Weekly Horoscope 2025: ಹಣಕಾಸು, ಆರೋಗ್ಯ, ಪ್ರೇಮ : 12 ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ?

ಜೂನ್‌ ತಿಂಗಳ ನಾಲ್ಕನೇ ವಾರ ಶುರುವಾಗಲಿದೆ. ಈ ವಾರ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಹಾಗಾದರೆ ಮುಂಬರುವ ವಾರ 12 ರಾಶಿಗಳ ಆರೋಗ್ಯ, ಹಣಕಾಸು, ಆರ್ಥಿಕ, ಪ್ರೇಮ, ಕೌಟುಂಬಿಕ, ಸಾಮಾಜಿಕ, ಆರೋಗ್ಯ, ವೃತ್ತಿ ಜೀವನ ಹೇಗಿರಲಿದೆ ಎಂದು ಈಗ ತಿಳಿಯೋಣ.

ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಕೃಷ್ಣಪಕ್ಷದ ದ್ವಾದಶಿಯಿಂದ ದಕ್ಷಿಣಾಯನ ಆಷಾಢಮಾಸದ ಶುಕ್ಲಪಕ್ಷದ ಪಂಚಮಿಯವರೆಗೆ ಅಂದರೆ 22.06.25 ರಿಂದ 29.06.25 ರ ವರೆಗೆ
ಈ ವಾರದ ಚಂದ್ರನ ಸಂಚಾರ ಭರಣಿ ನಕ್ಷತ್ರದಿಂದ ಮಖಾ ನಕ್ಷತ್ರದವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ.

weekly horoscope in kannada from June 22 to June 29 2025

ಮೇಷರಾಶಿ

ಮೂರನೇ ಮನೆಯಲ್ಲಿ ಗಜಕೇಸರಿ‌ ಯೋಗ ಆಗಿದೆ. ಇದು ನಿಮಗೆ ಸಾಕಷ್ಟು ಶಕ್ತಿ‌ಪರಾಕ್ರಮ ಕೊಡುತ್ತದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಸುಲಭವಾಗುತ್ತದೆ. ನಾಲ್ಕನೇ ಮನೆಯಲ್ಲಿ ಬುಧ ಇದೂ ಶುಭಫಲ ನೀಡುತ್ತದೆ. ಐದನೇ ಮನೆಯಲ್ಲಿ ಕುಜ- ಕೇತು ಇದ್ದು ರಾಹು ದೃಷ್ಡಿಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಹಿನ್ನಡೆ. ಪರೀಕ್ಷೆಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗುವುದಿಲ್ಲ. ಲಾಭಸ್ಥಾನದಲ್ಲಿ ರಾಹು ಧನಸಹಾಯ ಮಾಡುತ್ತಾನೆ.

ವೃಷಭರಾಶಿ

ಎರಡನೇ ಮನೆಯಲ್ಲಿ ಗಜಕೇಸರಿ ಯೋಗದಿಂದ ಅಪರಿಮಿತ ಧನಲಾಭ‌, ಕುಟುಂಬ ಕ್ಷೇಮ, ನೆಮ್ಮದಿ ಇದೆ. ನಿಮ್ಮ ಮಾತು ಅಥವಾ ವಿನಂತಿಗೆ ಪ್ರಭಾವಿಸುವ ಶಕ್ತಿ‌ಇದೆ. ಮೂರನೇ ಮನೆಯಲ್ಲಿ ಬುಧ ಸಹೋದರ ನಿಂದ ಲಾಭ ಕೊಡಿಸುತ್ತಾನೆ. ಸಹೋದರರಿಗೂ ಒಳಿತಾಗುತ್ತದೆ. ನಾಲ್ಕನೇ ಮನೆಯಲ್ಲಿ ಕುಜ ಕೇತು ಇದ್ದು ರಾಹುವಿನ ದೃಷ್ಡಿಗೆ ಪಾತ್ರರಾಗಿದ್ದಾರೆ. ವಾಹನ ಉದ್ದಿಮೆಯವರಿಗೆ ಕೊಂಚ ನಷ್ಟ ಇದೆ. ತಾಯಿಯ ಆರೋಗ್ಯ ಕೈಕೊಡಬಹುದು ಜೋಪಾನ. ಹನ್ನೊಂದರ ಶನಿ ಧನಲಾಭ ಕೊಡುತ್ತಾನೆ.

ಮಿಥುನರಾಶಿ

ನಿಮ್ಮ ರಾಶಿಯಲ್ಲೇ ಗಜಕೇಸರಿ ಯೋಗ ಆಗಿದೆ. ಇದು ನಿಮಗೆ ವೈಯಕ್ತಿಕವಾಗಿ ಶಕ್ತಿ ಸಾಮರ್ಥ್ಯ ಮನೋಬಲ ಕೊಡುತ್ತದೆ. ಎರಡನೆ ಮನೆಯ ಬುಧನಿಂದ ಧನಲಾಭ ಇದೆ. ಮೂರರಲ್ಲಿ ಕುಜ ಕೇತು ನಿಮ್ಮ ಬೆಳವಣಿಗೆಯ ಅಡ್ಡಲಾಗಿ ಇರುವ ಅಡೆತಡೆಗಳನ್ನು ದೂರ ಮಾಡುತ್ತಾರೆ. ಹನ್ನೊಂದನೇ ಮನೆಯಲ್ಲಿ ಶುಕ್ರ ಸಹ ಬಲಿಷ್ಠವಾಗಿದ್ದು ಧನಕನಕಾಭರಣ ಲಾಭ ಕೊಡುತ್ತಾನೆ. ವಾಹನದಿಂದ ಲಾಭ ಇದೆ.

ಕಟಕರಾಶಿ

ನಿಮ್ಮ ರಾಶಿಯಲ್ಲೇ ಬುಧ ಕೊಂಚ ಆರಾಮ ನೀಡುತ್ತಾನೆ. ಆದರೆ ಖರ್ಚುಗಳು ಅನಾರೋಗ್ಯ ಇದೆ. ಗುರು 12 ನೇ ಮನೆಯಲ್ಲಿ ಇರುವುದರಿಂದ ಸ್ಥಳ ಬದಲಾವಣೆ ಇದೆ. ಶನಿ ಒಂಬತ್ತನೇ ಮನೆಯಲ್ಲಿ ಆಧ್ಯಾತ್ಮಿಕ ಚಿಂತನೆ ಕೊಡುತ್ತಾನೆ. ಹೇಳಿಕೊಳ್ಳಲು ಯಾವ ಗ್ರಹ ಬಲವು ಇಲ್ಲ. ಆದರೆ ಕೆಟ್ಟ ಪರಿಸ್ಥಿತಿ ಯೂ ಇಲ್ಲ. ಧಾರ್ಮಿಕ ಖರ್ಚುಗಳು ಇವೆ.

ಸಿಂಹರಾಶಿ

ನಿಮ್ಮ ರಾಶಿಯಲ್ಲೇ ಕುಜ ಕೇತು ಇದ್ದು ರಾಹುವಿನ ದೃಷ್ಟಿ ಗೆ ಪಾತ್ರರಾಗಿದ್ದಾರೆ. ಇದು ನಿಮಗೆ ವೈಯುಕ್ತಿಕವಾಗಿ ಕೊಂಚ ಅಪಾಯಕಾರಿ. ಅಪಘಾತ, ಅನಾರೋಗ್ಯ ಆಗಬಹುದು ಜಾಗ್ರತೆಯಿಂದ ಇರಿ. ಚರ್ಮದ ಅಲರ್ಜಿಯೂ ಆಗಬಹುದು. ಹಾವುಗಳು ಕನಸಲ್ಲಿ ಬರಬಹುದು. ಸುಬ್ರಹ್ಮಣ್ಯ ನ ಅಷ್ಟೊತ್ತರ ಪಠಿಸಿ. ಹನ್ನೊಂದನೇ ಮನೆಯಲ್ಲಿ ಗಜಕೇಸರಿ ಯೋಗವಾಗಿದೆ. ಇದು ನಿಮಗೆ ಅತ್ಯಧಿಕ ಲಾಭ ಕೊಡುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರ ಸಹ ನಿಮಗೆಲಾಭ ಕೊಡುತ್ತಾನೆ ಆದರೆ ಅಷ್ಠಮಶನಿಯ ಪ್ರಭಾವ ಇರುವುದರಿಂದ ಕೆಲಸಗಳು ನಿಧಾನ. ಅದಾಯ ಖರ್ಚು ಸಮಸಮ.‌

ಕನ್ಯಾರಾಶಿ

ಗುರು ಹತ್ತನೇ ಮನೆಯಲ್ಲಿ ಇರುವುದು ಸ್ಥಾನಮಾನ ಬದಲಾವಣೆಗೆ ಕಾರಣವಾಗುತ್ತವೆ. ‌ಪದವಿ ಕಳೆದುಕೊಳ್ಳುವ ಸಾಧ್ಯತೆ ಇದೆ. ನೌಕರಿಯ ಜಾಗದಲ್ಲಿ ಯಾರೊಂದಿಗೂ ವಾದ ಬೇಡ. ಆರರಲ್ಲಿ ರಾಹು ಇರುವುದು ಧನಲಾಭ ಕೊಡುತ್ತದೆ. 12 ನೇ ಮನೆಯಲ್ಲಿ ಕುಜ ಕೇತು ಇದ್ದು ರಾಹು ದೃಷ್ಡಿಗೆ ಪಾತ್ರವಾಗಿರುವುದರಿಂದ ಅನಾರೋಗ್ಯ ಕಾಡಬಹುದು.

ತುಲಾರಾಶಿ

ಆರನೇ ಮನೆಯಲ್ಲಿ ಶನಿ ಒಂಬತ್ತನೇ ಮನೆಯಲ್ಲಿ ಗುರು ಇದೇ ನಿಮ್ಮ ಶಕ್ತಿ.‌ ಹತ್ತನೇ ಮನೆಯಲ್ಲಿ ಬುಧ ಇದ್ದಾನೆ ಇದೂ ನಿಮಗೆ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತದೆ. ಹನ್ನೊಂದರಲ್ಲಿ ಕೇತು ಕುಜ ಸಹ ನಿಮ್ಮ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತಾರೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ವಿದೇಶ ಪ್ರಯಾಣ ಯೋಗ ಇದೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಆಗುತ್ತದೆ.

ವೃಶ್ಚಿಕರಾಶಿ

ಯಾವುದೇ ಗ್ರಹಬಲ ಇಲ್ಲ. ಹಾಗಾಗಿ ದೈವಬಲ ಅಷ್ಟೇ ನೀವು ನಂಬಬೇಕು. ಮನೆದೇವರು ಇಷ್ಟ ದೇವರು‌ಇವರ ಪ್ರಾರ್ಥನೆ ಮಾಡಿ. ವಿನಾಕಾರಣ ಯಾರಲ್ಲೂ ಜಗಳ ವಾದ ಮನಸ್ತಾಪ ಬೇಡ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ಒತ್ತಡಗಳು ಇರುತ್ತವೆ. ಜಾಣತನದಿಂದ ನಿಭಾಯಿಸಿ. ಕೆಲವು ಕಾಲ ಈ ಸತ್ವಪರೀಕ್ಷೆಯನ್ನು ಸಹಿಸಿಕೊಳ್ಳಬೇಕು. ಪ್ರಾಮಾಣಿಕತೆ ಇದ್ದರೆ ದೇವರೂ ಸಹಾಯ ಮಾಡುತ್ತಾನೆ.

ಧನಸ್ಸುರಾಶಿ

ಏಳರಲ್ಲಿ ಗುರು, ಮೂರರಲ್ಲಿ ರಾಹು ಬಹಳ ಒಳ್ಳೆಯ ಸಮಯ ನಡೆಯುತ್ತಿದೆ. ಅನಿರೀಕ್ಷಿತ ಧನಲಾಭ ಆಸ್ತಿ ಲಾಭ ಆಗುತ್ತದೆ. ಏಳರಲ್ಲಿ ಬುಧ ಗುರು ಸೂರ್ಯ ಇದ್ದು ವಿವಾಹಕ್ಕೆ ಒಳ್ಳೆಯ ಸಮಯ. ವೃತ್ತಿಯಲ್ಲೂ ಯಶಸ್ಸು. ಹೆಣ್ಣುಮಕ್ಕಳಿಗೆ ಶುಭಫಲಗಳು ಇವೆ. ವಾಹನದಿಂದ ಲಾಭ‌ಇದೆ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಶುಭಫಲಗಳು ಇವೆ.

ಮಕರರಾಶಿ

ಈಗ ನಾಲ್ಕನೇ ಮನೆಯಲ್ಲಿ ಶುಕ್ರ, ಮೂರರಲ್ಲಿ ಶನಿ ಬಹಳ ಒಳ್ಳೆಯ ಫಲಗಳನ್ನು ಕೊಡುತ್ತಾರೆ. ಆರರಲ್ಲಿ ಸೂರ್ಯ ಸಹ ಬಹಳ ಶಕ್ತಿ ನೀಡುತ್ತಾನೆ. ಏಳರಲ್ಲಿ ಬುಧ ನಿಮ್ಮ ರಾಶಿಯನ್ನೇ ನೋಡುತ್ತಾನೆ. ಅದು ನಿಮಗೆ ರಕ್ಷೆ. ಎರಡನೇ ಮನೆಯಲ್ಲಿ ರಾಹು ಧನಲಾಭ ಕೊಡುತ್ತಾನೆ. ಆದರೂ ಗುರುಬಲ ಇಲ್ಲದ ಕಾರಣ ಕೊಂಚ ಮಟ್ಟಿಗೆ ನಿಧಾನ ಪ್ರಗತಿ. ನಿಮಗೆ ಬೇಕಾದ ಕಡೆ ನೌಕರಿಯ ವರ್ಗಾವಣೆ, ಹೊಸ ನೌಕರಿ ವಿವಾಹ ನಿಶ್ಚಯ ಇವೆಲ್ಲವೂ ಆಗುತ್ತದೆ. ಮನಸ್ಸಿಗೆ ಸಂತೋಷ ಇದೆ.

ಕುಂಭರಾಶಿ

ಎರಡನೇ ಮನೆಯಲ್ಲಿ ಶನಿ, ನಿಮ್ಮ ರಾಶಿಯಲ್ಲೇ ರಾಹು ಇದು ಅಷ್ಟು ಹಿತವಲ್ಲ. ಆದರೆ ಐದನೇ ಮನೆಯ ಗುರು ನಿಮಗೆ ಸಕಲ ವಿಧದಲ್ಲೂ ಶುಭವನ್ನುಂಟು ಮಾಡುತ್ತಾನೆ. ಆರರಲ್ಲಿ ಬುಧ, ಮೂರರಲ್ಲಿ ಶುಕ್ರ ಸಹ ನಿಮಗೆ ಸಹಾಯವಾಗಿದ್ದಾರೆ. ಅರ್ಹರಿಗೆ ವಿವಾಹ ನಿಶ್ಚಯ ಆಗುತ್ತದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಇವೆ. ನೌಕರಿಯಲ್ಲಿ ಬಡ್ತಿ ಇದೆ. ಕುಟುಂಬದ ಶಾಂತಿ ಸಮಾಧಾನಗಳನ್ನು ಕಾಪಾಡಿಕೊಳ್ಳಿ.

ಮೀನರಾಶಿ

ಆರನೇ ಮನೆಯ ಕೇತು ಮಾತ್ರ ನಿಮಗೆ ಉಪಕಾರಿ. ಈಗ ತಾತ್ಕಾಲಿಕವಾಗಿ ಎರಡನೇ ಮನೆಯ ಶುಕ್ರ ಐದನೇ ಮನೆಯ ಬುಧ ಸಹ ನಿಮಗೆ ಸಹಾಯ ಮಾಡುತ್ತಾರೆ. ಹಣದ ಹರಿವು ಉತ್ತಮವಾಗಿದೆ. ವಾಹನ, ಆಭರಣ, ಫ್ಯಾಷನ್ ಡಿಸೈನರ್, ಸಿನಿಮಾ ಕಲಾವಿದರು ಇವರಿಗೆಲ್ಲ ಉತ್ತಮ ಫಲಗಳಿವೆ. ಖರ್ಚುಗಳು‌ಇದೆ. ಎಚ್ಚರಿಕೆಯಿಂದ ನಿಭಾಯಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+