Weekly Horoscope 2025: ಜನವರಿ ಕೊನೆಯ ವಾರ ಈ ರಾಶಿಗೆ ಅದೃಷ್ಟದ ಹೊಳೆ, ಸಂಪತ್ತಿನ ಮಳೆ
ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ/ ಶಿಶಿರ ಋತು ಪುಷ್ಯ ಮಾಸದ ಕೃಷ್ಣಪಕ್ಷದ ದ್ವಾದಶಿಯಿಂದ ಮಾಘ ಶುದ್ಧ ಚೌತಿಯವರೆಗೆ
ಅಂದರೆ 26.01.25ರಿಂದ 02.02.25ರ ವರೆಗೆ
ಈ ವಾರದ ಚಂದ್ರನ ಸಂಚಾರ ಜ್ಯೇಷ್ಠ ನಕ್ಷತ್ರದಿಂದ ಉತ್ತರಾಭಾದ್ರ ನಕ್ಷತ್ರದ ವರೆಗೆ.

ಮೇಷರಾಶಿ
ಶುಕ್ರ ಹನ್ನೆರಡನೇ ಮನೆಗೆ ಬಂದಿದ್ದಾನೆ. ರಾಹು ಹನ್ನೆರಡನೆಯ ಮನೆಯಲ್ಲಿ ಇರುವ ತೀವ್ರತೆಯನ್ನು ಶುಕ್ರ ಕಡಿಮೆ ಮಾಡುತ್ತಾನೆ. ಎರಡು ಗುರು ಮೂರು ಮಂಗಳ ಲಾಭಸ್ಥಾನದಲ್ಲಿ ಶನಿ ಸಮಯ ಬಹಳ ಚೆನ್ನಾಗಿ ಇದೆ. ಹೊಸ ಕೆಲಸ ಸಿಗುವುದು ಶುಭಫಲವಾದರೆ ಕೆಲವು ಒತ್ತಡಗಳೂ ಇರುತ್ತದೆ. ಮನೆಯಲ್ಲಿ ಹಿರಿಯರ ಅನಾರೋಗ್ಯ, ಎಲ್ಲದಕ್ಕೂ ಒಬ್ಬರೇ ಓಡಾಡಬೇಕಾದ ಪರಿಸ್ಥಿತಿ, ಅಲೆದಾಟ ಹಣದ ಖರ್ಚು ಎಲ್ಲವೂ ಇದೆ. ಆದರೆ ಮೂರನೇ ಮನೆಯಲ್ಲಿ ಮಂಗಳ ಇರುವುದರಿಂದ ಒಡಹುಟ್ಟಿದವರಿಂದ ಸಹಾಯ ದೊರೆತು ಜೀವನ ಹಗುರವಾಗುತ್ತದೆ.

ವೃಷಭರಾಶಿ
ಲಾಭಸ್ಥಾನದಲ್ಲಿ ಶುಕ್ರ-ರಾಹು ಇರುವುದು ದ್ವಿಗುಣ ಲಾಭ ಕೊಡುತ್ತದೆ. ಹಣಕಾಸು ವೃತ್ತಿ ಎಲ್ಲದರಲ್ಲೂ ಸಮೃದ್ಧಿ ಇದೆ. ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಮಾನಸಿಕ ಅಶಾಂತಿ ಇರುತ್ತದೆ. ಇನ್ನು ಕೆಲವೇ ದಿನದಲ್ಲಿ ಶನಿಯ ಲಾಭಸ್ಥಾನದ ಪ್ರವೇಶ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳನ್ನು ಕೊಡುತ್ತದೆ. ವಾಹನದಿಂದ ಲಾಭ ಇದೆ. ಆಭರಣ ಖರೀದಿ ಮಾಡುವಿರಿ.

ಮಿಥುನರಾಶಿ
ರಾಶಿಯಲ್ಲೇ ಕುಜ ಹನ್ನೆರಡನೆಯ ಮನೆಯಲ್ಲಿ ಗುರು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯ ಕಾಲ. ಓದುವುದು ಮರೆಯುವುದು, ಅಂಕಗಳು ಕಡಿಮೆ ಬಂದು ಗುರುಗಳ ಪೋಷಕರ ಆಗ್ರಹಕ್ಕೆ ತುತ್ತಾಗುವುದೂ ಇರುತ್ತದೆ. ದೊಡ್ಡವರಿಗೆ ಕೆಲಸದ ಒತ್ತಡ, ಹಣಕಾಸಿನ ಖರ್ಚು ಇರುತ್ತದೆ. ಮನಸ್ಸಿಗೆ ಏನೋ ಅಶಾಂತಿ. ಕೇತು ಮೂರನೇ ಮನೆಗೆ ಪ್ರವೇಶವಾದಾಗ ಪರಿಸ್ಥಿತಿ ಕೊಂಚವಾದರೂ ತಿಳಿಯಾಗುತ್ತದೆ.

ಕಟಕರಾಶಿ
ಒಂಬತ್ತರಲ್ಲಿ ಶುಕ್ರ ಎಂಟರಲ್ಲಿ ಬುಧ ಲಾಭದಲ್ಲಿ ಗುರು ಸಮಯ ಬಹಳ ಚೆನ್ನಾಗಿ ಇದೆ. ಅಷ್ಟಮಶನಿಯ ಪ್ರಭಾವವೂ ಕಡಿಮೆ ಆಗುತ್ತಿದೆ. ಹನುಮಾನ್ ಗುಡಿಗೆ ಹೋಗಿ ಪೂಜೆ ಮಾಡಿಸಿ. ಮೂರನೇ ಮನೆಯಲ್ಲಿ ಕೇತು ಧೈರ್ಯವನ್ನೂ ಹಣಕಾಸಿನ ನೆರವನ್ನು ಕೊಡುತ್ತಾನೆ. ಮುಂಬರುವ ದಿನಗಳಲ್ಲಿ ಶುಭಫಲಗಳನ್ನು ಕಾಣುವಿರಿ.

ಸಿಂಹರಾಶಿ
ಹತ್ತನೇ ಮನೆಯಲ್ಲಿ ಗುರು ಎರಡನೇ ಮನೆಯ ಮೇಲೆ ದೃಷ್ಟಿ ಬೀರುತ್ತಾನೆ. ಎರಡನೇ ಮನೆಯಲ್ಲಿ ಕೇತುಇದ್ದರೂ ಗುರು ದೃಷ್ಟಿ ಇರುವುದರಿಂದ ಕುಟುಂಬದ ಶಾಂತಿಗೆ ಧಕ್ಕೆ ಬಾರದಂತೆ ಕಾಪಾಡುತ್ತದೆ. ಲಾಭಸ್ಥಾನದಲ್ಲಿ ಕುಜ ಇರುವುದು ಭೂಮಿ ವ್ಯವಹಾರಗಳಿಗೆ ಲಾಭ ಇದೆ. ಯಾವುದಾದರೂ ಆಸ್ತಿಮಾರಬೇಕೆಂದರೆ ಈಗ ಮಾರಬಹುದು. ಒಳ್ಳೆಯ ಬೆಲೆ ಸಿಗುತ್ತದೆ. ಆರನೇ ಮನೆಯಲ್ಲಿ ಸೂರ್ಯ ನಿಮಗೆ ಶಕ್ತಿಯನ್ನು ಧೈರ್ಯವನ್ನೂಕೊಡುತ್ತಾನೆ.

ಕನ್ಯಾರಾಶಿ
ಈ ರಾಶಿಯ ಗರ್ಭಿಣಿಯರು ಕೊಂಚ ಸಾವಧಾನದಿಂದ ಇರಬೇಕು. ಸರಿಯಾದ ವೈದ್ಯರ ತಪಾಸಣೆ/ ಸಲಹೆ ಅನುಸರಿಸಬೇಕು. ನಿಮ್ಮ ರಾಶಿಯಲ್ಲೇ ಕೇತು ಇರುವುದು ಗರ್ಭಿಣಿಯರಿಗೆ ಅಷ್ಟು ಕ್ಷೇಮವಲ್ಲ. ನಿಮ್ಮ ರಾಶಿಯ ಮೇಲೆ ಗುರುದೃಷ್ಡಿ ಇರುವುದತಿಂದ ಹೆಚ್ಚಿನ ತೊಂದರೆಗಳಾಗದಂತೆ ಕಾಪಾಡುತ್ತದೆ. ಆರರಲ್ಲಿ ಶನಿ ಏಳನೇ ಮನೆಯಲ್ಲಿ ಉಚ್ಛ ಶುಕ್ರ ಶುಭಫಲಗಳನ್ನು ನೀಡುತ್ತಾರೆ.

ತುಲಾರಾಶಿ
ಪಂಚಮದಲ್ಲಿ ಶನಿ ಅಷ್ಠಮದಲ್ಲಿ ಗುರು ಸಮಯ ಗಂಭೀರವಾಗಿದೆ ಅದರೆ ಇನ್ನು ಕೆಲವೇ ದಿನಗಳಲ್ಲಿ ಶನಿ ಆರನೇ ಮನೆಗೂ ಗುರು ಒಂಬತ್ತನೇ ಮನೆಗೂ ಪ್ರವೇಶವಾಗುತ್ತಾರೆ. ಇದು ನಿಮ್ಮ ಅತ್ಯಂತ ಮಹತ್ವದ ಕಾಲ. ಒಳ್ಳೆಯ ಸಂಗತಿಗಳನ್ನು ಸಾಲುಬಸಾಲಾಗಿ ನೋಡುವಿರಿ. ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ನಿಮ್ಮ ಕಷ್ಟಗಳ ನಿವಾರಣೆಗೆ ದಾರಿಗಳು ಗೋಚರಿಸುತ್ತದೆ. ಈಗಿನಿಂದಲೇ ಶುಭಫಲಗಳ ಶಕುನವನ್ನು ಕಾಣುವಿರಿ.

ವೃಶ್ಚಿಕರಾಶಿ
ಈಗ ಗುರುಬಲ ಇದ್ದು ಅನೇಕ ಶುಭಯೋಗಗಳನ್ಬು ಅನುಭವಿಸುತ್ತೀರಿ. ಮೂರರಲ್ಲಿ ಸೂರ್ಯ ಏಳರಲ್ಲಿ ಗುರು ಹನ್ನೊಂದನೇ ಮನೆಯಲ್ಲಿ ಕೇತುಇದ್ದು ಸಮಯ ಬಹಳ ಚೆನ್ನಾಗಿದೆ. ವೃತ್ತಿಯಲ್ಲಿ ಬಡ್ತಿ, ಅರ್ಹರಿಗೆ ವಿವಾಹ, ಕೋರ್ಟು ವ್ಯಾಜ್ಯ ಗಳಲ್ಲಿ ಜಯ, ವಿದೇಶ ಪ್ರಯಾಣ, ಶೇರ್ಸ ನಲ್ಲಿ ಲಾಭ ಮೊದಲಾದ ಶುಭಫಲಗಳನ್ನು ಅನುಭವಿಸುತ್ತೀರಿ. ಶತ್ರುಗಳು ದೂರವಾಗುತ್ತಾರೆ.

ಧನಸ್ಸುರಾಶಿ
ನಾಲ್ಕರಲ್ಲಿ ರಾಹು, ಮೂರರಲ್ಲಿ ಶನಿ, ಆರನೇ ಮನೆಯಲ್ಲಿ ಗುರು ಒಂಥರಾ ಕಿರಿಕಿರಿ ಯ ಸಮಯ. ಮನಸ್ಸಿಗೆ ಏನೋ ಅನಿಶ್ಚಿಂತೆ ಏನೋ ಧಾವಂತ. ಹೀಗೇ ಎಂದು ಹೇಳಿಕೊಳ್ಳಲಾಗದ ಸಂಕಟ. ಅನಾರೋಗ್ಯವನ್ನೂ ಅನುಭವಿಸುವಿರಿ. ಇದೆಲ್ಲ ಕೆಲವು ದಿನಗಳು ಮಾತ್ರ. ಒಳ್ಳೆಯ ದಿನಗಳು ಹತ್ತಿರದಲ್ಲೇ ಇದೆ. ಗುರು ಏಳನೆ ಮನೆಗೆ ಬಂತು ರಾಹು ಮೂರನೇ ಮನೆಗೆ ಪ್ರವೇಶವಾದಾಗ ಅನೇಕ ಶುಭಫಲಗಳನ್ನು ಅನುಭವಿಸುತ್ತೀರಿ. ಈಗ ನಾಲ್ಕರಲ್ಲಿ ಶುಕ್ರ ವಾಹನದಿಂದ ಲಾಭ ಕೊಡಿಸುತ್ತಾನೆ.

ಮಕರರಾಶಿ
ಐದನೇ ಮನೆಯಲ್ಲಿ ಗುರು, ಮೂರರಲ್ಲಿ ರಾಹು, ಸಮಯ ಬಹಳ ಚೆನ್ನಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಶನಿ ಮೂರನೇ ಮನೆಗೆ ಪ್ರವೇಶವಾದಾಗ ಇನ್ನೂ ಹೆಚ್ಚಿನ ಶುಭಫಲಗಳು ಇವೆ. ನಿಮ್ಮ ಕಷ್ಟಗಳೆಲ್ಲ ದೂರವಾಗುವ ಸಮಯ ಹತ್ತಿರದಲ್ಲೇ ಇದೆ. ಜೀವನ ಸೆಟಲ್ ಆಗುವ ಸಮಯ. ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ಯೋಚಿಸಬೇಡಿ. ಒಳ್ಳೆಯ ದಿನಗಳು ಖಂಡಿತಾ ಇದೆ.

ಕುಂಭರಾಶಿ
ಸಧ್ಯದಲ್ಲೇ ಗುರುಬಲ ಬರಲಿದೆ. ಶನಿ ಸಹ ನಿಮ್ಮ ರಾಶಿಯಿಂದ ಮೀನ ಕ್ಕೆ ಪ್ರವೇಶವಾಗುತ್ತಾನೆ. ಮುಂದೆ ಶುಭಸಂಗತಿಗಳು ಸಾಲುಸಾಲಾಗಿ ಇದೆ. ಮುಂದಿನ ಯೋಜನೆಗಳ ರೂಪುರೇಷೆ ಸಿದ್ಧ ಮಾಡಿಕೊಳ್ಳಿ. ಹೊಸ ನೌಕರಿ, ಬಡ್ತಿ, ವಿವಾಹ ಮೊದಲಾದ ಶುಭ ಘಟನೆಗಳು ನಡೆಯಲಿವೆ. ಶುಭಘಟನೆಗಳ ಮುನ್ಸೂಚನೆ ಕಾಣುತ್ರದೆ.

ಮೀನರಾಶಿ
ಗುರುಬಲ ಇಲ್ಲದಿದ್ದರೂ ಶನಿ ಈಗ ನಿಮ್ಮ ರಾಶಿಗೆ ಬರುತ್ತಾನೆ. ಸಾಡೆಸಾತಿ ಶನಿಯ ಮೊದಲ ಘಟ್ಟ ಮುಗಿಸುತ್ತೀರಿ. ಆದರೂ ಒತ್ತಡಗಳು ಕಡಿಮೆಯಾಗಿಲ್ಲ. ಈಗ ಲಾಭಸ್ಥಾನದಲ್ಲಿ ಸೂರ್ಯ ಇದ್ದು ಒಂದಷ್ಡು ಶುಭಫಲಗಳನ್ನು ನಿರೀಕ್ಷಿಸಬಹುದು. ಶುಕ್ರ ನಿಮ್ಮ ರಾಶಿಯಲ್ಲೇ ಇದ್ದು, ನಿಮ್ಮ ರಾಶಿಯಲ್ಲಿ ಇರುವ ರಾಹು ವಿನ ಪ್ರಭಾವವನ್ನು ಕಡಿಮೆ ಮಾಡುತ್ತಾನೆ. ಮನೆಯಲ್ಲಿ ಹಿರಿಕಿರಿಯರ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಹಣದ ಖರ್ಚು ಬಹಳ. ತಾಳ್ಮೆ ಇರಲಿ.ಗುರು ಮಂತ್ರ ಜಪಿಸಿ.
ಶುಭಮಸ್ತು












Click it and Unblock the Notifications