2025 varsha bhavishya: ಮೇಷದಿಂದ ಕನ್ಯಾದ ತನಕ ವಾರ್ಷಿಕ ರಾಶಿ ಭವಿಷ್ಯ ಹೀಗಿದೆ...

ನಾವೆಲ್ಲಾ ಇನ್ನೇನು ಕೆಲವೇ ತಿಂಗಳುಗಳಲ್ಲಿ 2025ಕ್ಕೆ ಕಾಲಿಡಲಿದ್ದೇವೆ. ಸಾಮಾನ್ಯವಾಗಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಲವಾರು ಯೋಜನೆಗಳನ್ನು ಮಾಡಿಕೊಳ್ಳಲಾಗುತ್ತದೆ. ಹೊಸ ಹೊಸ ಕಾರ್ಯಗಳನ್ನು ಆರಂಭಿಸುವ ಮೂಲಕ ದೇವರ ಆಶೀರ್ವಾದ ಪಡೆದು ಮುಂಬರುವ ವರ್ಷದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ, ಆರ್ಥಿಕ ಜೀವನ ಸಮೃದ್ಧವಾಗಿರಲಿ ಎಂದು ಬೇಡಿಕೊಳ್ಳಲಾಗುತ್ತದೆ. ಕೆಲವರು ಜ್ಯೋತಿಷ್ಯದ ಮೊರೆ ಕೂಡ ಹೋಗುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಮೂಲಕ ಹೊಸ ವರ್ಷ ಯಾವ ರಾಶಿಗೆ ಯಾವ ಫಲ ನೀಡಲಿದೆ ಎಂದು ತಿಳಿಯಬಹುದು. ಹಾಗಾದರೆ ಮುಂಬರುವ 2025ನೇ ವರ್ಷದಲ್ಲಿ ದ್ವಾದಶಿ ರಾಶಿಯವರ ವೈವಾಹಿಕ ಜೀವನ, ವೃತ್ತಿಜೀವನ, ಉದ್ಯೋಗ, ಸಂಪತ್ತು, ಆರ್ಥಿಕತೆ, ಆರೋಗ್ಯ, ಶಿಕ್ಷಣ ಹೇಗಿರಲಿದೆ ಎಂದು ಈಗ ತಿಳಿಯೋಣ.

Yearly Horoscope 2025 From Aries to Virgo Zodiac Signs in Kannada

ಮೇಷ ರಾಶಿ

ಮೇಷ ರಾಶಿಯವರಿಗೆ 2025 ಮಿಶ್ರ ಫಲವನ್ನು ನೀಡುತ್ತದೆ. ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ಮೇಷ ರಾಶಿಯವರ ಮೇಲೆ ಶನಿ ದೇವನ ಅನುಗ್ರಹವಿರಲಿದೆ. ಈ ಸಮಯದಲ್ಲಿ ಅವರು ಹಲವಾರು ಕ್ಷೇತ್ರಗಳಲ್ಲಿ ಅನುಕೂಲಕರ ಸಮಯವನ್ನು ಅನುಭವಿಸುತ್ತಾರೆ. ಇದರ ನಂತರ ಕೆಲ ಸಮಸ್ಯೆಗಳು ಎದುರಾಗುತ್ತವೆ. ನಂತರ ಪ್ರೇಮ ಜೀವನ ಬಲ ಕಳೆದುಕೊಳ್ಳಲಿದೆ. ಕುಟುಂಬದಲ್ಲಿ ಮನಸ್ತಾಪಗಳು ಉದ್ಬವಿಸಬಹುದು.

ಗುರುವಿನ ಸಾಗಣೆಯಿಂದ ಮೇ ತಿಂಗಳಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ. ಸಾಮಾನ್ಯವಾಗಿ ಈ ವರ್ಷ ನಿಮ್ಮ ವ್ಯವಹಾರದಲ್ಲಿ ನೀವು ಯಶಸ್ವಿಯಾಗುತ್ತೀರಿ. ಆದರೂ ವರ್ಷದ ದ್ವಿತೀಯಾರ್ಧದಲ್ಲಿ ಎಚ್ಚರಿಕೆಯ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಗಳು ಈ ವರ್ಷ ಹೆಚ್ಚು ಸಮರ್ಪಣಾ ಮನೋಭಾವದಿಂದ ಅಧ್ಯಯನ ಮಾಡಬೇಕಾಗುತ್ತದೆ.

Yearly Horoscope 2025 From Aries to Virgo Zodiac Signs in Kannada

ವೃಷಭ ರಾಶಿ

ವೃಷಭ ರಾಶಿಯ ಅಡಿಯಲ್ಲಿ ಜನಿಸಿದ ಜನರು 2025ರಲ್ಲಿ ಹೆಚ್ಚು ಶ್ರಮ ಪಡಬೇಕಾಗುತ್ತದೆ. ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ವಿಶೇಷವಾಗಿ ಮಾರ್ಚ್ 2025 ರವರೆಗೆ ನೀವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ನಂತರ ಶನಿ ದೇವನ ಕೃಪೆ ನಿಮ್ಮ ಮೇಲೆ ಇರಲಿದೆ.

ಮಾರ್ಚ್ 2025ರ ನಂತರ ಕೆಲಸದಲ್ಲಿ ನೀವು ಪಟ್ಟ ಶ್ರಮದ ಫಲವನ್ನು ನೀವು ಪಡೆಯುವಿರಿ. ಮೇ ವರೆಗೆ ರಾಹು ಸಂಕ್ರಮಣ ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ಸೂಚಿಸುತ್ತಿದೆ. 2025ರ ಭವಿಷ್ಯದ ಪ್ರಕಾರ ಮೇ ನಂತರ ಕೆಲಸದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು. ಶನಿ ಮತ್ತು ರಾಹು ಅಂತಹ ಸ್ಥಾನದಲ್ಲಿರುವುದರಿಂದ, ಸವಾಲುಗಳು ವರ್ಷಪೂರ್ತಿ ಮುಂದುವರಿಯಬಹುದು. ಆದರೆ ಅದು ನಿಮ್ಮ ಶ್ರಮ ಹಾಗೂ ಪ್ರಾಮಾಣಿಕತೆಯ ಮೇಲೆ ನಿರ್ಧಾರವಾಗಿರುತ್ತದೆ.

ಗುರುವಿನ ಸಂಚಾರ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಗುರುವಿನ ಬಲದಿಂದ ನಿಮ್ಮ ಆರ್ಥಿಕ ಜೀವನ ಬಲಗೊಳ್ಳುತ್ತದೆ. ಸಾಮಾನ್ಯವಾಗಿ ಶಿಕ್ಷಣಕ್ಕೆ ಇದು ಉತ್ತಮ ವರ್ಷವಾಗಿದೆ. ಅಲ್ಲದೆ ಮದುವೆ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ವರ್ಷ ಅನುಕೂಲಕರವಾಗಿರುತ್ತದೆ. ಹೆಚ್ಚುವರಿಯಾಗಿ 2025ರಲ್ಲಿ ವೃಷಭ ರಾಶಿಯವರ ಪ್ರೇಮ ಸಂಬಂಧ ಅದ್ಭುತವಾಗಿರುತ್ತದೆ.

Yearly Horoscope 2025 From Aries to Virgo Zodiac Signs in Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ 2025 ವರ್ಷ ಸ್ವಲ್ಪ ಉತ್ತಮವಾಗಿರುತ್ತದೆ. ಹೀಗಾಗಿ ಮಿಥುನ ರಾಶಿಯವರಿಗೆ 2024ಕ್ಕಿಂತ 2025 ಉತ್ತಮ ವರ್ಷವಾಗಬಹುದು. ಮಾರ್ಚ್ ವೇಳೆಗೆ ಶನಿಯ ಆಶೀರ್ವಾದದಿಂದ ಮಿಥುನ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ.

ಹೆಚ್ಚಿನ ಪ್ರಯತ್ನ ಶನಿ ದೇವನನ್ನು ಮೆಚ್ಚಿಸುತ್ತದೆ. ಇದರಿಂದ ನೀವು ಧನಾತ್ಮಕ ಫಲಿತಾಂಶಗಳನ್ನು ಸಹ ಪಡೆಯಬಹುದು. ಸುಲಭವಾಗಿ ಹೇಳುವುದಾದರೆ, ಈ ವರ್ಷವು ಬಹಳಷ್ಟು ಕೆಲಸ ಮಾಡಬೇಕಾಗಿದ್ದರೂ ಸಹ, ಫಲಿತಾಂಶಗಳು ಅನುಕೂಲಕರವಾಗಿರುತ್ತವೆ. ಕಠಿಣ ಪರಿಶ್ರಮದ ಜೊತೆಗೆ ಧರ್ಮ, ಆಧ್ಯಾತ್ಮಿಕತೆ ಮತ್ತು ದೇವರಿಗೆ ಬದ್ಧರಾಗಿರುವುದು ಅತ್ಯಗತ್ಯವಾಗಿದೆ. ಆಗ ಮಾತ್ರ ನೀವು ಮಾನಸಿಕ ಶಾಂತತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇದು ನಿಮ್ಮ ವೈಯಕ್ತಿಕ, ವೃತ್ತಿಪರ ಮತ್ತು ವ್ಯವಹಾರ ಜೀವನದ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತದೆ. ಆಧ್ಯಾತ್ಮಿಕತೆಯಿಂದ ದೂರವಿರುವುದು ಕೆಲವೊಮ್ಮೆ ಜನರು ಮಾನಸಿಕವಾಗಿ ಹೆಚ್ಚು ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ. ಗುರುವಿನ ಸಾಗಣೆಯು ಮೇ ತಿಂಗಳಲ್ಲಿ ಸಾಧಾರಣ ಫಲಿತಾಂಶಗಳನ್ನು ನೀಡುತ್ತದೆ. ನಂತರ ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಲಿದೆ. ವೈಯಕ್ತಿಕ ಜೀವನದ ದೃಷ್ಟಿಯಿಂದ ಮೇ ತಿಂಗಳು ಅನುಕೂಲಕರವಾದ ತಿಂಗಳಾಗಿದೆ. ಮೇ ನಂತರ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದೆ.

Yearly Horoscope 2025 From Aries to Virgo Zodiac Signs in Kannada

ಕರ್ಕಾಟಕ ರಾಶಿ

2025ರ ವರ್ಷ ಕರ್ಕಾಟಕ ರಾಶಿಯವರಿಗೆ ಪ್ರಮುಖ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಹಿಂದಿನ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುವಿರಿ. ವಿಶೇಷವಾಗಿ ಮಾರ್ಚ್ ನಂತರ ನಿಮ್ಮೊಳಗೆ ಹೊಸ ಉತ್ಸಾಹ ಮತ್ತು ಶಕ್ತಿಯನ್ನು ಗಮನಿಸಬಹುದು.

ಮೇ ತಿಂಗಳಲ್ಲಿ ಇನ್ನೂ ದೊಡ್ಡ ಆರ್ಥಿಕ ಲಾಭವನ್ನು ಗಳಿಸಲು ಅವಕಾಶವಿದೆ. ಮೇ ನಂತರ ವೆಚ್ಚಗಳು ಹೆಚ್ಚಾಗಬಹುದು. ವಿದೇಶದಲ್ಲಿ ವಾಸಿಸುವವರು ಅಥವಾ ತಮ್ಮ ಜನ್ಮಸ್ಥಳದಿಂದ ದೂರದಲ್ಲಿರುವವರು ಮೇ ನಂತರ ಧನಲಾಭ ಪಡೆಯುತ್ತಾರೆ. ಆದರೆ ಕುಟುಂಬ ಮತ್ತು ಆರ್ಥಿಕ ವ್ಯವಹಾರಗಳ ವಿಷಯಕ್ಕೆ ಬಂದಾಗ ಹೆಚ್ಚಿನ ಎಚ್ಚರಿಕೆಯನ್ನು ಹೊಂದಿರುವುದು ಅತ್ಯಾವಶ್ಯಕ.

ಮೇ ನಂತರ ರಾಹುವಿನ ಸಂಚಾರ ದುರ್ಬಲವಾಗಿರುತ್ತದೆ. ಹೀಗಾಗಿ ಕೆಲವೊಮ್ಮೆ ಕೆಲವು ಅನಿರೀಕ್ಷಿತ ಸಮಸ್ಯೆಗಳು ಉಂಟಾಗಬಹುದು. ಪ್ರೇಮ ವಿವಾಹ ಮತ್ತು ವೈವಾಹಿಕ ವ್ಯವಹಾರಗಳಿಗೆ ಮೇ ತಿಂಗಳು ತುಲನಾತ್ಮಕವಾಗಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಮೇ ಮೊದಲು ತಮ್ಮ ಅಧ್ಯಯನದ ವೇಗವನ್ನು ಹೆಚ್ಚಿಸಿದರೆ ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

Yearly Horoscope 2025 From Aries to Virgo Zodiac Signs in Kannada

ಸಿಂಹ ರಾಶಿ

ಸಿಂಹ ರಾಶಿಯವರು 2025ರಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೆಚ್ಚು ಏಳಿಗೆ ಹೊಂದುತ್ತಾರೆ. ಮಾರ್ಚ್ ನಲ್ಲಿ ಶನಿ ಸಾಗಣೆ ಸಿಂಹ ರಾಶಿಯವರಿಗೆ ಮಿಶ್ರ ಫಲವನ್ನು ನೀಡಬಹುದು. ಇದರಿಂದಾಗಿ ವ್ಯಾಪಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸವಾಲುಗಳು ಅಥವಾ ಸಮಸ್ಯೆಗಳು ಉದ್ಭವಿಸಬಹುದು. ವರ್ಗಾವಣೆ ಅಥವಾ ಉದ್ಯೋಗ ಬದಲಾವಣೆ ಸಂದರ್ಭಗಳು ಎದುರಾಗಬಹುದು. ಇದರಿಂದಾಗಿ ನೀವು ಮನೆಗೆ ಹೋಗುವುದನ್ನು ತಪ್ಪಿಸಬೇಕಾಗಬಹುದು ಎಂದು 2025ರ ಜಾತಕ ಊಹಿಸುತ್ತದೆ.

ಇನ್ನೂ ಈ ವರ್ಷ ಆದಾಯ ಅಷ್ಟು ಸುಲಭವಾಗಿರುವುದಿಲ್ಲ. ಏಕೆಂದರೆ ವರ್ಷದ ಆರಂಭದಲ್ಲಿ ಗುರುವಿನ ದೃಷ್ಟಿ ಸಂಪತ್ತಿನ ಸ್ಥಾನದಲ್ಲಿರುತ್ತದೆ. ಗುರುವು ಅಂತಿಮವಾಗಿ ಲಾಭದ ಮನೆಗೆ ಆಗಮಿಸುತ್ತದೆ. ವಿವಿಧ ವಿಧಾನಗಳ ಮೂಲಕ ಲಾಭ ನೀಡಲು ಪ್ರಯತ್ನಿಸುತ್ತದೆ. ಕೆಲಸದಲ್ಲಿ ಕೆಲವು ಸವಾಲುಗಳಿದ್ದರೂ, ಹಣದ ಬಗ್ಗೆ ಅನುಕೂಲಕರವಾದ ಪರಿಸ್ಥಿತಿಗಳೂ ಇರಬಹುದು.

ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ ಮೇ ನಂತರದ ಅವಧಿಯು ಉತ್ತಮ ಫಲಿತಾಂಶಗಳನ್ನು ನೀಡಬಹುದು. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಮದುವೆಗೆ ಸಂಬಂಧಿಸಿದ ವಿಷಯಗಳು ಪ್ರಸ್ತಾಪವಾಗಬಹುದು. ಇನ್ನೂ ಮೇ ತಿಂಗಳ ನಂತರದ ತಿಂಗಳುಗಳು ಶೈಕ್ಷಣಿಕ-ಸಂಬಂಧಿತ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

Yearly Horoscope 2025 From Aries to Virgo Zodiac Signs in Kannada

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ 2025 ಲಾಭದಾಯಕ ವರ್ಷ ಎಂದು ಹೇಳಬಹುದು. ಶನಿಯ ಸಂಕ್ರಮಣದಿಂದಾಗಿ ವರ್ಷದ ಆರಂಭದಿಂದ ಮಾರ್ಚ್ ತಿಂಗಳವರೆಗೆ ಎಲ್ಲವೂ ಉತ್ತಮವಾಗಿರುತ್ತದೆ. ನಂತರ ಶನಿಯ ಸಾಗಣೆಯು ಸಾಂದರ್ಭಿಕವಾಗಿ ಸರಾಸರಿ ಫಲಿತಾಂಶಗಳನ್ನು ನೀಡುತ್ತದೆ.

ಗುರುವಿನ ಸಾಗಣೆಯು ಮೇ ಮಧ್ಯದವರೆಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ನಿಮ್ಮ ಮೊದಲ ಮತ್ತು ಏಳನೇ ಮನೆಯಿಂದ ರಾಹು ಕೇತುಗಳ ಪ್ರಭಾವ ಮೇ ನಂತರ ಇರುತ್ತದೆ. ಇದರ ಪರಿಣಾಮವಾಗಿ ವ್ಯಾಪಾರಗಳು ನಂತರದ ದಿನಗಳಲ್ಲಿ ತೊಂದರೆಗಳನ್ನು ಎದುರಿಸುವುದಿಲ್ಲ. ಮದುವೆಗೆ ಯಾವುದೇ ಅಡೆತಡೆಗಳು ಇರುವುದಿಲ್ಲ.

ಆರೋಗ್ಯದಲ್ಲಿ ಸುಧಾರಣೆಯನ್ನು ಸಹ ಕಾಣಬಹುದು. ವೃತ್ತಿಪರ ಶಿಕ್ಷಣವನ್ನು ಅನುಸರಿಸುವ ವಿದ್ಯಾರ್ಥಿಗಳು ಸಹ ಅನುಕೂಲಕರ ಸಮಯವನ್ನು ಕಾಣುತ್ತಾರೆ. ಒಟ್ಟಾರೆಯಾಗಿ ಈ ವರ್ಷದ ಬಹುಪಾಲು ಸನ್ನಿವೇಶಗಳು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ಒದಗಿಸುತ್ತಿವೆ.

2025ನೇ ವರ್ಷದ ಆಗಮನಕ್ಕಾಗಿ ಪ್ರತಿಯೊಬ್ಬರೂ ಉತ್ಸಾಹದಿಂದ ಕಾಯುತ್ತಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ 2025ನೇ ವರ್ಷ ಅವರ ಜೀವನವನ್ನು ಹೇಗೆ ಬದಲಾಯಿಸಲಿದೆ, ಯಾವೆಲ್ಲಾ ಬದಲಾವಣೆಯನ್ನು ನೀವು ಕಾಣಬಹುದು, ಈ ವರ್ಷ ಯಶಸ್ಸು ಲಭಿಸುವುದಾ? ಧನಗಮದ ಯೋಗ ಸೃಷ್ಟಿಯಾಗಲಿದೆಯೇ ಎಂದು ತಿಳಿದುಕೊಳ್ಳುವ ಕೂತೂಹಲವಿರುತ್ತದೆ. ಈ ಪ್ರಶ್ನೆಗಳಿಗೆ ಜ್ಯೋತಿಷ್ಯದಲ್ಲಿ ಉತ್ತರವಿದೆ.

ಇನ್ನು ಕೆಲವೇ ತಿಂಗಳಿಂದ ನಂತರ 2025ರ ಹೊಸ ವರ್ಷದ ಆಗಮಿಸಲಿದೆ. ಈ ವರ್ಷದಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನ ಬದಲಾಯಿಸಲಿವೆ. ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಕಂಡು ಬರಲಿದ್ದು, ಕೆಲ ರಾಶಿಯವರಿಗೆ ಶುಭ ಹಾಗೂ ಇನ್ನೂ ಕೆಲ ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ಈ ಗ್ರಹಗಳ ಸಂಚಾರ ನೀಡಲಿದೆ. ಇನ್ನುಳಿದ ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ಭವಿಷ್ಯ ಮುಂದಿನ ವರ್ಷ ಹೇಗಿರಲಿದೆ ಎಂದು ತಿಳಿಯಲು ಮುಂದೆ ಓದಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+