Weekly Horoscope: ಆ‍ಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಶುದ್ಧ ಅಷ್ಠಮಿಯಿಂದ ಹುಣ್ಣಿಮೆಯ ವರೆಗೆ.

ಈ ವಾರದ ಚಂದ್ರನ ಸಂಚಾರ ಚಿತ್ತ ನಕ್ಷತ್ರದಿಂದ ಉತ್ತರಾಷಾಢ ವರೆಗೆ.

14/06/2024-20/07/2024ರ ವಾರ ಭವಿಷ್ಯ

Weekly Horoscope In Kannada From July 14 To July 20 2024

ಮೇಷ ರಾಶಿಯ ವಾರ ಭವಿಷ್ಯ

ವಾರದ ಮೊದಲಿಂದಲೂ ಕುಜ ಮತ್ತು ಗುರು ಎರಡನೇ ಮನೆಯಲ್ಲಿ ಇರುತ್ತಾರೆ. ಇದು ನಿಮಗೆ ಅಪರಿಮಿತ ರಾಜ ಯೋಗ ಕೊಡುತ್ತದೆ. ಧನಲಾಭ ವೃತ್ತಿಯಲ್ಲಿ ಯಶಸ್ಸು ವಿದೇಶ ಪ್ರಯಾಣ ಮೊದಲಾದ ಶುಭಸಂಗತಿಗಳು ನಡೆಯುತ್ತದೆ. ನಾಲ್ಕನೇ ಮನೆಯಲ್ಲಿ ಬುಧ ಶುಕ್ರ ಹಾಗೂ ಸೂರ್ಯ ಕೂಡ ನಿಮಗೆ ಹೆಚ್ಚಿನ‌ ಶುಭಫಲಗಳನ್ನು ಕೊಡುತ್ತಾರೆ. ಆರನೇ ಮನೆಯ ಕೇತು ಕೂಡ ನಿಮ್ಮನ್ನು ರಕ್ಷಿಸುತ್ತಾನೆ.

Weekly Horoscope In Kannada From July 14 To July 20 2024

ವೃಷಭ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಗುರು ಮಂಗಳ‌ ಇದ್ದಾರೆ.‌ಇದು ಗುರು ಮಂಗಳ ಯೋಗವೇ ಆದರೂ ನಿಮಗೆ ವೃಥಾ ಚಿಂತೆ ಕಳವಳಗಳನ್ನು ಹೆಚ್ಚಿಸುತ್ತದೆ. ಆದರೆ ಮೂರನೇ ಮನೆಯಲ್ಲಿ ಸೂರ್ಯ ಶುಕ್ರ ಬುಧ ನಿಮ್ಮ ನೆರವಿಗೆ ಇದ್ದಾರೆ.‌ ಧನಲಾಭ ಇದೆ. ಖರ್ಚುಗಳು ಇವೆ. ನಿಮ್ಮ‌ ಸೌಕರ್ಯ ಸೌಲಭ್ಯಕ್ಕಾಗಿ ಹಣ ಖರ್ಚು ಮಾಡುವ ಸಂದರ್ಭ ಬರುತ್ತದೆ. ಲಾಭ ಸ್ಥಾನದಲ್ಲಿ ರಾಹು ನಿಮಗೆ ರಕ್ಷಣೆ ಕೊಡುತ್ತಾನೆ.

Weekly Horoscope In Kannada From July 14 To July 20 2024

ಮಿಥುನ ರಾಶಿಯ ವಾರ ಭವಿಷ್ಯ

ಹನ್ನೆರಡನೆಯ ಮನೆಯಲ್ಲಿ ಗುರು ಕುಜ ಇದ್ದಾರೆ ಭೂಮಿಯಿಂದ ನಷ್ಟ ಆರೋಗ್ಯ ನಷ್ಟ. ಆರೋಗ್ಯ ಕಾರಣಗಳಿಗಾಗಿ ಆಸ್ಪತ್ರೆವಾಸವೂ ಆಗಬಹುದು.‌ ಎರಡನೇ ಮನೆಯಲ್ಲಿ ಬುಧ ಶುಕ್ರ ಇರುವುದರಿಂದ ಹಣದ ಹರಿವು ಉತ್ತಮವಾಗಿದೆ. ‌ನಾಲ್ಕನೇ ಮನೆಯಲ್ಲಿ ಕೇತು ಇರುವುದು ತಾಯಿಗೆ ಸಂಕಷ್ಟ ತರುತ್ತದೆ.‌ ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ.

Weekly Horoscope In Kannada From July 14 To July 20 2024

ಕಟಕ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಬುಧ ಶುಕ್ರ ಇದ್ದಾರೆ. ಮೈ ಮನಸ್ಸಿಗೆ ತಂಪು ಕೊಡುವಂತ ಅನುಭವಗಳು ಆಗುತ್ತಿರುತ್ತವೆ. ಲಾಭ ಸ್ಥಾನದಲ್ಲಿ ಗುರು ಕುಜರಿಂದ ನಿಮಗೆ ಯಥೇಚ್ಛ ಧನಲಾಭ.‌ ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಸಮಯ.‌ ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆ ಕಟ್ಟುವ ಕೊಳ್ಳುವ ಯೋಜನೆಗಳು ಚಾಲನೆ ಪಡೆದುಕೊಳ್ಳುತ್ತದೆ. ಎಲ್ಲಿಯಾದರೂ ಬಂಡವಾಳ ಹೂಡಿದ್ದರೆ ಲಾಭ ಇದೆ.

Weekly Horoscope In Kannada From July 14 To July 20 2024

ಸಿಂಹ ರಾಶಿಯ ವಾರ ಭವಿಷ್ಯ

ಗುರು ಮಂಗಳ ಹತ್ತನೇ ಮನೆಯಲ್ಲಿ ಬುಧ ಶುಕ್ರ ಸೂರ್ಯ ಹನ್ನೆರಡನೆಯ ಮನೆಯಲ್ಲಿ ಇದುವುದು ನಿಮಗೇನೂ ಲಾಭ ತರದು.‌ ಮನಸ್ಸಿಗೆ ಕಸಿವಿಸಿ, ಹಣಕ್ಕಾಗಿ ಪರದಾಟ ಮುಂತಾದ ಸಂಕಷ್ಟಗಳು‌ಇರುತ್ತದೆ. ವೃತ್ತಿಯಲ್ಲಿ ಒತ್ತಡ ಇರುತ್ತದೆ.‌ ಮೇಲಾಧಿಕಾರಿಗಳ ಕಿರುಕುಳ ಎದುರಿಸುತ್ತೀರಿ. ಮುಖ್ಯವಾದ ತೀರ್ಮಾನಗಳನ್ನು ಈಗ ತೆಗೆದುಕೊಳ್ಳಬೇಡಿ. ಮುಂದಕ್ಕೆ ಹಾಕಿ.‌

Weekly Horoscope In Kannada From July 14 To July 20 2024

ಕನ್ಯಾ ರಾಶಿಯ ವಾರ ಭವಿಷ್ಯ

ಈಗ ನಿಮಗೆ ವೈಭವದ ಕಾಲ. ಆರರ ಶನಿ ಹಾಗೂ ಒಂಬತ್ತರ ಗುರು ನಿಮಗೆ ಭಾಗ್ಯಗಳ ಮಳೆಯನ್ನೇ ಸುರಿಸುತ್ತಾರೆ.‌ ಹೇರಳ ಧನಲಾಭ ಇದೆ. ವ್ಯಾಪಾರಸ್ಥರಿಗೆ ಅಧಿಕ ವ್ಯಾಪಾರ, ನಿಂತು ಹೋಗಿದ್ದ ಬಹುಮುಖ್ಯ ಕೆಲಸಗಳು ಮತ್ತೆ ಚಾಲನೆ ಪಡೆದುಕೊಳ್ಳುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಒಂಬತ್ತನೇ ಮನೆಯಲ್ಲಿ ಕುಜ ಹನ್ನೊಂದನೆಯ ಮನೆಯಲ್ಲಿ ಬುಧ ಶುಕ್ರ ಸೂರ್ಯ ಈಗ ನಿಮಗೆ ಭಾಗ್ಯಗಳ ಮಳೆಯನ್ನೇ ಸುರಿಸುತ್ತಾರೆ. ಆದರೆ ಏಳರಲ್ಲಿ ರಾಹು ಲಗ್ನದಲ್ಲಿ ಕೇತು ಇರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.

Weekly Horoscope In Kannada From July 14 To July 20 2024

ತುಲಾ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಹತ್ತರಲ್ಲಿ ಬುಧ ಶುಕ್ರ ಸೂರ್ಯ, ಆರರಲ್ಲಿ ರಾಹು ಇರುವುದು ಸ್ವಲ್ಪ ಶಕ್ತಿಯನ್ನು ಕೊಡುತ್ತದೆ. ಆದರೆ ಎಂಟರಲ್ಲಿ ಇರುವ ಗುರು ಹಾಗೂ ಐದನೇ ಮನೆಯಲ್ಲಿ ಇರುವ ಶನಿ ನಿಮ್ಮನ್ನು ಮುಂದೆ ಹೋಗಲು ತಡೆಯುತ್ತಾರೆ.‌ ಪಂಚಮ ಶನಿ‌ ಕೊಂಚ ಅಡೆತಡೆಗಳನ್ನು ಹಾಗೂ ಹಣಕಾಸಿನ ವ್ಯತ್ಯಯವನ್ನು ಮಾಡುತ್ತಾನೆ.ಎಂಟರ ಗುರು ಆರೋಗ್ಯಕ್ಕೆ ಹಾನಿ‌ಮಾಡುತ್ತಾನೆ. ಕೊಂಚ ಎಚ್ಚರಿಕೆಯಿಂದ ಇರಿ.‌

Weekly Horoscope In Kannada From July 14 To July 20 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಇರುವುದರಿಂದ ನಿಮ್ಮ ಬಯಕೆಗಳು ಈಡೇರುವ ಸಮಯ.‌ ಎಂದಿಂನಿಂದಲೋ ಯೋಜನೆ ತಯಾರಿಸಿ ಬಂಡವಾಳ ಸಂಪನ್ಮೂಲಗಳ ಕೊರತೆಯಿಂದ ನಿಂತ ಕೆಲಸಗಳು ಈಗ ಚಾಲನೆ ಪಡೆದುಕೊಳ್ಳುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರ ಬುಧ ಸೂರ್ಯ ಇರುವುದು ಶುಭ ಸೂಚನೆಯಾಗಿದೆ. ಐದನೇ ಮನೆಯಲ್ಲಿ ರಾಹು ಇರುವುದು ಸಂತಾನಕ್ಕೆ ಕೊಂಚ ದೋಷಕರ. ದುರ್ಗಾದೇವಿಯ ಮತ್ತು ಸುಬ್ರಹ್ಮಣ್ಯನ ಪೂಜೆ ಮಾಡಿ.

Weekly Horoscope In Kannada From July 14 To July 20 2024

ಧನಸ್ಸು ರಾಶಿಯ ವಾರ ಭವಿಷ್ಯ

ಮೂರನೇ ಮನೆಯಲ್ಲಿ ಶನಿ ನಿಮಗೆ ಈಗ ಸದ್ಯಕ್ಕೆ ಇರುವ ಗ್ರಹಬಲ. ಪರಾಕ್ರಮ ಪೌರುಷ ಹಾಗೂ ಧನಲಾಭ ಕೊಡುತ್ತಾನೆ. ಆರರಲ್ಲಿ ಕುಜ ಇರುವುದು ಹಣದ ಹರಿವಿಗೆ ಉತ್ತಮವಾದರೂ ಆರರಲ್ಲಿ ಗುರು ಇರುವುದು ಮಾನಸಿಕ ಚಿಂತೆಗೆ ಕಾರಣವಾಗುತ್ತದೆ. ನೆಮ್ಮದಿ ಕೆಡುವಂಥ ಪ್ರಸಂಗಗಳು ಎದುರಾಗಬಹುದು. ತಾಯಿಯ ಆರೋಗ್ಯದಲ್ಲಿ ಏರುಪೇರು ಇದೆ. ಜಾಗ್ರತೆ ವಹಿಸಿ. ಎಂಟನೇ ಮನೆಯಲ್ಲಿ ಸೂರ್ಯ ಶುಕ್ರ ಬುಧ ಇದ್ದಾರೆ. ನಿಮಗೆ ಯಾವುದಾದರೂ ತೊಂದರೆ ಅಪಘಾತಗಳಿಂದ ಕಾಪಾಡುತ್ತಾರೆ.

Weekly Horoscope In Kannada From July 14 To July 20 2024

ಮಕರ ರಾಶಿಯ ವಾರ ಭವಿಷ್ಯ

ಈಗ ನಿಮಗೆ ರಾಹುಬಲ ಗುರುಬಲ ಎರಡೂ ಇದ್ದು ನೀವು ಯೋಜಿಸಿದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ. ಏಳನೇ ಮನೆಯಲ್ಲಿ ಸೂರ್ಯ ಶುಕ್ರ ಹಾಗೂ ಬುಧ ಇದ್ದು ಇವರೂ ನಿಮಗೆ ಶುಭಫಲಗಳನ್ನು ಕೊಡುತ್ತಾರೆ. ‌ಎಲ್ಲಕ್ಕಿಂತ ಹೆಚ್ಚಾಗಿ ಗುರು ಐದನೇ ಮನೆಯಲ್ಲಿ ಇರುವುದು ನಿಮಗೆ ಈಗ ಹೆಚ್ಚಿನ ಶಕ್ತಿ ಮತ್ತು ನೆಮ್ಮದಿ. ಅವಿವಾಹಿತರಿಗೆ ವಿವಾಹ ಭಾಗ್ಯ ಇದೆ. ವಿದೇಶ ಪ್ರಯಾಣ ಯೋಗ ಇದೆ.

Weekly Horoscope In Kannada From July 14 To July 20 2024

ಕುಂಭ ರಾಶಿಯ ವಾರ ಭವಿಷ್ಯ

ಈಗ ಪರಿಸ್ಥಿತಿ ಕೊಂಚ ಗಂಭೀರ.‌ ಏನೇ ತೀರ್ಮಾನ ತೆಗೆದುಕೊಳ್ಳುವಾಗ ಕೊಂಚ ಯೋಚಿಸಿ ನಿಧಾನಿಸಿ ತೆಗೆದುಕೊಳ್ಳಿ. ಯಾವುದಕ್ಕೂ ಆತುರ ಬೇಡ ದುಡುಕಿ ಏನೂ ಮಾತನಾಡಬೇಡಿ.‌ ಈಗ ನಿಮಗೆ ಆರೋಗ್ಯ ಹಣಕಾಸು ಸ್ಥಿತಿ ಕೈಕೊಡುವ ಸಮಯ. ಜೊತೆಗೆ ಅಪವಾದಗಳು ಬರುವುದು ನಿಮ್ಮ ಒಂದು ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾಗಬಹುದು. ರಾಜಕೀಯ ನಾಯಕರಿಗೆ ಈಗ ಪರೀಕ್ಷಾ ಕಾಲ. ಎಲ್ಲೆಡೆಯೂ ಬಾಣಗಳು ನಿಮ್ಮನ್ನು ಚುಚ್ಚಲು ಕಾದಿದೆ. ದತ್ತಾತ್ರೇಯನ ಪ್ರಾರ್ಥನೆ ಮಾಡಿ.‌ ದತ್ತಸ್ತವನ‌ ಪಠಿಸಿ.

Weekly Horoscope In Kannada From July 14 To July 20 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಕುಂಭರಾಶಿಗೂ ಹೆಚ್ಚು ವ್ಯತ್ಯಾಸ ಇಲ್ಲ. ನಿಮಗೂ ಸಹ ಆರೋಗ್ಯ ಹಾಗೂ ಹಣಕಾಸು‌ ತೊಂದರೆ ಇದೆ. ವೃತ್ತಿಯಲ್ಲಿ ಒತ್ತಡಗಳು ಇವೆ. ಐದನೇ ಮನೆಯಲ್ಲಿ ಶುಕ್ರ ಬುಧ ಸೂರ್ಯ ಇರುವುದು ಕೊಂಚ ಮಟ್ಟಿಗೆ ನಿಮಗೆ ಅನುಕೂಲಕರವಾಗಿದೆ. ಮೂರರಲ್ಲಿ ಕುಜ ಧೈರ್ಯ ಮತ್ತು ಎದುರಿಸುವ ಛಲ ಕೊಡುತ್ತಾನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+