Weekly Horoscope: ನ.10-16ರ ವಾರ ಭವಿಷ್ಯ, ಈ ರಾಶಿಗಳಿಗೆ ನೆಮ್ಮದಿಯ ಕಾಲ..!

ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಕಾರ್ತಿಕ ಮಾಸದ ಶುಕ್ಲಪಕ್ಷದ ನವಮಿಯಿಂದ ಕೃಷ್ಣಪಕ್ಷದ ಬಿದಿಗೆಯವರೆಗೆ

ಈ ವಾರದ ಚಂದ್ರನ ಸಂಚಾರ ಶತಭಿಷ ನಕ್ಷತ್ರದಿಂದ ರೋಹಿಣಿ ನಕ್ಷತ್ರದ ವರೆಗೆ.

10/11/2024-16/11/2024ರ ವಾರ ಭವಿಷ್ಯ

ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ನವೆಂಬರ್‌ 10ರಿಂದ ನವೆಂಬರ್‌ 16ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

Weekly Horoscope In Kannada From November 10 To November 16 2024

ಮೇಷ ರಾಶಿಯ ವಾರ ಭವಿಷ್ಯ

ಒಂಬತ್ತನೇ ಮನೆಯಲ್ಲಿ ಶುಕ್ರ ಇದ್ದು ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ.‌ ನೀವು ಬಹುದಿನದಿಂದ ಕಾಯುತ್ತಿದ್ದ ಒಂದು ಸಂಗತಿ‌ ಅಥವಾ ಕೆಲಸ ನಿಮ್ಮದಾಗಲಿದೆ. ಅವಕಾಶವೇ ನಿಮ್ಮನ್ನು ಹುಡುಕಿಬರುವ ಯೋಗ ಇದೆ. ಆರನೇ ಮನೆಯಲ್ಲಿ ಕೇತು ಎರಡನೇ ಮನೆಯ ಗುರು, ಹಾಗೂ ಲಾಭಸ್ಥಾನದ ಶನಿ ನಿಮಗೆ ಧನಲಾಭವನ್ನೂ ಯಶಸ್ಸನ್ನು ಸಹ ಕೊಡುತ್ತಾರೆ.

Weekly Horoscope In Kannada From November 10 To November 16 2024

ವೃಷಭ ರಾಶಿಯ ವಾರ ಭವಿಷ್ಯ

ಲಾಭ ಸ್ಥಾನದ ರಾಹು ನಿಮಗೆ ಒಳ್ಳೆಯ ಶಕ್ತಿ. ರಾಹುವಿನ ಬಲದಿಂದ ನೀವು ಏನು ಬೇಕಾದರೂ ಸಾಧಿಸಬಲ್ಲಿರಿ. ಶತ್ರುಗಳು ದೂರ ಓಡುತ್ತಾರೆ. ಹಷದ ಹರಿವು ತುಂಬಾ ಚೆನ್ನಾಗಿದೆ. ಏಳರ ಬುಧ ಎಂಟರ ಶುಕ್ರ ಮೂರರ ಕುಜ ಎಲ್ಲರೂ ನಿಮ್ಮ ಪರವಾಗಿದ್ದು ನಿಮ್ಮ ಯಶಸ್ಸನ್ನು ದ್ವಿಗುಣಗೊಳಿಸುತ್ತಾರೆ. ಆರನೇ ಮನೆಯಲ್ಲಿ ಸೂರ್ಯ ಇರುವುದು ಸಹ ನಿಮಗೆ ಶಕ್ತಿಯನ್ನು ಕೊಡುತ್ತದೆ

Weekly Horoscope In Kannada From November 10 To November 16 2024

ಮಿಥುನ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಕುಜ, ಐದನೇ ಮನೆಯಲ್ಲಿ ನೀಚ ಸೂರ್ಯ, ಹನ್ನೆರಡನೇ ಮನೆಯಲ್ಲಿ ಗುರು ಸಮಯ ಸಾಧಾರಣವಾಗಿದೆ. ಆರನೇ ಮನೆಯಲ್ಲಿ ಬುಧ ಮಾತ್ರ ಈಗ ನಿಮಗೆ ಒಳ್ಳೆಯವನು. ಏರುಪೇರುಗಳ ನಡುವೆ ಜೀವನ ಸಾಗುತ್ತದೆ. ನಿಧಾನ ಪ್ರಗತಿ, ಹಣಕಾಸಿನ ಒತ್ತಡ ಇರುತ್ತದೆ.

Weekly Horoscope In Kannada From November 10 To November 16 2024

ಕಟಕ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಕುಜ ಇರುವುದು ಶುಭಕರವಲ್ಲ. ಆದರೆ ಲಾಭ ಸ್ಥಾನದ ಗುರು, ಮೂರರ ಕೇತು ನಿಮಗೆ ಒಳ್ಳೆಯ ಬೆಂಬಲ ನೀಡುತ್ತಾರೆ. ಹಣದ ಹರಿವನ್ನು ಉತ್ತಮ ಪಡಿಸುತ್ತಾರೆ.‌ ಐದರಲ್ಲಿ ಬುಧ ಸಹ ನಿಮಗೆ ಒಳಿತನ್ನೇ ಮಾಡುತ್ತಾನೆ. ಅಡೆತಡೆಗಳು ಇದ್ದರೂ ಗುರುಬಲದಿಂದ ಅವೆಲ್ಲ ನಿವಾರಣೆಯಾಗಿ ಜೀವನದ ಬಂಡಿ ಮುಂದೆ ಸಾಗುತ್ತದೆ

Weekly Horoscope In Kannada From November 10 To November 16 2024

ಸಿಂಹ ರಾಶಿಯ ವಾರ ಭವಿಷ್ಯ

ನಾಲ್ಕರಲ್ಲಿ ಬುಧ ಐದರಲ್ಲಿ ಶುಕ್ರ ಸಮಯ ಬಹಳ ಚೆನ್ನಾಗಿದೆ ಆದರೆ ಬಲಿಷ್ಠ ಗ್ರಹಗಳಾದ ಶನಿ ಗುರು ರಾಹು ಕೇತುಗಳ ನೆರವಿಲ್ಲ ನಿಮಗೆ. ಹಣಕಾಸು ಮತ್ತು ಕುಟುಂಬ ಸೌಖ್ಯಕ್ಕೆ ಅಡಚಣೆ ಇದೆ. ಶನಿ ಏಳನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುವುದರಿಂದ ಅಭಿವೃದ್ಧಿ ಕಡಿಮೆ ಖರ್ಚು ಹೆಚ್ಚು. ಅನಾರೋಗ್ಯ ದ ಸಮಸ್ಯೆಗಳು ಇರುತ್ತದೆ. ಯಾವುದೇ ನಿರ್ಧಾರ ಎಚ್ಚರಿಕೆಯಿಂದ ತೆಗೆದುಕೊಳ್ಳಿ.‌

Weekly Horoscope In Kannada From November 10 To November 16 2024

ಕನ್ಯಾ ರಾಶಿಯ ವಾರ ಭವಿಷ್ಯ

ರಾಶಿಯಲ್ಲೇ ಕೇತು ಅನಾರೋಗ್ಯಕ್ಕೆ ಕಾರಣನಾಗುತ್ತಾನೆ. ಏಳನೇ ಮನೆಯಲ್ಲಿ ರಾಹು ಕೂಡ ಒತ್ತಡಗಳನ್ನು ಕೊಡುತ್ತಾನೆ. ಮೂರರಲ್ಲಿ ಬುಧ ನಾಲ್ಕರಲ್ಲಿ ಶುಕ್ರ ಒಂಬತ್ತನೇ ಮನೆಯಲ್ಲಿ ಗುರು ನಿಮಗೆ ಬಹಳ ಶಕ್ತಿ ಮತ್ತು ಬೆಂಬಲ ಕೊಡುತ್ತಾರೆ. ವಾಹನದಿಂದ ಲಾಭ ಇದೆ.‌ ಅಲಂಕಾರದ ವಸ್ತುಗಳಿಂದ ಲಾಭ ಇದೆ. ಗೃಹಾಲಂಕಾರಕ್ಕೆ ಖರ್ಚು ಮಾಡುತ್ತೀರಿ.‌ ಹನ್ನೊಂದರಲ್ಲಿ ಕುಜ ಕೂಡ ಲಾಭವನ್ನೇ ಕೊಡುತ್ತಾನೆ.

Weekly Horoscope In Kannada From November 10 To November 16 2024

ತುಲಾ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಬುಧ ಮೂರನೇ ಮನೆಯಲ್ಲಿ ಶುಕ್ರ ಆರನೇ ಮನೆಯಲ್ಲಿ ರಾಹು ಸಮಯ ಬಹಳ ಚೆನ್ನಾಗಿದೆ. ಯಾವುದೋ ಕಾಲದಿಂದ ಇದ್ದ ನೋವು ಸಂಕಟಗಳೂ ದೂರವಾಗುತ್ತದೆ. ಎಂಟನೇ ಮನೆಯಲ್ಲಿ‌ಗುರು ಇದ್ದು ಹಿರಿಯರ ಆರೋಗ್ಯಕ್ಕೆ ತೊಂದರೆ ಹಾಗೂ ಮನೆಯಲ್ಲಿ ಹಿರಿಯರು‌ಇದ್ದರೆ ಅವರ ನಿರ್ಗಮನ ಈ ರೀತಿ ಒಂದು ದುಃಖಕರ ಸನ್ನಿವೇಶ ಎದುರಾಗುತ್ತದೆ. ದತ್ತಾತ್ರೇಯ ಸ್ತೋತ್ರ ಹೇಳಿಕೊಳ್ಳಿ.

Weekly Horoscope In Kannada From November 10 To November 16 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಬುಧ ಇದ್ದು ನಿಮ್ಮನ್ನು ರಕ್ಷಿಸುತ್ತಾನೆ. ಎರಡನೇ ಮನೆಯಲ್ಲಿ ಶುಕ್ರ ಇದ್ದು ಹಣದ ಹರಿವು ಚೆನ್ನಾಗಿದೆ. ವಾಹನದಿಂದ ಲಾಭ ಇದೆ. ಹನ್ನೊಂದನೇ ಮನೆಯಲ್ಲಿ ಕೇತು ಏಳನೇ ಮನೆಯಲ್ಲಿ ಗುರು ಸಹ ನಿಮಗೆ ಸುಖ ಸಂತೋಷ ಗಳನ್ನು ಕೊಡುತ್ತಾರೆ. ಮನೆಯಲ್ಲಿ ಶುಭಕಾರ್ಯದ ಸಡಗರ ಇರುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನಸ್ಸಿಗೆ ಸಂತೋಷ ಕೊಡುವ ಘಟನೆಗಳು ನಡೆಯುತ್ತವೆ.

Weekly Horoscope In Kannada From November 10 To November 16 2024

ಧನಸ್ಸು ರಾಶಿಯ ವಾರ ಭವಿಷ್ಯ

ಆರರಲ್ಲಿ ಗುರು ಮಾನಸಿಕವಾಗಿ ಕುಗ್ಗಿಸುತ್ತಾನೆ. ನಿಮ್ಮ ಮೇಲೆ ಅಪವಾದ ಇರಬಹುದು, ನಿಮ್ಮ ವಿರುದ್ಧ ಪಿತೂರಿ ಇರಬಹುದು ನಿಮ್ಮ ತೇಜೋವಧೆ ಆಗಬಹುದು. ಎಚ್ಚರಿಕೆಯಿಂದ ಇರಿ.‌ ಎಂಟರಲ್ಲಿ ಕುಜ ಇದ್ದು ಸಹೋದರರಿಗೆ ಒಳ್ಳೆಯದಲ್ಲ. ನಿಮ್ಮ ರಾಶಿಯಲ್ಲೇ ಶುಕ್ರ ಇದ್ದಾನೆ ಇದು ನಿಮಗೆ ಸಹಾಯ ಮಾಡುತ್ತದೆ. ಹನ್ನೊಂದರಲ್ಲಿ ಸೂರ್ಯ ಸಹ ನಿಮಗೆ ಅನುಕೂಲಕರನಾಗಿದ್ದಾನೆ. ಕೊಂಚ ಹಣದ ಅಡಚಣೆ ಇರುತ್ತದೆ. ವಿವೇಚನೆಯಿಂದ ನಿರ್ವಹಿಸಿ.

Weekly Horoscope In Kannada From November 10 To November 16 2024

ಮಕರ ರಾಶಿಯ ವಾರ ಭವಿಷ್ಯ

ಹನ್ನೊದರಲ್ಲಿ ಬುಧ ಇದ್ದು ಲೆಕ್ಕ ಶಾಸ್ತ್ರ ಕ್ಷೇತ್ರದವರಿಗೆ, ಬ್ಯಾಂಕಿಂಗ್ ಕ್ಷೇತ್ರದವರಿಗೆ, ಕಂಪ್ಯೂಟರ್ ಕ್ಷೇತ್ರದವರಿಗೆ ಲಾಭ ಇದೆ. ಹನ್ನೆರಡಲ್ಲಿ ಶುಕ್ರ ಇದ್ದು ವಾಹನದಿಂದ ನಷ್ಟ, ಅನವಶ್ಯಕ ಖರ್ಚುಗಳು ಇರುತ್ತದೆ. ಏಳರಲ್ಲಿ ಕುಜ ಇದ್ದು ಸಂಗಾತಿಯೊಡನೆ ಒಂದು ಸಣ್ಣ ಜಗಳ‌ ಮನಸ್ತಾಪ ಆಗಬಹುದು. ಮೂರನೆ ಮನೆಯ ರಾಹು, ಐದನೇ ಮನೆಯ ಗುರು ನಿಮ್ಮ ರಕ್ಷಣೆಗೆ ಇದ್ದಾರೆ. ಏನೇ ಅಡೆತಡೆಗಳು ಬಂದರೂ ತೊಂದರೆಯಾಗದಂತೆ ಕಾಪಾಡುತ್ತಾರೆ. ಹಣದ ಹರಿವು ಉತ್ತಮವಾಗಿದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತದೆ.

Weekly Horoscope In Kannada From November 10 To November 16 2024

ಕುಂಭ ರಾಶಿಯ ವಾರ ಭವಿಷ್ಯ

ಹತ್ತನೇ ಮನೆಯಲ್ಲಿ ಬುಧ ಹನ್ನೊಂದನೇ ಮನೆಯಲ್ಲಿ ಶುಕ್ರ ಈ ವಾರ ನಿಮಗೆ ಕೊಂಚ ಅನುಕೂಲಕರವಾಗಿದೆ. ಬಿರುಬಿಸಿಲಲ್ಲಿ ತಂಗಾಳಿಯಂತೆ ಬುಧ ಶುಕ್ರರಿಬ್ಬರೂ ನಿಮಗೆ ಹಿತ ಕೊಡುತ್ತಾರೆ. ವಾಹನದಿಂದ ಲಾಭ ಇದೆ. ಅಲಂಕಾರಿಕ ವಸ್ತುಗಳು ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಲಾಭ ಇದೆ. ವೃತ್ತಿಯಲ್ಲಿ ಏರುಪೇರು ಕೊಂಚ ನಿಯಂತ್ರಕ್ಕೆ ಬರುತ್ತದೆ. ಆದರೂ ನಾಲ್ಕರಲ್ಲಿ ಗುರು ಇರುವುದರಿಂದ ನಿಮಗೆ ಕೊಂಚ ಮಾನಸಿಕ ಸಂಕಟಗಳು ಇದ್ದೇ ಇರುತ್ತದೆ. ಆರರಲ್ಲಿ ಕುಜ ಕೂಡ ಕೊಂಚಮಟ್ಟಿಗೆ ಧೈರ್ಯವನ್ನು ಹೆಚ್ಚಿಸುತ್ತಾನೆ.

Weekly Horoscope In Kannada From November 10 To November 16 2024

ಮೀನ ರಾಶಿಯ ವಾರ ಭವಿಷ್ಯ

ಈಗ ಯಾವ ಗ್ರಹಗಳೂ ನಿಮಗೆ ಸಹಾಯ ಮಾಡುತ್ತಿಲ್ಲ. ಇದ್ದುದರಲ್ಲಿ ಒಂಬತ್ತನೇ ಮನೆಯಲ್ಲಿ ಇರುವ ಬುಧನಿಂದ ಕೊಂಚ ರಕ್ಷೆ ಸಿಗುತ್ತದೆ. ಬಾಕಿಯಂತೆ ಕಷ್ಟನಿಷ್ಟೂರಗಳು ಹೆಚ್ಚು. ನೀವೇ ವಿವೇಚನೆಯಿಂದ ಸಂಭಾಳಿಸಿಕೊಳ್ಳಬೇಕು. ಶತ್ರು ಕಾಟ, ಹಣದ ಅಡಚಣೆ, ಬಾಕಿ ಹಣ ಬಾರದೆ ಸತಾಯಿಸುವುದು ಹೀಗೆಲ್ಲ ಇರುತ್ತದೆ. ಒತ್ತಡಗಳು ಇರುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನಿಭಾಯಿಸಿಕೊಳ್ಳಿ. ಮನೆ ದೇವರ ಪ್ರಾರ್ಥನೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+