Weekly Horoscope Nov. 24-30: ಈ ನಾಲ್ಕು ರಾಶಿಗಳಿಗೆ ಶುಭಕಾಲ..ಅದೃಷ್ಟವೋ ಅದೃಷ್ಟ

ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಕಾರ್ತಿಕ ಮಾಸದ ಕೃಷ್ಣಪಕ್ಷದ ನವಮಿಯಿಂದ ಅಮಾವಾಸ್ಯೆ ಯ ವರೆಗೆ

ಈ ವಾರದ ಚಂದ್ರನ ಸಂಚಾರ ಪುಬ್ಬ ನಕ್ಷತ್ರದಿಂದ ಅನುರಾಧ ನಕ್ಷತ್ರದವರೆಗೆ.

24/11/2024-30/11/2024ರ ವಾರ ಭವಿಷ್ಯ

Weekly Horoscope In Kannada From November 24 To November 30 2024

ಮೇಷ ರಾಶಿಯ ವಾರ ಭವಿಷ್ಯ

ಗುರು ಮತ್ತು ಬುಧ ವಕ್ರಿಯಾಗಿ ಇರುವುದರಿಂದ ಪ್ರಗತಿ ಕೊಂಚ ನಿಧಾನ.‌ಆದರೆ ಶುಕ್ರ ಒಂಬತ್ತನೇ ಮನೆಯಲ್ಲಿ ಹಾಗೂ ಶನಿ ಹನ್ನೊಂದನೇ ಮನೆಯಲ್ಲಿ ಹಾಗೂ‌ ಕೇತು‌ ಆರನೇ ಮನೆಯಲ್ಲಿ‌ಇರುವುದು ಶುಭ.‌ ಇದು ನಿಮಗೆ ಒಳ್ಳೆಯ ಬೆಂಬಲ ಕೊಡುತ್ತದೆ. ಎರಡನೇ ಮನೆಯ ಹಾಗೂ ಏಳನೇ ಮನೆಯ ಅಧಿಪತಿಯಾದ ಶುಕ್ರ ಒಂಬತ್ತನೇ ಮನೆಯಲ್ಲಿ ಇರುವುದರಿಂದ ಭಾಗ್ಯೋದಯವಾಗುವ ಸಮಯ.‌ ನಿಮ್ಮೆಲ್ಲ ಇಷ್ಟಾರ್ಥಗಳು ನೆರವೇರುವ ಸಮಯ.

Weekly Horoscope In Kannada From November 24 To November 30 2024

ವೃಷಭ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯ ಅಧಿಪತಿ‌ ಶುಕ್ರ ಎಂಟನೇ ಮನೆಯಲ್ಲಿ ಇದ್ದಾನೆ. ಗೋಚಾರದಲ್ಲಿ ಶುಕ್ರ ಎಂಟನೇ ಮನೆಯಲ್ಲಿ ಶುಭಫಲಗಳನ್ನು ಕೊಡುತ್ತಾನೆ. ಶುಕ್ರ ಎಂದರೆ ಸುಖ ಮತ್ತು ಕಲೆ. ಈ ವಾರ ನಿಮಗೆ ಆನಂದದಾಯಕವಾಗಿ ಇರುತ್ತದೆ. ಧನಾಗಮನಕ್ಕೆ ಆರರಲ್ಲಿ ರಾಹು ಬಲಿಷ್ಠನಾಗಿದ್ದಾನೆ. ಮೂರರಲ್ಲಿ ಕುಜ ಧೈರ್ಯ ಕೊಡುತ್ತಾನೆ. ದೊಡ್ಡ ಫಲಗಳು ಇಲ್ಲವಾದರೂ‌ ಈ ವಾರ ನಿಮಗೆ ತೃಪ್ತಿದಾಯಕವಾಗಿ ಇರುತ್ತದೆ.

Weekly Horoscope In Kannada From November 24 To November 30 2024

ಮಿಥುನ ರಾಶಿಯ ವಾರ ಭವಿಷ್ಯ

ಏಳನೇ ಮನೆಯಲ್ಲಿ ಶುಕ್ರ ನಾಲ್ಕನೇ ಮನೆಯಲ್ಲಿ ಕೇತು 12 ನೇ ಮನೆಯಲ್ಲಿ ಗುರು ಹತ್ತರಲ್ಲಿ ರಾಹು ಇದ್ದಾರೆ. ಶನಿ ಭಾಗ್ಯಸ್ಥಾನದಲ್ಲಿ‌ಇದ್ದರೂ ತಟಸ್ಥ.‌ ಸಮಯ ಈಗ 50/50. ನಿಮ್ಮ‌ಬುದ್ದಿ‌ ಹೇಳುದ ಮಾತುಗಳನ್ನು ಆಲಿಸಿ ಅದರಂತೆ ನಡೆಯಿರಿ. ಭಾವಾವೇಶಕ್ಕೆ ಒಳಗಾಗಬೇಡಿ. ಪ್ರಾಕ್ಟಿಕಲ್ ಆಗಿ ಯೋಚಿಸಿ. ಮನೆಯವರ ಹಿತಚಿಂತನೆ ಗಮನದಲ್ಲಿರಲಿ.

Weekly Horoscope In Kannada From November 24 To November 30 2024

ಕಟಕ ರಾಶಿಯ ವಾರ ಭವಿಷ್ಯ

ಲಾಭ ಸ್ಥಾನದಲ್ಲಿ ಗುರು ಇದ್ದರೂ ವಕ್ರಿಯಾಗಿರುವುದರಿಂದ ಅಲ್ಪಫಲ ನೀಡುತ್ತಾನೆ. ಮೂರನೇ ಮನೆಯಲ್ಲಿ‌ಇರುವ ಕೇತು ಧೈರ್ಯ ಸಾಹಸ ಹಣ ಈ ಮೂರನ್ನು ಕೊಟ್ಟು ಕಾಪಾಡುತ್ತಾನೆ.‌ಐದನೇ ಮನೆಯಲ್ಲಿ ಸೂರ್ಯ ಬುಧ ಇದ್ದು ವಾಕ್ ಶಕ್ತಿಯನ್ನು ಹೆಚ್ಚಿಸುತ್ತಾರೆ.‌ನಿಮ್ಮ ಮಾತಿಗೆ ಗೌರವ ಸಿಗುತ್ತದೆ.‌ ಮಾತಿನಿಂದ ಲಾಭ ಗಳಿಸುವಿರಿ.

Weekly Horoscope In Kannada From November 24 To November 30 2024

ಸಿಂಹ ರಾಶಿಯ ವಾರ ಭವಿಷ್ಯ

ಗುರುಬಲ ಶನಿಬಲ ಇಲ್ಲ, ಶನಿ ಏಳನೇ ಮನೆಯಲ್ಲಿ ಅಭಿವೃದ್ಧಿಗೆ ಅವಕಾಶ ಕೊಡುವುದಿಲ್ಲ. ಆದರೆ ನಾಲ್ಕನೇ ಮನೆಯಲ್ಲಿ ಬುಧ ಹಾಗೂ ಐದನೇ ಮನೆಯಲ್ಲಿ ಶುಕ್ರ ನಿಮಗೆ ಅಲ್ಪ ಬೆಂಬಲ ಕೊಡುತ್ತಾರೆ. ಕಾರ್ಯಕ್ಷೇತ್ರದಲ್ಲಿ ಒತ್ತಡ ಇರುತ್ತದೆ. ಹತ್ತನೇ ಮನೆಯಲ್ಲಿ ಗುರು ಗೋಚಾರದಲ್ಲಿ‌ ಶುಭನಲ್ಲ. ಅಧಿಕಾರ ಪದವಿ‌ ಕಳೆಯುತ್ತಾನೆ. ನೀವು ಎಷ್ಟೇ ಹುಮ್ಮಸ್ಸಿನಿಂದ ಕೆಲಸ ಮಾಡಿದರೂ ಕಾಲೆಳೆಯುತ್ತಾರೆ. ಹಿತಶತ್ರುಗಳ ಕಾಟ. ಕಚೇರಿಯ ಯಾವುದೇ ವಿಷಯವನ್ನು ಯಾರೊಡನೆಯೂ ಹಂಚಿಕೊಳ್ಳಬೇಡಿ ನಿಮಗೇ ಮುಳುವಾಗುತ್ತದೆ. ಕೌಟುಂಬಿಕ ಅಶಾಂತಿ ಇರುತ್ತದೆ. ಆರೋಗ್ಯ ಜೋಪಾನ.

Weekly Horoscope In Kannada From November 24 To November 30 2024

ಕನ್ಯಾ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಕೇತು ಇರುವುದು ನಾನಾ ರೀತಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಗುರುಬಲ ಇರುವುದರಿಂದ ತೀವ್ರ ಸಮಸ್ಯೆ ಆಗುವುದಿಲ್ಲ.‌ ಹನ್ನೊಂದನೇ ಮನೆಯಲ್ಲಿ ಮಂಗಳ, ಮೂರರಲ್ಲಿ ಸೂರ್ಯ-ಬುಧ, ನಾಲ್ಕರಲ್ಲಿ ಶುಕ್ರ ನಿಮಗೆ ಹೆಚ್ಚಿನ ಭಾಗ್ಯಗಳನ್ನು ಕೊಡುತ್ತಾರೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಖರೀದಿ ಯೋಗ ಇದೆ.‌ ನಿಮ್ಮ ಮಾತಿನಿಂದ ಲಾಭ ಇದೆ. ಮಾತು ನಿಮಗೆ ಯಶಸ್ಸು ತಂದುಕೊಡುತ್ತದೆ.

Weekly Horoscope In Kannada From November 24 To November 30 2024

ತುಲಾ ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ರಾಹು ಇರುವುದು ನಿಮಗೆ ಧನಲಾಭ ಕಾರ್ಯಲಾಭ ಯಶಸ್ಸು ಎಲ್ಲವೂ ಇದೆ. ಇನ್ನು ಕೆಲವೇ ದಿನದಲ್ಲಿ ಶನಿ‌ ಕೂಡ ಆರನೇ ಮನೆಗೆ ಪ್ರವೇಶವಾದಾಗ ಇನ್ನೂ ಒಳ್ಳೆಯ ಬೆಳವಣಿಗೆ ಅಭಿವೃದ್ಧಿ ಕಾಣುವಿರಿ. ಈಗ ಎರಡನೇ ಮನೆಯಲ್ಲಿ ಸೂರ್ಯ ಬುಧ ಇದ್ದಾರೆ. ನಿಮ್ಮ ಮಾತಿಗೆ ಮಹತ್ವ ಇರುತ್ತದೆ. ಮಾತಿನ ಜಾಣರಿಗೆ ಲಾಭವಿದೆ. ಭಾಷಣಕಾರರು, ವ್ಯಾಪಾರಸ್ಥರು, ಉಪನ್ಯಾಸ ಕೊಡುವವರು, ಇವರಿಗೆಲ್ಲ ಯಶಸ್ಸು ಲಾಭ ಇದೆ. ಮೂರನೇ ಮನೆಯಲ್ಲಿ ಶುಕ್ರ ಇರುವುದು ಕೂಡ ನಿಮಗೆ ಲಾಭಕರವೇ ಆಗಿದೆ.

Weekly Horoscope In Kannada From November 24 To November 30 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಗುರು ಏಳನೇ ಮನೆಯಲ್ಲಿ ನಿಮ್ಮ ಅಭಿವೃದ್ಧಿ ಯಶಸ್ಸನ್ನು‌ ಸೂಚಿಸುತ್ತಾನೆ. ನಿಮ್ಮ ರಾಶಿಯಲ್ಲೇ ಸೂರ್ಯ ಬುಧ ನಿಮಗೆ ಒಳಿತನ್ನೇ ಮಾಡುತ್ತಾರೆ. ಎರಡನೇ ಮನೆಯಲ್ಲಿ ಶುಕ್ರ ಧನಲಾಭ‌ಕೊಡುತ್ತಾನೆ. ಕಲಾವಿದರಿಗೆ ಯಶಸ್ಸು ಇದೆ. ಆದರೆ ಐದನೇ ಮನೆಯಲ್ಲಿ ರಾಹು, ನಾಲ್ಕನೇ ಮನೆಯಲ್ಲಿ ಶನಿ ಕೊಂಚ ನಿಮ್ಮನ್ನು ಹಿಂದಕ್ಕೆ ಎಳೆಯುತ್ತಾರೆ. ಅಡೆತಡೆಗಳ ನಡುವೆ ಮುಂದೆ ಸಾಗುತ್ತೀರಿ. ಹನ್ನೊಂದನೇ ಮನೆಯಲ್ಲಿ ಕೇತು ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ.

Weekly Horoscope In Kannada From November 24 To November 30 2024

ಧನಸ್ಸು ರಾಶಿಯ ವಾರ ಭವಿಷ್ಯ

ಈಗ ಗುರು ಆರನೇ ಮನೆಯಲ್ಲಿ ಇರುವುದು ಅಷ್ಟೇನೂ ಹಿತಕಾರಿಯಲ್ಲ. ಮಾನಸಿಕ‌ ಕಿರಿಕಿರಿ‌ ಇರುತ್ತದೆ. ನಿಮಗೆ ಬಹಳ ಬೇಕಾದವರೇ ನಿಮಗೆ ನೋವು ಕೊಡುತ್ತಾರೆ. ಈಗ ನೀವು ನೀವಾಯಿತು ನಿಮ್ಮ ಕೆಲಸವಾಯಿತು ಎಂಬಂತೆ ಇರಬೇಕು. ಹೆಚ್ಚು ಯಾವ ವಿಷಯಕ್ಕೂ ಮೂಗು ತೂರಿಸಬೇಡಿ. ಹಣಕಾಸಿನ ಬಿಕ್ಕಟ್ಟು ಕಾಡುತ್ತದೆ. ಎಷ್ಟೇ ಸಂಪಾದನೆ ಇದ್ದರೂ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ರಾಹು ಮೂರನೇ ಮನೆಗೆ ಪ್ರವೇಶವಾದಾಗ ಹಣಕಾಸಿನ ಸ್ಥಿತಿ ಸುಗಮವಾಗುತ್ತದೆ.

Weekly Horoscope In Kannada From November 24 To November 30 2024

ಮಕರ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರುಬಲ ರಾಹುಬಲ ಎರಡೂ ಇದೆ. ಆದರೆ ಗುರು ವಕ್ರಿಯಾಗಿ ಇರುವುದರಿಂದ ಫಲ ಕೊಂಚ ನಿಧಾನ. ವಕ್ರ ಗುರುನಿವಾರಣೆ ಆದಾಗ ನಿಮಗೆ ಅನೇಕ ಶುಭಫಲಗಳು ಸಿಗುತ್ತದೆ. ಈಗ ನಿರಾಶರಾಗಬೇಡಿ. ನಿಮ್ಮ ಪ್ರಯತ್ನ ನೀವು ಮಾಡುತ್ತಿರಿ. ಏನೇನು ಮಾಡಬೇಕೆಂಬ ಯೋಜನೆಗಳನ್ನು‌ ತಯಾರಿಸಿಕೊಳ್ಳಿ. ಸಧ್ಯದಲ್ಲೇ ಶುಭಸೂಚನೆ ಕಾಣುವಿರಿ. ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಗೋಚರಿಸಿ ನಿಮ್ಮ ಭಾರ ಕಡಿಮೆ ಆಗುತ್ತದೆ.‌

Weekly Horoscope In Kannada From November 24 To November 30 2024

ಕುಂಭ ರಾಶಿಯ ವಾರ ಭವಿಷ್ಯ

ನಿಮಗೆ ಆರೋಪಗಳು ಅಪಮಾನಗಳು ಇನ್ನೂ ತಪ್ಪಲಿಲ್ಲ. ಯಾವುಯಾವುದೋ ಸಿಕ್ಕುಗಳಲ್ಲಿ ಸಿಕ್ಕಿಕೊಳ್ಳುತ್ತಿದ್ದೀರಿ. ಗುರು ನಾಲ್ಕನೇ ಮನೆಯಲ್ಲಿ ಬಹಳ‌ಪರೀಕ್ಷೆ ಮಾಡುತ್ತಾನೆ. ನಿಮ್ಮ ವಿರುದ್ಧ ಪಿತೂರಿಗಳು ನಡೆಯುತ್ತದೆ. ತಲೆದಂಡ ಕೊಡಬೇಕಾಗುತ್ತದೆ. ಹನುಮಾನ್ ಪ್ರಾರ್ಥನೆ ಮಾಡುವುದು, ಹನುಮಾನ್ ಚಾಲೀಸಾ ಹೇಳಿಕೊಳ್ಳುವುದು ನಿಮ್ಮನ್ನು ಆಪತ್ತಿನಿಂದ ರಕ್ಷಿಸುತ್ತದೆ. ಶನಿ ಇನ್ನು ಕೆಲವೇ ದಿನಗಳಲ್ಲಿ ಎರಡನೇ ಮನೆಗೆ ಪ್ರವೇಶವಾದಾಗ ನಿಮಗೆ ಕೊಂಚ ಮಟ್ಟಿಗೆ ಪರಿಹಾರ ಸಿಗುತ್ತದೆ.

Weekly Horoscope In Kannada From November 24 To November 30 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಹ ಖರ್ಚು ವೆಚ್ಚಗಳು ಬಹಳ. ಶನಿ 12 ನೇ ಮನೆಯಲ್ಲಿ ಇರುವುದರಿಂದ ವಿಪರೀತವಾಗಿ ಖರ್ಚುಗಳು ಬರುತ್ತವೆ. ಕೈಯಲ್ಲಿ ಹಣ ನಿಲ್ಲುವುದಿಲ್ಲ. ಮನೆಯಲ್ಲೂ ಅಶಾಂತಿಯ ವಾತಾವರಣ ಇರುತ್ತದೆ. ಈಗಿನ್ನೂ ನೀವು ಸಾಡೆಸಾತಿಯ ಮೊದಲ ಭಾಗದಲ್ಲಿ ಇದ್ದೀರಿ. ಪರಿಸ್ಥಿತಿ ತಿಳಿಯಾಗಲು ಬಹಳ ಕಾಲ ಕಾಯಬೇಕು. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ. ರಾಹು ಹಾಗೂ ಶನಿ ನಿಮ್ಮನ್ನು ಗಟ್ಡಿಯಾಗಿ ಹಿಡಿದಿದ್ದಾರೆ. ಮನೆದೇವರ ಪ್ರಾರ್ಥನೆ ಮಾಡಿಕೊಳ್ಳಿ. ದಾನ ಧರ್ಮ ಮಾಡಿ. ಪ್ರಾಮಾಣಿಕತೆಯಿಂದ ನಡೆದುಕೊಳ್ಳಿ. ನಿಮ್ಮ ಸತ್ಯ ಧರ್ಮವೇ ನಿಮ್ಮನ್ನು ಕಾಪಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+