Get Updates
Get notified of breaking news, exclusive insights, and must-see stories!

ಕನ್ಯಾ ರಾಶಿಯವರಿಗೆ ಹೆಗಲಿನಿಂದ ಇಳಿಯುತ್ತಿರುವ ಶನಿರಾಜ

ಹಬ್ಬಗಳ ಸಂಭ್ರಮದಲ್ಲಿ ಎಲ್ಲರಿರುವ ಈ ಶ್ರಾವಣದಲ್ಲಿ, ಕನ್ಯಾ ರಾಶಿಯವರು ಶನಿರಾಜನ ಸಾಡೇಸಾತಿಯ ಎರಡು ಹಂತ (5 ವರ್ಷ) ಅನುಭವಿಸಿ ಮೂರನೇ ಹಂತದಲ್ಲಿ ಇದ್ದಾರೆ. ಆದ್ದರಿಂದ ಕನ್ಯಾ ರಾಶಿಯವರಿಗೆ ಒಂದನೇ ಹಂತ ಮತ್ತು ಎರಡನೇ ಹಂತದ ಶನಿಪ್ರಭಾವದ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಅವರು ಸಾಕಷ್ಟು ಅನುಭವಿಸಿದ್ದಾರೆ.

ಮೂರನೇ ಹಾಗೂ ಕೊನೆ ಹಂತ ಬರುವಷ್ಟರಲ್ಲಿ ಶನಿದೇವನು ಇವರಿಗೆ ಜೀವನದ ಪ್ರತಿಯೊಂದು ಪಾಠವನ್ನು ಅಚ್ಚುಕಟ್ಟಾಗಿ ಕಲಿಸಿ ಒಳ್ಳೆಯ ಮನುಷ್ಯರನ್ನಾಗಿ ಮಾಡಿ ಮನುಷ್ಯತ್ವದ ಮಹತ್ವ ತಿಳಿಸಿದ್ದಾನೆ. ಅಲ್ಲದೇ ಜೀವನದಲ್ಲಿ ಸೋತಾಗ ಗೆಲ್ಲುವ ಬಗೆ ಹೇಗೆ, ಮನಸ್ಸು ಮತ್ತು ದೇಹ ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಕಲಿಸಿದ್ದಾನೆ. ಮಾತಿನಲ್ಲಿ ಹಿಡಿತ, ದೈವಭಕ್ತಿ, ವ್ಯಾಪಾರಿ ಬುದ್ಧಿ ಹೆಚ್ಚಿಸಿ, ಒಟ್ಟಿನಲ್ಲಿ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಲು ಬೇಕಾದ ಎಲ್ಲ ಪಟ್ಟುಗಳನ್ನು ಶನಿದೇವನು ಕಲಿಸಿದ್ದಾನೆ. ಜೀವನದ ಪಟ್ಟುಗಳನ್ನು ಯಾವ ವಿಶ್ವವಿದ್ಯಾಲಯದಲ್ಲೂ ಎಷ್ಟೇ ವಿದ್ಯಾವಂತರಿದ್ದರೂ ಕಲಿಸಲಾಗುವುದಿಲ್ಲ. ಕಲಿಸುವುದು ಶನಿದೇವ ಮಾತ್ರ. ನೀವು ಕಲಿಯಲಿಲ್ಲವೆಂದರೂ ಬಿಡುವುದಿಲ್ಲ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಾ ಪಾಠ ಕಲಿಸಿಯೇ ತೀರುತ್ತಾನೆ ಶನಿದೇವನು.

ಸಾಡೇಸಾತಿ ಮೊದಲನೇ ಹಂತ ಆರಂಭವಾಗುವುದು ಶಿರಭಾಗದಿಂದ. ನಂತರ ಕುತ್ತಿಗೆಯಿಂದ ನಡದವರೆಗೆ. ಕೊನೆ ಹಂತದಲ್ಲಿ ನಡದ ಕೆಳಭಾಗದಿಂದ ಪಾದಗಳವರೆಗೆ. ಅದಕ್ಕೆಂದೇ ಶನಿಪೀಡೆ ಇಳಿಯುತ್ತಿದೆಯಾ? ಏರುತ್ತಿದೆಯಾ? ಎಂದು ಹಲವರು ಕೇಳುವುದು. ಪ್ರತಿ ಹಂತವೂ ಎರಡೂವರೆ ವರ್ಷದ್ದಾಗಿರುತ್ತದೆ.

Sade Sati : God Shani descending from Virgo

ಶನಿದೇವನ ಕೈಯಲ್ಲಿ ರಿಮೋಟ್ ಕಂಟ್ರೋಲ್ : ಮೊದಲಿನ ಎರಡೂವರೆ ವರ್ಷಗಳಲ್ಲಿ ಜ್ಞಾಪಕ ಶಕ್ತಿ ಕುಂದುವುದು, ಅತೀವ ಚಿಂತೆ, ಮನಸ್ಸಿಗೆ ಅಸಮಾಧಾನ ಇದ್ದೇ ಇರುತ್ತದೆ. ನಿಮಗೆ ಗೊತ್ತಿರಬಹುದು ಬುದ್ಧಿ-ಮನಸ್ಸು ಎಂದರೆ ದೇಹದ ರಿಮೋಟ್ ಇದ್ದಂಗೆ. ರಿಮೋಟ್‌ನಲ್ಲಿ ಯಾವ ಬಟನ್ ಒತ್ತುತ್ತೆವೋ ಹಾಗೇ ನಮ್ಮ ದೇಹ ಕೇಳುತ್ತದೆ. ಸಾಡೇಸಾತಿ ಮೊದಲ ಹಂತದಲ್ಲಿ ಶನಿದೇವನು ನಮ್ಮ ದೇಹದ ರಿಮೋಟ್ ತಾನೇ ತೆಗೆದುಕೊಂಡು ಬಿಡುತ್ತಾನೆ. ಅಂದರೆ ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾನೆ!

ಆ ಸಮಯದಲ್ಲಿ ಶನಿದೇವ ರಿಮೋಟ್‌ನಲ್ಲಿ ಯಾವ ಬಟನ್ ಪ್ರೆಸ್ ಮಾಡುತ್ತಾನೋ ಅದೇ ರೀತಿ ಆಟವಾಡಲಾರಂಭಿಸುತ್ತದೆ ನಮ್ಮ ದೇಹ ಮತ್ತು ಮನಸ್ಸು. ನಮ್ಮ ಜೀವನದ ರಿಮೋಟ್ ಮಹಾತ್ಮನ ಬಳಿ ಇದ್ದಾಗ ನಾವೇನೂ ಮಾಡುವ ಹಾಗಿಲ್ಲ. ಶನಿದೇವ ಹೇಳಿದಂಗೆ ಕೇಳಲೇಬೇಕಾಗುತ್ತದೆ ಎಂದರೆ ಅರ್ಥ ಮಾಡಿಕೊಳ್ಳಿ ಮಹಾತ್ಮನು ಆಟವಾಡಿಸುವ ರೀತಿ.

ಚತುರರೆಂಬ ಅಹಂಭಾವ ಬಿಟ್ಟುಬಿಡಿ : ಇನ್ನು ಕೆಲವರು ತಮ್ಮನ್ನು ಮಹಾನ್ ಚತುರರೆಂದುಕೊಂಡು ಹಲವರ ಜೀವನದಲ್ಲಿ ಒಂಥರಾ ಚೆಸ್ ಆಟಗಾರರಂತೆ ಆಟವಾಡುತ್ತ, ತಮ್ಮ ಜೀವನವನ್ನು ರಾಜಮಯವನ್ನಾಗಿಸಿಕೊಂಡಿರುತ್ತಾರೆ. ಆದರೆ ಶನಿದೇವನು ಪ್ರಪಂಚವನ್ನೇ ಆಟವಾಡಿಸುವವನು. ಅವನು ಇಂಥ ಆಟಗಾರರ ಜೀವನದಲ್ಲಿ ಎಲ್ಲ ರೀತಿ ಆಟ ಶುರು ಮಾಡುತ್ತಾನೆ. ಮಹಾನ್ ಚತುರರೆಂದುಕೊಂಡು ಹೆಮ್ಮೆಯಿಂದ ಗರ್ವ ಪಡುತ್ತಿರುವವರಿಗೆ, ಶನಿದೇವನಿಂದ ಯಾವ ರೂಪದಲ್ಲಿ, ಯಾವ ವೇಗದಲ್ಲಿ, ಎಲ್ಲಿಂದ ಜೀವನದಲ್ಲಿ ಹೊಡೆತ ಬೀಳುತ್ತದೋ ಗೊತ್ತೇ ಆಗುವುದಿಲ್ಲ ಅವರಿಗೆ. ಇನ್ನು ಆಟ ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತೇನೆಂದರೂ ಬಿಡುವುದಿಲ್ಲ ಶನಿದೇವ. ಆಟವಾಡಲೇಬೇಕು ಮಹಾತ್ಮನ ಆಡಿಸುವ ಆಟದಲ್ಲಿ. ಅಷ್ಟೇ ಅಲ್ಲದೇ ಆಟದಿಂದ ಸಾಕಾಗಿ ಜೀವನದಿಂದಲೇ ಔಟ್ ಆಗುತ್ತೇನೆಂದರೂ ಬಿಡುವುದಿಲ್ಲ ಶನಿದೇವ.

ಇನ್ನು ಕೆಲವರನ್ನು ನೀವು ನೋಡಿರಬಹುದು ಅವರು ಏರಿದ ಮಟ್ಟವನ್ನು. ಅಂಥವರಂತು ಎಷ್ಟೋ ಪೂಜೆ, ಪುನಸ್ಕಾರ ಮಾಡುತ್ತಿರುತ್ತಾರೆ. ಆದರೆ ಬೆಳಗಿನ ಹೊತ್ತು ದೇವರು, ಉಳಿದ ಸಮಯದಲ್ಲೆಲ್ಲ ಅನ್ಯಾಯ ಅಸತ್ಯ, ತೋರಿಕೆಯ ಹಾದಿಯಲ್ಲೇ ನಡೆಯುತ್ತಿರುತ್ತಾರೆ. ಅವರಿಗೆ ಅಧಿಕಾರದ ಮದ ಎಷ್ಟು ಏರಿರುತ್ತದೆಯೆಂದರೆ ಶನಿದೇವ ಎಲ್ಲಾ ನೋಡುತ್ತ ಅವರ ಪಾಪದ ಪಟ್ಟಿಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿರುತ್ತಾನೆ ಎಂಬುದು ಕೂಡ ಅವರಿಗೆ ಅರಿವಿರುವುದಿಲ್ಲ. ಅಷ್ಟೇ ಅಲ್ಲದೇ ಅವರು ಮಾಡಿದ ತಪ್ಪಿಗೆ, ಅವರಿಗೆ ಅಷ್ಟೇ ಅಲ್ಲ ಅವರ ಹೆಂಡತಿ ಮಕ್ಕಳಿಗೂ ಶುರುವಾಗುತ್ತದೆ ನೋಡಿ ಶನಿಶಾಪ! ಹೇಳಲಸಾಧ್ಯ ನೋವು ಅನುಭವಿಸಬೇಕಾಗುತ್ತದೆ ಅವರು ಮತ್ತು ಅವರ ಕುಟುಂಬದವರು.

ಇನ್ನು ಕೆಲವರು ದೇವರು ನಮಗೆ ಮಾತ್ರ, ನಾವೇ ದೇವರಿಗಾಗಿ ಎಂದುಕೊಂಡು ದೇವರನ್ನೇ ತಮ್ಮ ಆಸ್ತಿ ಎಂದುಕೊಂಡಿರುತ್ತಾರೆ. ಅಷ್ಟೇ ಅಲ್ಲದೇ ಮಡಿ, ಹುಡಿ, ಆ ಜಾತಿ ಈ ಜಾತಿ ಎಂದು ಮೇಲು-ಕೀಳು ಎನ್ನುತ್ತ, ಸ್ವಜಾತಿಯ ಅತೀವ ಪ್ರೇಮದಿಂದ ತಮ್ಮಷ್ಟಕ್ಕೆ ತಾವೇ ಬೆಳೆದು ತಮ್ಮವರನ್ನೇ ಬೆಳೆಸುತ್ತಿರುತ್ತಾರೆ. ಇವರ ಜೀವನದಲ್ಲಂತೂ ಶನಿದೇವ ಇವರನ್ನು ಅಟ್ಟಾಡಿಸಿಕೊಂಡು ಮುಟ್ಟಾಟ ಶುರು ಮಾಡುತ್ತಾನೆ. ಕುಂತರೂ ಏಟು, ನಿಂತರೂ ಏಟು, ಓಡಲೇಬೇಕು ಎಷ್ಟೇ ಉಸಿರು ಕಟ್ಟಿದರೂ ಓಡುತ್ತಲೇ ಇರಬೇಕು. ಏಕೆಂದರೆ ಹಿಂದೆ ಶನಿದೇವ ಬೆನ್ನತ್ತಿರುತ್ತಾನೆ. ಈಗ ನಿಮಗೆ ಅರ್ಥವಾಗಿರಬೇಕು. ಇಂಥವರ ರಾಶಿಗೆ ಶನಿದೇವನ ಕುದೃಷ್ಟಿ ಬಿದ್ದಾಗ ಆಗುವ ಶಿಕ್ಷೆ. ಇಂಥಹವರು ಜೀವನದ ಬಂಡಿಯನ್ನು ಎಲ್ಲಿಯೂ ನಿಲ್ಲಿಸುವ ಹಾಗಿಲ್ಲ. ಹೆಂಡತಿ ಮಕ್ಕಳೆಲ್ಲರಿರೊಂದಿಗೆ ಕಣ್ಣೀರ ಹನಿ ಹಾಕುವಂತಾಗಿ ಮಮ್ಮಲ ಮರಗುವಂತಾಗುತ್ತಾರೆ.

ಇನ್ನು ಕೆಲವರರಿರುತ್ತಾರೆ, ಪ್ರತಿದಿನ ಐದು ನಿಮಿಷ ಸಿಕ್ಕರೆ ಸಾಕು ಐದು ನಿಮಿಷದಲ್ಲೇ ತುರ್ತು ಪೂಜೆ ಮಾಡುತ್ತಾರೆ. ಒಂದು ಗಂಟೆ ಸಿಕ್ಕರೆ ಇಡೀ ಒಂದು ಗಂಟೆ ಪೂಜೆ ಮಾಡುತ್ತಾರೆ, ಇಲ್ಲವಾದರೆ ಪೂಜೆ ಮಾಡಲೂ ಕೂಡ ಸಮಯವಿಲ್ಲ ನನಗೆ ಎನ್ನುತ್ತ, ಇವರೊಬ್ಬರೇನೇ ತುಂಬಾ ಬ್ಯುಸಿ ಇದ್ದಾರೆ ಜಗತ್ತಿನಲ್ಲಿ ಎನ್ನುವ ಹಾಗೆ ಮಾತನಾಡುತ್ತಿರುತ್ತಾರೆ. ಇದರರ್ಥ ದೇವರೇ ಇವರಿಂದ ಪೂಜೆ ಮಾಡಿಸಿಕೊಳ್ಳಲು ಸಮಯ ಹೊಂದಿಸಿಕೊಳ್ಳಬೇಕು! ಹೊರಗೆಲ್ಲ ನೋಡಿದರೆ ಮಹಾನ್ ದೈವಭಕ್ತರಂತೆನೇ ತೋರ್ಪಡಿಸಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಎಲ್ಲರೂ ಪ್ರತಿನಿತ್ಯದ ಪೂಜೆಗೆಂದು ಇಂತಿಷ್ಟೇ ಎಂದು ಸಮಯ ಹೊಂದಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಇಡೀ ದಿನವೂ ಬೇರೆ ಯಾವುದೇ ಕೆಲಸವಿಲ್ಲದೇ ಬರೀ ಪೂಜೆ ಮಾಡುತ್ತ ಕಷ್ಟಗಳಿಂದ ಪಾರು ಮಾಡಪ್ಪಾ ದೇವರೇ ಎಂದು ಕೇಳುತ್ತ ಕುಳಿತುಕೊಳ್ಳುವಂತೆ ಮಾಡುತ್ತಾನೆ ಶನಿರಾಜ ಎಂಬುದನ್ನು ತಿಳಿದುಕೊಳ್ಳಬೇಕು.

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬ ಮಾತು ನಿಮಗೆ ಗೊತ್ತಿರಬಹುದು. ಆದಷ್ಟು ಅವರಿವರ ಜೀವನದ ವಿಷಯಗಳನ್ನು ಇತರೆಡೆಗಳಲ್ಲಿ ಪ್ರಸ್ತಾಪಿಸುತ್ತ ಮತ್ತೊಬ್ಬರ ಜೀವನದ ಸಂಕಷ್ಟಗಳ ವಿಷಯಗಳನ್ನು ಬೀದಿಗೆ ಬರುವ ಹಾಗೆ ಮಾಡದಿರಿ. ಮಾಡುತ್ತೇನೆ ಎಂದರೆ ನಿಮ್ಮ ಜೀವನವು ಬೀದಿಗೆ ಬರುವ ಹೊತ್ತು ಸಮೀಪ ಬಂದಿದೆ ಎಂದು ಅರ್ಥ ಮಾಡಿಕೊಳ್ಳಿ ಅಷ್ಟೇ.

ಈಗ ವೃಶ್ಚಿಕ ರಾಶಿಯವರಿಗೆ ಸಾಡೇಸಾತಿ ಮೊದಲನೇ ಹಂತ ನಡೆಯುತ್ತಿದೆ. ಅವರ ಮೊದಲ ಹಂತ ಹೇಗಿದೆ ಎಂದು ಮುಂದಿನ ಲೇಖನದಲ್ಲಿ ನೋಡೋಣ. (ಒನ್‌ಇಂಡಿಯಾ ಕನ್ನಡ)

ಶನಿದೇವನ ಕೃಪೆಗೆ : ಪ್ರತಿ ಶನಿವಾರ ಶ್ರೀ ಶನೈಶ್ಚರಷ್ಟೋತ್ತರ ಶತನಾಮಾವಳಿ ಪಠಣ ಮಾಡಿ. [ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಾದ ನಾಗನೂರಮಠ ಎಸ್.ಎಸ್. ಅವರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011).

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+