Weekly Horoscope : ಈ ವಾರ ಬದಲಾಗುವುದು 7 ರಾಶಿಯವರ ಅದೃಷ್ಟ, ಯಾವ ರಾಶಿಯವರಿಗಿದೆ ಸಿರಿವಂತರಾಗುವ ಯೋಗ ?

ಜ್ಯೋತಿಷಿಗಳ ಪ್ರಕಾರ, ಈ ವಾರ ಅನೇಕರ ರಾಶಿಯವರ ಅದೃಷ್ಟ ಬದಲಾಗುವುದು. ಈ ವಾರ ಅಪರೂಪದ ಗ್ರಹಗಳ ಸಂಯೋಗದೊಂದಿಗೆ ವಿವಿಧ ಹಬ್ಬಗಳು ಬರುತ್ತಿವೆ. ಈ ವಾರ ಬಹಳ ವಿಶೇಷವಾಗಿರುವುದು. ಈ ವಾರ ಕೆಲವು ರಾಶಿಯವರಿಗೆ ಅನುಕೂಲಕರ ಪರಿಸ್ಥಿತಿ ಸೃಷ್ಯಾಗುವ ಸಾಧ್ಯತೆಯಿದೆ. ಇನ್ನು ಕೆಲವು ರಾಶಿಯವರು ಜಾಗರೂಕರಾಗಿರಬೇಕು. ಸೆಪ್ಟೆಂಬರ್‌ನ ಹೊಸ ವಾರ ಮೇಷದಿಂದ ಮೀನವರೆಗಿನ ಎಲ್ಲಾ 12 ರಾಶಿಯವರಿಗೆ ಹೇಗಿದೆ ನೋಡೋಣ.

ಮೇಷ ರಾಶಿ (Aries):

ಮೇಷ ರಾಶಿಯವರಿಗೆ ಈ ವಾರ ಆತ್ಮಾವಲೋಕನದಿಂದ ಕೂಡಿರುತ್ತದೆ. ಬಾಕಿ ಇರುವ ಕೆಲಸಗಳು ಕೈಗೂಡುವುದು. ಸೆಪ್ಟೆಂಬರ್ 2 ರ ನಂತರ, ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಸೂಕ್ತ. ಸಂಬಂಧಗಳಲ್ಲಿನ ಮನಸ್ತಾಪ ದೂರವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

Weekly Horoscope 31 August To 6 September 2026 Zodiac Predictions Lucky Number Colour of all signs

ವೃಷಭ ರಾಶಿ (Taurus) :

ವೃಷಭ ರಾಶಿಯವರು ಈ ವಾರ ಭವಿಷ್ಯದ ಯೋಜನೆಗಳು ಮತ್ತು ಪ್ರಮುಖ ಗುರಿಗಳ ಮೇಲೆ ಗಮನ ಕೇಂದ್ರೀಕರಿಸುವರು. ಈ ವಾರ ನೀವು ಎಷ್ಟು ತಾಳ್ಮೆಯಿಂದ ಇರುತ್ತಿರೋ ಅಷ್ಟು ಒಳ್ಳೆಯದು. ಸರಿಯಾದ ಪ್ಲಾನ್‌ ಹಾಕಿಕೊಂಡು ಕೆಲಸಗಳನ್ನು ಮುಗಿಸಿ. ಇಲ್ಲವಾದರೆ, ಎಲ್ಲಾ ಕೆಲಸಗಳು ಬಾಕಿ ಉಳಿಯುವುದು. ಹಣಕಾಸಿನ ವಹಿವಾಟುಗಳಲ್ಲಿ ಆತುರದ ನಿರ್ಧಾರ ಬೇಡ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲು ಅವಕಾಶ ಸಿಗುವುದು.

ಮಿಥುನ ರಾಶಿ (Gemini) :

ಈ ವಾರ ಮಿಥುನ ರಾಶಿಯವರು ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ವಾರದ ಮಧ್ಯೆ ಹೊಸ ಆಲೋಚನೆಗಳು ಮತ್ತು ಕೆಲಸದ ಅವಕಾಶಗಳು ಒದಗಿ ಬರಬಹುದು. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣವಿದ್ದರೆ ಒಳ್ಳೆಯದು.

ಕರ್ಕಾಟಕ ರಾಶಿ (Cancer):

ಕೆಲವು ಪ್ರಮುಖ ಕೆಲಸಗಳನ್ನು ವಾರದ ಆರಂಭದಲ್ಲಿಯೇ ಪೂರೈಸಬೇಕಾಗಬಹುದು. ಸೆಪ್ಟೆಂಬರ್ 3 ರ ನಂತರ, ಕೆಲಸದಲ್ಲಿ ಜವಾಬ್ದಾರಿಗಳು ಮತ್ತು ಗೌರವ ಹೆಚ್ಚಾಗುವ ಸಾಧ್ಯತೆಯಿದೆ. ನಿರಂತರವಾಗಿ ನೀವು ಮಾಡುತ್ತಿರುವ ಕಠಿಣ ಪರಿಶ್ರಮಕ್ಕೆ ಈ ವಾರ ಉತ್ತಮ ಫಲಿತಾಂಶ ಸಿಗುವುದು. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸರಿಯಾಗಿ ಆಲೋಚಿಸಿ ತೆಗೆದುಕೊಳ್ಳಿ. ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳು ಕೂಡಾ ಬಗೆಹರಿಯುವುದು.

ಸಿಂಹ ರಾಶಿ (Leo) :

ಈ ವಾರ ಸಿಂಹ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಸೆಪ್ಟೆಂಬರ್ 2ರ ನಂತರ, ಎಲ್ಲಾ ಕೆಲಸವು ವೇಗ ಪಡೆದುಕೊಳ್ಳುವುದು. ನಾಯಕತ್ವದ ಗುಣಗಳಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ವ್ಯವಹಾರದಲ್ಲಿ ಹೊಸ ಸಂಪರ್ಕಗಳು ಹುಟ್ಟಿಕೊಳ್ಳುವುದು. ಇದರಿಂದ ಲಾಭವಾಗುವುದು. ಸಂಬಂಧದಲ್ಲಿ ಸಕಾರಾತ್ಮಕ ವಾತಾವರಣವಿರುವುದು.

ಕನ್ಯಾ ರಾಶಿ (Virgo):

ಈ ವಾರ ಕನ್ಯಾರಾಶಿಯವರು ಸಂಬಂಧಗಳು, ಹಣಕಾಸು ಮತ್ತು ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ವಾರದ ಆರಂಭದಲ್ಲಿ ಕೆಲವು ಗೊಂದಲಗಳು ಉಂಟಾಗಬಹುದು. ನಂತರ ಪರಿಸ್ಥಿತಿ ಸುಧಾರಿಸುವುದು. ಕಠಿಣ ಪರಿಶ್ರಮಕ್ಕೆ ಬೆಲೆ ಸಿಗುವುದು. ಕೆಲವೊಂದು ಖರ್ಚುಗಳು ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುವುದು. ಹಣಕಾಸು ಯೋಜನೆ ಅಗತ್ಯ.

ತುಲಾ ರಾಶಿ (Libra):

ಈ ವಾರ ತುಲಾ ರಾಶಿಯವರಿಗೆ ವಿಶೇಷವಾಗಿ ಸಕಾರಾತ್ಮಕವಾಗಿರಬಹುದು. ಸೆಪ್ಟೆಂಬರ್ 3 ರ ನಂತರ, ಆತ್ಮವಿಶ್ವಾಸ ಹೆಚ್ಚಾಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಲಾಭ ಹೆಚ್ಚಾಗುವುದು. ಪ್ರೇಮ ಸಂಬಂಧಗಳಿಗೂ ಈ ಸಮಯ ಅನುಕೂಲಕರವಾಗಿರುವುದು. ಆದರೆ, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರು ಎಚ್ಚರಿಕೆಯಿಂದ ಇರಬೇಕು.

ವೃಶ್ಚಿಕ ರಾಶಿ (Scorpio):

ವೃಶ್ಚಿಕ ರಾಶಿಯವರು ಸೃಜನಶೀಲ ಕೆಲಸ, ಶಿಕ್ಷಣ ಮತ್ತು ತಮ್ಮದೇ ಆದ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವರು. ಸೆಪ್ಟೆಂಬರ್ 2 ರ ನಂತರ, ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಪ್ರೇಮ ಸಂಬಂಧಗಳಲ್ಲಿ ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಅವಕಾಶ ಸಿಗುವುದು.

ಧನು ರಾಶಿ (Sagittarius):

ಜ್ಯೋತಿಷ್ಯದ ಪ್ರಕಾರ, ವಾರದ ಆರಂಭದಲ್ಲಿ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳತ್ತ ಗಮನ ಹರಿಸುವುದು ಮುಖ್ಯವಾಗಿರುವುದು. ಸಾಮಾಜಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಹೊಸ ಆಲೋಚನೆಗಳೊಂದಿಗೆ ಕೆಲಸ ಮಾಡಲು ಇದು ಉತ್ತಮ ಸಮಯವಾಗಿರುವುದು. ಸರಿಯಾದ ಲೆಕ್ಕ ಹಾಕಿಕೊಂಡು ಹಣ ಖರ್ಚು ಮಾಡಿದರೆ ಒಳ್ಳೆಯದು. ಸಂಬಂಧಗಳಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಕಡಿಮೆಯಾಗುವುದು.

ಮಕರ ರಾಶಿ (Capricorn) :

ಮಕರ ರಾಶಿಯವರು ವಾರದ ಆರಂಭದಲ್ಲಿ ಶಾಂತವಾಗಿರುವುದು ಬಹಳ ಮುಖ್ಯ. ನಿಮ್ಮ ಮನೆಯ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಿ. ವಾರದ ಮಧ್ಯದಲ್ಲಿ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವಿರುವುದು.

ಕುಂಭ ರಾಶಿ (Aquarius):

ಹೊಸ ವಾರ ಸ್ವಲ್ಪ ಗೊಂದಗಳಿಂದಲೇ ಶುರುವಾಗುವುದು. ಮಾತಿನ ಮೇಲೆ ವಿಶೇಷ ನಿಗಾ ಇರಲಿ. ವಾರದ ಮಧ್ಯದಲ್ಲಿ ಹಣಕಾಸು ಮತ್ತು ವೈಯಕ್ತಿಕ ವಿಷಯಗಳಲ್ಲಿ ಹೆಚ್ಚಿನ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಬಹುದು. ಹೂಡಿಕೆ ನಿರ್ಧಾರಗಳಿಂದ ದೂರವಿರುವುದು ಒಳ್ಳೆಯದು. ಮಾಡುವ ಕೆಲಸಗಳಿಗೆ ಕುಟುಂಬ ಸದಸ್ಯರಿಂದ ಬೆಂಬಲ ಸಿಗುವುದು.

ಮೀನ ರಾಶಿ (Pisces) :

ಈ ವಾರ ನಿಮಗೆ ಹೆಚ್ಚು ಭಾವನಾತ್ಮಕವಾಗಿರುವುದು. ಹಣಕಾಸಿನ ವಿಷಯಗಳಲ್ಲಿ ಆದ್ಯತೆಗಳನ್ನು ನೀಡುವುದು ಬಹಳ ಮುಖ್ಯ. ಬಾಕಿ ಇರುವ ಕೆಲಸಗಳು ಕ್ರಮೇಣ ಪೂರ್ಣಗೊಳ್ಳಬಹುದು. ಮನೆಯ ವಿಷಯಗಳಿಗೆ ಹೆಚ್ಚಿನ ಗಮನ ನೀಡಬೇಕಾಗುವುದು. ಪ್ರೇಮ ಸಂಬಂಧಗಳಲ್ಲಿ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದರಿಂದ ಸಂಬಂಧದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+