Get Updates
Get notified of breaking news, exclusive insights, and must-see stories!

ವರ್ಷ ಭವಿಷ್ಯ : ಮೇಷ ರಾಶಿಗೆ ಸಂಕ್ರಮಣ ಫಲ

ವರ್ಷ ಭವಿಷ್ಯ 2014ರಲ್ಲಿ ಮೇಷ ರಾಶಿಯವರಿಗೆ ಮಕರ ಸಂಕ್ರಮಣ ಫಲ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಮೇಷ ರಾಶಿಯವರಾಗುತ್ತಾರೆ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಿಗೆ ಜನನ ದೋಷವಿರುತ್ತದೆ ಎನ್ನುತ್ತಾರೆ. ಇದರಿಂದ ತಂದೆ-ತಾಯಿಗೆ ಕಿರಿಕಿರಿ ಹಾಗೂ ಹಣದ ಅಭಾವ ವಿಪರೀತ ಕಾಡುತ್ತಿರುತ್ತದೆ.

ಆದ್ದರಿಂದ ಈ ದೋಷ ನಿವಾರಣೆಗೆಗಾಗಿ ಈ ನಕ್ಷತ್ರದವರ ಪಾಲಕರಾಗಲಿ ಅಥವಾ ಸ್ವತಃ ತಾವೇ ಯಾವುದಾದರೂ ಅನ್ನದಾಸೋಹ ನಡೆಯುವ ಸ್ಥಳಗಳಲ್ಲಿ ಕೈಲಾದಷ್ಟು ಅಕ್ಕಿ, ಬೆಲ್ಲ ಹಾಗೂ ತೊಗರಿ ಬೇಳೆಯನ್ನು ಕೊಟ್ಟು ನಿಮ್ಮ ಹೆಸರಿನಲ್ಲಿ ರಸೀದಿ ಪಡೆದಿಟ್ಟುಕೊಳ್ಳಬೇಕು. ಅನುಕೂಲವಿದ್ದಾಗ ಎಷ್ಟು ಬೇಕಾದಷ್ಟು ಸಲವಾದರೂ ಕೊಡಬಹುದು. ವರ್ಷವಿಡಿ ದುಡಿಯುವ ಹಣದಲ್ಲಿ ಶೇ.1ರಷ್ಟನ್ನಾದರೂ ನಿಮ್ಮ ಒಳಿತಿಗಾಗಿ ಖರ್ಚು ಮಾಡಬೇಕು. [ವೃಷಭದಿಂದ ಕರ್ಕ ರಾಶಿಯವರಿಗೆ ಸಂಕ್ರಮಣ ಫಲ]

Yearly astrology 2014 : Sankranti prediction for Aries

ಮೇಷ ರಾಶಿಯವರಿಗೆ ಮಕರ ಸಂಕ್ರಮಣ ಫಲವು ತುಂಬಾ ಒಳ್ಳೆಯದಿದೆ. ಇವರಿಗೆ ಬಯಸ್ಸಿದ್ದನ್ನು ಪಡೆಯುವ ಸುಯೋಗವಿರುತ್ತದೆ. ತುಂಬಾ ಇಷ್ಟಪಟ್ಟದ್ದನ್ನು ಖರೀದಿ ಮಾಡಲು ಶತಪ್ರಯತ್ನ ಮಾಡಿದ್ದರೆ ಈಗ ಅದನ್ನು ಪಡೆದುಕೊಳ್ಳುವ ಸಮಯ ಬಂದಿದೆ ಎಂದುಕೊಳ್ಳಿ. ಅಲ್ಲದೇ ಯಾವುದೋ ರೂಪದಿಂದ ನಿಮಗೆ ಹಣಕಾಸಿನ ಸಹಾಯವಾಗಲಿ ಅಥವಾ ಆಸ್ತಿಯ ಲಾಭವಾಗಲಿ ಸಿಗುತ್ತದೆ. ನೀವು ಮರೆತಿರುವ ಹಣವೂ ಕೂಡ ಈಗ ಮರಳಿ ಬರುತ್ತದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು. ಒಂಥರಾ ನೀವೇ ವಿಸ್ಮಯಗೊಳ್ಳಬಹುದು ಆ ರೀತಿಯಲ್ಲಿ ಹಣದ ಲಾಭಾಂಶ ನಿಮ್ಮ ಕೈ ಸೇರುತ್ತದೆ.

ಆದರೆ ಸಿಕ್ಕಾಪಟ್ಟೆ ಲಾಭ ಆಗಿದೆ ಎಂದುಕೊಂಡು ಬೇಕಾಬಿಟ್ಟಿಯಾಗಿ ಹಣವನ್ನು ಖರ್ಚು ಮಾಡದೇ ಉಳಿತಾಯ ಮಾಡಿಕೊಂಡು ಮುಂದಿನ ದಿನಗಳಿಗೆ ಬಳಸಿಕೊಳ್ಳಬೇಕು ಮೇಷ ರಾಶಿಯವರು. ಒಟ್ಟಿನಲ್ಲಿ ಇವರ ಹಣಕಾಸಿನ ಪರಿಸ್ಥಿತಿಯಲ್ಲಿ ಏರಿಕೆಯಾಗುವ ಸಮಯವೆನ್ನಬಹುದು. ಬ್ಯಾಂಕ್ ಬ್ಯಾಲೆನ್ಸ್ ಏರುತ್ತಿದೆ ಎಂದುಕೊಂಡು ಸೊಕ್ಕಿನಿಂದಿರದೇ ವಿನಯದಿಂದಿರಲು ಕಲಿಯಬೇಕು. ಏಕೆಂದರೆ ಮುಂದೆ ಶನಿದೇವರ ಅಷ್ಟಮ ಗೋಚಾರ ಶುರುವಾಗುತ್ತದೆ ನವೆಂಬರ್‌ದಿಂದ. ಆಗ ಹಣ ಎಷ್ಟಿದ್ದರೂ ಸಾಲಲ್ಲ ಎಂಬುದನ್ನೂ ನೋಟ್ ಮಾಡಿಟ್ಟುಕೊಳ್ಳಬೇಕು.

ಮೇಷ ರಾಶಿಯವರ ಯುಗಾದಿ ಫಲ ಎಂಬುದು ಮುಂದಿನ ಲೇಖನದಲ್ಲಿ (ಒನ್‌ಇಂಡಿಯಾ ಕನ್ನಡ)

ಲೇಖಕರ ಮೊಬೈಲ್ : 94815 22011

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+