇನ್ನೂರೈವತ್ತರ ಆಸುಪಾಸು. ಇಂತಹ ಸಂದರ್ಭದಲ್ಲಿ ಬನವಾಸಿ ಬಳಗವು ಕನ್ನಡ ವಿಕ್ಷನರಿಯನ್ನು ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿತು. ಸಮಾನ ಮನಸ್ಕರನ್ನು ಒಗ್ಗೂಡಿಸುವ, ಅಗತ್ಯ ಇರುವವರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುವ, ವಿಕ್ಷನರಿಯಲ್ಲಿ ಪದಗಳನ್ನು ತುಂಬುವ ಯೋಜನೆಯನ್ನು ರೂಪಿಸಿತು. ಕನ್ನಡಮ್ಮನ ಕೈಂಕರ್ಯಕ್ಕೆ ಕಂದಮ್ಮಗಳ ಕೊರತೆಯೇ? ಹತ್ತಾರು ಆಸಕ್ತರು ಈ ಕೆಲಸದಲ್ಲಿ ಕೈ ಜೋಡಿಸಿದರು. ಈ ಎಲ್ಲರ ಶ್ರಮದ ಫಲವಾಗಿ ಇಂದು ವಿಕ್ಷನರಿಯಲ್ಲಿ ಸುಮಾರು ಅರವತ್ತಾರು ಸಾವಿರದ ನೂರಾ ನಲವತ್ನಾಲ್ಕು(66,144) ಪದಗಳಿವೆ!
ಸಂಖ್ಯಾಬಲದಲ್ಲಿ ಕನ್ನಡವು ಜೂನ್ 2009ರಲ್ಲಿ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಕೊಟ್ಟಕೊನೆಯಲ್ಲಿತ್ತು. ಇದೀಗ ಎರಡನೇ ಸ್ಥಾನಕ್ಕೇರಿದೆ. ಅತಿಹೆಚ್ಚು ಪದಗಳನ್ನು ಹೊಂದಿರುವ ಭಾರತೀಯ ಭಾಷೆ ತಮಿಳು. ಇದರಲ್ಲಿ ಒಂದು ಲಕ್ಷದ ಹತ್ತೊಂಬತ್ತು ಸಾವಿರದ ಎಂಟುನೂರಾ ಎಪ್ಪತ್ತೈದು (1,19,875) ಪದಗಳಿವೆ. ಕನ್ನಡದ ನಂತರದ ಸ್ಥಾನ ಮಲಯಾಳಮ್ದು. ಇದರಲ್ಲಿ ಐವತ್ತೊಂಬತ್ತು ಸಾವಿರದ ಒಂಬೈನೂರಾ ಐವತ್ತೊಂಬತ್ತು (59,959) ಪದಗಳಿವೆ. ನಂತರದ್ದು ತೆಲುಗಿನದ್ದು. ಇದರಲ್ಲಿ ಒಟ್ಟು ಮೂವತ್ನಾಲ್ಕು ಸಾವಿರದ ಏಳುನೂರಾ ಇಪ್ಪತ್ನಾಲ್ಕು (34, 724) ಪದಗಳಿವೆ. ಇಡೀ ವಿಶ್ವದಲ್ಲಿರೋ ಭಾಷೆಗಳನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ ಕನ್ನಡದ ಸ್ಥಾನ ಇಪ್ಪತ್ತೊಂದನೇದು.
ಬಹಳ ಚುರುಕಾಗಿ, ವೇಗವಾಗಿ ನಾವು ಮುಂದುವರೀತಾ ಇದೀವಿ ಗುರೂ! ಆದರೆ ಅಂತರ್ಜಾಲ ತಾಣದಲ್ಲಿ ಕನ್ನಡದ ನುಡಿಗುಡಿಯ ಈ ತೇರು ಎಳೆಯೋಕೆ ನಿಮ್ಮದೂ ಎರಡು ಕೈ ಸೇರಿದರೆ ಬೊಂಬಾಟಾಗಿರುತ್ತೆ. ನಿಮಗೂ ವಿಕ್ಷನರಿಗೆ ಕನ್ನಡ ಪದಗಳನ್ನು ಸೇರಿಸೋ ಮನಸ್ಸಿದ್ದಲ್ಲಿ ವಿಕ್ಷನರಿಯ ತಾಣಕ್ಕೆ ಭೇಟಿ ಕೊಡಿ. ಅಲ್ಲಿರೋ ಸಮುದಾಯ ಪುಟದಲ್ಲಿ ಹೇಗೆ ಪದ ಸೇರಿಸಬೇಕು ಅಂತಾ ಇದೆ. ಅದರಲ್ಲಿ ಬರೆದಿರೋ ರೀತೀಲಿ ಪದ ಸೇರಿಸಿದರೆ ಆಯ್ತು. ನಿಮಗೆ ನಮ್ಮೊಂದಿಗೆ ಕೈಜೋಡಿಸೋಕೆ ಆಸಕ್ತಿ ಇದ್ದಲ್ಲಿ [email protected] ಗೆ ಒಂದು ಮಿಂಚೆ ಹಾಕಿ...ಗುರೂ!! (ಏನು ಗುರು?)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications