Weekly Horoscope 2025: ವಾರ ಭವಿಷ್ಯ ಏಪ್ರಿಲ್ 06ರಿಂದ 13ರವರೆಗೆ- ಕರ್ಕಾಟಕ, ತುಲಾ ಸೇರಿದಂತೆ ಈ ರಾಶಿಗೆ ರಾಜಯೋಗ

ಏಪ್ರಿಲ್ ತಿಂಗಳ ಎರಡನೇ ವಾರಕ್ಕೆ ನಾವು ಈಗ ಕಾಲಿಡುತ್ತಿದ್ದೇವೆ. ಪ್ರತೀ ವಾರವೂ ನಮ್ಮ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹಾಗಾದರೆ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ಮಾಸದ ಶುದ್ಧ ನವಮಿಯಿಂದ ಬಹುಳ ಪಾಡ್ಯದವರೆಗೆ ಅಂದರೆ ಏಪ್ರಿಲ್ ತಿಂಗಳ 06.04.25 ರಿಂದ 13.04.25 ವರೆಗೆ ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಈ ವಾರದ ಚಂದ್ರ ಗ್ರಹ ಪುನರ್ವಸು ನಕ್ಷತ್ರದಿಂದ ಚಿತ್ತದವರೆಗೆ ಸಂಚಾರ ಮಾಡಲಿದೆ. ಏಪ್ರಿಲ್ 6ರಿಂದ ಏಪ್ರಿಲ್ 13ರವರೆಗೆ 12 ರಾಶಿಗಳಲ್ಲಿ ಕೆಲ ರಾಶಿಯವರ ಆರ್ಥಿಕ, ವೃತ್ತಿ, ಉದ್ಯೋಗ, ವ್ಯಾಪಾರ ಜೀವನ ಸಾಕಷ್ಟು ವೃದ್ಧಿಯಾಗಲಿದೆ. ಹಾಗಾದರೆ ಯಾವ ರಾಶಿಯವರ ಮೇಲೆ ಮುಂಬರುವ ವಾರ ಶುಭ ಹಾಗೂ ಅಶುಭ ಫಲಿತಾಂಶವನ್ನು ನೀಡಲಿದೆ ಎಂದು ಈಗ ತಿಳಿಯೋಣ.

Weekly Horoscope In Kannada From April 06 To April 13 2025

ಮೇಷ ರಾಶಿ:

ಮೇಷ ರಾಶಿಯ ಐದು ಗ್ರಹಗಳು 12ನೇ ಮನೆಯಲ್ಲಿ, ಮಂಗಳ ನಾಲ್ಕನೇ ಮನೆಯಲ್ಲಿ, ವಾರದ ಮಧ್ಯೆ ಚಂದ್ರ ಐದನೇ ಮನೆಯಲ್ಲಿ ಸಾಗುವುದರಿಂದ ಸಮಯ ಅಷ್ಟು ಚೆನ್ನಾಗಿ ಇಲ್ಲ. ಮನಸ್ಸಿಗೆ ಯೋಚನೆಗಳು, ದೈಹಿಕ ಶ್ರಮ ತುಂಬಾ ಆಗಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಮಾಡಿ.‌ ಖರ್ಚುಗಳೂ ವಿಪರೀತ ಆಗಲಿದೆ. ಸಾಡೆಸಾತಿ ಶನಿಯ ಪ್ರಾರಂಭವಾಗಲಿದೆ. ಜೋಪಾನವಾಗಿ ಇರುವುದು ಮುಖ್ಯ. ಅನಾವಶ್ಯಕ ಯಾರೊಂದಿಗೂ ಮಾತೇ ಬೇಡ.

Weekly Horoscope In Kannada From April 06 To April 13 2025

ವೃಷಭ ರಾಶಿ:

ಲಾಭ ಸ್ಥಾನದಲ್ಲಿ ಐದು ಗ್ರಹ ಇರುವುದರಿಂದ ಸಮಯ ಬಹಳ ಚೆನ್ನಾಗಿ ಇದೆ.‌ ಆದರೆ ಗುರು ನಿಮ್ಮ ರಾಶಿಯಲ್ಲೇ ಇರುವುದರಿಂದ ಮನಸ್ಸಿಗೆ ವ್ಯಾಕುಲ. ಚಿಂತೆ.‌ ಬಗೆ ಹರಿಯದಷ್ಟು ಯೋಚನೆ. ಮೂರರಲ್ಲಿ ಕುಜ ಸ್ವಲ್ಪ ಮಟ್ಟಿಗೆ ಧೈರ್ಯ ಸ್ಥೈರ್ಯ ಸಾಹಸ ಪ್ರವೃತ್ತಿ ಇರುತ್ತದೆ. ‌ಹಣಕಾಸಿಗೆ ಕಷ್ಟವಿಲ್ಲದಿದ್ದರೂ ಹಿತವಿಲ್ಲ.‌

Weekly Horoscope In Kannada From April 06 To April 13 2025

ಮಿಥುನ ರಾಶಿ:

ಹತ್ತನೇ ಮನೆಯಲ್ಲಿ ಐದು ಗ್ರಹಗಳು ಸೇರಿ ನಿಮಗೆ ವೃತ್ತಿಯಲ್ಲಿ ಬಹುದೊಡ್ಡ ಜವಾಬ್ದಾರಿ ಕೊಡುತ್ತದೆ. ಇದರ ಜೊತೆಗೆ ಪದವಿ ಅಧಿಕಾರಗಳ ರೋಚಕತೆಯನ್ನು ಅನುಭವಿಸುತ್ತೀರಿ.‌ಈವಾರದ ಚಂದ್ರನ ಸಂಚಾರ ನಿಮಗೆ ಚೆನ್ನಾಗಿದೆ. ಒಳ್ಳೆಯ ಅನುಕೂಲಗಳನ್ನು ಕೊಡುತ್ತದೆ.‌ ನಿಮ್ಮ ರಾಶಿಯಲ್ಲಿ ಇದ್ದ ಕುಜನಿಂದ ಬಿಡುಗಡೆಯಾಗಿದ್ದೀರಿ. ಇದೊಂದು ದೊಡ್ಡ ರಿಲೀಫ್.‌

Weekly Horoscope In Kannada From April 06 To April 13 2025

ಕರ್ಕಾಟಕ ರಾಶಿ:

ಒಂಬತ್ತನೇ ಮನೆಯಲ್ಲಿ ಐದು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ಲಾಭಸ್ಥಾನದಲ್ಲಿ ಗುರು ಸಹ ನಿಮಗೆ ಅನುಕೂಲನಾಗಿ ಇದ್ದಾನೆ.‌ ವಿದೇಶ ಪ್ರವಾಸ, ದೂರಪ್ರಯಾಣ, ವಿಹಾರ ಎಲ್ಲವೂ ಇದೆ. ದಾನ ಧರ್ಮ ಸತ್ಸಂಗ ಮಾಡುತ್ತೀರಿ. ಗುರುಗಳ ಆಶೀರ್ವಾದ ಪಡೆಯುತ್ತೀರಿ. ಸಮಯ ಬಹಳ ಚೆನ್ನಾಗಿದೆ.

Weekly Horoscope In Kannada From April 06 To April 13 2025

ಸಿಂಹ ರಾಶಿ:

ಅಷ್ಠಮಶನಿಯ ಪ್ರಭಾವ ಕಾಣುತ್ತಿರಬಹುದು. ಜೊತೆಗೆ ಅಷ್ಠಮರಾಹು ಅಷ್ಠಮ ಸೂರ್ಯ ಎಲ್ಲವೂ ವ್ಯತಿರಿಕ್ತ ಪರಿಣಾಮಗಳನ್ನೇ ಕೊಡುತ್ತದೆ. ನೀವು ಒಂದು ಹೆಜ್ಜೆ ಮುಂದೆ ಹೋದರೆ ನಾಲ್ಕು ಹೆಜ್ಜೆ ಹಿಂದೆ ಎಳೆಯುತ್ತದೆ. ಧನಹಾನಿ, ಮಾನಹಾನಿ, ಆಪಾದನೆ ಅನಾರೋಗ್ಯ ಯಾವುದು ಬೇಕಾದರೂ ನಿಮ್ಮನ್ನು ಕಾಡಿಸಬಹುದು. ಸದಾ ಜಾಗ್ರತೆಯಿಂದ ಇರಿ. ಅನವಶ್ಯಕ ಸಿಕ್ಕುಗಳಲ್ಲಿ ಸಿಕ್ಕಿಕೊಳ್ಳಬೇಡಿ. ಮನೆದೇವರ ಪ್ರಾರ್ಥನೆ ಮಾಡಿ.

Weekly Horoscope In Kannada From April 06 To April 13 2025

ಕನ್ಯಾ ರಾಶಿ:

ಏಳರ ಶನಿ, ಸೂರ್ಯ, ಶುಕ್ರ, ರಾಹು ಯಾರೂ ಶುಭರಲ್ಲ ಈಗ ನಿಮಗೆ. ನಿಮ್ಮ ರಾಶಿಯಲ್ಲೇ ಇರುವ ಕೇತು‌ಸಹ ಶನಿದೃಷ್ಡಿಗೆ ಈಡಾಗಿ ವ್ಯತಿರಿಕ್ತ ಪರಿಣಾಮ ಕೊಡುತ್ತಾನೆ. ಚರ್ಮದ ಅಲರ್ಜಿ, ಮೂಗಿನ ಅಲರ್ಜಿ ಈಗ ಅಧಿಕವಾಗಿರುತ್ತದೆ. ಮೈಮೇಲೆ ಗಾಯಗಳಾಗುವ ಸಾಧ್ಯತೆ ಹೆಚ್ಚು. ಏಳನೇ ಮನೆಯ ಬುಧ ಮಾತ್ರ ಈಗ ನಿಮಗೆ ರಕ್ಷಕ ಆದರೆ ಅವನೂ‌ಕೂಡ ಕೇತುವಿನ ದೃಷ್ಡಿಗೆ ಸಿಕ್ಕಿದ್ದಾನೆ. ಅದರಿಂದ ಬುಧನಿಂದಲೂ ಫಲ ಅರ್ಧ ಮಾತ್ರ. ಕೇತು ನಿಮ್ಮ ರಾಶಿ ಬಿಟ್ಟು ಸಿಂಹಕ್ಕೆ ಚಲಿಸಿದಾಗ ಒಳ್ಳೆಯದಾಗಬಹುದು.

Weekly Horoscope In Kannada From April 06 To April 13 2025

ತುಲಾ ರಾಶಿ:

ಈಗ ನಿಮಗೆ ರಾಜಯೋಗ. ಶನಿ ರಾಹು ಆರನೇ ಮನೆಯಲ್ಲಿ. ಸೂರ್ಯ ಕೂಡ 14 ರ ವರೆಗೆ ಆರನೇ ಮನೆಯಲ್ಲಿ ಇರುತ್ತಾನೆ. ಇವೆಲ್ಲವೂ ನಿಮಗೆ ಶುಭಫಲಗಳನ್ನು ನೀಡುತ್ತದೆ. ನೀವು ಮಾಡುವ ಕೆಲಸಗಳಿಗೆ ಸಹಾಯ ಸಹಕಾರ ಸಿಗುತ್ತದೆ. ಹಣದ ಬೆಂಬಲ ಚೆನ್ನಾಗಿದೆ. ನಿಮ್ಮ ಯೋಜನೆಗಳು ಯಶಸ್ಸನ್ನು ಪಡೆಯುತ್ತದೆ. ನಿಮ್ಮ ಗುರಿ ಮುಟ್ಟಲು ಯಾವುದೇ ತಡೆ ಇರುವುದಿಲ್ಲ.‌ ಮುಂದಿನ ದಿನಗಳಲ್ಲಿ ಗುರು ಭಾಗ್ಯಸ್ಥಾನಕ್ಕೆ ಬಂದಾಗ ಇನ್ನೂ ಹೆಚ್ಚಿನ ಶುಭಫಲಗಳನ್ನು ನಿರೀಕ್ಷಿಸಬಹುದು.

Weekly Horoscope In Kannada From April 06 To April 13 2025

ವೃಶ್ಚಿಕ ರಾಶಿ:

ಐದನೇ ಮನೆಯಲ್ಲಿ ಉಚ್ಛಶುಕ್ರನ ಜೊತೆ ನಾಲ್ಕು ಗ್ರಹಗಳು ಸೇರಿವೆ. ಐದನೇ ಮನೆ ವಿದ್ಯೆಗೆ ಸಂತಾನಕ್ಕೆ ಇರುವ ಮನೆ. ಪೂರ್ವಪುಣ್ಯಸ್ಥಾನ. ಶುಕ್ರ ಇರುವುದು ಒಳ್ಳೆಯದೇ ಆದರೂ ಇನ್ನೂ ನಾಲ್ಕು ಗ್ರಹಗಳು ಪರಸ್ಪರ ವೈರಿ ಗ್ರಹಗಳಾಗಿದೆ. ಹೀಗಾಗಿ ಫಲ ನಿಧಾನ. ಹಾಗೂ ಫಲ ಎದುರಿಗೆ ಕಾಣುತ್ತಿದ್ದರೂ ಪಡೆಯಲು ಅಡೆತಡೆಗಳು ಎದುರಾಗುತ್ತದೆ. ಆದರೆ ಈಗ ಗುರುಬಲ ಇದೆ. ಹೀಗಾಗಿ ಗುರು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಾನೆ.

Weekly Horoscope In Kannada From April 06 To April 13 2025

ಧನು ರಾಶಿ:

ನಾಲ್ಕನೇ ಮನೆ ಸುಖಸ್ಥಾನದಲ್ಲಿ ಐದುಗ್ರಹಗಳ ಸಂಯೋಗವಾಗಿದೆ. ಇದು ಮಿಶ್ರಫಲವನ್ನು ನೀಡುತ್ತದೆ. ನಿದ್ರೆ ಮಾಡಲು ಕಷ್ಟ. ಏನೋ ಚಿಂತೆ ಒತ್ತಡಗಳು. ಹಣಕಾಸು ಆರೋಗ್ಯ ಎಲ್ಲದಕ್ಕೂ ಧಕ್ಕೆ. ಏಪ್ರಿಲ್14 ರ ನಂತರ ಪರಿಸ್ಥಿತಿ ತಿಳಿಯಾಗುತ್ತದೆ. ಅಲ್ಲಿಯ ವರೆಗೂ ಸಹಿಸಿಕೊಳ್ಳಬೇಕು. ಎಂಟನೇ ಮನೆಯಲ್ಲಿ ಕುಜ ಇರುವುದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮನೆದೇವರ ಪ್ರಾರ್ಥನೆ ಮಾಡಿ.

Weekly Horoscope In Kannada From April 06 To April 13 2025

ಮಕರ ರಾಶಿ:

ಈಗ ಸಾಡೆಸಾತಿ ಮುಗಿದಿದೆ. ಮೂರನೇ ಮನೆಯಾದ ಪರಾಕ್ರಮ ಸ್ಥಾನದಲ್ಲಿ ಐದುಗ್ರಹಗಳ ಸಂಯೋಗ ಬಹಳ ಒಳ್ಳೆಯ ಫಲ ನೀಡುತ್ತದೆ. ನೀವು ಕೈಹಾಕಿದ ಕೆಲಸಗಳು ಯೋಜಿಸಿದ ಕೆಲಸಗಳಲ್ಲಿ ಜಯಭೇರಿ ಬಾರಿಸುತ್ತೀರಿ. ಐದನೇ ಮನೆಯ ಗುರು ಸಹ ನಿಮಗೆ ಅನುಕೂಲಕರ ನಾಗಿದ್ದಾನೆ. ಹೊಸ ಕೆಲಸ ಸಿಗುವುದು, ಅವಿವಾಹಿತರಿಗೆ ವಿವಾಹ ಯೋಗ, ಬಡ್ತಿ, ವಿದೇಶ ಪ್ರವಾಸ ವಿಹಾರ ಎಲ್ಲವೂ ಇದೆ. ಬದುಕು ನೀವೆಣಿಸಿದಂತೆ ಸಾಗುತ್ತದೆ. ಈಗ ಎಂಜಾಯ್ ಮಾಡುವ ಸಮಯ

Weekly Horoscope In Kannada From April 06 To April 13 2025

ಕುಂಭ ರಾಶಿ:

ಎರಡನೇ ಮನೆಯಲ್ಲಿ ಐದು ಗ್ರಹಗಳ ಸಂಯೋಗ ನಿಮಗೆ ಅಪಾರ ಶುಭಫಲಗಳನ್ನು ನೀಡುತ್ತದೆ. ಎರಡನೇ ಮನೆ ಧನಸ್ಥಾನ‌, ಕುಟುಂಬಸ್ಥಾನ ವಾಕ್ ಸ್ಥಾನ.‌ ಕುಟುಂಬದಲ್ಲಿ ನಿಮ್ಮ ಬಗ್ಗೆ ಗೌರವಾದರಗಳು ಹೆಚ್ಚಾಗುತ್ತದೆ. ಧನಾಗಮನ ಉತ್ತಮವಾಗಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಬಹುದು. ನಿಮ್ಮ ಮಾತಿನಿಂದ ಗೌರವ ಸಿಗುತ್ತದೆ. ಸಾಡೆಸಾತಿ ಶನಿ‌ಇನ್ನೂ ಎರಡೂವರೆ ವರ್ಷ ಇದ್ದರೂ ಅಂತಿಮ ಭಾಗವಾದ್ದರಿಂದ ಭಯ ಬೇಡ.

Weekly Horoscope In Kannada From April 06 To April 13 2025

ಮೀನ ರಾಶಿ:

ಸಾಡೆಸಾತಿ ಶನಿಯ ಒಂದು ಭಾಗ ಮುಗಿಸಿದ್ದೀರಿ. ಇನ್ನೂ ಐದು ವರ್ಷ ಬಾಕಿ ಇದೆ. ಈಗ ನಿಮ್ಮ ರಾಶಿಯಲ್ಲೇ ಐದು ಗ್ರಹಗಳು ಇದ್ದು ನಿಮಗೆ ವ್ಯತಿರಿಕ್ತ ಪರಿಣಾಮ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಸೂರ್ಯ ಮೇಷರಾಶಿ ಗೆ ಪ್ರವೇಶವಾದಾಗ ಕೊಂಚ ಮಟ್ಟಿಗೆ ರಿಲೀಫ್ ಇದೆ. ರಾಹು ಸಹ ನಿಮ್ಮ ರಾಶಿ ಬಿಟ್ಟು ಕುಂಭರಾಶಿ ಗೆ ಪ್ರವೇಶವಾದಾಗ ಅನಾರೋಗ್ಯ ವೈರಾಣು ತೊಂದರೆ ಇವೆಲ್ಲ ಹಿಡಿತಕ್ಕೆ ಬರುತ್ತದೆ. ಗುರುಬಲ ಇಲ್ಲದಿರುವುದರಿಂದ ಯಾವುದೇ ದೊಡ್ಡ ಯೋಜನೆಗಳಿಗೆ ಕೈ ಹಾಕಬೇಡಿ

ಶುಭಮಸ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+