• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ಕಾಟಕ ವರ್ಷ ಭವಿಷ್ಯ: ಪಟ್ಟ ಕಷ್ಟ ಮಾಯವಾಗಿ, ಸುಖ ನಿರೀಕ್ಷಿಸಿ

By ಪಂಡಿತ್ ವಿಠ್ಠಲ ಭಟ್
|

ಕರ್ಕ ರಾಶಿಯವರಿಗೆ ಬಿಡುಗಡೆಯ ವರ್ಷ ಎನ್ನಬಹುದು. ಹಿಂದಿನ ವರ್ಷ ಪಟ್ಟ ಪಾಡು-ಕಷ್ಟಗಳು ಅದೇ ಪ್ರಮಾಣದಲ್ಲಿ ಇರುವುದಿಲ್ಲ. ಈ ವರ್ಷದ ಅತ್ಯಂತ ಸಂತಸದ ಸಂಗತಿ ಅಂದರೆ ಸಾಲಗಳಿಂದ ಮುಕ್ತಿ! ಹೌದು ಅನಿವಾರ್ಯ ಕಾರಣಗಳಿಂದಾಗಿ ನೀವು ಹೋದ ವರುಷದಿಂದ ಸಿಲುಕಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಈ ವರ್ಷ ಬಿಡುಗಡೆಗೊಳ್ಳಲಿದ್ದೀರಿ.

ಆದರೆ, ಬಿಡುಗಡೆ ನಿಮ್ಮ ಅನುಭವಕ್ಕೆ ಬರಲು ಎರಡು ಮೂರು ತಿಂಗಳು ಹಿಡಿಯಬಹುದು. ಆರೋಗ್ಯದ ವಿಚಾರದಲ್ಲಿಯೂ ಸುಧಾರಣೆ ಕಾಣಿಸುತ್ತಿದೆ. ಆಗದವರ ಕುತಂತ್ರದಿಂದಾಗಿ ನಿಂತುಹೋಗುತ್ತಿದ್ದ ವಿವಾಹಾದಿ ಶುಭ ಕಾರ್ಯಗಳಿಗೆ ಚೈತನ್ಯ ದೊರಕಲಿದೆ. ಉದ್ಯೋಗದಲ್ಲಿ ನಿಮ್ಮ ಪಕ್ಕದವರ ಹತ್ತಿರದ ತನಕ ಬಂದು ನಿಮ್ಮಲ್ಲಿಗೆ ಬರದ ವಿದೇಶ ಪ್ರಯಾಣದ ಅವಕಾಶಗಳು ಈ ವರುಷ ಬರಲಿವೆ.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ಹಿಂದಿನ ವರುಷ ಮಾಡದ ತಪ್ಪಿಗೆ ಸ್ತ್ರೀಯರು ಅಪವಾದ ಹೊತ್ತು ದುಃಖ ಏನು ಅನುಭವಿಸಿದ್ದರು ಈ ವರುಷ ಅಂಥ ಅಪವಾದದಿಂದ ಮುಕ್ತರಾಗುತ್ತಾರೆ ಎಂಬುದೇ ಸಂತೋಷ. ಭೂಮಿ, ಬಂಗಾರ, ದೊಡ್ಡ ಪ್ರಮಾಣದ ಹಣ ಹೂಡಿಕೆ ಈ ವರುಷ ಆನಂದದಿಂದ ನಿರಾತಂಕವಾಗಿ ಮಾಡಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಂಪೂರ್ಣ ಅಲ್ಲದಿದ್ದರೂ ನಿಮ್ಮ ಮನಸ್ಸಿಗೆ ಸಮಾಧಾನ ಆಗುವಷ್ಟು ಲಭಿಸುತ್ತದೆ.

ಮಾರ್ಚ್ ತಿಂಗಳ ನಂತರ ನೂತನ ವಾಹನ ಖರೀದಿ ಬಗ್ಗೆ ಸಹ ಆಲೋಚನೆ ಮಾಡಬಹುದು. ನಿರುದ್ಯೋಗಿಗಳಿಗೂ ಈ ವರುಷ ಸಮಾಧಾನ ತರಲಿದೆ. ನಿಮ್ಮ ಆಲೋಚನೆ ಅಥವಾ ಯೋಗ್ಯತೆಗೆ ತಕ್ಕ ಕೆಲಸ ಆಲ್ಲದಿದ್ದರೂ ಖಾಲಿ ಕೂತಿರದಂತೆ ಒಂದು ಉದ್ಯೋಗ ಲಭಿಸಲಿದೆ. ಮುಂದೆ ಅದೇ ಸ್ಥಳದಲ್ಲಿ ಅಥವಾ ಬೇರೆಡೆ ಉತ್ತಮ ಅವಕಾಶ ಲಭಿಸುತ್ತದೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಹಲವು ಸೋಲುಗಳ ನಂತರ ಈ ವರ್ಷ ಗೆಲುವು ಸಿಗುವ ಆಶಾಕಿರಣ ಕಾಣುತ್ತಿದೆ. ಆದರೆ ಬಾಳಸಂಗಾತಿಗೆ ಗುರು ಬಲ ಇರಬೇಕು. ರಾಜಕೀಯದಲ್ಲಿ ಇರುವವರು ತಮ್ಮ ಮೇಲಿರುವ ಆರೋಪದಿಂದ ಮುಕ್ತರಾಗಿ ಹೊರಬರಲಿದ್ದಾರೆ. ಸರಕಾರಿ ಅಥವಾ ಖಾಸಗಿ ಕ್ಷೇತ್ರಗಳ ಉದ್ಯೋಗಿಗಳಿಗೆ ಬಡ್ತಿ ಇಲ್ಲದಿದ್ದರೂ ಉದ್ಯೋಗ ಕ್ಷೇತ್ರದಲ್ಲಿ ಕಿರಿ ಕಿರಿ ಕಡಿಮೆ ಆಗಿ ಒಂದು ವಿಧದ ಸಮಾಧಾನ ಸಿಗಲಿದೆ.

ತವರು ಮನೆಯವರೊಂದಿಗೆ ಮನಸ್ತಾಪ ಆಗಿದ್ದಲ್ಲಿ ಈ ವರುಷ ಸ್ವಲ್ಪ ಅದು ಕಡಿಮೆ ಆಗಿ ಎಲ್ಲರೂ ಸುಖವಾಗಿ ಇರಬಹುದು. ನ್ಯಾಯಾಲಯದಲ್ಲಿ ಇರುವ ವ್ಯಾಜ್ಯಗಳು ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಉತ್ತಮ ವರ್ಷ.

ಒಟ್ಟಾರೆ ವರ್ಷ ಫಲ 4/5

ಪರಿಹಾರ

ವೈದಿಕ: ದುರ್ಗಾ ಹವನ, ದುರ್ಗಾ ದೀಪ ನಮಸ್ಕಾರ ಪೂಜೆ, ಚಂಡಿ ಪಾರಾಯಣ ಚಂಡಿಕಾ ಹವನ ಈ ಪೈಕಿ ನಿಮ್ಮ ಕೈಲಾದ ಯಾವುದಾದರೂ ಒಂದು ಕಡ್ಡಾಯವಾಗಿ ಮಾಡಿ

ಕ್ಷೇತ್ರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬರುವ ಬಾಡ ಎಂಬ ಊರಿನಲ್ಲಿ ನೆಲೆಸಿರುವ ಶಕ್ತಿ ಕಾಂಚಿಕಾ ಪರಮೇಶ್ವರೀ ದೇವಿಯನ್ನು ಮೇ ಅಥವಾ ಜೂನ್ ತಿಂಗಳ ಒಳಗೆ ಅಥವಾ ನಿಮಗೆ ಸಾಧ್ಯವಾದ ತಿಂಗಳಿನಲ್ಲಿ ಹುಣ್ಣಿಮೆಯ ಹತ್ತಿರದಲ್ಲಿ [ಹುಣ್ಣಿಮೆ ಮೂರು ನಾಲ್ಕು ದಿನದ ಒಳಗೆ] ದರ್ಶನ ಮಾಡಿ. ಅಲ್ಲಿ ಸಪ್ತಶತೀ ಪಾರಾಯಣ ಮಾಡಿಸಿ. ಉಡಿ ತುಂಬಿ ಯಥಾ ಶಕ್ತಿ ಸೇವೆ ಮಾಡಿಸಿ. ದೇವಸ್ಥಾನದ ಅರ್ಚಕರ ಸಂಪರ್ಕ ಸಂಖ್ಯೆ- 9901630640

ರತ್ನ: ಉತ್ತಮ ಗುಣಮಟ್ಟದ 'ಮುತ್ತು' {ಕನಿಷ್ಠ 5 ಕ್ಯಾರೆಟ್ ತೂಕ} ಬೆಳ್ಳಿಯಲ್ಲಿ ಉಂಗುರ ಅಥವಾ ಡಾಲರ್ ಮಾಡಿಸಿ, ಎರಡು ದಿನ ಪೂಜಿಸಿ, ಅಭಿಮಂತ್ರಿಸಿ ಬೆರಳಿಗೆ ಅಥವಾ ಕುತ್ತಿಗೆಯಲ್ಲಿ ಧರಿಸಿ.

ಸ್ತೋತ್ರ: ಪ್ರತಿ ದಿನ ತಪ್ಪದೇ ದುರ್ಗಾ ಅಷ್ಟೋತ್ತರ ಪಠಿಸಿ ಹಾಗೂ ಸ್ತ್ರೀಯರು ಶುಕ್ರವಾರ, ಮಂಗಳವಾರ ಅದೇ ಅಷ್ಟೋತ್ತರ ಮಂತ್ರಗಳಿಂದ ಮನೆಯಲ್ಲಿ ಕುಂಕುಮಾರ್ಚನೆ ಮಾಡಿ.

ತಿಂಗಳ ಭವಿಷ್ಯ

ಜನವರಿ: ಈ ತಿಂಗಳಾಗುವವರೆಗೆ ಸಮಸ್ಯೆಗಳಿಗೆ ಮುಕ್ತಾಯವಿಲ್ಲ ಎಂಬುದು ಖಚಿತವಾಗುತ್ತದೆ. ಸಾಲಗಾರರನ್ನು ಹೇಗಾದರೂ ಮಾಡಿ ಈ ಒಂದು ತಿಂಗಳು ಸಾಗಿಹಾಕಿ.

ಫೆಬ್ರವರಿ: ಆರೋಗ್ಯದಲ್ಲಿ ಆಶ್ಚರ್ಯಕರ ವಿಧದಲ್ಲಿ ಚೇತರಿಕೆ. ಔಷಧ ಕೆಲಸ ಮಾಡಲು ಪ್ರಾರಂಭಿಸಿದೆ ಅನಿಸುತ್ತದೆ.

ಮಾರ್ಚ್: ಹೊಸದೊಂದು ಜವಾಬ್ದಾರಿ ನಿಮ್ಮನ್ನು ಅರಸುತ್ತಾ ಬಂದರೆ ಆಶ್ಚರ್ಯವಿಲ್ಲ. ನಿಭಾಯಿಸುವ ಶಕ್ತಿಗೆ ನಿಮ್ಮಲ್ಲಿ ಏನೂ ಕೊರತೆ ಇಲ್ಲ.

ಏಪ್ರಿಲ್: ಕುಟುಂಬದವರಿಂದ ಉತ್ತಮ ಸಹಕಾರ ಲಭಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಅಭಿನಂದನೆ ಅಥವಾ ಸನ್ಮಾನ ಲಭಿಸುತ್ತದೆ.

ಮೇ: ಈ ತಿಂಗಳು ಧನ ಲಾಭ ಅತ್ಯುತ್ತಮವಾಗಿದೆ. ಸರಕಾರಿ ಟೆಂಡರ್ ಪಡೆದು ವ್ಯವಹಾರ ಮಾಡುವವರಿಗೆ ಯಶಸ್ಸು ಇದೆ.

ಜೂನ್: ಅವಿವಾಹಿತರಿಗೆ ವಿವಾಹ ಸಂಬಂಧಿ ಪ್ರಕ್ರಿಯೆಗಳು ಚುರುಕುಗೊಳ್ಳುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಜುಲೈ: ಬಹುಶಃ ನಿಮ್ಮನ್ನು ಹೆದರಿಸಲು ಹಾಗೂ ಹೆದರಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುವವರು ಇದ್ದಾರೆ ಎಚ್ಚರ. ಹಣದ ಹೂಡಿಕೆ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಿ

ಆಗಸ್ಟ್: ಗುರಿ ತಲುಪುವ ತನಕ ನಿಲ್ಲುವವರು ನೀವಲ್ಲ. ಆದರೆ ಈ ತಿಂಗಳು ಸ್ವಲ್ಪ ದಣಿವು ಕಾಡಲಿದೆ. ದಾನ- ಧರ್ಮಗಳಲ್ಲಿ ಆಸಕ್ತಿ ಬರುತ್ತದೆ.

ಸೆಪ್ಟೆಂಬರ್: ಖರೀದಿಗಳಲ್ಲಿ ಈ ಮಾಸ ಹೆಚ್ಚು ವ್ಯಯವಾಗುತ್ತದೆ. ಅದೂ ಇರಲಿ ಇದೂ ಇರಲಿ ಎಂದು ಬೇಡದ ಕೆಲವು ವಸ್ತುಗಳು ಸಹ ನಿಮ್ಮ ಮನೆ ಸೇರಬಹುದು. ಉಡುಗೊರೆಗಳು ಸಹ ಸಿಗಬಹುದು.

ಅಕ್ಟೋಬರ್: ಈ ಹಿಂದೆ ನಿಮ್ಮ ಅವಮಾನಿಸಿದವರು ನಿಮ್ಮ ಬಳಿ ಸಹಾಯ ಕೇಳುತ್ತ ಬರುವ ಸಾಧ್ಯತೆಗಳಿದೆ, ನೀವು ಭಿನ್ನರೆಂದು ತೋರಿಸಲು ಇದು ಸದವಕಾಶ

ನವೆಂಬರ್: ನೀವು ಎಲ್ಲಿ ಹೋದರೂ ಬಿಡದೇ ಕಾಡುವ ಒಂದು ನೆನಪು ಅಥವಾ ಘಟನೆ ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳು ಮಾಡಲಿದೆ

ಡಿಸೆಂಬರ್: ಸರಕಾರಿ ಉದ್ಯೋಗಿಗಳಿಗೆ ಉತ್ತಮ ಮಾಸ. ಉಳಿದವರಿಗೆ ಸಾಮಾನ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cancer yearly horoscope 2017: It is a wonderful year for Cancer zodiac sign. All problems which were faced in previous year will vanish and health improves- Predictions by Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more