ಫೇಸ್ ಬುಕ್ಕಿಗೆ ಕೊಡೋಣ ಕನ್ನಡದ ಲುಕ್!

ನಾವೇನ್ ಮಾಡೋಣ ಅಂತೀರಾ?
ಆಫೀಸ್ ಅಲ್ಲಿ, ಮನೆಲಿ, ಕಾಲೇಜಲ್ಲಿ, ನೆಟ್ ಪಾರ್ಲರ್ ಅಲ್ಲಿ ಹೀಗೆ ಎಲ್ಲಂದ್ರಲ್ಲಿ ನಮ್ಮ ಹುಡುಗ್ರು ಫೇಸ್ ಬುಕ್ ಅಲ್ಲಿ ಗಂಟೆಗಟ್ಟಲೇ ಹರಟೆ ಹೊಡಿತಿವಿ, ಆ ಹರಟೆ ಮಧ್ಯಾನೇ ಒಂದು ಸ್ವಲ್ಪ ಸಮಯ ಇದಕ್ಕೆ ಕೊಟ್ರೆ ಸಾಕು, ಫೇಸ್ ಬುಕ್ ಕನ್ನಡದಲ್ಲಿ ಬಂದೇ ಬಿಡುತ್ತೆ.
ಅದಕ್ಕೆ ನೀವ್ ಮಾಡಬೇಕಿರೋ ಕೆಲಸ ಸಕತ್ ಸಿಂಪಲ್ ಗುರು. ನೀವು ಮಾಡಬೇಕಿರೋದು ಇಷ್ಟೇ:
* ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ
* ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/translations
* ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ "ಕನ್ನಡ" ಆಯ್ದುಕೊಳ್ಳಿ
* ಶುರು ಹಚ್ಕೋಳ್ಳಿ !
ನೀವು ಮಾಡಿ, ನಿಮ್ಮ ಅಕ್ಕ, ತಂಗಿ, ಅಣ್ಣ, ತಮ್ಮ, ಗೆಳೆಯ, ಗೆಳತಿ ಎಲ್ಲರಿಗೂ ಹೇಳಿ ಮತ್ತೆ. ಎಂತೆಂಥ ಚಿಕ್ಕ ಚಿಕ್ಕ ದೇಶಗಳ ಭಾಷೆಲೆಲ್ಲ ಈ ಸೇವೆ ಸಿಕ್ಕು, 5 ಕೋಟಿ ಕನ್ನಡಿಗರ ಭಾಷೆಲಿ ಇದಿಲ್ಲ ಅಂದ್ರೆ ಕನ್ನಡಿಗರಿಗೆ ಅದು ನಿಜಕ್ಕೂ ಅವಮಾನದ ವಿಷ್ಯ ಅನ್ಸಲ್ವಾ ಗುರು? ಕನ್ನಡಿಗರು ಅಭಿಮಾನ ಇಲ್ಲದೋರು, ಅದು ಇದು ಅನ್ನೋದೆಲ್ಲ ಹಳೇ ಮಾತು, ಈಗಿನ ಕನ್ನಡದ ಹುಡುಗ್ರು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸಬಲ್ರು, ಅಂತಾದ್ರಲ್ಲಿ ಇದೆಲ್ಲ ಒಂದ್ ಲೆಕ್ಕಾನಾ ಅಂತ ತೋರ್ಸಬೇಕು ಗುರು. ಹಾಗಿದ್ರೆ, ಫೇಸ್ ಬುಕ್ ಕನ್ನಡಕ್ಕೆ ತರೋ ಕೆಲಸ ಶುರು ಮಾಡೋಣ್ವಾ ಗುರು?
(ಸ್ನೇಹ ಸೇತು : ಏನ್ ಗುರು)












Click it and Unblock the Notifications