• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಥುನ ವರ್ಷಭವಿಷ್ಯ: ಏರಿಳಿತವಿಲ್ಲದ ಸರಳರೇಖೆಯಂತೆ ಬದುಕು

By ಪಂಡಿತ್ ವಿಠ್ಠಲ ಭಟ್
|

ಮಿಥುನ ರಾಶಿಯವರಿಗೆ ಈ ವರ್ಷ ಮಧ್ಯಮವಾಗಿ ಇರುತ್ತದೆ. ಹೆಚ್ಚಿನ ಏರಿಳಿತಗಳಿಲ್ಲ. ಸಿಕ್ಕಾಪಟ್ಟೆ ಸಮಸ್ಯೆಗಳು ಅಥವಾ ಅತಿಯಾದ ಶುಭ ಸಮಾಚಾರ ಈ ಎರಡೂ ಇಲ್ಲ. ಈ ವರುಷದ ಮೊದಲೆರಡು ತಿಂಗಳು ಕಳೆದ ನಂತರ ನಿಮ್ಮ ಸನಿಹದ ಪರಿಸರದಲ್ಲಿ ನಿಮಗೆ ಸಿಗಬೇಕಾದ ಗೌರವ, ಮರ್ಯಾದೆಗಳು ಸ್ವಲ್ಪ ಕಡಿಮೆ ಆದಂತೆ ಅನಿಸುತ್ತದೆ. ಅದಕ್ಕೆ ಸರಿಯಾದ ಕಾರಣ ನೀವು ಹುಡುಕುತ್ತಾ ಹೋದರೆ ಮಾತ್ರ ತಪ್ಪು ನಿಮ್ಮಲ್ಲೇ ಕಾಣುತ್ತದೆ.

ನೀವು ಹೊಸದಾಗಿ ಮಾಡಿಕೊಂಡ ಸ್ನೇಹಿತರು ಅಥವಾ ನೀವು ಜೀವನದಲ್ಲಿ ಹೋಗುತ್ತಿರುವ ಮಾರ್ಗ ಎರಡೂ ಸರಿಯಾಗಿ ತೋರುತ್ತಿಲ್ಲ. ಬಡ್ತಿಗಾಗಿ ಕಾಯುತ್ತಿರುವ ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ತಮ್ಮ ಅರ್ಜಿ ವಿಚಾರಣೆ ಬಹಳ ನಿಧಾನ ಆಗುತ್ತಿರುವುದು ತಿಳಿಯುತ್ತದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಇರುವವರೂ ಸೆಪ್ಟೆಂಬರ್ ತನಕ ಕಾಯಲೇ ಬೇಕು.

ತವರು ಮನೆಯ ಆಸ್ತಿಗಾಗಿ ಆಸೆಯಲ್ಲಿ ನಿಂತಿರುವ ಸ್ತ್ರೀಯರು ಅನಿವಾರ್ಯವಾಗಿ ನ್ಯಾಯಾಲಯದ ಬಾಗಿಲು ಬಡಿಯಬೇಕಾದ ಸ್ಥಿತಿ ಕಾಣುತ್ತಿದೆ. ಅಲ್ಲಿಯೂ ಶೀಘ್ರ ತೀರ್ಮಾನ ಆಗುವುದಿಲ್ಲ. ವಿದ್ಯಾರ್ಥಿಗಳು ಹೊಸದಾಗಿ ಮಾಡಿಕೊಳ್ಳುತ್ತಿರುವ ಸ್ನೇಹಿತರ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅನಿವಾರ್ಯ ಇಲ್ಲದಿದ್ದಲ್ಲಿ ಹೊಸ ಸ್ನೇಹ ಬೇಡ.

ಭೂಮಿ, ಬಂಗಾರ ಇತ್ಯಾದಿಗಳನ್ನು ಖರೀದಿಸಲು ವರ್ಷಾಂತ್ಯ ಉತ್ತಮ ಸಮಯ. ಆಗ ಸಾಲಗಳಿಲ್ಲದೆ ಕಾರ್ಯ ಸಿದ್ಧಿ ಇದೆ. ವಿದೇಶ ಪ್ರಯಾಣ ಸಹ ವರ್ಷಾಂತ್ಯಕ್ಕೆ ಸುಲಭವಾಗಿ ಕಂಡುಬರುತ್ತಿದೆ. ಆದರೆ ಈ ವಿಚಾರದಲ್ಲಿ ಅವಶ್ಯವಾದ ಕಾಗದ ಪತ್ರಗಳಿಗೆ ಯಾವುದೇ ಕಾರಣಕ್ಕೂ ವಾಮಮಾರ್ಗ ಆಶ್ರಯಿಸಬೇಡಿ. ವರ್ಷದ ಮಧ್ಯ ಭಾಗದ ನಂತರ ಮನೆಯಲ್ಲಿ ಮಂಗಲ ಕಾರ್ಯಗಳು ನೆರವೇರುವ ಸಾಧ್ಯತೆಗಳಿವೆ.

ವಸ್ತ್ರ ವ್ಯಾಪಾರಿಗಳಿಗೆ ಹಾಗೂ ಕಬ್ಬಿಣದ ವ್ಯಾಪಾರಿಗಳಿಗೆ ಮಾತ್ರ ವಿಶೇಷ ಬದಲಾವಣೆಗಳು ಕಂಡು ಬರುತ್ತಿವೆ. ದೃಢವಾದ ಮನಸು ಹಾಗು ತಕ್ಷಣ ಕಾರ್ಯ ನಿರ್ವಹಣೆ ಇಲ್ಲದಿದ್ದರೆ ಈ ವರ್ಷ ನಿಮ್ಮ ಕೆಲಸಗಳು ಆಗುವುದು ಕಷ್ಟವೇ ಸರಿ. ಪಾರ್ಟ್ ನರ್ ಶಿಪ್ ನಲ್ಲಿ ವ್ಯಾಪಾರ ಮಾಡುತ್ತಿರುವವರಲ್ಲಿ ಈ ವರ್ಷ ಅಭಿಪ್ರಾಯ ಭೇದಗಳು ಬಂದು ಬೇರಾಗುವ ಸಾಧ್ಯತೆಗಳಿವೆ. ಬಾಳ ಸಂಗಾತಿಯೊಂದಿಗೆ ಸಹ ಅಭಿಪ್ರಾಯ ಭೇದಗಳು ಬರುತ್ತವೆ. ಅದನ್ನು ಮೊದಲೇ ತಿಳಿದು ಪರಿಹರಿಸಿಕೊಳ್ಳುವುದು ಉತ್ತಮ. ಅವಿವಾಹಿತರಿಗೆ ವಿವಾಹ ಭಾಗ್ಯಕ್ಕಾಗಿ ವರ್ಷಾಂತ್ಯದಲ್ಲಿ ಪ್ರಯತ್ನ ಉತ್ತಮ ಫಲ ನೀಡುವುದು.

ಜನವರಿ: ಪೂರ್ಣವಾಗಿ ನೋಡಿದಾಗ ಈ ತಿಂಗಳು ಶುಭಪ್ರದವಾಗಿಯೇ ಕಾಣುತ್ತಿದೆ. ಶತ್ರುಗಳು ನಿಮಗಿಂತ ಒಂದು ಹೆಜ್ಜೆ ಕೆಳಗೆ ಕಾಣುತ್ತಿದ್ದಾರೆ

ಫೆಬ್ರವರಿ: ಮುಳುಗಿ ಹೋಗುವ ವ್ಯಾಪಾರದಲ್ಲಿ ಬಹಳವಾದ ಲಾಭವಿದೆ ಎಂದು ಸುಳ್ಳು ಹೇಳಿ, ನಿಮ್ಮಿಂದ ಅದರಲ್ಲಿ ಬಂಡವಾಳ ಹೂಡಿಕೆ ಮಾಡಿಸುವ ಸಾಧ್ಯತೆಗಳಿವೆ. ಸ್ವಲ್ಪ ಯಾಮಾರಿದರೂ ನಷ್ಟ ಖಚಿತ.

ಮಾರ್ಚ್: ಅಸಾಧ್ಯವಾದ ದೊಡ್ಡ ಸಾಹಸಗಳಿಗೆ ಕೈಹಾಕಲು ಮನಸ್ಸು ಹಾತೊರೆಯುತ್ತದೆ. ಪರಿಸ್ಥಿಯನ್ನು ಒಮ್ಮೆ ಅವಲೋಕಿಸಿದರೆ ಉತ್ತಮ. ಸ್ತ್ರೀಯರು ಅರೋಗ್ಯದತ್ತ ಹೆಚ್ಚು ಗಮನ ಹರಿಸಿ

ಏಪ್ರಿಲ್: ವ್ಯಾಪಾರಿಗಳು ಲಾಭದ ವಿಚಾರದಲ್ಲಿ ಮುಲಾಜಿಲ್ಲದೆ ರಾಜಿ ಆಗಲೇ ಬೇಕಾದ ಸ್ಥಿತಿ ಈ ತಿಂಗಳು ಕಾಣುತ್ತಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚುತ್ತದೆ.

ಮೇ: ಹೇಳಿಕೆ ಮಾತುಗಳನ್ನು ಕೇಳಿ ತಮ್ಮವರನ್ನು ದೂರ ಇಡಬೇಡಿ ಅದರ ದುಷ್ಪರಿಣಾಮವನ್ನು ಸದ್ಯದಲ್ಲಿಯೇ ಕಾಣುತ್ತೀರಿ. ಸುಪ್ರಸಿದ್ಧರು ಮರ್ಯಾದೆಗೆ ಅಂಜಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.

ಜೂನ್: ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ ಕಾಣುತ್ತಿದೆ. ಹೆಚ್ಚಿನ ಚಿಂತೆ ಅವಶ್ಯ ಇಲ್ಲ. ಸಹೋದರನ ಸಹಾಯ ಪಡೆಯ ಬೇಕಾದೀತು

ಜುಲೈ: ಒಂದು ಸುಳ್ಳಿನಿಂದಾಗಿ ನಿಮ್ಮ ಮೇಲಿನ ನಂಬಿಕೆ ಹೊರಟು ಹೋಗುವ ಸಾಧ್ಯತೆಗಳು ಕಾಣುತ್ತಿದೆ. ಮಾತನಾಡುವಾಗ, ಮಾತು ಕೊಡುವಾಗ ಎಚ್ಚರ.

ಆಗಸ್ಟ್: ಮಕ್ಕಳಿಗಾಗಿ ಅಥವಾ ಮಕ್ಕಳಿಂದ ಸ್ವಲ್ಪ ಖರ್ಚಾಗುವ ಸಾಧ್ಯತೆಗಳಿವೆ. ಆದರೆ ಅದರಲ್ಲಿ ಸಂತೋಷ ಕಾಣುತ್ತಿದೆ.

ಸೆಪ್ಟೆಂಬರ್: ಬಂಗಾರ ಬೆಳ್ಳಿ ಕಂಡು ಅದನ್ನು ಖರೀದಿಸುವ ಆಸೆಯಾಗಿ ಆರ್ಥಿಕ ಸಮಸ್ಯೆಗಳಿಂದ ಅದನ್ನು ಮುಂದೂಡುತ್ತೀರಿ. ಹೆಚ್ಚೆಂದರೆ ಎರಡರಿಂದ ಮೂರು ತಿಂಗಳು ಮುಂದೂಡಿಕೆ.

ಅಕ್ಟೋಬರ್: ವ್ಯಾಪಾರದಲ್ಲಿ ಅನಿರೀಕ್ಷಿತವಾಗಿ ಲಾಭದಲ್ಲಿ ಹೆಚ್ಚಳ. ಸಮಾಜದಲ್ಲಿಯೂ ಗೌರವ ವೃದ್ಧಿ.

ನವೆಂಬರ್: ಸಂತಾನ ಅಪೇಕ್ಷಿತರಿಗೆ ಸಿಹಿ ಸುದ್ದಿ ಕೇಳುವ ಸಮಯ. ವೃದ್ಧರಿಗೆ ಮಕ್ಕಳಿಂದ ಉಡುಗೊರೆಗಳು ಪ್ರಾಪ್ತಿ

ಡಿಸೆಂಬರ್: ಹೊಸದಾಗಿ ವ್ಯಾಪಾರ ಆರಂಭಿಸುವ ಯೋಚನೆ, ಉದ್ಯೋಗಿಗಳಿಗೆ ನಮ್ಮಲ್ಲಿ ಬನ್ನಿ, ಉದ್ಯೋಗ ಮಾಡಿ ಎಂದು ಅವಕಾಶ ಪ್ರಾಪ್ತಿ

ಒಟ್ಟಾರೆ ವರ್ಷಫಲ 3/5

ಪರಿಹಾರ
ವೈದಿಕ: ಮನೆಯಲ್ಲಿ ಲಕ್ಷ್ಮೀ ಸಹಿತ ಸತ್ಯನಾರಾಯಣ ಸ್ವಾಮಿಯ ಪೂಜೆ ಮಾಡಿಸಿ. ಕಡ್ಡಾಯವಾಗಿ ಬಡವರಿಗೆ ಅನ್ನದಾನ ಮಾಡಿ

ಕ್ಷೇತ್ರ : ಈ ವರ್ಷದ ಆದಿಯಲ್ಲಿ ಒಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಡುಪು ಗ್ರಾಮದಲ್ಲಿ ನೆಲೆಸಿರುವ ಅನಂತ ಪದ್ಮನಾಭ ಸ್ವಾಮಿಯ ದರ್ಶನ ಮಾಡಿ ಅಲ್ಲಿ ಅಭಿಷೇಕ, ಸಹಸ್ರ ನಾಮಾರ್ಚನೆ ಹಾಗೂ ಪಾಯಸ ನೈವೇದ್ಯ ಮಾಡಿಸಿ.
ವಿಳಾಸ: ಅನಂತ ಪದ್ಮನಾಭ ದೇಗುಲ ಕುಡುಪು ಗ್ರಾಮ/ ಕುಡುಪು ಅಂಚೆ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ-575028, ಸಂಪರ್ಕಕ್ಕೆ 08242262587\ 9343390157

ರತ್ನ: ಉತ್ತಮ ಗುಣಮಟ್ಟದ ಹವಳವನ್ನು ಎರಡು ದಿನ ಸಂಸ್ಕರಿಸಿ, ಪೂಜಿಸಿ, ಅಭಿಮಂತ್ರಿಸಿ ಬೆಳ್ಳಿಯಲ್ಲಿ ಧರಿಸಿ

ಸ್ತೋತ್ರ: ಈ ವರ್ಷ ಎಷ್ಟು ಹೆಚ್ಚು ವಿಷ್ಣು ಸಹಸ್ರನಾಮ ಪಠಿಸುತ್ತೀರೋ ಅಷ್ಟು ಉತ್ತಮವಾಗಿ ನಿಮ್ಮ ವರುಷ ಕಳೆಯುತ್ತದೆ. ಪ್ರತಿ ದಿನ ಪಠಿಸಿದರೆ ಅಥವಾ ಕೇಳಿದರೂ ಉತ್ತಮ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು yearly horoscope ಸುದ್ದಿಗಳುView All

English summary
Gemini yearly horoscope 2017: It is normal year for Gemini zodiac sign. Mistakes commit by them. So, Caution with new friends- Predictions by Pandit Vittal Bhat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more