Weekly Horoscope: ಮೇ ತಿಂಗಳ ಕೊನೆಯ ವಾರ ಈ ರಾಶಿಯವರಿಗೆ ನೆಮ್ಮದಿಯ ದಿನಗಳು

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಬಹುಳ ತದಿಗೆಯಿಂದ

ಅಂದರೆ ಏಕಾದಶಿಯವರೆಗೆ.

ಈ ವಾರದ ಚಂದ್ರನ ಸಂಚಾರ ಮೂಲಾ ನಕ್ಷತ್ರದಿಂದ ರೇವತಿಯವರೆಗೆ.

26/05/2024- 01/06/2024 ವಾರ ಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮೇ 26ರಿಂದ ಜೂನ್‌ 01ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

Weekly Horoscope In Kannada From May 26 To June 1 2024

ಮೇಷ ರಾಶಿಯ ವಾರ ಭವಿಷ್ಯ

ಪ್ರವಾಸ ಹೋಗುವ ಅವಕಾಶ ಇದೆ. ವಿನೋದ ವಿಹಾರಗಳು ಇವೆ. ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಮಕ್ಕಳಿಂದ ಅಥವಾ ಮಕ್ಕಳಿಗಾಗಿ‌ ಖರ್ಚು‌ ಇರುತ್ತದೆ. ಆದರೂ ಹಣದ ಹರಿವು ಉತ್ತಮವಾಗಿ‌ ಇರುವುದರಿಂದ ಖರ್ಚಿನ ಬಗ್ಗೆ ಚಿಂತೆ ಬೇಡ. ವೃತ್ತಿಯಲ್ಲಿ ಯಶಸ್ಸು ಇದೆ.

Weekly Horoscope In Kannada From May 26 To June 1 2024

ವೃಷಭ ರಾಶಿಯ ವಾರ ಭವಿಷ್ಯ

ತಲೆಯಲ್ಲಿ ನೂರೆಂಟು ಚಿಂತೆಗಳ ಸಂತೆ. ಕಾಣದ ಭಯ ತಲ್ಲಣ. ಯಾವುದಕ್ಕೂ ಭಯ ಬೇಡ. ಗುರುಬಲ ಇಲ್ಲದಿದ್ದರೂ ರಾಹುಬಲ ಇದೆ. ಧೈರ್ಯ‌ ಸ್ಥೈರ್ಯ ಕೊಡುತ್ತಾನೆ. ಖರ್ಚು ವೆಚ್ಚಗಳು ನಿಮ್ಮ ಅಂದಾಜು ಮೀರಬಹುದು. ಅದರ ಮೇಲೆ ಗಮನ‌ ಇರಲಿ. ಹೆದರಿಕೆ ಮನಸಿನಿಂದ ತೆಗೆದುಹಾಕಿ. ಮನೆಯಲ್ಲಿ ಮಡದಿ ಮಕ್ಕಳ ಆರೋಗ್ಯದ ಬಗ್ಗೆ ಗಮನ ಇರಲಿ. ವೃತ್ತಿಯಲ್ಲಿ ಭದ್ರತೆ ಇದೆ. ಶುಭಕಾರ್ಯಕ್ಕಾಗಿ ಖರ್ಚು ಇದೆ.

Weekly Horoscope In Kannada From May 26 To June 1 2024

ಮಿಥುನ ರಾಶಿಯ ವಾರ ಭವಿಷ್ಯ

ನೀವು ಈಗ ಕವಲು ದಾರಿಯಲ್ಲಿ‌ ನಿಂತಿದ್ದೀರಿ.‌ ವ್ಯಯಸ್ಥಾನದಲ್ಲಿ ಗುರು ನಿಮಗೆ ಗೊಂದಲ ಕೊಡುತ್ತಾನೆ. ನೀವು ಮಾಡುವುದು ತಪ್ಪು ಎಂದು ಗೊತ್ತಿದ್ದರೂ ಅದೇ ತಪ್ಪು ಮತ್ತೆ ಮತ್ತೆ ಮಾಡುತ್ತೀರಿ. ವಿರೋಧಾಭಾಸದ ನಡವಳಿಕೆಯನ್ನು ತೋರುತ್ತೀರಿ. ಇದರಿಂದ ನಿಮ್ಮ ಮನೆಯವರಿಗೆ ಗೊಂದಲ ಆಗುತ್ತದೆ.‌ ಧ್ಯಾನದಿಂದ ಏಕಾಗ್ರತೆ ಬೆಳೆಸಿಕೊಳ್ಳಿ. ಯಾವ ದಾರಿ ಸರಿಯಾಗಿದೆ ಎಂದು ಯೋಚಿಸಿ ಆರಿಸಿಕೊಳ್ಳಿ.‌ ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಬೇಸರವಾಗಬಾರದೆಂಬ ಗಮನ ಇರಲಿ.

Weekly Horoscope In Kannada From May 26 To June 1 2024

ಕಟಕ ರಾಶಿಯ ವಾರ ಭವಿಷ್ಯ

ನಿಮಗೆ ಈಗ ನೆಮ್ಮದಿಯ ದಿನಗಳು. ಅವಕಾಶಗಳ ಬಾಗಿಲು ತೆರೆಯಲಿದೆ. ಮನಸ್ಸಿಗೆ ಖುಷಿಯಾಗುವಂತಹ ಸಂಗತಿಗಳು ನಡೆಯುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿ, ವೃತ್ತಿಯಲ್ಲಿ ಯಶಸ್ಸನ್ನು ಕಾಣುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಇದೆ. ವಿನೋದ ವಿಹಾರ ಯಾತ್ರೆಗಳು ಇದೆ. ಅರ್ಹರಿಗೆ ಕಂಕಣಬಲ ಕೂಡಿಬರುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಮಯ. ಹಣದ ಹರಿವು ಉತ್ತಮವಾಗಿದೆ.

Weekly Horoscope In Kannada From May 26 To June 1 2024

ಸಿಂಹ ರಾಶಿಯ ವಾರ ಭವಿಷ್ಯ

ಈಗ ನೀವು ಒತ್ತಡಗಳ ಸರಮಾಲೆಯನ್ನೇ ಎದುರಿಸುತ್ತಿದ್ದೀರಿ. ಮನೆಯಲ್ಲಿ ವಿರಸ, ಅನಾರೊಗ್ಯ, ಹಣಕಾಸಿನ ಖರ್ಚು ಎಲ್ಲವೂ ಇದೆ. ಯಾರೊಂದಿಗೂ ಹೇಳಿಕೊಳ್ಳಲಾಗದ ಒತ್ತಡಗಳು ಇವೆ. ನಿಧಾನವಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡಿ. ಮನೆಯವರ ವಿಶ್ವಾಸ ಗಳಿಸಿಕೊಳ್ಳಿ.‌ ಯಾವುದನ್ನು ಅತಿಯಾಗಿ ಯೋಚಿಸದಿರಿ. ಈಗ ಬಂದಿರುವ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳುವ ಬಗ್ಗೆ ಮಾತ್ರ ನಿಮ್ಮ ಯೋಚನೆ ಇರಲಿ. ಗ್ರಹಗತಿಗಳು ವ್ಯತಿರಿಕ್ತವಾಗಿ ಇರುವ ಈ ಸಮಯದಲ್ಲಿ ಪ್ರತಿಯೊಂದು ಹೆಜ್ಜೆಗೂ ಆಲೋಚಿಸಿ ಮುನ್ನಡೆಯಿರಿ.

Weekly Horoscope In Kannada From May 26 To June 1 2024

ಕನ್ಯಾ ರಾಶಿಯ ವಾರ ಭವಿಷ್ಯ

ಸಿಂಹರಾಶಿಗೆ ವಿರುದ್ಧದ ಫಲಗಳು ಈಗ ನಿಮಗೆ. ನೀವು ಮುಟ್ಟಿದ್ದೆಲ್ಲ ಚಿನ್ನ.‌ ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ವಿದ್ಯಾರ್ಥಿಗಳಿಗೆ ಶುಭಸುದ್ದಿ ಇದೆ. ಉನ್ನತ ವ್ಯಾಸಂಗ, ವಿದೇಶ ಪ್ರವಾಸ ಮಂತಾದ ವಿಶೇಷ ಸಂಗತಿಗಳು ಜರುಗುವ ಸಮಯ.‌ ಆಸ್ತಿ, ಚಿನ್ನ ಖರೀದಿಸುವ ಭಾಗ್ಯ ಇದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಂಭ್ರಮ ಇದೆ. ವೃತ್ತಿಯಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭ ಇದೆ. ಪದವಿ ಅಧಿಕಾರ, ಗೌರವ ಮನ್ನಣೆ ಸಿಗುವ ಸಮಯ.

Weekly Horoscope In Kannada From May 26 To June 1 2024

ತುಲಾ ರಾಶಿಯ ವಾರ ಭವಿಷ್ಯ

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು! ಎಂಬಂತ ಪರಿಸ್ಥಿತಿ ನಿಮ್ಮದು. ನಿಮ್ಮ ನಡವಳಿಕೆ ಜನರಲ್ಲಿ ಅನುಮಾನವನ್ನು ಹುಟ್ಟು ಹಾಕುತ್ತದೆ. ನಿಮ್ಮ ನಡತೆ ಮಾತು ಜನರಿಗೆ ಇಷ್ಟವಾಗದೆ ನಿಮಗೆ ಅದರಿಂದ ಅವಮಾನ‌ ಅಗೌರವ ಆಗುವ ಸಂಭವ ಇದೆ. ಯಾವ ಕೆಲಸವನ್ನೂ ಯೋಚಿಸಿ ಮಾಡಿ.‌ ನಿಮ್ಮ ಬಗ್ಗೆ ಜನರ ಅಭಿಪ್ರಾಯ ಏನೆಂದು ತಿಳಿದು‌ ಮುಂದಡಿ‌ ಇಡಿ. ಹಣಕಾಸಿಗೆ ಕಷ್ಟವಿಲ್ಲದಿದ್ದರೂ ಮಾನಹಾನಿ ಮನಸ್ಸಿಗೆ ಕ್ಲೇಶ ಇರುತ್ತದೆ.

Weekly Horoscope In Kannada From May 26 To June 1 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ನಾಲ್ಕನೇ ಮನೆಯಲ್ಲಿ ಶನಿ ಇರುವುದು ಕೊಂಚ ಕೊರತೆ. ವಾಹನದಿಂದ ನಷ್ಟ. ಸುಖ ಸಂತೋಷಕ್ಕೆ ಕೊಂಚ ಕಿರಿಕಿರಿ. ಆದರೆ ಏಳನೇ ಮನೆಯಲ್ಲಿ ಇರುವ ಗುರು ನಿಮ್ಮನ್ನು ಕಾಪಾಡುತ್ತಾನೆ. ಕಷ್ಟಗಳಿಂದ ರಕ್ಷಣೆ ಇದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಇದೆ.‌ ವೃತ್ತಿಯಲ್ಲಿ ಯಶಸ್ಸು ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ

Weekly Horoscope In Kannada From May 26 To June 1 2024

ಧನಸ್ಸು ರಾಶಿಯ ವಾರ ಭವಿಷ್ಯ

ಮೂರನೇ ಮನೆಯಲ್ಲಿ ಶನಿ‌ ಇರುವುದು ಅನುಕೂಲವೇ ಆದರೂ ಆರರಲ್ಲಿ ಗುರು ಕೊಂಚ ಚಿಂತೆಗಳನ್ನು ಕೊಡುತ್ತಾನೆ. ವೃಥಾ ಆರೋಪ ಬರುವುದು, ನೀವು ಮಾಡದೇ ಇರುವ ಕೆಲಸಕ್ಕೆ ತಲೆ ತಗ್ಗಿಸಬೇಕಾಗುವುದೂ, ಹಣಕಾಸಿನ‌ ಹರಿವು ಉತ್ತಮವಾಗಿದ್ದರೂ, ವಿಪರೀತ ಖರ್ಚು ಮೊದಲಾದ ನೆಗೆಟಿವ್ ಅಂಶಗಳು‌ ಇವೆ. ಎಚ್ಚರಿಕೆಯಿಂದ ಮುನ್ನಡೆಯಿರಿ. ಕೆಲಸಗಳು ನಿಧಾನವಾಗಿ ಸಾಗುತ್ತದೆ ಬೇಸರಿಸಬೇಡಿ.

Weekly Horoscope In Kannada From May 26 To June 1 2024

ಮಕರ ರಾಶಿಯ ವಾರ ಭವಿಷ್ಯ

ಅವಕಾಶಗಳ ಬಾಗಿಲು ತೆರೆದಿದೆ. ರಾಹುಬಲ ಗುರುಬಲ ಎರಡೂ ನಿಮಗೆ ಯಶಸ್ಸನ್ನೂ ಗೆಲುವನ್ನು ಭಾಗ್ಯಗಳನ್ನೂ ಕೊಡುತ್ತದೆ. ಇದುವರೆಗೂ ನಿಮ್ಮ ದಾರಿಯಲ್ಲಿ ಇದ್ದ ಅಡ್ಡಿ ಆತಂಕಗಳು ದೂರವಾಗಲಿವೆ. ಅರ್ಹರಿಗೆ ವಿವಾಹ ಭಾಗ್ಯ ಇದೆ. ಉದ್ಯೋಗಾಂಕ್ಷಿಗಳಿಗೆ ಅರ್ಹ ಉದ್ಯೋಗ ಪದವಿ ಅಧಿಕಾರ ದೊರೆಯುತ್ತದೆ. ಸಾಮಾಜಿಕ ಗೌರವ ಸ್ಥಾನಮಾನ ಲಭಿಸಲಿದೆ. ವಿನೋದ ವಿಹಾರಗಳು, ಪ್ರವಾಸಗಳು ಇದೆ.

Weekly Horoscope In Kannada From May 26 To June 1 2024

ಕುಂಭ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಬಹಳ ಸವಾಲುಗಳು. ಎತ್ತ ನೋಡಿದರೂ ಸವಾಲುಗಳೇ! ಯಾವುದೂ ಸುಲಭವಾಗಿ ಸಿಗುವುದಿಲ್ಲ. ಪ್ರತಿಯೊಂದು ಸಂಗತಿಯೂ ನಿಮ್ಮಿಂದ ಬಹಳ ಶ್ರಮ ಮತ್ತು ಸಹನೆ ಬೇಡುತ್ತದೆ. ಹಣದ ಮುಗ್ಗಟ್ಟು ಇರುತ್ತದೆ. ಆರೋಗ್ಯ ಏರುಪೇರು ಇರುತ್ತದೆ. ಶತ್ರುಗಳ‌ಕಾಟ, ಮೇಲಧಿಕಾರಿಗಳ ಕಿರುಕುಳ ಇರುತ್ತದೆ.‌ ಶುಕ್ರ ಮತ್ತು ಬುಧ ನಿಮಗೆ ಅಲ್ಪ ಸಮಾಧಾನ ನೀಡುತ್ತಾರೆ.

Weekly Horoscope In Kannada From May 26 To June 1 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಈಗ ಗೃಹ ಸಂಬಂಧಿ ವಿಷಯಗಳಲ್ಲಿ ಬಹಳ ತಲೆಬೇನೆ ಇದೆ. ಕೌಟುಂಬಿಕ ಅಶಾಂತಿ ನಿಮ್ಮನ್ನು ಚಿಂತೆಗೀಡು ಮಾಡುತ್ತದೆ. ಸಂಗಾತಿಯೊಂದಿಗೆ ವಿರಸ ಜಗಳ ತಾರಕಕ್ಕೆ ಹೋಗಬಹುದು. ಯಾವುದಕ್ಕೂ ಸಹನೆ ವಹಿಸಿ. ಜಗಳ ವಾದ ಬೇಡ. ಹಣಕಾಸಿನ ಖರ್ಚುಗಳೂ ಬಹಳ ಇರುತ್ತದೆ. ಸೂರ್ಯ ಮೂರನೇ ಮನೆಯಲ್ಲಿ ಇರುವುದು ಕೊಂಚ ಬಲ ಕೊಡುತ್ತದೆ. ರಾಶಿಯಲ್ಲೇ ರಾಹು ಇರುವುದು ಆರೋಗ್ಯಕ್ಕೆ ತೊಂದರೆ ಇದೆ. ನೀವೇ ಈಗ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+