ಈ 5 ರಾಶಿಯವರು ಕಾರಣವಿಲ್ಲದೆ ಕಣ್ಣೀರು ಹಾಕುವರು: ಇದು ನಿಮ್ಮ ರಾಶಿಯೇ?

ಜೀವನದಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತೇವೆ. ಕೆಲವು ಜನರು ತುಂಬಾ ಭಾವನಾತ್ಮಕ ಮತ್ತು ಸೂಕ್ಷ್ಮವಾಗಿರುತ್ತಾರೆ. ಏಕೆಂದರೆ ಅವರು ಕಷ್ಟಕರ ಸಂದರ್ಭಗಳನ್ನು ಹೇಗೆ ಎದುರಿಸಬೇಕೆಂದು ತಿಳಿದಿರುವುದಿಲ್ಲ. ಇಂತಹ ಜನರಿಗೆ ಅಳಲು ಗಂಭೀರವಾದ ಕಾರಣ ಬೇಕಿಲ್ಲ. ಕಾರಣವಿಲ್ಲದೇ ಕಣ್ಣೀರು ಹಾಕುತ್ತಾರೆ. ಜೊತೆಗೆ ಇವರು ತುಂಬಾ ಸಂವೇದನಾಶೀಲರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಯವರ ಗುಣಲಕ್ಷಣಗಳ ಮೂಲಕ ಇಂತವರನ್ನು ಅರ್ಥಮಾಡಿಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ ಎಂದು ತಿಳಿಯಬಹುದು. ಹಾಗಾದರೆ ಆ ರಾಶಿಯವರ ಬಗ್ಗೆ ತಿಳಿಯೋಣ.

ವೃಷಭ ರಾಶಿ

ವೃಷಭ ರಾಶಿಯವರು ಭಾವನಾತ್ಮಕತೆಗೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರ ಸುತ್ತಲು ಇರುವ ಪರಿಸರ ಹಾಗೂ ಸಂಬಂಧಗಳು ಅವರ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ವೃಷಭ ರಾಶಿಯವರು ಸಣ್ಣಪುಟ್ಟ ವಿಚಾರಗಳಿಗೆ ಅಥವಾ ಕಾರಣವೇ ಇಲ್ಲದೆ ಕಣ್ಣೀರು ಹಾಕಬಹುದು. ಇಂತವರಿಗೆ ಭದ್ರತೆ ಮತ್ತು ಮತ್ತೊಬ್ಬರ ಸಹಕಾರದ ಅಗತ್ಯತೆ ಇದೆ. ಅವರ ಕೆಲಸದಲ್ಲಾಗುವ ಯಾವುದೇ ಅಡಚಣೆ ಅಥವಾ ಸಂಘರ್ಷ ವೃಷಭ ರಾಶಿಯ ಸೂಕ್ಷ್ಮ ಸ್ವಭಾವವನ್ನು ಪ್ರಚೋದಿಸುತ್ತವೆ. ಇದರಿಂದ ಚೇತರಿಸಿಕೊಳ್ಳಲು ಅವರು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜೊತೆಗೆ ಭಾವುಕರಾಗಬಹುದು.

Zodiac sign who are more emotional and sensitive know in kannada

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಭಾವನಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಅವರು ಉತ್ತಮ ಅಂತಃಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಹೆಚ್ಚು ಸಹಾನುಭೂತಿ ಹೊಂದಿದ್ದಾರೆ. ಇದು ಇತರರ ಭಾವನೆಗಳನ್ನು ಅನುಭವಿಸುವಂತೆ ಮಾಡುತ್ತದೆ. ಈ ರಾಶಿಯವರು ಟೀಕೆ ಅಥವಾ ನಕಾರಾತ್ಮಕ ಶಕ್ತಿಯಿಂದ ಸುಲಭವಾಗಿ ಪರಿಣಾಮಕ್ಕೆ ಒಳಗಾಗುತ್ತಾರೆ. ಆ ದುರ್ಬಲತೆಯಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಬೇಕಾಗಬಹುದು. ಬೇರೆಯವರ ಸಮಸ್ಯೆಗಳನ್ನು ತಮ್ಮ ಸಮಸ್ಯೆಗಳೆಂದು ಅಂದುಕೊಳ್ಳಬಹುದು.

ಕನ್ಯಾ ರಾಶಿ

ಕನ್ಯಾರಾಶಿಯವರು ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಅವರು ಅತಿಯಾಗಿ ವಿಶ್ಲೇಷಿಸುವುದರ ಕಡೆ ಒಲವು ತೋರುತ್ತಾರೆ. ತಮ್ಮನ್ನು ತಾವು ಮತ್ತು ಇತರರನ್ನು ಹೆಚ್ಚು ಟೀಕಿಸಬಹುದು. ಕನ್ಯಾ ರಾಶಿಯವರು ಒತ್ತಡ ಅಥವಾ ವೈಫಲ್ಯಗಳಲ್ಲಿ ಸುಲಭವಾಗಿ ಮುಳುಗಬಹುದು. ಇದು ಭಾವನಾತ್ಮಕ ಸೂಕ್ಷ್ಮತೆಗೆ ಕಾರಣವಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ತೀವ್ರತೆ ಮತ್ತು ಭಾವನಾತ್ಮಕ ಆಳಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಭಾವನೆಗಳನ್ನು ಬಲವಾಗಿ ಅನುಭವಿಸುತ್ತಾರೆ. ಅವುಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ. ಈ ರಾಶಿಯವರು ಅನ್ಯಾಯಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತಾರೆ. ಅವರು ಸಣ್ಣ ಪ್ರಮಾಣದಲ್ಲಿ ಗಾಯಗೊಂಡಾಗ ಬೇಗ ಭಾವುಕರಾಗಬಹುದು. ಸಣ್ಣ ವಿಚಾರಗಳು ಅವರಿಗೆ ದೊಡ್ಡದಾಗಿ ಕಾಣುತ್ತವೆ.

ಮೀನ ರಾಶಿ

ಮೀನ ರಾಶಿಯ ಪ್ರಮುಖ ಲಕ್ಷಣವೆಂದರೆ ಅವರು ತುಂಬಾ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಅವರು ಭಾವನಾತ್ಮಕ ಗುಣವನ್ನು ಹೊಂದಿರುತ್ತಾರೆ. ಆಗಾಗ್ಗೆ ಆಳವಾದ ಬೇಡದ ವಿಷಯಗಳನ್ನು ಯೋಚಿಸುತ್ತಾರೆ. ಆದ್ದರಿಂದ ಈ ರಾಶಿಯವರು ತಮಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ ನೆನದು ಭಾವುಕರಾಗಬಹುದು. ಅವರು ತಮ್ಮ ಭಾವನಾತ್ಮಕ ಯೋಗಕ್ಷೇಮವನ್ನು ರಕ್ಷಿಸಲು ಕಷ್ಟಪಡುತ್ತಾರೆ.

ಇತರ ರಾಶಿಚಕ್ರ ಚಿಹ್ನೆಗಳು

ಮೇಷ, ಮಿಥುನ, ಸಿಂಹ, ತುಲಾ, ಧನು ರಾಶಿ, ಮಕರ ಮತ್ತು ಕುಂಭ ರಾಶಿಯವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಬಹಳ ಸ್ಥಿರವಾಗಿರುತ್ತವೆ. ಈ ರಾಶಿಯವರು ತಮ್ಮ ಭಾವನೆಗಳನ್ನು ಯಾರಿಗೆ ವ್ಯಕ್ತಪಡಿಸುತ್ತಾರೆ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಆದ್ದರಿಂದ ಅವರು ಭಾವನಾತ್ಮಕವಾಗಿ ಸುಲಭವಾಗಿ ಪ್ರಭಾವಿತರಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+