Get Updates
Get notified of breaking news, exclusive insights, and must-see stories!

ಛಾಯಾಪುತ್ರನ ಕುದೃಷ್ಟಿ ರಾಶಿಗಳವರ ಲಕ್ಷಣಗಳಿವು

ಹೌದು, ಛಾಯಾಪುತ್ರನ ಕುದೃಷ್ಟಿ ನಿಮ್ಮ ರಾಶಿ ಮೇಲೆ ಬಿದ್ದಿತೆನ್ನಿ ಹುಟ್ಟಿಕೊಳ್ಳುತ್ತವೆ ಒಂದೊಂದೆ ಸಮಸ್ಯೆಗಳು. ಎಷ್ಟೋ ಜನರಿಗೆ ಛಾಯಾಪುತ್ರನ ಕುದೃಷ್ಟಿ ನಮ್ಮ ರಾಶಿ ಮೇಲೆ ಬಿದ್ದಿದೆ ಎಂಬುದರ ಅರಿವೆಯೇ ಇಲ್ಲದೆ ಸಾಕಷ್ಟು ಕಷ್ಟಪಡುತ್ತಿರುತ್ತಾರೆ. ಅಲ್ಲದೇ ಹೆಂಡತಿ ಮಕ್ಕಳೊಡನೆ, ತಂದೆ-ತಾಯಿ, ಅಣ್ಣ ತಮ್ಮಂದಿರೊಂದಿಗು ಹೊಂದಿಕೊಳ್ಳದೆ ಒಂಥರಾ ಮನೆಗೆ ಬೇಸರ, ಭಾರವಾಗಿರುತ್ತಾರೆ.

ಆದರೆ ಇವರ ಈ ಪರಿಸ್ಥಿತಿಗೆ ಕಾರಣವೇನು ಎಂದು ಮನೆಮಂದಿ ಸ್ವಲ್ಪನೂ ಯೋಚಿಸದೆ ಅವರೊಂದಿಗೆ ಜಗಳಕ್ಕೆ ನಿಂತು ಬಿಡುತ್ತಾರೆ. ಇಂತಹ ಘಟನೆಗಳಿಂದ ಬೇಸತ್ತು ಮೊದಲೇ ನೊಂದ ಜೀವವಾಗಿರುವ ಅವರು ಜೀವನವೇ ಸಾಕಪ್ಪಾ ಎನ್ನಿಸಿ ತಮ್ಮ ಜೀವಕ್ಕೇನೆ ಅನಾಹುತ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ ಈ ಕೆಳಗಿನ ಲಕ್ಷಣಗಳು ನಿಮ್ಮ ಮನೆಯ ಯಾವುದೇ ಸದಸ್ಯರಲ್ಲಿ ನಿಮಗೆ ಕಂಡು ಬಂದಲ್ಲಿ ಇದು ಛಾಯಾಪುತ್ರನ ಕುದೃಷ್ಟಿ ಎಂದು ತಿಳಿದುಕೊಂಡು ಪರಿಹಾರೋಪಾಯಗಳನ್ನು ಮಾಡಿಕೊಳ್ಳಬೇಕು.

Sade Sati : Problems and solutions

ಲಕ್ಷಣಗಳು : ಸುಮ್ಮನೇ ಜಗಳ-ವಾದ ಮಾಡುವುದು, ಯಾವಾಗಲೂ ಸಿಟ್ಟಿನಲ್ಲಿರುವುದು, ಅಲ್ಲದೇ ತಮ್ಮಷ್ಟಕ್ಕೇ ತಾವೇ ನೋವು ಮಾಡಿಕೊಳ್ಳುವುದು. ಇನ್ನು ಪ್ರೀತಿ-ಪ್ರೇಮದಲ್ಲಿ ಸಿಲುಕಿ ಮೋಸವಾಗಿದ್ದರೆ ಹುಡುಗನಾದರೆ ಚಟಗಳ ದಾಸರಾಗುವುದು, ಹುಡುಗಿಯಾದರೆ ಹುಡುಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೊಬ್ಬರೊಂದಿಗೆ ಸಲುಗೆ ಬೆಳೆಸಿಕೊಳ್ಳುವುದು. ವಿದ್ಯಾರ್ಥಿಗಳಾಗಿದ್ದರೆ ವಿದ್ಯಾಭ್ಯಾಸ ಮಾಡದೇ ಮಂದವಾಗಿರುವುದು, ದುಷ್ಟರ ಸಹವಾಸ ಮಾಡಿರುವುದು. ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಯಾರೇ ನಡೆದುಕೊಳ್ಳುತ್ತಿದ್ದಾರೆಂದರೆ ಅರ್ಥಮಾಡಿಕೊಳ್ಳಿ ಇವರಿಗೆ ಛಾಯಾಪುತ್ರನ ಕುದೃಷ್ಟಿ ಬಿದ್ದಿದೆ ಎಂದು!

ಛಾಯಾಪುತ್ರನ ಕುಪ್ರಭಾವದಿಂದಲೇ ಈ ರೀತಿಯಾಗುತ್ತಿದೆ ಎಂಬುದನ್ನು ಅರಿತುಕೊಂಡು, ನಿಮ್ಮ ಮನೆ ಸದಸ್ಯರ ವೈಯಕ್ತಿಕ ತಪ್ಪೇನೂ ಇಲ್ಲ ಎಂಬುದನ್ನು ಮನಗಾಣಬೇಕು. ಇನ್ನು ಇವರು ಕಷ್ಟಪಟ್ಟು ದುಡಿದು ಬಂದರೂ ಗಳಿಸಿದ ಹಣವು ಹೇಗೋ ಖರ್ಚಾಗಿ, ಬರಿಗೈ ದಾಸರಾಗುತ್ತಾರೆ. ಹಣ ಎಷ್ಟಿದ್ದರೂ ಅವರ ಅನುಕೂಲಕ್ಕೆ ಸಿಗುವುದೇ ಇಲ್ಲ. ಸದೃಢ ದೇಹ ಹೊಂದಿದ್ದರೂ ಯಾವುದೋ ರೂಪದಲ್ಲಿ ರೋಗಗಳು ಉಲ್ಬಣಿಸಿ ಆಸ್ಪತ್ರೆಗೆ ನಿರಂತರ ಭೇಟಿ ನೀಡುವಂತಾಗಿರುತ್ತದೆ.

ಗಂಡ-ಹೆಂಡತಿ ನಡುವೆ ಚಿಕ್ಕಪುಟ್ಟ ವಿಷಯಗಳಿಂದಾದ ಜಗಳ ಡೈವೋರ್ಸ್ ಕೊಡುವ ಮಟ್ಟಕ್ಕೆ ಹೋಗುತ್ತದೆ. ಅಷ್ಟೇ ಅಲ್ಲದೇ ಛಾಯಾಪುತ್ರನ ಕುದೃಷ್ಟಿಯೊಂದಿಗೆ ಇತರ ಗ್ರಹಗಳ ಕುದೃಷ್ಟಿಯೇನಾದರೂ ರಾಶಿಯ ಮೇಲಾಗಿದೆಯಾ ಎಂದು ಒಮ್ಮೆ ಜಾತಕವನ್ನು ಪರೀಕ್ಷೆಗೊಳಪಡಿಸಿಕೊಳ್ಳುವುದು ಒಳ್ಳೆಯದು.

ಕೆಲವರು ತಾವು ಮಾಡಿದ ಮತ್ತು ಮಾಡುತ್ತಿರುವ ಕುಕರ್ಮಗಳಿಂದ ಹೆಂಡತಿ ಮತ್ತು ಮಕ್ಕಳಿಗೂ ತೊಂದರೆ ಬರುವ ಹಾಗೆ ಮಾಡಿಕೊಳ್ಳುತ್ತಾರೆ. ನೀವು ನೋಡಿರಬಹುದು ಹಿರಿಯರಿಗೆ ನಮಸ್ಕಾರ ಮಾಡಿದಾಗ ನಿಮ್ಮ ಮಕ್ಕಳಿಗೆ ಪುಣ್ಯ ಬರ‍್ಲಿಪಾ ಎಂದು ಆಶೀರ್ವಾದ ಮಾಡುತ್ತಾರೆ. ಆದರೆ, ತಾವು ಮಾಡಿದ ಪಾಪ ತಮ್ಮ ಮಕ್ಕಳಿಗೆ ತೊಂದರೆ ನೀಡುತ್ತದೆ ಎಂಬುದನ್ನು ಮರೆತಿರುತ್ತಾರೆ. ಮನೆಮಂದಿಗೆಲ್ಲ ತೊಂದರೆ ಉಲ್ಬಣಿಸಿದಾಗ ಯಾಕಪ್ಪಾ ದೇವರೆ, ನಾವೇನು ಅಂಥಾದ್ದು ಮಾಡಿದ್ದೇವಂತ ಈ ಪರಿ ಕಷ್ಟ ಕೊಡ್ತಾ ಇದಿಯಾ ಎಂದು ಹಲುಬುತ್ತಾರೆ. ಆದರೆ ಅವರೇ ಮಾಡಿದ ಕುಕರ್ಮಗಳು ಅವರ ಕುಟುಂಬದವರನ್ನು ಸುತ್ತಿಕೊಂಡಿರುತ್ತದೆ ಎಂಬುದರ ಅರಿವು ಅವರಿಗಿರುವುದಿಲ್ಲ.

ಇದಕ್ಕೇನು ಪರಿಹಾರ? : ಇನ್ನು ಏಳರಾಟದಲ್ಲಿನ ರಾಶಿಗಳವರು ಪ್ರಾಣಾಯಾಮ ನಿಯಮಿತವಾಗಿ ಮಾಡಬೇಕು. ಮನಸ್ಸಿನ ಹಿಡಿತಕ್ಕೆ ಧ್ಯಾನ ಮಾಡುವುದನ್ನು ಬಿಡಲೇಬಾರದು. ಪ್ರತಿದಿನ ಒಂದೂವರೆ ಕಿ.ಮೀ. ನಡಿಗೆ ತಪ್ಪಿಸಬಾರದು. ನಿಮ್ಮ ಮಾತು, ಕೆಲಸ, ಮನಸ್ಸು ಎಲ್ಲದರಲ್ಲೂ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಅಸತ್ಯದಿಂದ ದೂರವುಳಿದು ಕಪಟತನ, ವಿಶ್ವಾಸಘಾತಗಳಂಥದನ್ನು ಮಾಡಲೇಬಾರದು. ಶನಿವಾರದಂದು ಮರೆತೂ ಕೂಡ ಮಾಂಸಾಹಾರ ಬೇಡ. ಅಲ್ಲದೇ ಯಾವುದೇ ದುಶ್ಚಟಗಳಿದ್ದರೆ ಬಿಟ್ಟರೆ ಒಳ್ಳೆಯದು. ಇಲ್ಲವಾದರೆ ಚಟದಿಂದ ಚಟ್ಟಕ್ಕೆ ಎಂಬ ಗಾದೆಮಾತು ನಿಮ್ಮ ಬಾಳಿನಲ್ಲಿ ಸತ್ಯವಾಗುತ್ತದೆ.

ವಾಹನ ಚಾಲನೆ ಮಾಡುವಾಗ ಕೆಲವೊಮ್ಮೆ ತೂಕಡಿಕೆ ಬಂದು ಅಪಘಾತ ಸಂಭವವಿರುತ್ತದೆ. ಆದ್ದರಿಂದ ನಿದ್ದೆಗೆಟ್ಟ ಮಾರನೇ ದಿನ ಅಪ್ಪಿತಪ್ಪಿಯೂ ವಾಹನ ಚಾಲನೆ ಮಾಡುವುದು ಬೇಡ. ಸಾಮಾನ್ಯವಾಗಿ ಏಳರಾಟದಲ್ಲಿ ಕೆಲ ದಿನಗಳಾದರೂ ಮನೆಯಿಂದ ದೂರವಾಗಿರುವ ಪರಿಸ್ಥಿತಿ ಬಂದೇ ಬರುತ್ತದೆ. ಆಗ ಧೈರ್ಯಗೆಡದೆ ಇದ್ದ ಸ್ಥಳದಲ್ಲಿಯೇ ನಿಮ್ಮ ಆತ್ಮ, ಹೃದಯ, ಮನಃಪೂರ್ವಕವಾಗಿ ದೈವಾರಾಧನೆ ಮಾಡುತ್ತಿರಬೇಕು ತಪ್ಪಿಸಬಾರದು. ಕೆಲವೊಮ್ಮೆ ನಿಮ್ಮ ಮನಸ್ಸು ದುಷ್ಟ ಕೆಲಸಗಳಿಗೆ ಪ್ರೇರಣೆಯಾಗಬಹುದು. ಆದ್ದರಿಂದ ಯಾವಾಗಲೂ ಮೈಯೆಲ್ಲಾ ಕಣ್ಣಾಗಿದ್ದು ನಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ನಿಮ್ಮಲ್ಲಿರಬೇಕು.

ರಾತ್ರಿ ಮಲಗುವ ಮೊದಲು ಶಿವನ ಧ್ಯಾನ ಮಾಡಬೇಕು. ಆರ್ಥಿಕ ಸಂಕಷ್ಟ, ಶತ್ರುಭಯ ಮುಂತಾದ ಸಂಕಷ್ಟಗಳ ಕುರಿತು ಚಿಂತಿಸುವುದರಿಂದ ಅಪರಿಮಿತ ಭಯ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಯಾವುದೇ ವಿಘ್ನ-ಬಾಧೆಗಳಿಗೆ ಹೆದರದೆ ಚಿಂತೆ ಮಾಡುವುದನ್ನು ಬಿಡಬೇಕು. ಆದಷ್ಟು ದರಿದ್ರತನ ಹೋಗಲಾಡಿಸಿಕೊಳ್ಳಲು ಬೇಗ ಮಲಗಲು ರೂಢಿ ಮಾಡಿಕೊಂಡು ಸೂರ್ಯೋದಯದ ಮೊದಲೇ ಎದ್ದು ದೈನಂದಿನ ಕೆಲಸ ಕಾರ್ಯ ಆರಂಭಿಸಿದರೆ ನೀವು ದಿನಪೂರ್ತಿ ಉತ್ಸಾಹಭರಿತಾಗಿರಲು ಸಾಧ್ಯ.

ಇನ್ನು ಏಳರಾಟದ ಮೂರು ಹಂತಗಳ ಬಗ್ಗೆ ಮುಂದಿನ ಲೇಖನಗಳಲ್ಲಿನ ನೋಡೋಣ.

ಶನಿದೇವನ ಕೃಪೆಗೆ : ಪ್ರತಿದಿನ ನವಗ್ರಹ ಸ್ತೋತ್ರ ಪಠಣ ಮಾಡಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ ಲೇಖಕರನ್ನು ನೇರವಾಗಿ ಫೋನಾಯಿಸಬಹುದು. (ಲೇಖಕರ ಮೊಬೈಲ್ : 94815 22011).

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+